Urfi Javed: ಕೆಂಪು, ಬಿಳಿ, ನೀಲಿ ಹೂಗಳನ್ನು ದೇಹಕ್ಕೆ ಅಂಟಿಸಿದ ಉರ್ಫಿ! ಅಬ್ಬಾ ಸಾಕಮ್ಮಾ ಅಂತಿದ್ದಾರೆ ನೆಟ್ಟಿಗರು

ಉರ್ಫಿ ಜಾವೇದ್ ಈ ಬಾರಿ ಡ್ರೆಸ್ ಆಯ್ಕೆಯ ಟೆನ್ಶನ್ ತಗೊಂಡಿಲ್ಲ. ಸಿಕ್ಕಿರೋ 5 ಹೂವನ್ನು ದೇಹದ ಮೇಲಿಟ್ಟು ಪ್ಲಾಸ್ಟಿಕ್​​ನಿಂದ ಕವರ್ ಮಾಡಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಬಿಗ್​ಬಾಸ್ ಮೂಲಕ ಖ್ಯಾತಿ ಗಳಿಸಿದ ಉಫಿ ಜಾವೇದ್ ತಮ್ಮ ಡಿಫರೆಂಟ್ ಡ್ರೆಸ್ ಮೂಲಕ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ. ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುವುದು ಹಾಗೂ ಅದನ್ನು ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೈನ್ ಆಗುವುದು ಉರ್ಫಿಯ ಖಾಯಂ ಉದ್ಯೋಗ ಎಂದರೆ ತಪ್ಪಾಗಲಾರದು. ನಟಿ ಇತ್ತೀಚೆಗೆ ಸ್ವಲ್ಪ ಡಿಫರೆಂಟಾಗಿ ಕಾಣಿಸಿಕೊಂಡಿದ್ದರು. ಗಣೇಶ ಹಬ್ಬದ ದಿನ ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಪಡೆದಿದ್ದರು. ಆದರೆ ನಟಿ ಮತ್ತೆ ತಮ್ಮ ಮಾಮೂಲಿ ಸ್ಟೈಲ್​ಗೆ ಮರಳಿದ್ದಾರೆ. ಸೋ ಈಗ ನಟಿಯ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈ ಬಾರಿ ಬರೀ ಟ್ರಾನ್ಸ್​ಪರೆಂಟ್ ಪ್ಲಾಸ್ಟಿಕ್ ಹಾಗೂ 5 ಹೂಗಳಿಂದ ದೇಹ ಮುಚ್ಚಿದ್ದಾರೆ. ಅಬ್ಬಾ ಅವತಾರ ಮಾಡಬೇಡಮ್ಮಾ ಅಂತ ನೆಟ್ಟಿಗರು ಗೋಗರೆದರೂ ಉರ್ಫಿ ಮಾತ್ರ ಒಂಚೂರು ತಲೆಕೆಡಿಸಿಕೊಳ್ಳುತ್ತಿಲ್ಲ.

5 ಹೂಗಳಲ್ಲಿ ದೇಹ ಮುಚ್ಚಿದ ನಟಿ

ಬಿಳಿ, ನೀಲಿ, ಕೆಂಪು ಬಣ್ಣದ ಹೂಗಳನ್ನು ತೆಗೆದುಕೊಂಡು ಅವುಗಳಿಂದ ದೇಹದ ಮೇಲ್ಭಾಗವನ್ನು ಮುಚ್ಚಿದ ನಟಿ ಅವುಗಳನ್ನು ಹಿಡಿದಿಡಲು ಸಾಧ್ಯವಾಗುವ ಹಾಗೆ ಪ್ಲಾಸ್ಟಿಕ್ ಕವರ್​ನಿಂದ ಬಿಗಿಯಾಗಿ ಕವರ್ ಮಾಡಿದ್ದಾರೆ.

ಸ್ಟೈಲಾಗಿ ವಾಕ್ ಮಾಡುವಾಗ ಎಡವಿದ್ರು

ತನ್ನ ಲೇಟೆಸ್ಟ್ ಸ್ಟೈಲ್ ಅಭಿಮಾನಿಗಳಿಗೆ ತೋರಿಸುವ ಭರದಲ್ಲಿ ನಟಿ ವಾಕ್ ಮಾಡಿದ್ದಾರೆ. ವಾಕ್ ಮಾಡುತ್ತಾ ನಟಿ ಎಡವಿದ್ದು ನಂತರ ನಟಿ ಸ್ಮೈಲ್  ಕೊಟ್ಟಿದ್ದಾರೆ. ವಿಡಿಯೋ ಈಗ ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ವೈರಲ್ ಆಗಿದೆ.










View this post on Instagram






A post shared by Uorfi (@urf7i)






ಸೋಷಿಯಲ್ ಮಿಡಿಯಾ ರೆಸ್ಪಾನ್ಸ್ ಹೇಗಿದೆ?

ಈವರೆಗೆ ವಿಡಿಯೋ ಸುಮಾರು 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಬರೀ ಎರಡು ಗಂಟೆಗಳಲ್ಲಿ 90 ಸಾವಿರ ಲೈಕ್ಸ್ ಪಡೆದಿದ್ದು ಇನ್ನಷ್ಟು ವೈರಲ್ ಆಗಲಿದೆ.

ಇದನ್ನೂ ಓದಿ: Urfi Javed Net Worth: ಬಗೆಬಗೆಯ ಬಟ್ಟೆ ತೊಡುವ ಉರ್ಫಿ ಜಾವೇದ್ ಒಟ್ಟು ಆದಾಯ, ಆಸ್ತಿ ಮೌಲ್ಯ ಎಷ್ಟು?

ಉರ್ಫಿ ಜಾವೇದ್ ಈಗ ಟಾಪ್ ಸೆಲೆಬ್ರಿಟಿಗಳನ್ನೂ ಮೀರಿಸಿ ಫಾಲೋವರ್ಸ್​ಗಳನ್ನು ಪಡೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಕ್ಷರಶಃ ಉರ್ಫಿ ರಾಕಿಂಗ್. ತಮ್ಮ ಚಿತ್ರ ವಿಚಿತ್ರ ಉಡುಪುಗಳಿಂದ, ಫ್ಯಾಷನ್​ಗಳಿಂದ ನಟಿ ಟ್ರೋಲ್ ಆಗುವುದರ ಜೊತೆ ಜೊತೆಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸಾಲದ್ದಕ್ಕೆ ಪಾಪ್ಪರಾಜಿಗಳ ಮೋಸ್ಟ್ ಫೇವರೇಟ್ ಆಗಿದ್ದಾರೆ.

ಉರ್ಫಿ ಜಾವೇದ್ ಹಾಟ್ ಲ್ಯಾವೆಂಡರ್ ಬ್ಯಾಕ್‌ಲೆಸ್ ಮಿನಿ ಡ್ರೆಸ್‌ನಲ್ಲಿ ಉತ್ಕೃಷ್ಟತೆಯನ್ನು ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ ಮತ್ತೊಮ್ಮೆ ತಮ್ಮ ವಿಶಿಷ್ಟ ಮತ್ತು ಪ್ರಾಯೋಗಿಕ ಫ್ಯಾಷನ್ ಸೆನ್ಸ್‌ನೊಂದಿಗೆ ಮರಳಿದ್ದಾರೆ. ನೆಟಿಜನ್‌ಗಳು ಉತ್ಸುಕರಾಗಿದ್ದಾರೆ. ತನ್ನ ಬೋಲ್ಡ್ ವ್ಯಕ್ತಿತ್ವ ಮತ್ತು ಸೀದಾ ಸಾದಾ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಹಾಟ್ ಚೆಲುವೆ ಇತ್ತೀಚೆಗೆ ಸಿಜ್ಲಿಂಗ್ ಮಿನಿ ಡ್ರೆಸ್ ಧರಿಸಿದ್ದರು. ಉರ್ಫಿ ಅವರು ಶಟರ್‌ಬಗ್‌ಗಳಿಗೆ ಪೋಸ್ ನೀಡುವಾಗ ಲ್ಯಾವೆಂಡರ್ ಬ್ಯಾಕ್‌ಲೆಸ್ ಉಡುಪನ್ನು ಧರಿಸಿದ್ದರು.

ಇದನ್ನೂ ಓದಿ: Urfi Javed: ನೀಳ ಕೇಶರಾಶಿಯಲ್ಲಿ ಸೌಂದರ್ಯ ಮರೆ ಮಾಚಿಕೊಂಡ ಸುಂದರಿ ಉರ್ಫಿ, ಹೊಸ ಅವತಾರ ಫುಲ್ ಧಗ ಧಗ

ಈಗಾಗಲೇ ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈಗಲೂ ಅಷ್ಟೇ ಹೆಸರೆ ಹೇಳಲು ಸಾಧ್ಯವಾಗದ ಉಡುಗೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

ಆಕೆಯ ಫ್ಯಾಶನ್ ಉಡುಪುಗಳಿಂದಾಗಿ ಆಕೆಯ ಫೊಟೋಗಳು ಮತ್ತು ವೀಡಿಯೊಗಳು ಆಗಾಗ ಇಂಟರ್ನೆಟ್​ನಲ್ಲಿ ಹೊಸ ಕ್ರೇಜ್ ಸೃಷ್ಟಿಸುತ್ತದೆ. ಈ ನಟಿ ಪಾಪರಾಜಿಗಳ ಅತ್ಯಂತ ಪ್ರೀತಿಯ ಸೆಲೆಬ್ರಿಟಿಯಾಗಿದ್ದಾರೆ. ಉರ್ಫಿಯನ್ನು ಹೆಚ್ಚಾಗಿ ನೆಟಿಜನ್‌ಗಳು ಟ್ರೋಲ್ ಮಾಡುತ್ತಾರೆ.
Published by:Divya D
First published: