HBD Upendra: ನಿರ್ದೇಶನಕ್ಕೆ ಮರಳಿದ ಉಪೇಂದ್ರ: ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶ ಕೊಟ್ಟ ರಿಯಲ್​ ಸ್ಟಾರ್​..!

ಇದೇ ತಿಂಗಳ 18ರಂದು ಅಂದರೆ, ಶುಕ್ರವಾರ ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಪ್ರತಿವರ್ಷ ಅಭಿಮಾನಿಗಳೊಂದಿಗೆ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದ ರಿಯಲ್​ ಸ್ಟಾರ್​ ಈ ಸಲ ಮನೆಯಲ್ಲಿ ಇರುವುದಿಲ್ಲವಂತೆ. ಅಲ್ಲದೆ ಕೊರೋನಾ ಇರುವ ಕಾರಣದಿಂದ ಗುಂಪು ಸೇರುವಂತಿಲ್ಲ. ಇದರಿಂದಾಗಿ ಅಭಿಮಾನಿಗಳು ಇರುವ ಕಡೆಯಿಂದಲೇ ವಿಶ್​ ಮಾಡಿ. ತಾನು ಮನೆಯಲ್ಲಿ ಇರುವುದಿಲ್ಲ ಎಂದು ಉಪ್ಪಿ ಮನವಿ ಮಾಡಿದ್ದಾರೆ. ಜೊತೆಗೆ ತಾವು ಹೊರಗೆ ಹೋಗುತ್ತಿದ್ದು, ಅಲ್ಲಿ ಸಿಗ್ನಲ್​ ಸಿಕ್ಕರೆ ಫೇಸ್​ಬುಕ್​ ಲೈವ್​ ಮೂಲಕ ಅಭಿಮಾನಿಗಳ ಜೊತೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ.

Anitha E | news18-kannada
Updated:September 14, 2020, 11:11 AM IST
HBD Upendra: ನಿರ್ದೇಶನಕ್ಕೆ ಮರಳಿದ ಉಪೇಂದ್ರ: ಅಭಿಮಾನಿಗಳಿಗೆ ವಿಡಿಯೋ ಮೂಲಕ ಸಂದೇಶ ಕೊಟ್ಟ ರಿಯಲ್​ ಸ್ಟಾರ್​..!
ಉಪೇಂದ್ರ
  • Share this:
ನಟ ಹಾಗೂ ನಿರ್ದೇಶಕ ರಿಯಲ್​ ಸ್ಟಾರ್​ ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಸಖತ್​ ಸರ್ಪ್ರೈಸ್ ಕೊಟ್ಟಿದ್ದಾರೆ. ಅಭಿಮಾನಿಗಳ ಆಸೆ ಈಡೇರಿಸುವ ಸಲುವಾಗಿ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. ರಿಯಲ್​ ಸ್ಟಾರ್​ ಉಪ್ಪು ಮತ್ತೆ ಯಾವಾಗ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಅಂತ ಅಭಿಮಾನಿಗಳು ಕಾಯುತ್ತಿದ್ದರು. ಅಲ್ಲದೆ ಆಗಾಗ ಈ ಕುರಿತಾದ ಸುದ್ದಿಗಳೂ ಹರಿದಾಡುತ್ತಿದ್ದವು. ಈಗ ಫ್ಯಾನ್ಸ್​ಗಳ ಕಾತರಕ್ಕೆ ಖುದ್ದು ಉಪ್ಪಿ ತೆರೆ ಎಳೆದಿದ್ದಾರೆ. ಮತ್ತೆ ನಿರ್ದೇಶಕರ ಕ್ಯಾಪ್​ ತೊಡಲಿದ್ದಾರೆ ರಿಯಲ್​ ಸ್ಟಾರ್​. ಈ ಕುರಿತಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಣೆ ಮಾಡಿದ್ದಾರೆ. ಇದರ ಜೊತೆಗೆ ಅವರ ಹುಟ್ಟುಹಬ್ಬದ ಪ್ಲಾನ್ಸ್​ ಬಗ್ಗೆಯೂ ಹೇಳಿಕೊಂಡಿದ್ದಾರೆ. ಉಪೇಂದ್ರ ಕೊಟ್ಟಿರುವ ಸಿಹಿ ಸುದ್ದಿ ಕೇಳಿದ ಅಭಿಮಾನಿಗಳೂ ಥ್ರಿಲ್​ ಆಗಿದ್ದಾರೆ. ಉಪ್ಪಿ ಯಾವಾಗ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಕಾಯುತ್ತಿದ್ದಾರೆ.  

ಇದೇ ತಿಂಗಳ 18ರಂದು ಅಂದರೆ, ಶುಕ್ರವಾರ ಉಪೇಂದ್ರ ಅವರ ಹುಟ್ಟುಹಬ್ಬವಿದೆ. ಪ್ರತಿವರ್ಷ ಅಭಿಮಾನಿಗಳೊಂದಿಗೆ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದ ರಿಯಲ್​ ಸ್ಟಾರ್​ ಈ ಸಲ ಮನೆಯಲ್ಲಿ ಇರುವುದಿಲ್ಲವಂತೆ. ಅಲ್ಲದೆ ಕೊರೋನಾ ಇರುವ ಕಾರಣದಿಂದ ಗುಂಪು ಸೇರುವಂತಿಲ್ಲ. ಇದರಿಂದಾಗಿ ಅಭಿಮಾನಿಗಳು ಇರುವ ಕಡೆಯಿಂದಲೇ ವಿಶ್​ ಮಾಡಿ. ತಾನು ಮನೆಯಲ್ಲಿ ಇರುವುದಿಲ್ಲ ಎಂದು ಉಪ್ಪಿ ಮನವಿ ಮಾಡಿದ್ದಾರೆ. ಜೊತೆಗೆ ತಾವು ಹೊರಗೆ ಹೋಗುತ್ತಿದ್ದು, ಅಲ್ಲಿ ಸಿಗ್ನಲ್​ ಸಿಕ್ಕರೆ ಫೇಸ್​ಬುಕ್​ ಲೈವ್​ ಮೂಲಕ ಅಭಿಮಾನಿಗಳ ಜೊತೆ ಮಾತನಾಡುವುದಾಗಿಯೂ ತಿಳಿಸಿದ್ದಾರೆ.



ಇನ್ನು ಅವರ ಹೊಸ ಸಿನಿಮಾ ಕುರಿತಾಗಿಯೂ ಮಾತನಾಡಿದ್ದಾರೆ. ಸಿನಿಮಾ ನಿರ್ದೇಶನಕ್ಕೆ ಮರಳುತ್ತಿದ್ದು, ಸದ್ಯದಲ್ಲೇ ಟೈಟಲ್​ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಇನ್ನು ಸದ್ಯದ ಪರಿಸ್ಥಿತಿಗೆ ಸಿನಿಮಾ ಕತೆಯನ್ನು ಸಿದ್ಧಗೊಳಿಸಬೇಕು. ಜೊತೆಗೆ ಸದ್ಯ ಉಪೇಂದ್ರ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದು, ಅವುಗಳು ಪೂರ್ಣಗೊಂಡ ನಂತರ ಈ ಹೊಸ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ ರಿಯಲ್ ಸ್ಟಾರ್​.
Published by: Anitha E
First published: September 14, 2020, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading