Susheel Gowda Suicide: ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​: ಭಾವುಕರಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ ದುನಿಯಾ ವಿಜಿ..!

Susheel Gowda Suicide: ಈಗಷ್ಟೆ ಸ್ಯಾಂಡಲ್​ವುಡ್​ಗೆ ಕಾಲಿಟ್ಟು, ಭವಿಷ್ಯದಲ್ಲಿ ನಾಯಕನಾಗುವ ಕನಸು ಕಂಡಿದ್ದ ಉದಯೋನ್ಮುಖ ನಟ ಸುಶೀಲ್​ ಗೌಡ. ತಮ್ಮ ಹುಟ್ಟೂರಾದ ಮಂಡ್ಯದಲ್ಲಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ದುನಿಯಾ ವಿಜಯ್​ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುಶೀಲ್​ ನಟಿಸಿದ್ದರು. 

ಉದಯೋನ್ಮುಖ ನಟ ಸುಶೀಲ್​ ಗೌಡ

ಉದಯೋನ್ಮುಖ ನಟ ಸುಶೀಲ್​ ಗೌಡ

  • Share this:
ಈ ವರ್ಷ ಸಿನಿಮಾ ಇತಿಹಾಸದಲ್ಲೇ ಕರಾಳ ವರ್ಷ ಎಂದರೆ ತಪ್ಪಾಗದು. ಒಂದರ ಹಿಂದೆ ಒಂದು ಸಾವು ಸಂಭವಿಸುತ್ತಿದ್ದು, ಅಬ್ದುತ ಪ್ರತಿಭಾವಂತ ಕಲಾವಿದರನ್ನು ಸಿನಿರಂಗ ಕಳೆದುಕೊಳ್ಳುತ್ತಿದೆ. ಇನ್ನೂ ನಟ ಸುಶಾಂತ್ ಸಿಂಗ್ ರಜಪೂತ್​ ಅವರ ಅಗಲಿಕೆ ದುಖಃದಲ್ಲಿರುವ ಸಿನಿ ಪ್ರಿಯರಿಗೆ ಈಗ ಮತ್ತೊಂದು ನೋವಿನ ಸಂಗತಿ ಎದುರಾಗಿದೆ.

ಈಗಷ್ಟೆ ಸ್ಯಾಂಡಲ್​ವುಡ್​ಗೆ ಕಾಲಿಟ್ಟು, ಭವಿಷ್ಯದಲ್ಲಿ ನಾಯಕನಾಗುವ ಕನಸು ಕಂಡಿದ್ದ ಉದಯೋನ್ಮುಖ ನಟ ಸುಶೀಲ್​ ಗೌಡ. ತಮ್ಮ ಹುಟ್ಟೂರಾದ ಮಂಡ್ಯದಲ್ಲಿ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ದುನಿಯಾ ವಿಜಯ್​ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಸುಶೀಲ್​ ನಟಿಸಿದ್ದರು.

Upcoming actor Susheel committed suicide and actor duniya vijay penned a emotional letter
ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​


ನಟನೆಯ ಜೊತೆಗೆ ಜಿಮ್ ಕೋಚ್​ ಸಹ ಆಗಿದ್ದ ಸುಶೀಲ್​ ಮೂಲತಃ ಮಂಡ್ಯದವರು. ಸುಶೀಲ್​ ನಿನ್ನೆ ಆತ್ಮಹತ್ಯೆಗೆ ಶರಣಾಗಿರುವ ವಿಷಯ ತಿಳಿದ ಕೂಡಲೇ ನಟ ದುನಿಯಾ ವಿಜಯ್​ ಅವರು ತಮ್ಮ ಫೇಸ್​ಬುಕ್​ನಲ್ಲಿ ನೋವಿನಿಂದ ಬರೆದುಕೊಂಡಿದ್ದಾರೆ.

Upcoming actor Susheel committed suicide and actor duniya vijay penned a emotional letter
ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್​


ದುನಿಯಾ ವಿಜಯ್​ ಭಾವುಕರಾಗಿ ಬರೆದಿರುವ ಪೋಸ್ಟ್​ನ ವಿವರ ಇಲ್ಲಿದೆ

'ಸಲಗ' ಚಿತ್ರದಲ್ಲಿ ಒಂದು ಒಳ್ಳೆಯ ಪೊಲೀಸ್ ಪಾತ್ರವಿದೆ. ಅದನ್ನು ಒಬ್ಬ ಸ್ಫುರದ್ರೂಪಿ ಹುಡುಗ ನಿರ್ವಹಿಸಿದ್ದ. ಆತನ ಹೆಸರು ಸುಶೀಲ್ ಅಂತ. ಮಂಡ್ಯದವನು. ಆತನ ನೋಡ್ತಿದ್ರೆ ಮುಂದೊಮ್ಮೆ ಹೀರೋ ಆಗಬಹುದಾದ ಹುಡುಗ ಅಂತ ಮನಸ್ಸಲ್ಲೇ ಅಂದ್ಕೊಂಡಿದ್ದೆ. ಆದರೆ ಅದೇನಾಯ್ತೋ ಗೊತ್ತಿಲ್ಲ. ನಿನ್ನೆ ಇರಬೇಕು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ ಅಂತ ಗೊತ್ತಾಯ್ತು. ನನಗೆ ಈಗಲೂ ನಂಬೋಕೆ ಆಗ್ತಿಲ್ಲ. ಇಂಡಸ್ಟ್ರಿಯಲ್ಲಿ ಬೆಳೆಯಬೇಕು ಅಂತ ಬರೋರು ಸಿನಿಮಾದಲ್ಲಿ ಒಂದೊಳ್ಳೆಯ ಅವಕಾಶ ಸಿಕ್ಕಮೇಲೂ ಚಿತ್ರ ಬಿಡುಗಡೆಗೂ ಕಾಯದೆ ಆತ್ಮಹತ್ಯೆ ಮಾಡೋದು ಅಂದರೆ ಏನು?! ನಿಮ್ಮ ಸಮಸ್ಯೆ ಎಷ್ಟೇ ದೊಡ್ಡದಿರಬಹುದು. ಆದರೆ ಸಾವು ಅದಕ್ಕೆ ಪರಿಹಾರವಾಗುತ್ತಾ? ಸಮಸ್ಯೆಗೆಲ್ಲ ಸಾವಲ್ಲೇ ಉತ್ತರ ಕಾಣೋದಾದ್ರೆ ಬಹುಶಃ ಭೂಮಿಯಲ್ಲಿ ಯಾರೊಬ್ಬರೂ ಉಳಿದಿರಲ್ಲ ಅನ್ಸುತ್ತೆ!

ಸುಶೀಲ್ ವಯಸ್ಸು ಮೂವತ್ತರ ಆಸುಪಾಸು ಇರಬಹುದು. ನಮ್ಮ ಜೊತೆ ಶೂಟಿಂಗಲ್ಲಿದ್ದಿದ್ದು ಬೆರಳೆಣಿಕೆ ದಿನಗಳಷ್ಟೇ. ಅಷ್ಟಕ್ಕೇ ನಮಗಿಷ್ಟೊಂದು ನೋವಾಗ್ತಿದೆ. ಹಾಗಾದರೆ ಈ ಮೂವತ್ತು ವರ್ಷಗಳ ಕಾಲ ಜತೆಗಿದ್ದ ಮನೆಯವರಿಗೆ ಹೇಗಾಗಬೇಡ?! ಸತ್ತ ಮೇಲೆ ಮಾತನಾಡಿ ಉಪಯೋಗವಿಲ್ಲ ನಿಜ. ಆದರೆ ನನಗೇನೋ ಈ ವರ್ಷದ ಸಾವುಗಳ ಸರಣಿ ಇಲ್ಲಿಗೆ ಮುಗಿಯುತ್ತೆ ಅಂತ ಅನಿಸ್ತಿಲ್ಲ! ಯಾಕೆಂದರೆ ಪರಿಸ್ಥಿತಿ ಹಾಗಿದೆ. ಜನ ಕೊರೋನ ರೋಗಕ್ಕಷ್ಟೇ ಭಯಪಡುತ್ತಿಲ್ಲ; ಕೆಲಸ ಇರದೆ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.

ನಾವೆಲ್ಲ ರಾಮ ಸೀತೆ ಕಥೆ ಕೇಳಿಯೇ ಬೆಳೆದಿರುತ್ತೇವೆ. ದೇವರಾಗಿದ್ದರೂ ಮನುಷ್ಯ ರೂಪದಲ್ಲಿ ಎಷ್ಟೊಂದು ಕಷ್ಟ ಅನಿಭವಿಸಬೇಕಾಗಿತ್ತೆ ಅನ್ನೋದು ಅದರ ತಾತ್ಪರ್ಯ. ಅಂಥ ಕಷ್ಟ ನಮಗೆಲ್ಲ ಬಂದೇ ಇರುವುದಿಲ್ಲ. ಆದರೂ ಬದುಕು ಸಾಕಾಗಿ ಬಿಡುತ್ತದೆ ಅನ್ನೋದೇ ವಿಪರ್ಯಾಸ. ನಮ್ಮ ಧರ್ಮ ಓದಿ ಕೈ ಮುಗಿಯೋಕಷ್ಟೇ ಇರೋದಲ್ಲ. ಬದುಕಲ್ಲಿ ಅಳವಡಿಸಿಕೊಳ್ಳೋಕು ಹೌದು. ಇಲ್ಲಿ ಸ್ಟಾರಾಗಿರೋ ಪ್ರತಿಯೊಬ್ಬರೂ ಒಂದಲ್ಲ ಒಮ್ಮೆ ಪಾತಾಳದಷ್ಟು ಕಷ್ಟ ಕಂಡೇ ಇರುತ್ತಾರೆ. ಅಭಿಮನ್ಯು ತರಹ ಒಳಗೆ ಬರುವ ಕಥೆ ಮಾತ್ರ ತಿಳಿದು ಮುನ್ನುಗ್ಗಿ ಬಂದು ಕೈ ಚೆಲ್ಲಿದರೆ ಅದು ಸಾಧನೆ ಅಲ್ಲ; ವೇದನೆ.

ಇದನ್ನೂ ಓದಿ: ವಿಜಯ್​ ದೇವರಕೊಂಡ ಕುಟುಂಬಕ್ಕೆ ಎಂಟ್ರಿ ಕೊಟ್ಟ ಹೊಸ ಅತಿಥಿ..!

ನೀವೇನೂ ಸತ್ತು ಹೋಗ್ತೀರಿ. ನಿಮಗೆ ಬೆಂಕಿ ಇಡಬೇಕಾದರೆ ಅಲ್ಲಿ ಜೀವ ಇರುವುದಿಲ್ಲ. ಆದರೆ ಜತೆಗಿರುವ ತಾಯಿ, ತಂದೆ, ಮಡದಿ ಜೀವನಪೂರ್ತಿ ಬೆಂಕಿಯಲ್ಲಿರುವಂತ ಬದುಕು ಕೊಡ್ತೀರಲ್ಲ? ಇದು ಎಲ್ಲಿಯ ನ್ಯಾಯ? ಆತ್ಮಹತ್ಯೆ ಖಂಡಿತವಾಗಿ ತಪ್ಪು.
ಸುಶೀಲ್ ಆತ್ಮಕ್ಕೆ ‌ಶಾಂತಿ‌ ಸಿಗಲಿ. ಆದರೆ ಮುಂದೆ ಯಾವ ತಂದೆ ತಾಯಿಗೂ ಈ ರೀತಿಯ ದುಃಖ ಎದುರಿಸುವ ಸಂದರ್ಭ ಬಾರದಿರಲಿ.

ಯಾರಾದರೂ ಸಾವನ್ನಪ್ಪಿದ ಮೇಲೆ ಮಾತನಾಡುವುದು ಸರಿಯಲ್ಲ ನಿಜ. ಆದರೆ ಈ ಸಾವಿನ ಸರಣಿ ಇಲ್ಲಿಗೆ ನಿಲ್ಲುವುದಿಲ್ಲ ಎಂದೆನಿಸುತ್ತಿದೆ. ಅದಕ್ಕೆ ಹೇಳುತ್ತಿದ್ದೇನೆ. ಎಲ್ಲ ಸಮಸ್ಯೆಗಳಿಗೂ ಸಾವೇ ಪರಿಹಾರವಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು. ಆತ್ಮಹತ್ಯೆ ಮಾಡಿಕೊಂಡು ಹೆತ್ತವರಿಗೆ ಬದುಕಿರುವಷ್ಟು ದಿನ ನೋವು ಕೊಡಬೇಡಿ ಎಂದು ಬೇಸರದಿಂದ ಈ ಪೋಸ್ಟ್ ಮಾಡಿದ್ದಾರೆ ನಟ ವಿಜಯ್​.

Ramesh Aravind: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್​ ಅರವಿಂದ್​ ದಂಪತಿ..! 

ಇದನ್ನೂ ಓದಿ: Video: ತಾಳ್ಮೆ ಇರಲಿ ಎಲ್ಲ ಸರಿ ಹೋಗುತ್ತದೆ: ಸೆಲೆಬ್ರಿಟಿ ತಾಯಿ-ಮಗಳ ಹಾಡಿನ ವಿಡಿಯೋ ವೈರಲ್..!​
Published by:Anitha E
First published: