ಮತ್ತೆ ಬಂದ ಬುದ್ಧಿವಂತ: ಹೇಗಿದೆ ಗೊತ್ತಾ ಉಪ್ಪಿಯ ಹೊಸ ಗೆಟಪ್?

ಚಮಕ್, ಅಯೋಗ್ಯದಂತಹ ಹಿಟ್​ ಸಿನಿಮಾಗಳನ್ನು ನೀಡಿರುವ ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ ಬುದ್ಧಿವಂತ-2ಗೆ ಬಂಡವಾಳ ಹೂಡುತ್ತಿದ್ದಾರೆ.

zahir | news18
Updated:May 26, 2019, 9:48 PM IST
ಮತ್ತೆ ಬಂದ ಬುದ್ಧಿವಂತ: ಹೇಗಿದೆ ಗೊತ್ತಾ ಉಪ್ಪಿಯ ಹೊಸ ಗೆಟಪ್?
ಉಪೇಂದ್ರ
zahir | news18
Updated: May 26, 2019, 9:48 PM IST
ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರದ ಟೈಟಲ್ ಕೊನೆಗೂ ಫೈನಲ್ ಆಗಿದೆ. ಈ ಹಿಂದೆ ಉಪ್ಪಿ ಅಭಿನಯಿಸಲಿರುವ ಹೊಸ ಚಿತ್ರಕ್ಕೆ 'ಪಿತಾಮಹ' ಎಂದು ಹೆಸರಿಡಲಾಗುವುದು ಎನ್ನಲಾಗಿತ್ತು. ಆದರೀಗ 'ಪಿತಾಮಹ'ನನ್ನು ಕೈ ಬಿಟ್ಟಿರುವ ಚಿತ್ರತಂಡ 'ಬುದ್ಧಿವಂತ'ನ ಕೈ ಹಿಡಿದಿದೆ. ಹೌದು, ರಿಯಲ್​ ಸ್ಟಾರ್​ ಮುಂದಿನ ಚಿತ್ರದ ಹೆಸರು 'ಬುದ್ಧಿವಂತ-2'.

2008 ರಲ್ಲಿ 'ಬುದ್ಧಿವಂತ' ಎಂಬ ಸಿನಿಮಾದಲ್ಲಿ ಉಪ್ಪಿ ಕಾಣಿಸಿಕೊಂಡಿದ್ದರು. ಒಂದಷ್ಟು ತತ್ವ-ಪುರಾಣಗಳೊಂದಿಗೆ ಪ್ರೇಕ್ಷಕರಿಗೆ ಕಚಗುಳಿಯಿಡುವಲ್ಲಿ ರಿಯಲ್ ಸ್ಟಾರ್ ಯಶಸ್ವಿಯಾಗಿದ್ದರು. ಈಗ ಅದೇ ಹೆಸರಿನ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ಯುವ ನಿರ್ದೇಶಕ ಮೌರ್ಯ ಹೊರಟಿದ್ದಾರೆ.

ಆದರೆ ಈ ಬುದ್ಧಿವಂತನಿಗೂ ದಶಕದ ಹಿಂದಿನ ಬುದ್ಧಿವಂತನಿಗೂ ಯಾವುದೇ ಸಾಮ್ಯತೆಯಿಲ್ಲವಂತೆ. ಇದೊಂದು ಹೊಸ ರೀತಿಯ ಕಥೆಯಾಗಿದ್ದು, ಇದು 'ಬುದ್ಧಿವಂತ'ನ ಮುಂದುವರೆದ ಭಾಗವಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.ಈ ಚಿತ್ರದಲ್ಲಿ ಉಪೇಂದ್ರ ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದು ಯಾವ ರೀತಿಯ ಪಾತ್ರ ಎಂಬುದರ ಸುಳಿವು ಮಾತ್ರ ಚಿತ್ರತಂಡ ನೀಡಿಲ್ಲ. ಆದರೆ ಚಿತ್ರದ ಫಸ್ಟ್​ ಲುಕ್​ಗಳನ್ನು ಗಮನಿಸಿದರೆ ಇದೊಂದು 'ರಿಯಲ್ ಸ್ಟಾರ್' ಚಿತ್ರ ಎಂಬುದನ್ನು ಪುಷ್ಠೀಕರಿಸುತ್ತದೆ. ಉಪೇಂದ್ರ ಮತ್ತೊಮ್ಮೆ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿರುವ 'ಬುದ್ಧಿವಂತ-2' ಚಿತ್ರದ ಫಸ್ಟ್​ ಲುಕ್ ಪೋಸ್ಟರ್ ಚಿತ್ರದ ಬಗೆ ಒಂದಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎನ್ನಬಹುದು.


Loading...

ಇಲ್ಲಿ 'ಬುದ್ಧಿವಂತ'ನ ಮೋಹಕ ತಾರೆಗಳಾಗಿ ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಅದರಲ್ಲೊಬ್ಬರು ನಟಿ ಮೇಘನಾ ರಾಜ್. ಮತ್ತೊಂದು ಪಾತ್ರದಲ್ಲಿ ಸೋನಲ್ ಬಣ್ಣ ಹಚ್ಚಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಡೆಡ್ಲಿ ಆದಿತ್ಯ ವಿಭಿನ್ನ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಚಮಕ್', 'ಅಯೋಗ್ಯ'ದಂತಹ ಹಿಟ್​ ಸಿನಿಮಾಗಳನ್ನು ನೀಡಿರುವ ಕ್ರಿಸ್ಟಲ್ ಪಾರ್ಕ್ ಚಂದ್ರಶೇಖರ್ 'ಬುದ್ಧಿವಂತ-2'ಗೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಉಫ್...! ಬಜೆಟ್​ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ 'ರಾಬರ್ಟ್​'
First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...