Upendra ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ! ಸಿನಿಮಾ ಹೆಸರನ್ನು ನೀವೇ ಊಹಿಸಿ!

ಪೋಸ್ಟರ್​ನಲ್ಲಿರುವ ಕುದುರೆ ಲಾಳದ ಸಿಂಬಲ್​ನಲ್ಲಿ ಚಿತ್ರದ ಟೈಟಲ್​ನ್ನು ಬುದ್ದಿವಂತ ಅಡಗಿಸಿಟ್ಟಿದ್ದಾರೆ!

ಪೋಸ್ಟರ್

ಪೋಸ್ಟರ್

  • Share this:
ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಚಿತ್ರ ಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಅಭಿಮಾನಿಗಳ ಆಸೆಯಂತೆ ಉಪೇಂದ್ರ (Real Star Upendra) ನಿರ್ದೇಶನದ ಹೊಸ ಚಿತ್ರ ಅನೌನ್ಸ್ ಆಗಿದೆ. ಯಾರು ಊಹೆ ಮಾಡದ ರೀತಿಯ ಸಿನಿಮಾ ಪೋಸ್ಟರ್ ಬಿಡುಗಡೆಗೊಳಿಸಿರುವ ನಟ, ನಿರ್ದೆಶಕ ಉಪೇಂದ್ರ ಅಭಿಮಾನಿಗಳಿಗೆ ಥ್ರಿಲ್ (Kannada New Film) ನೀಡಿದ್ದಾರೆ.  ಕುದುರೆ ಏರಿ ಕಂಬಳಿ ಹೊದ್ದಿರುವ ಲಿಕ್​ನಲ್ಲಿ ಪೋಸ್ಟರ್​ನಲ್ಲಿ (Upendra New Movie Poster) ಉಪೇಂದ್ರ ಕಾಣಿಸಿಕೊಂಡಿದ್ದು ಸಖತ್ತಾಗಿದೆ ಅನಿಸುವಂತಿದೆ.  ಪೋಸ್ಟರ್​ನಲ್ಲಿರುವ ಕುದುರೆ ಲಾಳದ ಸಿಂಬಲ್​ನಲ್ಲಿ ಚಿತ್ರದ ಟೈಟಲ್​ನ್ನು ಬುದ್ದಿವಂತ (Upendra Direction Films) ಅಡಗಿಸಿಟ್ಟಿದ್ದಾರೆ! ಅಲ್ಲದೇ ಇದು ಫ್ಯಾನ್ ಇಂಡಿಯಾ ಸಿನಿಮಾ ಎಂಬುದು ಪಕ್ಕಾ ಆಗಿದೆ!

ಬರೋಬ್ಬರಿ ಏಳು ವರ್ಷಗಳ ನಂತರ ರಿಯಲ್ ಸ್ಟಾರ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಂತಾಗಿದೆ. ಅಂದಹಾಗೆ ಉಪೇಂದ್ರ ನಿರ್ದೇಶನದ ಹೊಸ ಚಿತ್ರವನ್ನು ಲಹರಿ ಫಿಲಂ ಹಾಗೂ ಕೆಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.



ಕುದುರೆ ಏರಿ ಕಂಬಳಿ ಹೊದ್ದಿರುವ ಲಿಕ್​ನಲ್ಲಿ ಪೋಸ್ಟರ್​ನಲ್ಲಿ (Upendra New Movie Poster) ಉಪೇಂದ್ರ ಕಾಣಿಸಿಕೊಂಡಿದ್ದು ಸಖತ್ತಾಗಿದೆ ಅನಿಸುವಂತಿದೆ.  ಪೋಸ್ಟರ್​ನಲ್ಲಿರುವ ಕುದುರೆ ಲಾಳದ ಸಿಂಬಲ್​ನಲ್ಲಿ ಚಿತ್ರದ ಟೈಟಲ್​ನ್ನು ಬುದ್ದಿವಂತ (Upendra Direction Films) ಅಡಗಿಸಿಟ್ಟಿದ್ದಾರೆ!

"ಉಪೇಂದ್ರ" ಚಿತ್ರದಲ್ಲಿ ನಾನು, ಉಪ್ಪಿ- 2 ಚಿತ್ರದಲ್ಲಿ ನೀನು, ಈಗ ಇವನು ಸ್ಟಾಟರ್ಜಿಯಲ್ಲಿ ರಿಯಲ್ ಸ್ಟಾರ್ ಉಪ್ಪಿ ವೀಕ್ಷಕರಿಗೆ ರಸದೌತಣ ಉಣಬಡಿಸಲಿದ್ದಾರೆ ಎಂದೇ ಹೇಳಲಾಗಿದೆ.

33 ವರ್ಷದ ಚಿತ್ರಕಥೆ!
ಫೇಸ್​ಬುಕ್ ಪೋಸ್ಟ್​ನಲ್ಲಿ ತಮ್ಮ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ರಿಯಲ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ ಈವರೆಗಿನ ಸಿನಿ ಜರ್ನಿಯನ್ನು ಸುಂದರವಾಗಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ.

ಇದನ್ನೂ ಓದಿ: Puneeth Rajkumar: ‘ಜೇಮ್ಸ್' ಸಿನಿಮಾದಿಂದ ಮತ್ತೊಂದು ಹಾಡು, "ಸಲಾಮ್ ಸೋಲ್ಜರ್" ಎಂದ ಪವರ್ ಸ್ಟಾರ್

ಶುಭಸುದ್ದಿ ನೀಡುವುದಾಗಿ ತಿಳಿಸಿದ್ದ ಉಪ್ಪಿ!
ಈಮುನ್ನವೇ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಮಾಹಿತಿ ನೀಡಿದ್ದರು. ಮಾರ್ಚ್ 11 ಡೇಟ್ ಸೇವ್ ಮಾಡಿಕೊಳ್ಳಿ. ಅಂದು ಒಂದು ಒಳ್ಳೆಯ ಶುಭ ಸುದ್ದಿ ನೀಡುತ್ತೇನೆ ಎಂದು ಅವರು ಈಮುಂಚೆಯೇ ಘೋಷಣೆ ಮಾಡಿದ್ದರು.

ಬರೋಬರಿ 7 ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡುತ್ತಿರುವ ಉಪ್ಪಿ ಚಿತ್ರಕ್ಕೆ ‘ಟಗರು’, ‘ಸಲಗ’ಗಳಂತ ಎರಡು ಸೂಪರ್ ಹಿಟ್ ಚಿತ್ರಗಳನ್ನು ಇಂಡಸ್ಟರಿಗೆ ಕೊಟ್ಟ ಕೆಪಿ ಶ್ರೀಕಾಂತ್ ಉಪ್ಪಿ ಯ ಹೊಸ ಕನಸಿಗೆ ನೀರೆರೆಯಲಿದ್ದಾರೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಮ್ಮ ವೀನಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಮೂರನೇ ಚಿತ್ರವಾಗಿ ಉಪ್ಪಿಯ ಚಿತ್ರ ನಿರ್ಮಾಣ ಮಾಡ್ತಿದ್ದಾರೆ.

ಸಿನಿಮಾ ಅನೌನ್ಸ್​ಗೂ ಮುನ್ನವೇ ಆಡಿಯೋ ರೈಟ್ಸ್​ ಲಹರಿ ತೆಕ್ಕೆಗೆ!
ವಿಶೇಷ ಅಂದ್ರೆ ಈ ಜೋಡಿ ಒಂದಾಗ್ತಿದಂತೆ ಸಿನಿಮಾ ಶುರುವಾಗುವ ಮೊದಲೆ ಚಿತ್ರದ ಆಡಿಯೋ ರೈಟ್ಸ್ ಲಹರಿ ತೆಕ್ಕೆಗೆ ಜಾರಿದೆ. ಆದರೆ ಈ ಸೂಪರ್ ಕಾಂಬೋ ಚಿತ್ರಕ್ಕೆ ಸಂಗೀತ ನಿರ್ದೆಶನ ಯಾರು ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ.

ಇದನ್ನೂ ಓದಿ: Sandalwood: ಬರ್ತಿದೆ ಎದ್ದೇಳು ಮಂಜುನಾಥ ಪಾರ್ಟ್​ 2, ಈ ಸಿನಿಮಾ ನಾಯಕ ಜಗ್ಗೇಶ ಅಲ್ಲ! ಮತ್ತಿನ್ಯಾರು ಅಂತ ನೀವೇ ನೋಡಿ..

ಜೊತೆಗೆ ಕೆಪಿ ಶ್ರೀಕಾಂತ್ ನಿರ್ಮಾಣದ ಹಿಂದಿನ ಎರಡು ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇತ್ತು..ಈಗ ಮೂರನೇಚಿತ್ರದಲ್ಲೂ ಚರಣ್ ರಾಜ್ ಕೆ.ಪಿ ಶ್ರೀಕಾಂತ್ ಜೊತೆ ಟ್ರಾವೆಲ್ ಮಾಡ್ತಾರ ಕಾದು ನೋಡಬೇಕು.
Published by:guruganesh bhat
First published: