• Home
  • »
  • News
  • »
  • entertainment
  • »
  • Upendra UI: ಒಂದು ಶಾಟ್ ತೆಗೆಯೋಕೆ 100 ಕ್ಯಾಮೆರಾ! ಉಪ್ಪಿ ಫ್ಯಾನ್ಸ್ ಥ್ರಿಲ್

Upendra UI: ಒಂದು ಶಾಟ್ ತೆಗೆಯೋಕೆ 100 ಕ್ಯಾಮೆರಾ! ಉಪ್ಪಿ ಫ್ಯಾನ್ಸ್ ಥ್ರಿಲ್

ಒಂದೇ ಒಂದು ಸನ್ನಿವೇಶವನ್ನು ಶೂಟ್ ಮಾಡೊಕೆ ಬರೋಬರಿ 100 ಕ್ಯಾಮರಾ ಬಳಸಲಾಗಿದೆ. ಒಂದು ದಿನ ಕಂಪ್ಲೀಟ್ ಇದೊಂದೆ ಸನ್ನಿವೇಶವನ್ನು ಉಪ್ಪಿ ತಮ್ಮ ಕ್ಯಾಮರಾಗಳಲಿ ಸೆರೆಹಡಿದಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ಮ್ಯಾಟರ್ ಹೊರಬಿದ್ದಿದೆ.

ಒಂದೇ ಒಂದು ಸನ್ನಿವೇಶವನ್ನು ಶೂಟ್ ಮಾಡೊಕೆ ಬರೋಬರಿ 100 ಕ್ಯಾಮರಾ ಬಳಸಲಾಗಿದೆ. ಒಂದು ದಿನ ಕಂಪ್ಲೀಟ್ ಇದೊಂದೆ ಸನ್ನಿವೇಶವನ್ನು ಉಪ್ಪಿ ತಮ್ಮ ಕ್ಯಾಮರಾಗಳಲಿ ಸೆರೆಹಡಿದಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ಮ್ಯಾಟರ್ ಹೊರಬಿದ್ದಿದೆ.

ಒಂದೇ ಒಂದು ಸನ್ನಿವೇಶವನ್ನು ಶೂಟ್ ಮಾಡೊಕೆ ಬರೋಬರಿ 100 ಕ್ಯಾಮರಾ ಬಳಸಲಾಗಿದೆ. ಒಂದು ದಿನ ಕಂಪ್ಲೀಟ್ ಇದೊಂದೆ ಸನ್ನಿವೇಶವನ್ನು ಉಪ್ಪಿ ತಮ್ಮ ಕ್ಯಾಮರಾಗಳಲಿ ಸೆರೆಹಡಿದಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ಮ್ಯಾಟರ್ ಹೊರಬಿದ್ದಿದೆ.

  • News18 Kannada
  • Last Updated :
  • Bangalore, India
  • Share this:

ರಿಯಲ್ ಸ್ಟಾರ್ (Real star Upendra) ಉಪ್ಪಿ ಅಂದರೆ ಟ್ರೆಂಡ್ ಸೆಟ್ಟರ್ ಅಂದ್ರೆ ತಪ್ಪಾಗಲ್ಲ. ಜೊತೆಗೆ ಉಪ್ಪಿ ಡೈರೆಕ್ಷನ್ (Direction) ಎಂದರೆ ರೆವಲ್ಯೋಷನ್ ಇದ್ದೇ ಇರುತ್ತದೆ. ಈಗ 7 ವರ್ಷಗಳ ನಂಗತರ ಉಪ್ಪಿ ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ UI  ಸಿನಿಮಾ ಹವಾ ಜೋರಾಗಿದೆ. ಈ ಸಿನಿಮಾ ಯಾವ ರೀತಿ ಮೋಡಿ ಮಾಡುತ್ತೆ, ಉಪ್ಪಿ ಯಾವ ಅವರತಾರದಲ್ಲಿ ಬಂದು ಅಭಿಮಾನಿಗಳ ತಲೆಗೆ ಹುಳ ಬಿಡುತ್ತಾರೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಈ ಗ್ಯಾಪ್​ನಲ್ಲಿ ನ್ಯೂಸ್ 18 ಕನ್ನಡಕ್ಕೆ ಉಪ್ಪಿಯ ಹೊಸ ಅವತಾರದ ಎಕ್ಸ್ ಕ್ಲೂಸಿವ್ ಫೋಟೋ (Photo) ಒಂದು ಸಿಕ್ಕಿದೆ. ಇನ್ನು ಆ ಫೋಟೋ ಸಖತ್ ಕ್ರಿಯೇಟಿವ್ ಆಗಿದ್ದು ಅದರ ಹಿಂದಿರೋ ಇಂಟ್ರೆಸ್ಟಿಂಗ್ ಸಮಾಚಾರ ಈಗ ಎಲ್ಲೆಡೆ ಸುದ್ದಿಯಾಗಿದೆ. ಸ್ಯಾಂಡಲ್ ವುಡ್ ನ (Sandalwood) ಬುದ್ದಿವಂತ ಅಭಿಮಾನಿಗಳಿಗೆ ಉಪ್ಪಿ-ಟು ತಿನ್ಸಿದ ಮೇಲೆ ಡೈರೆಕ್ಷನ್ ಗೋಜಿಗೆ ಹೋಗಿರಲಿಲ್ಲ.


ಆದರೆ ಉಪ್ಪಿ ಅಭಿಮಾನಿಗಳು ಮುಕ್ಕೋಟಿ ದೇವರುಗಳಿಗೆ ಹರಕೆ ಹೊತ್ತು, ಈಡುಗಾಯಿ ಹೊಡೆದು ನಮ್ ಬಾಸ್ ಮತ್ತೆ ಡೈರೆಕ್ಷನ್ ಮಾಡಲಿ ಅಂತ ಹರಕೆ ಹೊತ್ತು ಉಪ್ಪಿ ಸಿಕ್ಕಾಗಲೆಲ್ಲ ಬಾಸ್ ಯಾವಾಗ ಡೈರೆಕ್ಷನ್ ಮಾಡ್ತಿರಾ ಅಂತ ಬೇತಾಳದಂತೆ ಉಪ್ಪಿ ಬೆನ್ನು ಹತ್ತಿದ್ದರು. ಇನ್ನು ಅಭಿಮಾನಿಗಳನ್ನು ಕಾಯಿಸಿದರೆ ಚೆನ್ನಾಗಿರಲ್ಲ ಅಂತ ತಿಳಿದ ಉಪ್ಪಿ ಕೊನೆಗೂ ಡೈರೆಕ್ಟರ್ ಕ್ಯಾಪ್ ತೊಟ್ಟು ಯಾರೂ ಊಹೆ ಮಾಡದಂತಹ ಟೈಟಲ್ ಇಟ್ಟು ಶೂಟಿಂಗ್ ಅಖಾಡಕ್ಕೆ ಇಳಿದಿದ್ದಾರೆ‌‌‌‌.


ಉಪ್ಪಿ ಚಿತ್ರದ ಮೊದಲ ಪೋಸ್ಟರ್ ಹಾಗೂ ಮಹೂರ್ತ


ಚಿತ್ರದ ಮುಹೂರ್ತದಿಂದ ಇಲ್ಲಿಯವರೆಗೂ ಚಿತ್ರವಿಚಿತ್ರ ಪೋಸ್ಟರ್ ಗಳ ಕೊಟ್ಟು ಅಭಿಮಾನಿಗಳ ನಿದ್ದೆ ಕೆಡಿಸಿರೊ ಉಪ್ಪಿ ಈ ಚಿತ್ರದ ಟೈಟಲ್ ಏನು, ಈ ಚಿತ್ರದಲ್ಲಿ ಯಾವ ಲುಕ್ ನಲ್ಲಿ ಕಾಣಿಸ್ತಾರೆ ಅನ್ನೋ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.




ಎಕ್ಸ್​ಕ್ಲೂಸಿವ್ ಲುಕ್


ಅದರೆ ಉಪ್ಪಿ ಸಿನಿಮಾ ಟೈಟಲ್ UI ಇರಬಹುದು ಅಂತ ಅಭಿಮಾನಿಗಳು ಗೆಸ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಿಕೊಂಡು ಸಿನಿಮಾಗೆ
ಕಾಯುತ್ತಿದ್ದಾರೆ. ಆದರೆ ಉಪ್ಪಿ ಗೆಟಪ್ ಬಗ್ಗೆ ಮಾತ್ರ ಒಂದೇ ಒಂದು ಸುಳಿವೂ ಕೂಡ ಇದುವರೆಗೂ ಸಿಕ್ಕಿಲ್ಲ. ಈ ಗ್ಯಾಪ್ ನಲ್ಲಿ ಉಪ್ಪಿ ಗೆಟಪ್ ಬಗ್ಗೆ ಸಾಕ್ಷಿ ಸಮೇತ ಎಕ್ಸ್ ಕ್ಲೂಸಿವ್ ಮಾಹಿತಿ ಸಿಕ್ಕಿದೆ.


ಇದನ್ನೂ ಓದಿ: Adipurush: ಟ್ರೋಲ್ ಆದ ಆದಿಪುರುಷ್ ಚಿತ್ರದ ಬಿಗ್ ಅಪ್​ಡೇಟ್ ರಿವೀಲ್!


ಉಪ್ಪಿ ತಮ್ಮ ಸಿನಿಮಾಗ ಒಂದು ಮಾಹಿತಿಯೂ ಹೊರ ಹೋಗದಂತೆ ನಾಲ್ಕು ಗೋಡೆಗಳ ಮಧ್ಯೆ ಅವರ ಲುಕ್ ಇರೋ ಸನ್ನಿವೇಶಗಳ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ
ಫಿಲ್ಮಿ ಅಡ್ಡ ತಂಡಕ್ಕೆ ಉಪ್ಪಿಯ ಸೂಪರ್ ಡೂಪರ್ ಅವತಾರದ ಫೋಟೋವೊಂದು ಸಿಕ್ಕಿದ್ದು, ಆ ಫೋಟೋದಲ್ಲಿ ಉಪ್ಪಿ ಸುಮಾರು 30ಕ್ಕೂ ಹೆಚ್ಚು ಕ್ಯಾಮರಾಗಳ ನಡುವೆ ಬಂಧಿಯಾಗಿದ್ದಾರೆ.




ಸಿನಿಮಾ ಟೈಟಲ್ ನಂತೆ ಕುದುರೆ ಲಾಳವನ್ನು ಕತ್ತಿಗೆ ಹಾಕಿಕೊಂಡಿದ್ದಾರೆ. ಇನ್ನು ಹೇರ್ ಸ್ಟೈಲ್ ಕಾಸ್ಟ್ಯೂಮ್ ಅದರ ಬಗ್ಗೆ ಯೋಚನೆಯೂ ಮಾಡೋಕೂ ಆಗದ ಗೆಟಪ್ ನಲ್ಲಿ ಉಪ್ಪಿ ಕಾಣಿಸಿ ಕೊಂಡಿದ್ದಾರೆ.


ಇದನ್ನೂ ಓದಿ: Real Star Upendra: ಅಭಿಮಾನಿಗಳ ತಲೆಗೆ ಮತ್ತೆ ಹುಳ ಬಿಟ್ಟ ಉಪ್ಪಿ, 'UI' ಚಿತ್ರದ ಪೋಸ್ಟರ್ ಬಿಡುಗಡೆ


ಇನ್ನು ಉಪ್ಪಿಯ ಅವತಾರ ಇರೋ ಈ ಸನ್ನಿವೇಶ UI ಚಿತ್ರದ ಸ್ಪೆಷಲ್ ಸನ್ನಿವೇಶವಾಗಿದ್ದು, 360ಡಿಗ್ರಿ ಆ್ಯಂಗಲ್ ನಲ್ಲಿ ಈ ಸನ್ನಿವೇಶವನ್ನು ಉಪ್ಪಿ ಚಿತ್ರೀಕರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದಿರುವ ಈ ಒಂದೇ ಒಂದು ಸನ್ನಿವೇಶವನ್ನು ಶೂಟ್ ಮಾಡೊಕೆ ಬರೋಬರಿ 100 ಕ್ಯಾಮರಾ ಬಳಸಲಾಗಿದೆ. ಒಂದು ದಿನ ಕಂಪ್ಲೀಟ್ ಇದೊಂದೆ ಸನ್ನಿವೇಶವನ್ನು ಉಪ್ಪಿ ತಮ್ಮ ಕ್ಯಾಮರಾಗಳಲಿ ಸೆರೆಹಡಿದಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ಮ್ಯಾಟರ್ ಹೊರಬಿದ್ದಿದೆ.


ಹೀರೋಯಿನ್ ಯಾರು?


ಉಪ್ಪಿಯ ಈ ಚಿತ್ರದ ಶೂಟಿಂಗ್ ಈಗಾಗಲೇ ಮೂರು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು, ಇನ್ನು ನಾಯಕಿಯ ಬಗ್ಗೆ ಒಂದು ಕ್ಲೂ ಕೊಡದ ಬುದ್ದಿವಂತ ನಾಲ್ಕನೇ ಶೆಡ್ಯೂಲ್ ಶುರು ಮಾಡೋಕು ಮುನ್ನು ಸ್ಟಾರ್ ನಟಿಯನ್ನ UI ಕೋಟೆಗೆ ಕರೆದುಕೊಂಡು ಬಂದು ಶೂಟಿಂಗ್ ಮುಗಿಸಿ ಇದೇ ವರ್ಷ ಡಿಸೆಂಬರ್ ನಲ್ಲಿ ಈಚಿತ್ರವನ್ನು ರಿಲೀಸ್ ಮಾಡೋ ಪ್ಲಾನ್ ನಲ್ಲಿದ್ದಾರೆ.


 ವರದಿ: ಸತೀಶ್ ಕನಕಪುರ

Published by:Divya D
First published: