ಕಹಿ ಸುದ್ದಿ ಜತೆ ಸಿಹಿ ಸುದ್ದಿ ಕೊಟ್ಟ Upendra: ಹೊಸ ಸಿನಿಮಾ ಟೈಟಲ್​ ಬಗ್ಗೆ ರಿಯಲ್​ ಸ್ಟಾರ್ ಹೇಳಿದ್ದು ಹೀಗೆ..!

ನಾಳೆ ಉಪೇಂದ್ರ ಅವರ ಹುಟ್ಟುಹಬ್ಬ. ಆದರೆ, ಅವರು ಈ ಸಲ ಅಭಿಮಾನಿಗಳ ಜೊತೆ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬದಂದು ಫ್ಯಾನ್ಸ್​ಗಾಗಿ ಒಂದು ಸರ್ಪ್ರೈಸ್​ ಪ್ಲಾನ್​ ಮಾಡಿದ್ದಾರಂತೆ. ಅದಕ್ಕೂ ಮೊದಲು ತಮ್ಮ ಹೊಸ ಸಿನಿಮಾದ ಟೈಟಲ್​ ಬಗ್ಗೆ ಉಪೇಂದ್ರ ಕೆಲವು ಆಸಕ್ತಿಕರ ವಿಷಯ ಹಂಚಿಕೊಂಡಿದ್ದಾರೆ.

ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ

ಉಪೇಂದ್ರ ನಿರ್ದೇಶನದ ಹೊಸ ಸಿನಿಮಾ

  • Share this:
ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಸಿನಿಮಾ ನಿರ್ದೇಶನ ಮಾಡುವ ವಿಷಯ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಅವರು ಬಹಳ ಸಮಯದ ನಂತರ ನಿರ್ದೇಶನ (Direction) ಮಾಡುತ್ತಿರುವ ಸಿನಿಮಾದ ಪೋಸ್ಟರ್ ಲೀಕ್​ ಆಗಿದ್ದು, ವೈರಲ್ ಆಗುತ್ತಿದೆ. ಉಪೇಂದ್ರ ಅವರು ಎಂದಿನಂತೆ ಸಖತ್​ ವಿಭಿನ್ನವಾದ ಟೈಟಲ್​ ಜೊತೆ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಇನ್ನು ಈ ಪೋಸ್ಟರ್​ ವೈರಲ್ ಆಗಿರುವಾಗಲೇ ಉಪೇಂದ್ರ ಅವರು ತಮ್ಮ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿಯ ಜೊತೆಗೆ ಸಿಹಿ ಸುದ್ದಿಯನ್ನೂ ಕೊಟ್ಟಿದ್ದಾರೆ. ಅದೇನು ಕಹಿ ಸುದ್ದಿ ಹಾಗೂ ಸಿಹಿ ಸುದ್ದಿ ಅಂತೀರಾ..? ಮುಂದೆ ಓದಿ ನಿಮಗೆ ತಿಳಿಯುತ್ತೆ. 

ಮೊದಲಿಗೆ ಉಪೇಂದ್ರ ಅವರು ಕೊಟ್ಟಿರುವ ಕಹಿ ಸುದ್ದಿಯ ಬಗ್ಗೆ ತಿಳಿಯೋಣ. ಈ ಸಲವೂ ಉಪೇಂದ್ರ ಅವರು ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಉಪೇಂದ್ರ ಅವರ ಹುಟ್ಟುಹಬ್ಬ. ಈ ದಿನ ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಹೇಳಿದದಾರೆ ಉಪ್ಪಿ.
View this post on Instagram


A post shared by Upendra (@nimmaupendra)


ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಆಚರಿಸುತ್ತಿದ್ದ ಅಭಿಮಾನಿಗಳ ದಿನದ ಸಂಭ್ರಮ ಈ ವರ್ಷವೂ ಆಚರಿಸಲು ಆಗದಿರುವುದಕ್ಕೆ ವಿಷಾದಿಸುತ್ತೇನೆ. ನಾನು ಬೆಂಗಳೂರಿನಲ್ಲಿ ಇಲ್ಲದಿರುವ ಕಾರಣ ಎಲ್ಲ ಅಭಿಮಾನಿಗಳು ಅವರವರು ಇರುವ ಕಡೆಯೇ ಸರಳವಾಗಿ ಈ ದಿನವನ್ನು ಆಚರಿಸಿ ಹಾರೈಸಬೇಕಾಗಿ ಬಯಸುತ್ತೇನೆ ಎಂದು ಉಪೇಂದ್ರ ಅವರು ಮನವಿ ಮಾಡಿದ್ದಾರೆ. ಇದರಿಂದಾಗಿ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ.

ಇದನ್ನೂ ಓದಿ: Happy Birthday Chandan Shetty: ಚಂದನ್​ ಶೆಟ್ಟಿ ತೆಗೆದುಕೊಂಡಿದ್ದ ಆ ಒಂದು ನಿರ್ಧಾರ ಇಂದಿಗೂ ಕಣ್ಣೀರಿಡುವಂತೆ ಮಾಡಿದೆ..!

ಇನ್ನು ಉಪೇಂದ್ರ ಅವರು ಕೊಡಲಿರುವ ಸಿಹಿ ಸುದ್ದಿಯ ವಿಷಯಕ್ಕೆ ಬಂದರೆ, ಅದು ಅವರು ನಿರ್ದೇಶಿಸಲಿರುವ ಸಿನಿಮಾದ ಕುರಿತಾಗಿ ಒಂದಿಷ್ಟು ಮಾಹಿತಿಯನ್ನು ನಾಳೆ ಅಧಿಕೃತವಾಗಿ ಉಪ್ಪಿ ಹಂಚಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಇನ್ನು ನಿನ್ನೆಯೇ ಉಪೇಂದ್ರ ಅವರು ಲೀಕ್​ ಆಗಿದೆ ಎನ್ನಲಾಗುತ್ತಿರುವ ಅವರ ಸಿನಿಮಾದ ಪೋಸ್ಟರ್ ಕುರಿತಾಗಿ ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಸಿನಿಮಾದ ಕೆಲವು ಪೋಸ್ಟರ್​ಗಳನ್ನು ಹಂಚಿಕೊಂಡಿರುವ ನಟ, ಸಿನಿಮಾ ಟೈಟಲ್ ಹಿಂದಿರುವ ಅರ್ಥ ಏನಿರಬಹುದು ಊಹಿಸಿ ಅಂತ ಕೆಲವು ಸುಳಿವು ನೀಡಿದ್ದಾರೆ.
View this post on Instagram


A post shared by Upendra (@nimmaupendra)
ಜನ ಅಸಮಾನ್ಯ ಎಂದು ಶೀರ್ಷಿಕೆಯಲ್ಲಿ ಬರೆದು ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ಉಪೇಂದ್ರ, ಅವರ ನಿರ್ದೇಶನದ ಸಿನಿಮಾದ ಟೈಟಲ್​ ನಾನು...ನೀನು... ಇರಬಹುದಾ, ಉಪ್ಪಿ 3 ಅಥವಾ ಐ..ಯು... ಮುಂದೇನು ಇರಬಹುದು ಎಂದು ಪ್ರಶ್ನಾರ್ಥಕ ಚಿಕಹ್ನೆ ಹಾಕಿದ್ದಾರೆ. ಈ ಪೋಸ್ಟರ್​ಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾದ ಟೈಟಲ್​ ಬಗ್ಗೆ ಇರುವ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇನ್ನು ಇದನ್ನು ನೋಡಿದ ನೆಟ್ಟಿಗರು ನಿಮ್ಮನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಬಿಡಿ ಸರ್​ ಎನ್ನುತ್ತಿದ್ದಾರೆ.

ಈ ಹಿಂದೆ ಹತ್ತು ಚಿತ್ರಗಳ ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್​. ಇದು ಅವರ ಡೈರೆಕ್ಷನ್​ನಲ್ಲಿ ಮೂಡಿಬರಲಿರುವ 11ನೇ ಚಿತ್ರವಾಗಿದೆ. ಉಪ್ಪಿ 2 ಸಿನಿಮಾ 2015ರಲ್ಲಿ ರಿಲೀಸ್ ಆಗಿದ್ದು, ಇದು ಅವರು ಅಭಿನಯಿಸಿ, ನಿರ್ದೇಶನದ ಕೊನೆಯ ಸಿನಿಮಾ. ಈ ಚಿತ್ರದಲ್ಲಿ ಕ್ರಿಸ್ಟಿನಾ ಅಕ್ವೀನಾ ಅವರು ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಹಣ ಹೂಡಿದ್ದರು.

ಇದನ್ನೂ ಓದಿ: Meena Birthday: ಅಮ್ಮನ ಪಡಿಯಚ್ಚು ಈ ಸ್ಟಾರ್​ ಕಿಡ್​: ನಟಿ ಮೀನಾರ ಮಗಳು ಹೇಗಿದ್ದಾಳೆ ನೋಡಿ..!

ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಉಪೇಂದ್ರ ಅವರದ್ದೇ ಆಗಿದ್ದು, ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದ ಸಿನಿಮಾ ಆಗಿದೆಯಂತೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ರಿಲೀಸ್ ಆಗಲಿದೆಯಂತೆ.

ಉಪೇಂದ್ರ ಅವರ ನಿರ್ದೇಶನದ ಸಿನಿಮಾ ನೋಡಲು ದೊಡ್ಡ ಸಿನಿಪ್ರಿಯರ ಬಳಗವೇ ಕಾಯುತ್ತಿದೆ. ಸಾಮಾನ್ಯ ಸಿನಿಮಾಗಳಿಗಿಂಥಲೂ ವಿಭಿನ್ನವಾಗಿ ಸಿನಿಮಾ ಮಾಡುವ ರಿಯಲ್ ಸ್ಟಾರ್​ ಈ ಸಲ ಯಾವ ಸ್ಟೋರಿ ಹೊತ್ತು ತರುತ್ತಿದ್ದಾರೆ ಎಂಬ ಕಾತರ ಅಭಿಮಾನಿಗಳಲ್ಲಿದೆ. ಉಪೇಂದ್ರ ಅವರು ಆರ್​. ಚಂದ್ರು ನಿರ್ದೇಶನದ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಸಹ ನಟಿಸುತ್ತಿದ್ದಾರೆ. ಮತ್ತೊಂದು ಸಿನಿಮಾ ಲಗಾಮ್​ನಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಹರಿಪ್ರಿಯಾ ನಾಯಕಿಯಾಗಿದ್ದಾರೆ. ಇನ್ನು ತೆಲುಗು ಚಿತ್ರ ಗಣಿಯಲ್ಲೂ ಉಪೇಂದ್ರ ಕಾಣಿಸಿಕೊಂಡಿದ್ದಾರೆ. ಅದು ಸಹ ಬಿಡುಗಡೆಯ ಹೊಸ್ತಿಲಲ್ಲಿದೆ. ಇವುಗಳ ಜೊತೆಗೆ ಹೋಮ್ ಮಿನಿಸ್ಟರ್​, ತ್ರಿಶೂಲಂ ಹಾಗೂ ಬುದ್ಧಿವಂತ 2 ಸಿನಿಮಾಗಳು ಸಹ ಉಪ್ಪಿ ಕೈಯಲ್ಲಿವೆ.
Published by:Anitha E
First published: