ಉರ್ಫಿ ಚಾವೇದ್ (Urfi Javed) ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿದುಕೊಳ್ಳುತ್ತೆ. ಅವರ ಪೋಲಿ ಕಣ್ಣುಗಳಲ್ಲಿ ನೂರಾರು ಕಾಮನ ಬಿಲ್ಲು (Rainbow) ಹುಟ್ಟಿಕೊಳ್ಳುತ್ತೆ. ಈ ನಟಿ (Actress) ವರ್ಷ ಪೂರ್ತಿ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುವ ಮತ್ತು ಅದರಲ್ಲೂ ಆಕೆ ಧರಿಸುವ ವಿಚಿತ್ರ ಬಟ್ಟೆಗಳಿಂದ (Dress) ಹೆಚ್ಚು ಸುದ್ದಿಯಲ್ಲಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಳೆದ ತಿಂಗಳಷ್ಟೇ ಜಸ್ಟಿನ್ ಬೈಬರ್ (Justin Bieber) ಅವರ ಜನಪ್ರಿಯ ಹಾಡು ‘ಸಾರೀ’ ಗೆ ಡ್ಯಾನ್ಸ್ (Dance) ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಆದರೆ ಆ ವಿಡಿಯೋ(Video)ದಲ್ಲಿ ಎಲ್ಲದಕ್ಕಿಂತಲೂ ಹೆಚ್ಚಾಗಿ ಆಕೆಯು ಉಟ್ಟಂತಹ ಸೀರೆ ತುಂಬಾ ಜನರ ಗಮನವನ್ನು ಸೆಳೆದಿತ್ತು ಎಂದು ಹೇಳಬಹುದು. ಟ್ರೋಲ್ ಆಗದು ಉರ್ಫಿ ಜಾವೇದ್ಗೆ ಹೊಸದೇನು ಅಲ್ಲ. ಪ್ರತಿಬಾರಿಯೂ ಟ್ರೋಲ್ ಆಗುತ್ತಲೇ ಇರುತ್ತಾರೆ.
ಸಮಂತಾಗೆ ಕಂಪೇರ್ ಮಾಡಿಕೊಂಡ ಉರ್ಫಿ ಜಾವೇದ್!
ಉರ್ಫಿ ಜಾವೇದ್ ಟ್ರೋಲ್ಗೆ ಒಳಗಾಗೋದು ಹೊಸದೇನಲ್ಲ. ಪ್ರತಿ ಭಾರಿ ಟ್ರೋಲ್ಗೆ ಒಳಗಾಗ್ತಾರೆ. ಆದರೆ, ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ತನಗಿಷ್ಟ ಬಂದ ಉಡುಗೊರೆ ತೊಟ್ಟು ಖುಷಿ ಪಡುತ್ತಾರೆ. ಉರ್ಫಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಯಾವಾಗ ಬೋಲ್ಡ್ ಅವತಾರದಲ್ಲಿ ಏರ್ಪೋರ್ಟ್ನಲ್ಲಿ(Airport) ಕಾಣಿಸಿಕೊಂಡರೋ ಅಂದಿನಿಂದ ಉರ್ಫಿ ಸಖತ್ ಫೇಮಸ್ ಆದರು. ಇದೀಗ ಉರ್ಫಿ ಹೆಸರು ಹೇಳಿದರೆ ಅವರ ಬಟ್ಟೆಗಳೇ ನೆನಪಾಗುವಷ್ಟರ ಮಟ್ಟಿಗೆ ನಟಿ ಫೇಮಸ್ ಆಗಿದ್ದಾರೆ. ಇದೀಗ ಉರ್ಫಿ ಜಾವೇದ್ ನಟಿ ಸಮಂತಾ ಅವರಿಗೆ ಕಂಪೇರ್ ಮಾಡಿದ್ದಾರೆ. ಯಾಕೆ ಅಂತೀರಾ? ಮುಂದೆ ನೋಡಿ
ಸಮಂತಾ ಹಾಕಿದ್ರೆ ಸೂಪರ್ ಅಂತೀರಾ ಎಂದ ನಟಿ!
ಬಹಳಷ್ಟು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಂಡಿರೋ ಉರ್ಫಿ ಜಾವೇದ್ ಪ್ರತಿಬಾರಿಯೂ ಟ್ರೋಲ್(Troll) ಆಗುತ್ತಾರೆ. ಚಿತ್ರ ವಿಚಿತ್ರ ಉಡುಗೆ, ಎಕ್ಸ್ಪೋಸಿಂಗ್ (Exposing) ಸೀರೆಗಳ ಮೂಲಕ ಅವರು ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಉರ್ಫಿ ಕಪ್ಪು ಬಣ್ಣದ ಟ್ರಾನ್ಸ್ಪರೆಂಟ್ ಉಡುಗೆಯನ್ನು ತೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಕ್ಕೆ ಬೇಸರಗೊಂಡ ಉರ್ಫಿ, ಸಮಂತಾ ಅವರು ಈ ಹಿಂದೆ ತನ್ನದೇ ರೀತಿಯ ಬಟ್ಟೆ ತೊಟ್ಟಿದ್ದನ್ನು ಕಂಪೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮೈ ತುಂಬಾ ಹೂವು, ಬಿಟ್ರೆ ಬೇರೇನೂ ಇಲ್ಲ! ಇದ್ಯಾವ ಸೀಮೆ ಬಟ್ಟೆ ಅಕ್ಕ? ಎಂದು ಕಾಲೆಳೆದ ಟ್ರೋಲಿಗರು
ಸಾಕ್ಷ್ಯ ಕೊಟ್ಟು ಕಂಪೇರ್ ಮಾಡಿದ ಉರ್ಫಿ ಜಾವೇದ್!
ಉರ್ಫಿ ಜಾವೇದ್ರನ್ನು ಟ್ರೋಲ್ ಮಾಡಿದ ವೆಬ್ಸೈಟ್ ಹೆಡ್ಲೈನ್ ಸ್ಕ್ರೀನ್ ಶಾಟ್ ಒಂದು ಕಡೆ, ಮತ್ತೆ ಸಮಂತಾ ಟ್ರಾನ್ಸ್ಪರೆಂಟ್ ಉಡುಗೆ ತೊಟ್ಟಾಗ ಕೊಟ್ಟ ಹೆಡ್ಲೈನ್ನ ಸ್ಕ್ರೀನ್ ಶಾಟ್ ಅನ್ನು ಉರ್ಫಿ ಪೋಸ್ಟ್ ಮಾಡಿದ್ದಾರೆ. ಸಮಂತಾ ಹಾಕಿದರೆ ಸೂಪರ್, ಆದ್ರೆ, ನಾನು ಹಾಕಿದರೆ ಟ್ರೋಲ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅವರು ತೊಟ್ಟಾಗ ಬೋಲ್ಡ್ನೆಸ್ ಅಂತೀರಾ. ನಾನ್ ತೊಟ್ರೆ ಸೊಳ್ಳೆ ಪರದೆ ತೊಟ್ಟ ಉರ್ಫಿ ಅಂತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
![]()
ಉರ್ಫಿ ಶೇರ್ ಮಾಡಿದ ಫೋಟೋ
![]()
ಉರ್ಫಿ ಶೇರ್ ಮಾಡಿದ ಫೋಟೋ
ಇದನ್ನೂ ಓದಿ: ಪೋರ್ನ್ ವೆಬ್ಸೈಟ್ನಲ್ಲಿ ಈಕೆಯ ಫೋಟೋ ಹಾಕಿದ್ದ ದುರುಳರು! ಆಗಲೇ ಸಾಕಷ್ಟು ನೋವು ತಿಂದಿದ್ದಾರಂತೆ ಉರ್ಫಿ
15ನೇ ವರ್ಷಕ್ಕೆ ಪಡಬಾರದ ಕಷ್ಟ ಅನುಬಭವಿಸಿದ್ದಾರಂತೆ!
ಉರ್ಫಿ ಜಾವೇದ್ ಅವರು ದುರ್ಗಾ, ಸಾತ್ ಫೆರೆ ಕಿ ಹೇರಾ ಫೆರಿ, ಬೇಪನ್ನಾಹ್, ಜಿಜಿ ಮಾ, ದಯಾನ್, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ (ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ) ಮತ್ತು ಕಸೌತಿ ಜಿಂದಗಿ ಕೇ ಮುಂತಾದ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ನಟನೆಗೂ ಬರುವ ಮುನ್ನ ಇವರು 15 ವರ್ಷದವರಾಗಿದ್ದಾಗ ಈಕೆಯ ಫೋಟೋವನ್ನು ದುರುಳರು ಪೋರ್ನ್ ವೆಬ್ಸೈಟ್ನಲ್ಲಿ ಹಾಕಿದ್ದರಂತೆ. ಇದರಿಂದ ಉರ್ಫಿ ಕುಗ್ಗಿ ಹೋಗಿದ್ದರಂತೆ. ಕೆಲ ದಿನಗಳ ಕಾಲ ಯಾರ ಜೊತೆಯೂ ಮಾತನಾಡದೇ ಒಬ್ಬರೇ ಇರುತ್ತಿದ್ದೆ ಎಂದು ಸ್ವತಃ ಉರ್ಫಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ