ಉಪ್ಪಿ ಅಭಿಮಾನಿಗಳಿಗೆ ಸಿಹಿಸುದ್ದಿ: 20 ವರ್ಷಗಳ ಬಳಿಕ ಮತ್ತೆ ತೆರೆಕಾಣಲಿದೆ ಉಪೇಂದ್ರ ಸಿನಿಮಾ

Upendra Movie: 1999ರಲ್ಲಿ ತೆರೆಕಂಡಿದ್ದ ಉಪೇಂದ್ರ ಸಿನಿಮಾ ಮರು ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದಲ್ಲಿ 200 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದ್ದ ಈ ಸಿನಿಮಾ ಆಂಧ್ರಪ್ರದೇಶದಲ್ಲಿ ಶತದಿನೋತ್ಸವ ಕಂಡಿತ್ತು.

Sushma Chakre | news18-kannada
Updated:September 24, 2019, 11:59 AM IST
ಉಪ್ಪಿ ಅಭಿಮಾನಿಗಳಿಗೆ ಸಿಹಿಸುದ್ದಿ: 20 ವರ್ಷಗಳ ಬಳಿಕ ಮತ್ತೆ ತೆರೆಕಾಣಲಿದೆ ಉಪೇಂದ್ರ ಸಿನಿಮಾ
ಉಪೇಂದ್ರ ಸಿನಿಮಾ ಪೋಸ್ಟರ್
  • Share this:
ಕಳೆದ ವಾರವಷ್ಟೇ ಸಾಹಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಅವರ 'ನಿಷ್ಕರ್ಷ' ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಅದೇ ದಿನ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಮತ್ತೋರ್ವ ನಟ ಉಪೇಂದ್ರ ಅವರ ಸೂಪರ್ ಹಿಟ್ ಸಿನಿಮಾ 'ಉಪೇಂದ್ರ' ಇದೀಗ ಮತ್ತೆ ತೆರೆಕಾಣುತ್ತಿದೆ.

'ನಾನು' ಎಂಬ ಪಾತ್ರದ ಮೂಲಕ ವಿಚಿತ್ರವಾದ ಗೆಟಪ್, ವಿಭಿನ್ನವಾದ ಸಂದೇಶ ನೀಡಿದ್ದ ರಿಯಲ್ ಸ್ಟಾರ್​ ಉಪೇಂದ್ರ ನಿರ್ದೇಶಿಸಿ, ಅಭಿನಯಿಸಿದ್ದ 'ಉಪೇಂದ್ರ' ಸಿನಿಮಾ ಮತ್ತೆ ತೆರೆಗೆ ಬರುತ್ತಿದೆ. ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಬೀಳುವ ಯುವಕನೊಬ್ಬನ ಕತೆಯನ್ನು ಹೊಂದಿದ್ದ ಈ ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ, ದಾಮಿನಿ ನಾಯಕಿಯರಾಗಿ ಅಭಿನಯಿಸಿದ್ದರು. ಈ ಸಿನಿಮಾ ಉಪೇಂದ್ರಗೆ ಮಾತ್ರವಲ್ಲ ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೂ ದೊಡ್ಡ ಬ್ರೇಕ್ ತಂದುಕೊಟ್ಟಿತ್ತು.

ಸುದೀಪ್ ಟ್ವಿಟರ್​ ಖಾತೆ ಹ್ಯಾಕ್​ಗೆ ಯತ್ನ: ಕುಕೃತ್ಯದ ಹಿಂದಿರುವ ಕಾಣದ ಕೈಗಳು ಯಾರದ್ದು?

1999ರಲ್ಲಿ ತೆರೆಕಂಡಿದ್ದ 'ಉಪೇಂದ್ರ' ಸಿನಿಮಾ ಮರು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾಗೆ ಮತ್ತು ಉಪೇಂದ್ರ ಅವರ ನಿರ್ದೇಶನಕ್ಕೆ ಫಿಲಂಫೇರ್ ಪ್ರಶಸ್ತಿ ಕೂಡ ಲಭಿಸಿತ್ತು. ಕನ್ನಡದಲ್ಲಿ 200 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದ್ದ 'ಉಪೇಂದ್ರ' ಸಿನಿಮಾ ತೆಲುಗು ಪ್ರೇಕ್ಷಕರನ್ನೂ ಆಕರ್ಷಿಸಿ, ಆಂಧ್ರದಲ್ಲಿ ಶತದಿನೋತ್ಸವ ಕಂಡಿತ್ತು. ಈ ಸಿನಿಮಾದ 'ಉಪ್ಪಿಗಿಂತ ರುಚಿ ಬೇರೆ ಇಲ್ಲ', 'ಎಂಟಿವಿ ಸುಬ್ಬಲಕ್ಷ್ಮಿಗೆ ಬರಿ ಓಳು', 'ಮಸ್ತ್ ಮಸ್ತ್ ಹುಡುಗಿ ಬಂದ್ಲು' ಹಾಡುಗಳು ಇಂದಿಗೂ ಉಪೇಂದ್ರ ಅಭಿಮಾನಿಗಳ ಫೇವರಿಟ್ ಆಗಿ ಉಳಿದಿವೆ.

'ನಾನು' ಎಂಬ ಅವತಾರದಲ್ಲಿ ಉಪ್ಪಿ ನಟಿಸಿದ್ದ 'ಉಪೇಂದ್ರ' ಸಿನಿಮಾವನ್ನು ನಿರ್ಮಾಪಕಿ ಶಿಲ್ಪಾ ಶ್ರೀನಿವಾಸ್​ ಮಲ್ಟಿಫ್ಲೆಕ್ಸ್​ಗಳಲ್ಲಿ ತೆರೆಗೆ ತರಲು ಯೋಚಿಸಿದ್ದಾರೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಮರು ಬಿಡುಗಡೆಯ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ.

First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ