Urfi Javed: ಸಂಭಾವನೆ ಕೇಳಿದ್ರೆ ಮಂಚಕ್ಕೆ ಕರೀತಾನಂತೆ.. ಸ್ಟಾರ್​​ ಡೈರೆಕ್ಟರ್​ ಮೇಲೆ ಉರ್ಫಿ ಜಾವೇದ್​ ಆರೋಪ!

ವಿಭಿನ್ನ ಕಾಸ್ಟ್ಯೂಮ್(Costume) ಮತ್ತು ಬೋಲ್ಡ್ ನಡೆಗಳ ಮೂಲಕ ಗುರುತಿಸಿಕೊಂಡಿರುವ ಉರ್ಫಿ ಜಾವೆದ್ ತಮಗಾದ ಲೈಂಗಿಕ ಕಿರುಕುಳ(Sexual Harassment)ದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಲ್ಲದೇ ತಮಗಾದ ಕಹಿ ಘಟನೆಯನ್ನು ಸೋಷಿಯಲ್ ಮೀಡಿಯಾ(Social media) ಮೂಲಕವೂ ಹಂಚಿಕೊಂಡಿದ್ದಾರೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಉರ್ಫಿ ಜಾವೇದ್​... ಈ ಹೆಸರು ಕೇಳಿದರೆ ಫೋಟೋ ಕ್ಲಿಕ್ಕಿಸುವವರು, ಪಾಪರಾಜಿಗಳು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ, ಇವಳ ಚಿತ್ರ, ವಿಚಿತ್ರ ಬಟ್ಟೆ ಕಂಡು ನೆಟ್ಟಿಗರು ಮಾರುದ್ದ ಓಡಿ ಹೋಗುತ್ತಾರೆ. ಬಿಗ್ ಬಾಸ್ ಒಟಿಟಿ(Bigg Boss Ott) ಖ್ಯಾತಿಯ ಉರ್ಫಿ ಜಾವೇದ್(Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್(Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ. ವಿಭಿನ್ನ ಕಾಸ್ಟ್ಯೂಮ್(Costume) ಮತ್ತು ಬೋಲ್ಡ್ ನಡೆಗಳ ಮೂಲಕ ಗುರುತಿಸಿಕೊಂಡಿರುವ ಉರ್ಫಿ ಜಾವೆದ್ ತಮಗಾದ ಲೈಂಗಿಕ ಕಿರುಕುಳ(Sexual Harassment)ದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಲ್ಲದೇ ತಮಗಾದ ಕಹಿ ಘಟನೆಯನ್ನು ಸೋಷಿಯಲ್ ಮೀಡಿಯಾ(Social media) ಮೂಲಕವೂ ಹಂಚಿಕೊಂಡಿದ್ದಾರೆ. ಉರ್ಫಿ ಅವರು ಈ ನಡೆ ಬಿಟೌನ್ ಅಂಗಳದಲ್ಲಿ ಭಾರೀ ಸದ್ದು ಮಾಡಿದೆ.

ಕಾಸ್ಟಿಂಗ್​ ಡೈರೆಕ್ಟರ್​ ಮೇಲೆ ಉರ್ಫಿ ಆರೋಪ!

ಸದಾ ಡಿಫ್ರೆಂಟ್​ ಆಗಿ ಕಾಸ್ಟೂಮ್​ ತೊಟ್ಟು ಕಾಣಿಸಿಕೊಳ್ಳುತ್ತಿದ್ದ ಉರ್ಫಿ ಜಾವೇದ್​ ಕಾಸ್ಟಿಂಕ್ ಕೌಚ್ ಬಗ್ಗೆ ಮಾತನಾಡಿದ್ದು, ಚಿತ್ರೋದ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಉರ್ಫಿ ಇಂಥದ್ದೊಂದು ಆರೋಪ ಮಾಡಿದ್ದು ಪಂಜಾಬಿ ಕಾಸ್ಟಿಕ್ ಡೈರೆಕ್ಟರ್ ಒಬೇದ್ ಅಫ್ರಿದಿ ಮೇಲೆ. ಪಂಜಾಬಿ ಮೂಲದ ಒಬೇದ್ ಅಫ್ರಿದಿ ಸಾಕಷ್ಟು ಹಿಟ್ ಚಿತ್ರಗಳಿಗೆ ಕಾಸ್ಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಪಾತ್ರಗಳ ಆಯ್ಕೆಯ ಸಂದರ್ಭದಲ್ಲಿ ಅವರು ಲೈಂಗಿಕವಾಗಿ ಸಹಕರಿಸುವಂತೆ ಬೇಡಿಕೆ ಇಡುತ್ತಿದ್ದರು ಎಂದು ಉರ್ಫಿ ಆರೋಪಿಸಿದ್ದಾರೆ.

ಸಂಭಾವಣೆ ಕೊಡದೇ ಸತಾಯಿಸಿದ್ದರಂತೆ ಒಬೇದ್​!

ಸರಿಯಾದ ಸಂಭಾವನೆಯನ್ನೂ ಕೊಡದೇ ಅವರು ಸತಾಯಿಸುತ್ತಾರೆ ಎಂದೂ ಉರ್ಫಿ ಮತ್ತೊಂದು ಆರೋಪ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಪೂರಕ ಎನ್ನುವಂತೆ ಆ ನಿರ್ದೇಶಕ ಮಹಾಶಯ ಲೈಂಗಿಕ ಆಸೆ ವ್ಯಕ್ತಪಡಿಸಿರುವ ಚಾಟ್ ಗಳ ಸ್ಕ್ರೀನ್ ಶಾಟ್ ಗಳನ್ನೂ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿವೆ.ಐದು ಹುಡುಗಿಯರಿಗೆ ಇಂಥದ್ದೇ ಕಹಿ ಅನುಭವ ಆಗಿದೆ. ಅವರೆಲ್ಲರೂ ತಮ್ಮೊಂದಿಗೆ ಸಂಪರ್ಕದಲ್ಲಿರುವ ವಿಷಯವನ್ನೂ ಉರ್ಫಿ ಬಹಿರಂಗಪಡಿಸಿದ್ದಾರೆ.

ಉರ್ಫಿ ಹಂಚಿಕೊಂಡ ಫೋಟೋ


ಇದನ್ನೂ ಓದಿ: Urfi Javed ಹೊಸ ಅವತಾರ ನೋಡಿ ಕಣ್ಣು ದಾನಕ್ಕೆ ಮುಂದಾದ ನೆಟ್ಟಿಗರು.. ಹೆವ್ವಿ ಕ್ವಾಟ್ಲೆ ಅಂತೆ!

ಉರ್ಫಿ ಆರೋಪ ಸುಳ್ಳು ಎಂದ ಒಬೇದ್​!

ಉರ್ಫಿ ಜಾವೇದ್​ ಮಾಡಿರುವ ಆರೋಪವನ್ನು ಕಾಸ್ಟಿಂಗ್ ಡೈರೆಕ್ಟರ್​ ಒಬೇದ್​ ನಿರಾಕರಿಸಿರರಿದ್ದಾರೆ. ಉರ್ಫಿ ಒಪ್ಪಿಕೊಂಡ ಚಿತ್ರೀಕರಣಕ್ಕೆ ಹಾಜರಾಗಲಿಲ್ಲ. ಹಾಗಾಗಿ ಸಣ್ಣ ಮನಸ್ತಾಪ ಆಗಿತ್ತು. ಉಳಿದಂತೆ ಅವರ ಆರೋಪ ಎಲ್ಲವೂ ಸುಳ್ಳು ಎಂದು ಅವರು ಹೇಳಿದ್ದಾರೆ. ಸದಾ ಡಿಫ್ರೆಂಟ್​ ಲುಕ್​ನಲ್ಲಿ ಕಾಣಿಸಿಕೊಳ್ಳುವ ಉರ್ಫಿ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿರುವುದು ಬಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದೆ. ಇನ್ನೂ ಕೆಲವರು ಇದೆಲ್ಲ ಪ್ರಚಾರದ ಗಿಮ್ಮಿಕ್ಕು ಅಷ್ಟೆ ಎನ್ನುತ್ತಿದ್ದಾರೆ.

ಉರ್ಫಿ ಹಂಚಿಕೊಂಡ ಫೋಟೋ


ಇದನ್ನೂ ಓದಿ: ಇವ್ಳ್​ ಅವತಾರ ನೋಡೋಕೆ ಆಗ್ತಿಲ್ಲ.. ವಿಚಿತ್ರ ಕಾಸ್ಟ್ಯೂಮ್​ ಕಂಡು ಫ್ಯಾಶನ್​ ಡಿಸಾಸ್ಟರ್​ ಅಂದ್ರು ನೆಟ್ಟಿಗರು!

ಉರ್ಫಿ ನೋಡಿ ಕಣ್ಣು ದಾನ ಮಾಡುತ್ತೇವೆ ಎಂದ ನೆಟ್ಟಿಗರು!

ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈ ಹೊಸ ಅವತಾರ ಕಂಡು ಕೆಲ ನೆಟ್ಟಿಗರು ದಯವಿಟ್ಟು ನಮ್ಮ ಕಣ್ಣುಗಳನ್ನು ದಾನ ಮಾಡಲು ಸಿದ್ದವಿದ್ದೇವೆ. ಈ ರೀತಿಯ ವಿಚಿತ್ರಗಳನ್ನು ನೋಡುವ ಬದಲು ಕುರುಡರಾಗಿಯೇ ಇರುತ್ತೆವೆ ಎಂದ ಉರ್ಫಿ ಜಾವೇದ್​ ಕಾಲೆಳೆಯುತ್ತಿದ್ದಾರೆ
Published by:Vasudeva M
First published: