ರಿಯಲ್ ಸ್ಟಾರ್ ಉಪೇಂದ್ರ (Upendra UI Movie Updates) ನಿರ್ದೇಶನದ UI ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರವನ್ನ ಉಪ್ಪಿ ಡೈರೆಕ್ಷನ್ ಮಾಡ್ತಿದ್ದಾರೆ ಅನ್ನೋದೆ ಈ ಚಿತ್ರದ ಮೊದಲ ಹೈಪ್ ಅಂತ ಹೇಳಬಹುದು.ಇದರ ಹೊರತಾಗಿ (UI Pan India Release) ಚಿತ್ರದ ಟೈಟಲ್ ಕೂಡ ವಿಶೇಷವಾಗಿಯೇ ಇದೆ. ಈ ಕಾರಣಕ್ಕೂ ಸಿನಿಮಾ ತನ್ನದೇ ರೀತಿಯಲ್ಲಿ ಗಮನ ಸೆಳೆದಿದೆ. (Upendra Ui Movie) ಹಾಗಿರೋವಾಗ ಈ ಸಿನಿಮಾ ಕೂಡ ಪ್ಯಾನ್ (Upendra UI Kannada Movie)ಇಂಡಿಯಾ ಲೆವಲ್ಗೆ ರಿಲೀಸ್ ಆಗುತ್ತದೆಯೇ? ಅನ್ನೋ ಪ್ರಶ್ನೆ ಕೂಡ ಈಗ ಹುಟ್ಟಿಕೊಂಡಿದೆ. ಹೀಗೆ ಈ ಪ್ರಶ್ನೆ ಏಳಲು ಒಂದು ಕಾರಣವೂ ಇದೆ. ಅದೇನೂ ಅನ್ನೋದು ಇಲ್ಲಿದೆ ಓದಿ.
ಉಪ್ಪಿಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ UI ಸಿನಿಮಾದ ಅಪ್ಡೇಟ್ಸ್ ಹೊರ ಬಿದ್ದಿದೆ. ಉಪ್ಪಿಯ ಕಲ್ಪನೆಯ ಈ ಚಿತ್ರದ ಕೆಲಸ ಭರ್ಜರಿಯಾಗಿಯೇ ನಡೆಯುತ್ತಿದೆ. ಇದರ ಬೆನ್ನಲ್ಲಿಯೇ ಈ ಚಿತ್ರದ ಶೂಟಿಂಗ್ ಝಲಕ್ ಬಿಟ್ಟುಕೊಡುವ ಒಂದು ವೀಡಿಯೋ ಅಧಿಕೃತವಾಗಿಯೇ ಈಗ ರಿಲೀಸ್ ಆಗಿದೆ.
ಉಪೇಂದ್ರ ನಿರ್ದೇಶನದ UI ಚಿತ್ರ ತನ್ನದೇ ರೀತಿಯಲ್ಲಿ ಈಗಲೇ ಗಮನ ಸೆಳೆಯುತ್ತಿದೆ. ಉಪ್ಪಿಯ ನಿರ್ದೇಶನದ ಅಂದ್ಮೇಲೆ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತದೆ. ಅದೇ ರೀತಿ UI ಚಿತ್ರವೂ ಹತ್ತು-ಹಲವು ವಿಶೇಷತೆಗಳನ್ನ ಹೊಂದಿದೆ. ಅದರ ಮೇಕಿಂಗ್ ಝಲಕ್ ಅನ್ನ ಸಿನಿಮಾ ಟೀಮ್ ಬಿಟ್ಟುಕೊಟ್ಟಿದೆ.
ಉಪ್ಪಿಯ ವರ್ಕಿಂಗ್ ಸ್ಟೈಲ್ ಬೇಜಾನ್ ಡಿಫರಂಟ್
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾವನ್ನ ಉಪ್ಪಿ ವಿಭಿನ್ನವಾಗಿಯೇ ತೆಗೆಯುತ್ತಿದ್ದಾರೆ. ಹಾಲಿವುಡ್ ಮಟ್ಟದಲ್ಲಿಯೇ ಚಿತ್ರ ಟೆಕ್ನಿಕಲಿ ಸ್ಟ್ರಾಂಗ್ ಆಗಿಯೇ ಇರೋ ಹಾಗೆ ಕಾಣುತ್ತಿದೆ. ಚಿತ್ರದ ಕ್ವಾಲಿಟಿಯನ್ನೂ ಅಷ್ಟೇ ಸಖತ್ ಆಗಿಯೇ ಮೆಂಟೇನ್ ಮಾಡ್ತಿರೋದು ಇಲ್ಲಿ ಕಂಡು ಬರುತ್ತದೆ.
ಚಿತ್ರದ ಪ್ರತಿ ದೃಶ್ಯವನ್ನ ಉಪ್ಪಿ ಪಕ್ಕಾ ಪ್ಲಾನ್ ಮಾಡಿದ್ದಾರೆ. ತಮ್ಮ ಕಲ್ಪನೆಯಲ್ಲಿ ಇಡೀ ಚಿತ್ರವನ್ನ ತೆಗೆಯೋಕೆ ಮುಂದಾಗಿದ್ದಾರೆ. ಹಾಗೇನೆ ಉಪ್ಪಿ ಈ ದೃಶ್ಯ ಹೀಗೆ ಬರಬೇಕು ಅಂತಲೇ ಅಂದುಕೊಂಡು ಸೆಟ್ಗೆ ಬರ್ತಾರೆ. ಹಾಗೇನೆ ತೆಗೆಯುತ್ತಿದ್ದಾರೆ. ಆ ಎಲ್ಲ ವರ್ಕಿಂಗ್ ಸ್ಟೈಲ್ ಅನ್ನ ಈಗ ಮೇಕಿಂಗ್ ವೀಡಿಯೋ ಬಿಟ್ಟುಕೊಟ್ಟಿದೆ.
ಉಪ್ಪಿಯ UI ಚಿತ್ರವೂ ಪ್ಯಾನ್ ಇಂಡಿಯಾ ರಿಲೀಸ್
ಉಪ್ಪಿಯ UI ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡಲಾಗುತ್ತಿದೆ. ಎಲ್ಲ ಭಾಷೆಯಲ್ಲೂ ಇದನ್ನ ರಿಲೀಸ್ ಮಾಡೋಕೆ ನಿರ್ಮಾಪಕರು ರೆಡಿ ಆಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಸಿನಿಮಾದ ಮೇಕಿಂಗ್ ರಿವೀಲ್ ಮಾಡಿರೋ ವೀಡಿಯೋದ ಕೊನೆಯಲ್ಲಿ, ಎಲ್ಲ ಭಾಷೆಯಲ್ಲಿ ಹೊಸ ವರ್ಷದ ಶುಭಾಶಯ ಕೋರಲಾಗಿದೆ.
UI ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಏನ್ ಹೇಳ್ತಾರೆ?
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ UI ಸಿನಿಮಾದ ಚಿತ್ರೀಕರಣ ನಡೀತಾ ಇದೆ. ಈ ಚಿತ್ರವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡುತ್ತೇವೆ ಅಂತಲೇ ನ್ಯೂಸ್-18 ಕನ್ನಡ ಡಿಜಿಟಲ್ಗೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕೆ.ಪಿ.ಶ್ರೀಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: Radhika Pandit: ರೀ ಎಂಟ್ರಿ ಕೊಡಲು ರಾಧಿಕಾ ಪಂಡಿತ್ ರೆಡಿ! ಅದ್ಧೂರಿ ಕಮ್ ಬ್ಯಾಕ್ಗೆ ಸಿದ್ಧತೆ
ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ಅಂದ್ಮೇಲೆ ಸಾಕಷ್ಟು ನಿರೀಕ್ಷೆ ತಾನಾಗಿಯೇ ಹುಟ್ಟಿಕೊಂಡಿರುತ್ತದೆ. ಇನ್ನು ಉಪ್ಪಿಯ ನಿರ್ದೇಶನದ ಸಿನಿಮಾ ಅಂದ್ರೇ ಹೇಳಬೇಕೇ? ಅದಕ್ಕೇನೆ ಉಪ್ಪಿ ನಿರ್ದೇಶನದ UI ಸಿನಿಮಾ ಅತಿ ಹೆಚ್ಚು ಗಮನ ಸೆಳೆಯುತ್ತಿದೆ.
ಈ ಹಿನ್ನೆಲೆಯಲ್ಲಿಯೇ ಸಿನಿಮಾ ತಂಡ ಈಗ ಉಪ್ಪಿ ಸಿನಿಮಾ ಮೇಕಿಂಗ್ ವೀಡಿಯೋವನ್ನೂ ಈಗ ರಿವೀಲ್ ಮಾಡಿ ಜನರಲ್ಲಿ ಇನ್ನಷ್ಟು ಮತ್ತಷ್ಟು ಕುತೂಹಲ ಕೆರಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ