Kabzaa Motion Poster: ರಿಲೀಸ್ ಆಯ್ತು ‘‘ಕಬ್ಜ‘‘ ಸಿನಿಮಾದ ಮೋಷನ್ ಪೋಸ್ಟರ್; ಉಪ್ಪಿ ಹೊಸ ಲುಕ್​ಗೆ ಪ್ರೇಕ್ಷಕರು ಫಿದಾ

Upendra Birthday Motion Poster: ಆನಂದ್​ ಆಡಿಯೋ ಯ್ಯೂಟೂಬ್​ ಚಾನೆಲ್​ನಲ್ಲಿ ಕಬ್ಜ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದು, ಇದನ್ನು ಕಂಡು ಉಪ್ಪಿ ಪೇಕ್ಷಕರು ಉಪೇಂದ್ರ ಅವರ ಹೊಸ ಲುಕ್​ಗೆ ಫಿದಾ ಆಗಿದ್ದಾರೆ.

Kabzaa

Kabzaa

 • Share this:
  Happy  Birthday Upendra: ಸ್ಯಾಂಡಲ್​ವುಡ್​ ನಟ ರಿಯಲ್​  ಸ್ಟಾರ್ ನಟ​​ ಉಪೇಂದ್ರ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.  53ನೇ ಜನ್ಮ ದಿನದ ಪ್ರಯಕ್ತ ಉಪ್ಪಿ ನಟನೆಯ ‘‘ಕಬ್ಜ’’ ಸಿನಿಮಾದ ಮೋಷನ್​ ಪೋಸ್ಟರ್​ ರಿಲೀಸ್​ ಆಗಿದೆ. ಆಯುಧ ಹಿಡಿದು ರಿಯಲ್​ ಸ್ಟಾರ್​ ಅಬ್ಬರಿಸುತ್ತಿರುವ ದೃಶ್ಯವನ್ನು ಅವರ ಅಭಿಮಾನಿಗಳು ವೀಕ್ಷಿಸಿದ್ದು, ಅದರ ಜೊತೆಗೆ ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.

  ಸಾಮಾನ್ಯವಾಗಿ ನೆಚ್ಚಿನ ನಟರ ಜನ್ಮ ದಿನದಂದು ಚಿತ್ರತಂಡ ಅಭಿಮಾನಿಗಳಿಗೆ ಏನಾದರು ಸರ್​ಪ್ರೈಸ್​ ನೀಡುತ್ತದೆ. ಹೊಸ ಸಿನಿಮಾ ಘೋಷಣೆ ಮಾಡುವ ಬಗ್ಗೆ ಅಥವಾ  ಟೈಟಲ್​, ಟ್ರೇಲರ್​ ಬಿಡುಗಡೆ  ಮಾಡುವ ಮೂಲಕ ಅಭಿಮಾನಿಗಳ ಸಂತಸವನ್ನು ದುಪ್ಟಟ್ಟು ಮಾಡುತ್ತಾರೆ. ಅದರಂತೆ ಅಭಿಮಾನಿಗಳು ಕೂಡ ಉಪ್ಪಿ ಕಬ್ಜ ಸಿನಿಮಾದ ಬಗ್ಗೆ ಏನಾದರು ಅಪ್ಡೇಟ್​ ಬರಬಹುದು ಎಂದು ಕಾಯುತ್ತಾ ಕುಳಿತಿದ್ದರು. ಕೊನೆಗೂ ಚಿತ್ರತಂಡ ಸಿನಿಮಾದ ಮೋಷನ್​ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಸಿಹಿ ನೀಡಿದ್ದಾರೆ. ಆನಂದ್​ ಆಡಿಯೋ ಯ್ಯೂಟೂಬ್​ ಚಾನೆಲ್​ನಲ್ಲಿ ಕಬ್ಜ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದು, ಇದನ್ನು ಕಂಡು ಉಪ್ಪಿ ಪೇಕ್ಷಕರು ಉಪೇಂದ್ರ ಅವರ ಹೊಸ ಲುಕ್​ಗೆ ಫಿದಾ ಆಗಿದ್ದಾರೆ.

  ಕಬ್ಜ ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ ಸಿನಿಮಾವಾಗಿದೆ. ದೀಪಾವಳಿ ಹಬ್ಬಕ್ಕೆ ಚಿತ್ರದ ಟೀಸರ್​​ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಕೂ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  R ಚಂದ್ರ ನಿರ್ದೇಶನದಲ್ಲಿ ಕಬ್ಜ ಸಿನಿಮಾ ಮೂಡಿಬರುತ್ತಿದೆ. 1980ರಲ್ಲಿ ಮಾಫಿಯಾ ಪ್ರಬಲವಾಗುವ ಕತೆಯನ್ನು ಈ ಚಿತ್ರದಲ್ಲಿ ಭಿನ್ನವಾಗಿ ತೋರಿಸಿಕೊಡಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರ್​ನಲ್ಲೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಂದಹಾಗೆಯೇ ನಾಯಕನಾಗಿ ಉಪೇಂದ್ರ ಈ ಸಿನಿಮಾದಲ್ಲಿ ಅಬ್ಬರಿಸಿದರೆ ಕಿಚ್ಚ ಸುದೀಪ್ ಕೂಡ ಇದರಲ್ಲಿ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿಲ್ಲದ್ದಾರೆ. ಅಷ್ಟು ಮಾತ್ರವಲ್ಲದೆ ಬೇರೆ ಭಾಷೆಯ ಕಳನಾಯಕರನ್ನು ಈ ಸಿನಿಮಾ ಒಳಗೊಂಡಿದೆ.  ಜಗಪತಿ ಬಾಬು, ಅನೂಪ್​ ರೇವಣ್ಣ, ಕಾಮರಾಜನ್​, ರಾಹುಲ್​ ಜಗಪತ್​​, ಜಾನ್​ ಕೊಕ್ಕಿನ್​, ರಾಹುಲ್​ ದೇವ್​, ಕೋಟ ಶ್ರೀನಿವಾಸ್​ ರಾವ್​, ಜಯ ಪ್ರಕಾರ್ಶ್​, ಕಾಟ್​ ರಾಜು, ಸುಬ್ಬರಾಜು, ರಾಹುಲ್​ ದೇವ್​ ಮುಂತಾದವರು ಕಬ್ಜ ಕಾಣಿಸಿಕೊಳ್ಳಲ್ಲಿದ್ದಾರೆ.

  ಕಬ್ಜ ಸಿನಿಮಾಗೆ ರವಿ ಬಸ್ರೂರು ಅವರ ಸಂಗೀತ, ಎ.ಜೆ ಶೆಟ್ಟಿ ಛಾಯಾಗ್ರಹಣವಿದ್ದು, ಆರ್​ ಚಂದ್ರು ಅವರೇ ಬಂಡವಾಗಳ ಹೂಡಿದ್ದಾರೆ.

  ಅಭಿಮಾನಿಗಳಿಗೆ ಮನವಿ ಮಾಡಿದ ಉಪ್ಪಿ!

  ನಟ-ನಟಿಯ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಮನೆಯೆದುರು ಸಾಲುಗಟ್ಟಿ ನಿಲ್ಲುತ್ತಾರೆ. ಕೇಕ್​, ಹೂ ಹಾರ ತಂದು ಶುಭಾಶಯ ಕೋರುತ್ತಾರೆ. ಅದರಂತೆ ಉಪೇಂದ್ರ ಅವರು ಈ ಬಾರಿ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಜೊತೆ ಹುಟ್ಟುಹಬ್ಬದ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ಇರುವಲ್ಲಿಯೇ ಸರಳವಾಗಿ ಹುಟ್ಟುಹಬ್ಬ ಆಚರಿಸಿ, ವಿಶ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು ಉಪ್ಪಿ.  ಇನ್ನು ಉಪೇಂದ್ರ ಅವರು ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಹೊಸ ಸಿನಿಮಾ ನಿರ್ದೇಶನ ಮಾಡಲು ಸಜ್ಜಾಗಿದ್ದು, ನಿನ್ನೆ ಸಂಜೆ ಅವರೇ ಅದರ ಪೋಸ್ಟರ್ ಹಂಚಿಕೊಂಡಿದ್ದಾರೆ. ಅದರ ಜತೆಗೆ ಮತ್ತೆ ಅಭಿಮಾನಿಗಳ ತಲೆ ಹುಳ ಬಿಟ್ಟಿದ್ದಾರೆ. ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡು, ಅದರ ಟೈಟಲ್ ಏನಿರಬಹುದು ಎಂದು ಊಹಿಸಿ ಅಂತ ಕೆಲಸ ಕೊಟ್ಟಿದ್ದಾರೆ. ಅದಕ್ಕೆ ಸಾಕಷ್ಟು ಸುಳಿವು ಸಹ ಕೊಟ್ಟಿದ್ದಾರೆ. ಈ ಸಿನಿಪ್ರಿಯರು ಉಪ್ಪಿ ಕೊಟ್ಟಿರುವ ಈ ಕೆಲಸದ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಹತ್ತು ಚಿತ್ರಗಳ ನಿರ್ದೇಶನ ಮಾಡಿದ್ದಾರೆ ರಿಯಲ್ ಸ್ಟಾರ್. ಇದು ಅವರ ಡೈರೆಕ್ಷನ್ನಲ್ಲಿ ಮೂಡಿಬರಲಿರುವ 11ನೇ ಚಿತ್ರವಾಗಿದೆ. ಉಪ್ಪಿ 2 ಸಿನಿಮಾ 2015ರಲ್ಲಿ ರಿಲೀಸ್ ಆಗಿತ್ತು.
  Published by:Harshith AS
  First published: