HOME » NEWS » Entertainment » UPENDRA ADOPTED AFRICAN ELEPHANT FROM MYSURU JAYACHAMRAJENDRA ZOO DARSHAN SAID THANKS TO HIM AE

Upendra: ಆಫ್ರಿಕನ್​ ಆನೆ ದತ್ತು ಪಡೆದ ಉಪೇಂದ್ರ: ಧನ್ಯವಾದ ತಿಳಿಸಿದ ದರ್ಶನ್​..!

Darshan: ಪ್ರಾಣಿಗಳೇ ಗುಣದಲಿ ಮೇಲು....ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರೆಯಂತೆ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ ಎಂದು ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

Anitha E | news18-kannada
Updated:June 11, 2021, 7:19 AM IST
Upendra: ಆಫ್ರಿಕನ್​ ಆನೆ ದತ್ತು ಪಡೆದ ಉಪೇಂದ್ರ: ಧನ್ಯವಾದ ತಿಳಿಸಿದ ದರ್ಶನ್​..!
ಆನೆ ದತ್ತು ಪಡೆದ ಉಪೇಂದ್ರ
  • Share this:
ರಾಜ್ಯ ಕೊರೋನಾ ಲಾಕ್​ಡೌನ್​ನಿಂದಾಗಿ ಮೃಗಾಲಯಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾರಣದಿಂದ ದರ್ಶನ್​ ಅವರು ಸ್ವಯಂ ಪ್ರೇರಿತರಾಗಿ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದರು. ದರ್ಶನ್​ ಅವರು ಮಾಡಿದ ಒಂದೇ ಒಂದು ಮನವಿಯಿಂದಾಗಿ ಇಂದು ಮೃಗಾಲಯಗಳಿಗೆ ಕೋಟ್ಯಂತರ ರೂಪಾಯಿ ನೆರವು ಹರಿದು ಬರುತ್ತಿದೆ. ಜೊತೆಗೆ ಸಾವಿರಾರು ಮಂದಿ ಮುಂದೆ ಬಂದು ರಾಜ್ಯದಲ್ಲಿರುವ ಎಲ್ಲ ಮೃಗಾಲಯಗಳಲ್ಲೂ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುತ್ತಿದ್ದಾರೆ. ದರ್ಶನ್ ಮಾಡಿದ ಮನವಿಯಿಂದಾಗಿ ಅವರ ಅಭಿಮಾನಿಗಳು ಮಾತ್ರವಲ್ಲದೆ ಸಿನಿರಂಗದ ಸೆಲೆಬ್ರಿಟಿಗಳೂ ಸಹ ತಾವಾಗೊಯೇ ಬಂದು ಪ್ರಾಣಿಗಳನ್ನು ಸತ್ತು ಪಡೆಯುತ್ತಿದ್ದಾರೆ. ಈ ಹಿಂದೆ ಯಜಮಾನ ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್​ ಅವರು ದರ್ಶನ್​ ಹೆಸರಿನ ಸಿಂಹವನ್ನು ದತ್ತು ಪಡೆದಿದ್ದರು. ಮೈಸೂರಿನಲ್ಲಿರುವ ಮೃಗಾಲಯದಿಂದ ಸಿಂಹವನ್ನು ದತ್ತು ಪಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಉಪೇಂದ್ರ ಸಹ ಆನೆಯೊಂದನ್ನು ದತ್ತು ಪಡೆದಿದ್ದಾರೆ. 

ಲಾಕ್​ಡೌನ್​ ಆರಂಭವಾದಾಗಿನಿಂದ ರಿಯಲ್​ ಸ್ಟಾರ್ ಉಪೇಂದ್ರ ಅವರು ಸಂಕಷ್ಟದಲ್ಲಿರುವ ಸಿನಿರಂಗದ ಕಲಾವಿದರ ಜೊತೆಗೆ ಸಾಮಾನ್ಯ ಜನರ ಕಷ್ಟಕ್ಕೂ ಸ್ಪಂದಿಸುತ್ತಿದ್ದಾರೆ. ತಮ್ಮ ಕೈಲಾದಷ್ಟು ಹಣವನ್ನು ನೀಡುವುದರೊಂದಿಗೆ ನಿಧಿ ಸಂಗ್ರಹಿಸುವ ಮೂಲಕ ಸಾವಿರಾರು ಮಂದಿಗೆ ದಿನಸಿ ಕಿಟ್​ ವಿತರಿಸುವುದರೊಂದಿಗೆ, ಸಂಗ್ರವಾಗುತ್ತಿದ್ದ ನಿಧಿಯ ವಿವರ ಹಾಗೂ ಯಾರಿಗೆ ಎಷ್ಟು ದಿನಸಿ ವಿತರಿಸಲಾಯಿತು ಎಂದು ಎಲ್ಲ ವಿವರಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಈಗ ಇದೇ ಉಪೇಂದ್ರ ಆಫ್ರಿಕನ್​ ಆನೆಯನ್ನು ದತ್ತು ಪಡೆದಿದ್ದಾರೆ.

As per challenging star Darshan’s call we have adopted an African elephant and joined hands with him in his noble cause.ಪ್ರಾಣಿಗಳೇ ಗುಣದಲಿ ಮೇಲು.... ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕರೆಯಂತೆ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ ಎಂದು ಉಪೇಂದ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.
View this post on Instagram


A post shared by Upendra (@nimmaupendra)


ಉಪೇಂದ್ರ ಅವರ ಈ ಕೆಲಸಕ್ಕೆ ದರ್ಶನ್​ ಧನ್ಯವಾದ ತಿಳಿಸಿದ್ದಾರೆ. ದರ್ಶನ್​ ಅವರ ಒಂದು ಕರೆಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡ ದರ್ಶನ್​ ಈ ಹಿಂದೆಯೇ ಅಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ದರ್ಶನ್​ ಮನವಿಯಿಂದ ಒಂದು ಕೋಟಿ ಸಂಗ್ರಹ

ದರ್ಶನ್​ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ ಬೆನ್ನಲ್ಲೇ ಮೃಗಾಲಯಗಳಿಗೆ ಒಂದು ಕೋಟಿ ಹಣ ಹರಿದು ಬಂದಿದೆಯಂತೆ. ದರ್ಶನ್​ ಕರೆಕೊಟ್ಟ ನಾಲ್ಕೇ ದಿನಕ್ಕೆ 40 ಲಕ್ಷಕ್ಕೂ ಅಧಿಕ ಸಂಗ್ರಹವಾಗಿತ್ತು. ಕಳೆದ 11 ತಿಂಗಳಲ್ಲಿ ಕೇವಲ 17.96 ಲಕ್ಷ ರೂಪಾಯಿ ಹಣ ದತ್ತು ಪ್ರಕ್ರಿಯೆಯಿಂದ ಮೃಗಾಲಯಗಳಿಗೆ ಹರಿದು ಬಂದಿತ್ತು. 2020ವಜುಲೈ 29 ರಿಂದ ಜೂನ್ 2021 ರವರೆಗೆ 17.96 ಲಕ್ಷ ರೂಪಾಯಿ ಬಂದಿತ್ತು. ಆದರೆ ಈಗ ನಟ ದರ್ಶನ್ ಅವರ ಮನವಿಯಿಂದ ಕೇವಲ 6 ದಿನಗಳಲ್ಲಿ 1 ಕೋಟಿ ರೂಪಾಯಿ ಹರಿದು ಬಂದಿದೆ.

ಇದನ್ನೂ ಓದಿ: Dhananjaya: ಧನಂಜಯ್ ಸೇರಿದಂತೆ​ ಮನೆಯಲ್ಲಿದ್ದ 12 ಮಂದಿಗೆ ಕೋವಿಡ್: ಕೊರೋನಾ ಗೆದ್ದ ಅನುಭವ ಹಂಚಿಕೊಂಡ ಡಾಲಿ..!

ರಾಜ್ಯದ ಮೃಗಾಲಯಗಳಲ್ಲಿ 6 ದಿನಗಳಲ್ಲಿ 3881 ಜನರಿಂದ ಪ್ರಾಣಿಗಳ ದತ್ತು ಸ್ವೀಕಾರವಾಗಿದೆ. ರಾಜ್ಯದ ಜೂಗಳಿಗೆ 6 ದಿನಗಳಲ್ಲಿ ಹರಿದು ಬಂದ ಮೊತ್ತ ಬರೋಬ್ಬರಿ ಒಂದು ಕೋಟಿ 47 ಸಾವಿರ (1,00,47,900). ಈ ಹಿನ್ನಲೆಯಲ್ಲಿ ನಟ ದರ್ಶನ್​ ಅವರಿಗೆ ಧನ್ಯವಾದ ಹೇಳಿದೆ ಕರ್ನಾಟಕ ಮೃಗಾಲಯ ಪ್ರಾಧಿಕಾರ.
Published by: Anitha E
First published: June 11, 2021, 7:15 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories