ಬಿಗ್ ಬಾಸ್ ಒಟಿಟಿ (Bigg Boss Ott) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ (Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ. ಕಿರುತೆರೆ ನಟಿ ಕಮ್ ಮಾಡೆಲ್ (Small Screen Actress) ಉರ್ಫಿ ಜಾವೇದ್ ಹೆಚ್ಚಾಗಿ ಸದ್ದು ಮಾಡಿರುವುದೇ ತಮ್ಮ ಡ್ರೆಸ್ಗಳ ಮೂಲಕ. ಚಿತ್ರವಿಚಿತ್ರವಾದ ತರಹೇವಾರಿ ಡ್ರೆಸ್(Dress)ಗಳನ್ನ ತೊಡುವುದರಲ್ಲಿ ಉರ್ಫಿ ಜಾವೇದ್ ಸದಾ ಮುಂದು. ಇದೀಗ ಅವರ ಬಗ್ಗೆ ಮತ್ತೊಂದು ವಿಚಾರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಚಾರಕ್ಕೂ ಇಷ್ಟೊಂದು ಟ್ರೋಲ್ ಆಗುತ್ತಿದ್ದಾರಾ? ಎಂದು ಆಶ್ವರ್ಯವಾಗುತ್ತೆ.
ಏರ್ಪೋರ್ಟ್ನಲ್ಲಿ ಬಿಲ್ಡಪ್ ಕೊಡ್ತಾರಂತೆ ಉರ್ಫಿ!
ಟ್ರೋಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಕೆಲವರು ಉರ್ಫಿ ಜಾವೇದ್ರನ್ನ ಫ್ಯಾಶನ್ ಡಿಸಾಸ್ಟರ್(Fashion Disaster) ಅಂತಲೇ ಕರೆಯುತ್ತಿದ್ದಾರೆ. ಪ್ರತಿದಿನ ಏರ್ಪೋರ್ಟ್ಗೆ ಹೋಗಿ ಪೋಸ್ ಕೊಡ್ತಾರೆ ಉರ್ಫಿ. ಹಾಗಿದ್ದರೆ ಇವರು ಪ್ರತಿದಿನ ಫ್ಲೈಟ್ನಲ್ಲಿ ಓಡಾಡ್ತಾರಾ ಅಂತ ಕೇಳಬೇಡಿ. ಫ್ಲೈಟ್ ಹತ್ತೋದಿರಲಿ, ಅದರ ಹತ್ತಿರನೂ ಉರ್ಫಿ ಹೋಗಲ್ಲಾ ಎಂದು ಗೊತ್ತಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಯಾವ ಖುಷಿಗೆ ಉರ್ಫಿ ಏರ್ಪೋರ್ಟ್ಗೆ ಹೋಗುತ್ತಾರೆ ಎಂದು ಕಿಂಡಲ್ ಮಾಡುತ್ತಾರೆ.
ಕೌಂಟರ್ ಕೊಟ್ಟ ಉರ್ಫಿ ಜಾವೇದ್
ಇತ್ತೀಚೆಗೆ, ಉರ್ಫಿ ಜಾವೇದ್ ಅವರು ಎರಡು ನಿಕ್ಕರ್ಗಳಲ್ಲಿ ಕಾಣಿಸಿಕೊಂಡಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನೆಟ್ಟಿಗರು ತಮ್ಮ ಡ್ರೆಸ್ ಬಗ್ಗೆ ಕಮೆಂಟ್ ಮಾಡುತ್ತಾರೆ ಎಂದು ತಿಳಿದು ಡೈರೆಕ್ಟ್ ಕೌಂಟರ್ ಕೊಟ್ಟಿದ್ದಾರೆ. ನಾನು ನಡೆಯುತ್ತೇನೆ, ನಾನು ಜಿಗಿಯುತ್ತೇನೆ, ನಾನು ಯಾರೊಂದಿಗಾದರೂ ಎಲ್ಲಿಯಾದರೂ ಹೋಗುತ್ತೇನೆ, ಅಥವಾ ನಾನು ಒಬ್ಬಂಟಿಯಾಗಿರುತ್ತೇನೆ.. ನಾನು ಆಡುತ್ತೇನೆ, ನಾನು ಹಾಡುತ್ತೇನೆ, ನಾನು ಪ್ರೀತಿಸುತ್ತೇನೆ, ನಿಮಗೆ ಏನು ಕಷ್ಟ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಕಿಯಾರಾ, ಜಾನ್ಹವಿ, ಕಂಗನಾರನ್ನೇ ಹಿಂದಿಕ್ಕಿದ ಉರ್ಫಿ ಜಾವೇದ್! ಟ್ರೋಲ್ ಮಾಡ್ತಿದ್ದವರೆಲ್ಲ ಈಗ ಗಪ್ಚುಪ್
ಬಡೇ ಭಯ್ಯಾಕಿ ಉರ್ಫಿ ಜಾವೇದ್ ಆಗಿ ದುಲ್ಮೇನಿಯಾ ಧಾರಾವಾಹಿಯಿಂದ ಪ್ರೇಕ್ಷಕರನ್ನು ಮೆಚ್ಚಿಸಿದರು. ದುರ್ಗಾ ಚಿತ್ರದ ಮೂಲಕ ನಟಿಯಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದಾರೆ. ಅದರ ನಂತರ, ಅವರು ಒಟಿಟಿಯಲ್ಲಿ ಪ್ರಸಾರವಾದ ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿ ಉತ್ತಮ ಪ್ರದರ್ಶನ ನೀಡಿದರು. ಬಿಗ್ ಬಾಸ್ ಶೋನಲ್ಲಿ ಎಲಿಮಿನೇಟ್ ಆದ ನಂತರ ಅವರ ಜನಪ್ರಿಯತೆ ಸಾಮಾಜಿಕ ಜಾಲತಾಣಗಳಲ್ಲಿ ಗಗನಕ್ಕೇರಿದೆ. ಅದನ್ನೇ ಮುಂದುವರಿಸುವ ಸಲುವಾಗಿ ಈ ರೀತಿ ಟೂ ಪೀಸ್ ಡ್ರೆಸ್, ಹರಿದ ಪೇಪರ್, ಹಗ್ಗ, ತಂತಿ, ಪೇಂಟಿಂಗ್ ಚಿತ್ರಗಳನ್ನು ತೆಗೆದು ನೆಟ್ಟಿಗರು ತನ್ನತ್ತ ನೋಡುವಂತೆ ಮಾಡುತ್ತಿದ್ದಾಳೆ.
ಇದನ್ನೂ ಓದಿ: ಹೆಣ್ಣಿಗೆ ಹೂವು ಯಾಕೆ ಅಂದ? ಈ ಬಿಕಿನಿಯಿಂದ ಅಂದ್ಲು ಉರ್ಫಿ! ಬಾಲಿವುಡ್ ಬಿಚ್ಚಮ್ಮನ ಚಿತ್ರವಿಚಿತ್ರ ಉಡುಗೆ ವಿಡಿಯೋ ಇಲ್ಲಿದೆ ನೋಡಿ
ಉದಯಪುರದಲ್ಲಿ 48 ವರ್ಷದ ಟೈಲರ್ ಕನ್ಹಯ್ಯ ಲಾಲ್ ಹತ್ಯೆಗೆ ಉರ್ಫಿ ಜಾವೇದ್ (Urfi Javed) ತೀವ್ರವಾಗಿ ಖಂಡಿಸಿದ್ದಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ರಾಜಸ್ಥಾನದ ಉದಯಪುರದ (Rajasthan Udaipur Murder) ಭೀಕರ ಹತ್ಯೆಯ ಕುರಿತು ಅವರು ಕಟುವಾಗಿ ಟೀಕಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಉರ್ಫಿ ತಮ್ಮ ಮೊದಲ ಪೋಸ್ಟ್ನಲ್ಲಿ, "ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಅಲ್ಲಾಹುವು ತನ್ನ ಹೆಸರಿನಲ್ಲಿ ದ್ವೇಷಿಸಲು ಮತ್ತು ಕೊಲ್ಲಲು ನಿಮ್ಮನ್ನು ಕೇಳಲಿಲ್ಲ" ಎಂದು ಅವರು ಕೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ