ಮಾಸ್ಟರ್ ಪೀಸ್ ನಿರ್ದೇಶಕರ ಸಿನಿಮಾದಲ್ಲಿ ರಿಯಲ್​​ ಸ್ಟಾರ್​​ ಉಪ್ಪಿ​; ಕ್ರಾಂತಿಕಾರಿ ಕಥೆ ಹೇಳಲು ಹೊರಟ ಮಂಜು ಮಾಂಡವ್ಯ

Upendra: ‘ಮಾಸ್ಟರ್​ ಪೀಸ್’​ ಸಿನಿಮಾ ಖ್ಯಾತಿಯ ಡೈರೆಕ್ಟರ್​​​ ಮಂಜು ಮಾಂಡವ್ಯ ನಿರ್ದೇಶನದ ಕಾಂತ್ರಿಕಾರಿ ಕಥೆ ಹೊಂದಿರುವ ಸಿನಿಮಾದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಹೊಸ ಸಂದೇಶ ಸಾರಲು ಹೊರಟ ಮಂಜು ಮಾಂಡವ್ಯರ ಪ್ರಯತ್ನಕ್ಕೆ ರಿಯಲ್​​ ಸ್ಟಾರ್​​ ಮುಂದಾಗಿದ್ದಾರೆ.

news18-kannada
Updated:July 6, 2020, 11:43 PM IST
ಮಾಸ್ಟರ್ ಪೀಸ್ ನಿರ್ದೇಶಕರ ಸಿನಿಮಾದಲ್ಲಿ ರಿಯಲ್​​ ಸ್ಟಾರ್​​ ಉಪ್ಪಿ​; ಕ್ರಾಂತಿಕಾರಿ ಕಥೆ ಹೇಳಲು ಹೊರಟ ಮಂಜು ಮಾಂಡವ್ಯ
ರಿಯಲ್​ ಸ್ಟಾರ್​ ಉಪೇಂದ್ರ
  • Share this:
ರಿಯಲ್​ ಸ್ಟಾರ್​ ಉಪೇಂದ್ರ ಸಾಮಾಜಿಕ ಕಳಕಳಿ ಕಥೆಯನ್ನಿಟ್ಟುಕೊಂಡು ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಈ ಮೂಲಕ ಸಮಾಜಕ್ಕೆ ವಿಭಿನ್ನ ಸಂದೇಶವನ್ನು ಕೊಟ್ಟಿದ್ದಾರೆ. ಸೂಪರ್​, ಟೋಪಿವಾಲದಂತಹ ಸಿನಿಮಾದ ಮೂಲಕ ವಿಭಿನ್ನ ಕಥೆಯನ್ನು ಹೇಳಿದ್ದಾರೆ. ಇದೀಗ ‘ಮಾಸ್ಟರ್​ ಪೀಸ್’​ ಸಿನಿಮಾ ಖ್ಯಾತಿಯ ಡೈರೆಕ್ಟರ್​​​ ಮಂಜು ಮಾಂಡವ್ಯ ನಿರ್ದೇಶನದ ಕಾಂತ್ರಿಕಾರಿ ಕಥೆ ಹೊಂದಿರುವ ಸಿನಿಮಾದಲ್ಲಿ ಉಪ್ಪಿ ನಟಿಸುತ್ತಿದ್ದಾರೆ. ಈ ಮೂಲಕ ಸಮಾಜಕ್ಕೆ ಹೊಸ ಸಂದೇಶ ಸಾರಲು ಹೊರಟ ಮಂಜು ಮಾಂಡವ್ಯರ ಪ್ರಯತ್ನಕ್ಕೆ ರಿಯಲ್​​ ಸ್ಟಾರ್​​ ಮುಂದಾಗಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ರಿಯಲ್​ ಸ್ಟಾರ್​ ಉಪೇಂದ್ರ, ‘ನನ್ನ ಮತ್ತು ಮಂಜು ಮಾಂಡವ್ಯ ಕಾಂಬಿನೇಷನ್​​ ಬಹಳ ಹಿಂದೆಯೇ ಸಿನಿಮಾ ಆಗಬೇಕಿತ್ತು. ಆದರೆ, ಕಾರಣಾಂತರದಿಂದ ಅದು ಮುಂದಕ್ಕೆ ಹೋಯಿತು. ಇದೀಗ ಮಂಜು ನನಗೊಂದು ಕಥೆ ಹೇಳಿದ್ದಾರೆ. ಕಥೆ ಬಹಳ ಚೆನ್ನಾಗಿದೆ. ಸಮಾಜಕ್ಕೆ ಆಗಬೇಕಾಗಿರುವ ಒಂದಿಷ್ಟು ಬದಲಾವಣೆಗಳನ್ನು ಈ ಕಥೆ ಒಳಗೊಂಡಿದೆ’ ಎಂದರು.

ನಂತರ ನಿರ್ದೇಶಕ ಮಂಜು ಮಾಂಡವ್ಯ ಮಾತನಾಡಿ, ‘ಈ ಸಿನಿಮಾದ ಕಥೆ ಸಮಾಜಕ್ಕೆ ತುಂಬಾ ಹತ್ತಿರವಾಗಿದೆ. ಸಿನಿಮಾ ನೋಡಿ ಥಿಯೇಟರ್​ನಿಂದ ಹೊರ ಬಂದ ಪ್ರೇಕ್ಷಕ ಈ ರೀತಿ ಆಲೋಚನೆಯನ್ನು ನಾವು ಮಾಡಿಲ್ಲವಲ್ಲ ಎಂದುಕೊಳ್ಳುವ ಕಥೆಯಿದು. ಸಸ್ಪೆನ್ಸ್​- ಥ್ರಿಲ್ಲರ್​ ಮಾದರಿ ಕಥೆಯಾಗಿದ್ದು, ಉಪೇಂದ್ರ ಅವರಿಗೆ ಇಂತಹ ಕಥೆ ಮಾಡಲು ಸಾಧ್ಯ’ ಎಂದು ಹೇಳಿದ್ದಾರೆ.

ನಂತರ ಮಾತು ಮುಂದುವರಿದ ಅವರು ‘ಮೊದಲ ಬಾರಿ ಕಥೆ ಹೇಳಿದಾಗ ಉಪ್ಪಿ ಅವರು ಇಂಪ್ರೆಸ್​ ಆಗಿ ಸಿನಿಮಾ ಒಪ್ಪಿಕೊಂಡಿದ್ದಾರೆ. ಸಾಮಾಜಿಕ ಕಳಕಳಿಯ ಸಿನಿಮಾವಾದರೂ ಇದರಲ್ಲಿ ಎಂಟರ್​ಟೇನ್​ಮೆಂಟ್​​, ಕಾಮಿಡಿಗೇನು ಕೊರತೆಯಿಲ್ಲ. ಎಲ್ಲ ಪ್ರೇಕ್ಷಕರಿಗೆ ಈ ಸಿನಿಮಾ ತಲುಪುತ್ತದೆ’ ಎಂದು ಹೇಳಿದ್ದಾರೆ.

ಇನ್ನು ಈ ಚಿತ್ರವನ್ನು ‘ರನ್ನ’ ಸಿನಿಮಾ ನಿರ್ಮಾಪಕ ಚಂದ್ರಶೇಖರ್​​ ನಿರ್ಮಾಣ ಮಾಡಲಿದ್ದಾರೆ. ಕಥೆ ಪೂರ್ಣಗೊಂಡಿದ್ದು, ಮಂಜು ಮಾಂಡವ್ಯ ಸ್ಕ್ರೀನ್​​ ಪ್ಲೇ ಬರೆಯುತ್ತಿದ್ದಾರೆ. ಕೊರೋನಾ ಹಾವಳಿ ಕಡಿಮೆಯಾದಂತೆ ಈ ಸಿನಿಮಾದ ಟೈಟಲ್​​ ಲಾಂಚ್​ ಮಾಡಲಿದ್ದೇವೆ ಎಂದಿದ್ದಾರೆ.

PUBG: ಅಜ್ಜನ ಪೆನ್ಶನ್​ ದುಡ್ಡು ಖಾಲಿ ಮಾಡಿತು ಪಬ್​ಜಿ ಗೇಮ್​!
Published by: Harshith AS
First published: July 6, 2020, 9:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading