• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Urfi Javed: ಫ್ಯಾಷನ್ ಹೆಸರಲ್ಲಿ ಬಟ್ಟೆ ಬಿಚ್ಚುವ ಖಯಾಲಿ! ಉರ್ಫಿ ಜಾವೇದ್‌ ಡ್ರೆಸ್‌ಗೆ ನೆಟ್ಟಿಗರ ಕಿಡಿಕಿಡಿ!

Urfi Javed: ಫ್ಯಾಷನ್ ಹೆಸರಲ್ಲಿ ಬಟ್ಟೆ ಬಿಚ್ಚುವ ಖಯಾಲಿ! ಉರ್ಫಿ ಜಾವೇದ್‌ ಡ್ರೆಸ್‌ಗೆ ನೆಟ್ಟಿಗರ ಕಿಡಿಕಿಡಿ!

ಉರ್ಫಿ ಜಾವೇದ್​

ಉರ್ಫಿ ಜಾವೇದ್​

ಸದಾ ಮಾದಕವಾಗಿ ಕಾಣುವ ಬಟ್ಟೆಯನ್ನು ಧರಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಈಕೆ ಎರಡು ವಾರಗಳ ಹಿಂದೆಯಷ್ಟೆ ವಿಲಕ್ಷಣ ಬಟ್ಟೆಗಳನ್ನು ಹಾಕಿಕೊಂಡು ಜನರನ್ನು ನೋಯಿಸಿದ್ದಕ್ಕಾಗಿ ಕ್ಷಮೆ (Sorry) ಕೇಳಿದ್ದರು.

 • Share this:

ಸದಾ ತಾವು ಹಾಕುವ ತುಂಡು ಬಟ್ಟೆಗಳಿಂದ (Short Dress) ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾನೇ ಸುದ್ದಿಯಲ್ಲಿರುವ ಫ್ಯಾಷನಿಸ್ಟ್ ಎಂದರೆ ಅದು ಉರ್ಫಿ ಜಾವೇದ್ (Urfi Javed). ಸದಾ ಮಾದಕವಾಗಿ ಕಾಣುವ ಬಟ್ಟೆಯನ್ನು ಧರಿಸಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸುವ ಈಕೆ ಎರಡು ವಾರಗಳ ಹಿಂದೆಯಷ್ಟೆ ವಿಲಕ್ಷಣ ಬಟ್ಟೆಗಳನ್ನು ಹಾಕಿಕೊಂಡು ಜನರನ್ನು ನೋಯಿಸಿದ್ದಕ್ಕಾಗಿ ಕ್ಷಮೆ (Sorry) ಕೇಳಿದ್ದರು. ಈಕೆ ಕ್ಷಮೆ ಕೇಳಿದ್ದನ್ನು ನೋಡಿ ಸಾಮಾಜಿಕ ಮಾಧ್ಯಮದ ಬಳಕೆದಾರರು ದಿಗ್ಭ್ರಮೆಗೊಂಡಿದ್ದರು.


ಆದರೆ ಅವರು ಮಾಡಿದ್ದು ಏಪ್ರಿಲ್ ಫೂಲ್ ಅಂತ ಸ್ವಲ್ಪ ಹೊತ್ತಿನ ಬಳಿಕ ಖುದ್ದು ಉರ್ಫಿಯೇ ಮತ್ತೊಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. ಇದನ್ನು ನೋಡಿ ಕೆಲವು ನೆಟ್ಟಿಗರು ತಮಾಷೆ ಅಂದುಕೊಂಡು ಸುಮ್ಮನಾದರೆ, ಇನ್ನೂ ಕೆಲವರು ಕೋಪ ಮಾಡಿಕೊಂಡು ಕಾಮೆಂಟ್ ಗಳನ್ನು ಹಾಕಿದ್ದರು.


ಫ್ಯಾಷನ್ ಸೋಗಿನಲ್ಲಿ ನಗ್ನತೆ ಎಂದ ನೆಟ್ಟಿಗರು!


ಉರ್ಫಿ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆ ಕೇಳಿದ್ದು, ಅದರಲ್ಲಿ ಅವರು ಅಂತಹ ಬಟ್ಟೆಯನ್ನು ಧರಿಸಿದ್ದಕ್ಕಾಗಿ ವಿಷಾದಿಸುತ್ತೇನೆ ಮತ್ತು ಇನ್ನು ಮುಂದೆ ಬದಲಾದ ಉರ್ಫಿಯನ್ನು ಮತ್ತು ತನ್ನ ಬಟ್ಟೆಗಳನ್ನು ನೋಡುತ್ತೀರಿ ಅಂತ ಬರೆದಿದ್ದರು. ಈಗ ಮತ್ತೆ ಉರ್ಫಿ ತಮ್ಮ ತುಂಡುಡುಗೆಯಿಂದಲೇ ಸುದ್ದಿಯಲ್ಲಿದ್ದಾರೆ ನೋಡಿ.


ಮತ್ತೆ ಅಂತಹದ್ದೇ ಬಟ್ಟೆ ಹಾಕಿದ ಊರ್ಫಿ!


ಫ್ಯಾಷನಿಸ್ಟ್ ಉರ್ಫಿ ಜಾವೇದ್ ಮತ್ತೊಮ್ಮೆ ತನ್ನ ವಿಲಕ್ಷಣ ಡ್ರೆಸ್ಸಿಂಗ್ ಸೆನ್ಸ್ ಗಾಗಿ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಉರ್ಫಿ ಹಾಕಿರುವ ವಿಲಕ್ಷಣ ಬಟ್ಟೆಯು ಎಲ್ಲಾ ಮಿತಿಗಳನ್ನು ಮೀರಿ ಹೋಗಿದೆಯಂತೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರಂತೂ ಉರ್ಫಿ ಮೇಲೆ ಫುಲ್ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ ‘ಫ್ಯಾಷನ್ ಸೋಗಿನಲ್ಲಿ ನಗ್ನತೆಯನ್ನು ಉತ್ತೇಜಿಸಿಸುತ್ತಿದ್ದಾರೆ’ ಅಂತ ಆರೋಪ ಸಹ ಮಾಡಿದ್ದಾರೆ ನೆಟ್ಟಿಗರು. ನೆಟ್ಟಿಗರು ಮಾತ್ರ ಮಾಜಿ ಒಟಿಟಿ ಬಿಗ್‌ಬಾಸ್ ಸ್ಪರ್ಧಿಯನ್ನು ತುಂಬಾನೇ ದೂಷಿಸುತ್ತಿದ್ದಾರೆ.


ನೆಟ್ಟಿಗರ ಕಮೆಂಟ್​


ಮಂಗಳವಾರ, ಉರ್ಫಿ ಸಣ್ಣ ಕಪ್ಪು ಟ್ಯೂಬ್ ಉಡುಪನ್ನು ಧರಿಸಿರುವ ವೀಡಿಯೋದೊಂದಿಗೆ ಕೆಲವು ಫೋಟೋಗಳನ್ನು ಸಹ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಆ ಉಡುಗೆಯ ಮೇಲಿನ ಮುದ್ರಣವು ನೆಟ್ಟಿಗರನ್ನು ಕೆರಳಿಸಿದೆ ಮತ್ತು ಬಳಕೆದಾರರು ಅವಳ ಅಶ್ಲೀಲ ಫ್ಯಾಷನ್ ಆಯ್ಕೆಗಾಗಿ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಇದನ್ನೂ ಓದಿ: ತಂದೆಯಿಂದ ಕಿರುಕುಳಕ್ಕೆ ಒಳಗಾದ ಉರ್ಫಿ! ಇದು 17 ವರ್ಷಕ್ಕೆ ಮನೆ ಬಿಟ್ಟ ಜಾವೇದ್ ಕಣ್ಣೀರ ಕಥೆ


ಉರ್ಫಿಯ ಬಟ್ಟೆಯನ್ನು ನೋಡಿ ಫುಲ್ ಗರಂ ಆದ ನೆಟ್ಟಿಗರು


ಟ್ವಿಟರ್​ ಬಳಕೆದಾರರು ಇದಕ್ಕೆ ಕಾಮೆಂಟ್ ಮಾಡಿ “ಹೀಗೆಲ್ಲಾ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ? ನಾಲ್ಕು ಜನರಲ್ಲಿ ಗುರುತಿಸಿಕೊಳ್ಳಲು ಇವು ಸುಲಭ ಮಾರ್ಗಗಳು ಇರಬಹುದು. ಆದರೆ ಮನುಷ್ಯನಿಗೆ ವ್ಯಕ್ತಿತ್ವ ಮುಖ್ಯ” ಎಂದು ಹೇಳಿದ್ದಾರೆ.


ನೆಟ್ಟಿಗರ ಕಮೆಂಟ್​


ಇನ್ನೊಬ್ಬ ಬಳಕೆದಾರರು "ನೀವು ಪಬ್ಲಿಸಿಟಿಗೋಸ್ಕರ ಇಂತಹ ವಿಲಕ್ಷಣ ಬಟ್ಟೆಗಳನ್ನು ಹಾಕಿಕೊಳ್ಳುತ್ತೀರಿ ಮತ್ತು ಹೇಳುತ್ತೀರಿ ನಿಮ್ಮ ಫೋಟೋವನ್ನು ಯಾರೋ ಪೋರ್ನ್ ಸೈಟ್ ನಲ್ಲಿ ಹಾಕಿದ್ದಾರೆ ಅಂತ ಮತ್ತು ನಿಮ್ಮ ತಂದೆ ನಿಮ್ಮನ್ನು ಪೋರ್ನ್ ಸ್ಟಾರ್ ಅಂತ ಕರೆದಿದ್ದಾರೆ ಅಂತ ಹೇಳುತ್ತೀರಿ. ಇಂತಹ ಬಟ್ಟೆಗಳನ್ನು ಹಾಕಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತೀರಿ. ಇದಕ್ಕೆಲ್ಲಾ ಏನು ಅಂತ ಹೆಳ್ಬೇಕು ನೀವೇ ಹೇಳಿ” ಅಂತ ಕಾಮೆಂಟ್ ಮಾಡಿದ್ದಾರೆ.


ಬಾಲಿವುಡ್ ಸೆಲೆಬ್ರಿಟಿಗಳು ಸಹ ಗರಂ!

top videos


  ಕೆಲವು ದಿನಗಳ ಹಿಂದೆ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರನ್ನು ಹೊಗಳಿದ ನಂತರ ಉರ್ಫಿ ಆಶ್ಚರ್ಯಚಕಿತರಾದರು. ಮತ್ತೊಂದೆಡೆ, ಬೆಬೊ ಅವರ ಸಹೋದರ ಮತ್ತು ನಟ ರಣಬೀರ್ ಕಪೂರ್ ಅವರು ಉರ್ಫಿ ಧರಿಸುವ ಉಡುಗೆಗಳ ಅಭಿಮಾನಿಯಲ್ಲ ಎಂದು ಹೇಳಿದ್ದರು. ಈ ಕಾಮೆಂಟ್ ಗೆ ಪ್ರತಿಕ್ರಿಯಿಸಿದ ಉರ್ಫಿ "ರಣಬೀರ್ ಅವರ ಸ್ಟೇಟಸ್ ಏನು? ನನಗೆ ಯಾರ ದೃಢೀಕರಣವೂ ಬೇಕಾಗಿಲ್ಲ" ಅಂತ ಹೇಳಿದ್ದರು.

  First published: