ನೈಸ್​ ರಸ್ತೆಯಲ್ಲಿ ಸಾಹಸದೃಶ್ಯ ಚಿತ್ರೀಕರಿಸಿದ ಐ ಲವ್​ ಯು ತಂಡ

news18
Updated:June 21, 2018, 5:01 PM IST
ನೈಸ್​ ರಸ್ತೆಯಲ್ಲಿ ಸಾಹಸದೃಶ್ಯ ಚಿತ್ರೀಕರಿಸಿದ ಐ ಲವ್​ ಯು ತಂಡ
news18
Updated: June 21, 2018, 5:01 PM IST
- ಓಂ ಸಕಲೇಶಪುರ​,  ನ್ಯೂಸ್​ 18 ಕನ್ನಡ

ಬೆಂಗಳೂರು (ಜೂನ್​ 21):  ರಾಜಕೀಯದಿಂದ ದೂರವಾಗಿ ಮತ್ತೆ ಚಿತ್ರರಂಗದತ್ತ ದೃಷ್ಟಿ ನೆಟ್ಟಿರುವ ರಿಯಲ್​ ಸ್ಟಾರ್​ ಉಪೇಂದ್ರ 'ಐ ಲವ್​ ಯೂ' ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ತೆರೆಕಾಣಲಿರುವ ಈ ಸಿನಿಮಾದಲ್ಲಿ ಮೂರು ಶೇಡ್​ನಲ್ಲಿ ಕಾಣಿಸಿಕೊಳ್ಳಲಿರುವ ಉಪೇಂದ್ರ, ಹೆಲಿಕಾಪ್ಟರ್​ಗಳನ್ನು ಮಾರಾಟ ಮಾಡುವ ಉದ್ಯಮಿಯಾಗಿಯೂ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆಯುತ್ತಿದೆ. ಅದಕ್ಕಾಗಿ ನೈಸ್​ ರಸ್ತೆಯ ಬಳಿ ಇಂದು ಬೀಡುಬಿಟ್ಟಿದ್ದ ಚಿತ್ರತಂಡದವರು  4 ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ನಡೆಸಿದರು.ಒಂದು ಗಂಟೆಗೆ 2 ಲಕ್ಷ ಬಾಡಿಗೆ ನೀಡಿ ಚಾಪರ್​ ಅನ್ನು ಚಿತ್ರೀಕರಣಕ್ಕಾಗಿ ಬಳಸಿಕೊಳ್ಳಲಾಗಿತ್ತು. ಬಹಳ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡ ಉಪೇಂದ್ರ ಅವರ ಸಾಹಸದೃಶ್ಯದ ಚಿತ್ರೀಕರಣ ನಡೆಯಿತು. ವಿನೋದ್​ ಅವರ ​ ಕೊರಿಯೋಗ್ರಫಿಯಲ್ಲಿ ಸಾಹಸ ದೃಶ್ಯವನ್ನು ಸೆರೆಹಿಡಿಯಲಾಯಿತು.

ಈ ಹಿಂದೆ  ಉಪೇಂದ್ರ ಅವರ 'ಬ್ರಹ್ಮ' ಸಿನಿಮಾ ನಿರ್ದೇಶಿಸಿದ್ದ ಆರ್. ಚಂದ್ರು ಇದೀಗ ಮತ್ತೆ 'ಐ ಲವ್​ ಯು' ಸಿನಿಮಾ ಮೂಲಕ ಮತ್ತೆ ಒಟ್ಟಾಗಿದ್ದಾರೆ. ರಚಿತಾ ರಾಮ್​ ಮತ್ತು ಸೋನು ಗೌಡ ಈ ಸಿನಿಮಾದ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.  ಇತ್ತೀಚೆಗಷ್ಟೆ ಈ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿತ್ತು.
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...