ಮಹೇಶ್ ಬಾಬು ಮಲ್ಟಿಪ್ಲೆಕ್ಸ್ ಜೊತೆಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ದಿನೇ ದಿನೇ ಸಿನಿರಂಗದಲ್ಲಿ ಅವರ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.ಇದೇ ಕಾರಣದಿಂದ ಅವರ ಸಿನಿಮಾಗಳಲ್ಲಿ ಇನ್ಮುಂದೆ ಕನ್ನಡದ ಕಲಾವಿದರಿಗೂ ಪ್ರತ್ಯೇಕ ಸ್ಥಾನ ಇರಲಿದೆಯಂತೆ.
'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ಮಹೇಶ್ ಬಾಬು ಎದುರು ಸುದೀಪ್ ಖಳ ನಾಯಕನಾಗಿ ಮಿಂಚಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇದೇ ಪಾತ್ರಕ್ಕೆ ಸ್ಯಾಂಡಲ್ವುಡ್ನ ಬೇರೊಬ್ಬ ಖ್ಯಾತ ನಟ ಹಾಗೂ ನಿರ್ದೇಶಕನ ಹೆಸರು ಕೇಳಿ ಬರುತ್ತಿದೆ.
![Mahesh Babu first time spoke about his Son Gautham's entry to Tollywood]()
ಪ್ರಿನ್ಸ್ ಮಹೇಶ್ ಅಭಿನಯದ ಸರ್ಕಾರು ವಾರಿ ಪಾಟ ಚಿತ್ರದ ಫಸ್ಟ್ಲುಕ್ ಪೋಸ್ಟರ್
ಹೌದು, ಉಪೇಂದ್ರ, ಪ್ರಿನ್ಸ್ ಎದುರು ವಿಲನ್ ಆಗಿ ತೊಡೆ ತಟ್ಟಲಿದ್ದಾರಂತೆ. ಈ ಸಲ 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ಕನ್ನಡದ ನಟರೊಬ್ಬರು ಪ್ರಮುಖ ಪಾತ್ರದಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಕಾರಣ ಟಾಲಿವುಡ್ ಸಿನಿಮಾಗಳಿಗೆ ಕರ್ನಾಟಕದಲ್ಲಿ ಬೇಡಿಕೆ ಇದೆ. ಇಲ್ಲೂ ಸಹ ತೆಲುಗು ಸಿನಿಮಾಗಳು ಕೋಟಿ ಕೋಟಿ ಗಳಿಸುತ್ತಿವೆ.
![Upendra]()
ಉಪೇಂದ್ರ
ಈಗ ಬೇರೆ ಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗುತ್ತಿವೆ. ಇದರಿಂದಾಗಿ ತೆಲುಗು ಸಿನಿಮಾಗಳಲ್ಲಿ ಕನ್ನಡದವರು ಇದ್ದರೆ ಅವರು ಅವರಿಗೆ ಪ್ಲಸ್ ಪಾಯಿಂಟ್ ಎಂದು ಮಹೇಶ್ ಬಾಬು ಅವರ ಲೆಕ್ಕಾಚಾರವಂತೆ. ಇದೇ ಕಾರಣಕ್ಕೆ ಇನ್ಮುಂದೆ ಅವರು ತಮ್ಮ ಸಿನಿಮಾಗಳಲ್ಲಿ ಕನ್ನಡದವರಿಗೂ ಆದ್ಯತೆ ನೀಡಲಿದ್ದಾರಂತೆ. ಇನ್ನೂ 'ಸರ್ಕಾರು ವಾರಿ ಪಾಟ' ಸಿನಿಮಾದಲ್ಲಿ ಉಪೇಂದ್ರ ನಟಿಸುವ ಕುರಿತು ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!
ಇದನ್ನೂ ಓದಿ: ಬಿ-ಟೌನ್ನಲ್ಲಿರುವ ಸ್ವಜನಪಕ್ಷಪಾತದ ವಿರುದ್ಧ ಅಸಮಾಧಾನ ಹೊರ ಹಾಕಿದ ನಟ ರಣವೀರ್ ಶೌರಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ