Hunter: 'ಹಂಟರ್' ಆದ 'ಸೂಪರ್ ಸ್ಟಾರ್;​​ ಹ್ಯಾಟ್ರಿಕ್ ಸಂಭ್ರಮದಲ್ಲಿ ನಿರಂಜನ್ ಸುಧೀಂದ್ರ

ನಿರಂಜನ್ ಅವರ ಮೂರನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಂದಹಾಗೆ ಅವರ ಮೂರನೇ ಸಿನಿಮಾ ಹೆಸರು 'ಹಂಟರ್'

 ನಿರಂಜನ್ ಅವರ ಮೂರನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಂದಹಾಗೆ ಅವರ ಮೂರನೇ ಸಿನಿಮಾ ಹೆಸರು 'ಹಂಟರ್'

ನಿರಂಜನ್ ಅವರ ಮೂರನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಂದಹಾಗೆ ಅವರ ಮೂರನೇ ಸಿನಿಮಾ ಹೆಸರು 'ಹಂಟರ್'

  • Share this:
ಸಾಮಾನ್ಯವಾಗಿ ಒಬ್ಬ ನಾಯಕ ನಟ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು, ಅಭಿಮಾನಿಗಳನ್ನು ಪಡೆಯಬೇಕು ಅಂದರೆ, ಕನಿಷ್ಠ ಆತ ನಟಿಸಿರುವ ಒಂದು ಸಿನಿಮಾ ಆದರೂ ರಿಲೀಸ್ ಆಗಿರಬೇಕು. ಆ ಸಿನಿಮಾ ಯಶಸ್ಸಿನ ಮೇಲೆ ಆ ಹೀರೋ ಭವಿಷ್ಯ ನಿಂತಿರುತ್ತದೆ. ಆದರೆ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕುಟುಂಬದ ಕುಡಿ, ಅವರ ಅಣ್ಣ ಸುಧೀಂದ್ರ ಅವರ ಪುತ್ರ ನಿರಂಜನ್ (Actor Niranjan) ವಿಷಯದಲ್ಲಿ ಹಾಗಿಲ್ಲ. ಯಾಕೆ ಅಂದರೆ ಅವರು ನಟಿಸುವ ಒಂದೂ ಸಿನಿಮಾ ರಿಲೀಸ್ ಆಗಿಲ್ಲವಾದರೂ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ. ಆ ಮೂಲಕ ಸ್ಯಾಂಡಲ್‍ವುಡ್‍ಗೆ ಹೊಸ ನಾಯಕನ ಎಂಟ್ರಿ ಜಬರ್​ಸ್ತ್​ ಆಗಿಯೇ ಆಗಿದೆ. 

ಹೌದು, ಸ್ಯಾಂಡಲ್‍ವುಡ್‍ಗೆ ಹೊಸ ಆರಡಿ ಕಟೌಟ್‍ನ ಆಗಮನವಾಗಿದೆ. ಪ್ರಾರಂಭದಲ್ಲೇ ಹ್ಯಾಟ್ರಿಕ್ ಬಾರಿಸುವ ಮೂಲಕ ಭವಿಷ್ಯದ ಸೂಪರ್​ ಸ್ಟಾರ್​​ (super star Movie) ಆಗುವ ಭರವಸೆ ಮೂಡಿಸಿದ್ದಾರೆ. ಅವರು ನಟಿಸಿರುವ ಮೊದಲ ಸಿನಿಮಾ ನಮ್ಮ ಹುಡುಗರು ಶೂಟಿಂಗ್ ಕಂಪ್ಲೀಟ್ ಆಗಿದೆ. ಎಚ್ ಬಿ ಸಿದ್ದು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಪಕ್ಕಾ ಮಂಡ್ಯ ಸೊಗಡಿನ ಹಳ್ಳಿ ಲವ್ ಸ್ಟೋರಿ ಇದು. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಅನ್ನೂ ರಿಲೀಸ್ ಮಾಡಿದ್ದು, ಸದ್ಯ ಇದೇ ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ.

ಅದರ ಬೆನ್ನಲ್ಲೇ 'ಸೂಪರ್ ಸ್ಟಾರ್'​​ ಎಂಬ ಮತ್ತೊಂದು ಚಿತ್ರದಲ್ಲೂ ನಿರಂಜನ್ ಸುಧೀಂದ್ರ ಬ್ಯುಸಿಯಾಗಿದ್ದಾರೆ. ರಾಮ್ ವೆಂಕಟೇಶ್ ಬಾಬು ನಿರ್ದೇಶನದ ಈ ಹೊಸ 'ಸೂಪರ್​​ ಸ್ಟಾರ್' ಚಿತ್ರ ಪಕ್ಕಾ ಆಕ್ಷನ್ ಎಂಟರ್‍ಟೈನರ್ ಆಗಿದ್ದು, ಟೀಸರ್ ಹಾಗೂ ಪೋಸ್ಟರ್‍ಗಳ ಮೂಲಕವೇ ಕೊಂಚ ಮಟ್ಟಿಗೆ ಸಿನಿಪ್ರಿಯರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದೆ. ಹೀಗೆ ನಮ್ಮ ಹುಡುಗರು ಹಾಗೂ 'ಸೂಪರ್ ಸ್ಟಾರ್' ಎರಡೂ ಸಿನಿಮಾಗಳೂ ಸದ್ಯ ರಿಲೀಸ್‍ಗೆ ರೆಡಿಯಾಗುತ್ತಿರುವ ಬೆನ್ನಲ್ಲೇ ನಿರಂಜನ್ ಅವರ ಮೂರನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಂದಹಾಗೆ ಅವರ ಮೂರನೇ ಸಿನಿಮಾ ಹೆಸರು 'ಹಂಟರ್' (Hunter Movie).

ಇದನ್ನು ಓದಿ: ಆರೋಗ್ಯ ಸಮಸ್ಯೆ ಇರುವ ಮಕ್ಕಳಿಗೆ ಮೊದಲು ಲಸಿಕೆ: ಆದ್ಯತೆ ಮೇರೆಗೆ ವ್ಯಾಕ್ಸಿನ್​ ನೀಡಲು ನಿರ್ಧಾರ

ಈ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಚಿರು ಸರ್ಜಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಸೀಜರ್' ಚಿತ್ರ ನಿರ್ದೇಶಿಸಿದ್ದ ವಿನಯ್ ಕೃಷ್ಣ, ಹಂಟರ್ ಗೂ ಆಕ್ಷನ್ ಕಟ್ ಹೇಳಲಿದ್ದಾರೆ. 'ಪರಿ', 'ಸೀಜರ್' ಸಿನಿಮಾಗಳನ್ನ ನಿರ್ಮಿಸಿದ್ದ ತ್ರಿವಿಕ್ರಮ ಸಾಫಲ್ಯ ಅವರೇ ತಮ್ಮ ತ್ರಿವಿಕ್ರಮ ಸಿನಿಮಾಸ್ ಬ್ಯಾನರ್​ನ ಅಡಿಯಲ್ಲಿ 'ಹಂಟರ್' ಚಿತ್ರವನ್ನು ನಿರ್ಮಿಸಲಿದ್ದಾರೆ. ವಿಶೇಷ ಅಂದರೆ ಹಂಟರ್ ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲೂ ನಿರ್ಮಾಣ ಆಗಲಿದೆ. ಹೀಗೆ ಆಕ್ಷನ್ ಥ್ರಿಲ್ಲರ್ 'ಹಂಟರ್' ಮೂಲಕ ನಿರಂಜನ್ ಪ್ಯಾನ್ ಇಂಡಿಯಾ ಹೀರೋ ಆಗಲಿದ್ದಾರೆ. ಚಿತ್ರಕ್ಕೆ ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನೀಡಲಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆಯಲಿದ್ದಾರೆ. ಮೂಲತಃ ಕೇರಳದ ಸೌಮ್ಯ ಮೆನನ್ ಎಂಬುವವರು ಈ ಚಿತ್ರದಲ್ಲಿ ನಿರಂಜನ್‍ಗೆ ನಾಯಕಿಯಾಗಲಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: