KGF: ಇನ್ನೂ ನಿಲ್ಲದ ಕೆ.ಜಿ.ಎಫ್ ಹವಾ: ಕನ್ನಡ ಸಿನಿಮಾ ಈಗ ಉತ್ತರ ಪ್ರದೇಶ ಪೊಲೀಸರ ಹೊಸ ಅಸ್ತ್ರ..!

KGF Chapter 2: ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಎನಿಸಿದ್ದ ಕೆ.ಜಿ.ಎಫ್ ಚಿತ್ರ ಹೊಸ ದಾಖಲೆ ಬರೆದಿದ್ದಲ್ಲದೇ, ಒಂದು ಅಭಿಯಾನವಾಗಿ ಮಾರ್ಪಟ್ಟಿದೆ.

zahir | news18
Updated:August 2, 2019, 3:39 PM IST
KGF: ಇನ್ನೂ ನಿಲ್ಲದ ಕೆ.ಜಿ.ಎಫ್ ಹವಾ: ಕನ್ನಡ ಸಿನಿಮಾ ಈಗ ಉತ್ತರ ಪ್ರದೇಶ ಪೊಲೀಸರ ಹೊಸ ಅಸ್ತ್ರ..!
ಕೆಜಿಎಫ್​ನಲ್ಲಿ ಯಶ್​
zahir | news18
Updated: August 2, 2019, 3:39 PM IST
ರಾಕಿಂಗ್​ ಸ್ಟಾರ್ ಯಶ್ ಅಭಿನಯದ ಮಾನ್​ಸ್ಟರ್​ ಹಿಟ್ 'ಕೆ.ಜಿ.ಎಫ್' ಚಿತ್ರದ ದಿಗ್ವಿಜಯ ಈಗ ಇತಿಹಾಸ. ಸ್ಯಾಂಡಲ್​ವುಡ್​ನ ಈ ಭರ್ಜರಿ ಸಿನಿಮಾದ ಮುಂದುವರೆದ ಭಾಗ ಕೂಡ ಸಖತ್ ಸೌಂಡ್​ನಲ್ಲೇ ಶೂಟಿಂಗ್ ಪ್ರಾರಂಭಿಸಿದೆ. ಇದರ ನಡುವೆ 'ಕೆ.ಜಿ.ಎಫ್' ಹವಾ ಇನ್ನೂ ನಿಂತಿಲ್ಲ ಎಂಬುದಕ್ಕೆ ಪರರಾಜ್ಯವೊಂದು ಸಾಕ್ಷಿಯಾಗಿದೆ.

ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಇದೀಗ 'ಕೆ.ಜಿ.ಎಫ್' ಟೈಟಲನ್ನೇ ಬಳಸಿ ಹೊಸ ಜಾಗೃತಿಗೆ ಕೈ ಹಾಕಿದೆ. ವಾಹನ ಸವಾರರಿಗೆ ಟ್ರಾಫಿಕ್ ನಿಯಮವನ್ನು ಪಾಲಿಸುವಂತೆ ತಿಳಿ ಹೇಳಲು ಯುಪಿ ಟ್ರಾಫಿಕ್ ಪೊಲೀಸರು K.G.F ಸಂಕೇತವನ್ನು ಬಳಸಿ ಹೊಸ ಅಭಿಯಾನ ಆರಂಭಿಸಿದೆ.

K- ಅಂದರೆ Know the rules (ನಿಯಮ ತಿಳಿದುಕೊಳ್ಳಿ)

G- ಅಂದರೆ Grip well (ಹಿಡಿತವಿರಲಿ)
F- ಅಂದರೆ Focus (ಒಂದಡೆ ಗಮನವಿರಲಿ) ಎಂದು ವಾಹನ ಚಾಲಕರಿಗೆ ಸಂಚಾರಿ ಪಾಠ ಮಾಡಲು ಮುಂದಾಗಿದೆ. ಈ ಹೊಸ ಮಾದರಿಯ ಅಭಿಯಾನಕ್ಕೂ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆಯಂತೆ.

ಉತ್ತರ ಪ್ರದೇಶ ಟ್ರಾಫಿಕ್ ಪೊಲೀಸ್ ಕೆ.ಜಿ.ಎಫ್ ಅಭಿಯಾನ


ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಎನಿಸಿದ್ದ 'ಕೆ.ಜಿ.ಎಫ್' ಚಿತ್ರ ಹೊಸ ದಾಖಲೆ ಬರೆದಿದ್ದಲ್ಲದೇ, ಒಂದು ಅಭಿಯಾನವಾಗಿ ಮಾರ್ಪಟ್ಟಿದೆ.
Loading...

ಸದ್ಯ 'ಕೆ.ಜಿ.ಎಫ್ 2' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರಾಖಿ ಭಾಯ್​ಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಅಧೀರನಾಗಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸುತ್ತಿದ್ದಾರೆ. ಹಾಗೆಯೇ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಿಟೌನ್ ನಟಿ ರವೀನಾ ಟಂಡನ್ ಸಹ ಬಣ್ಣ ಹಚ್ಚುತ್ತಿದ್ದಾರೆ. ಒಟ್ಟಾರೆ ಚಿನ್ನದ ಗಣಿಯ ಸುತ್ತ ಹೆಣೆಯಲಾಗಿದ್ದ ಕಥೆಯೊಂದು ಇದೀಗ 'ಕನ್ನಡದ ಗೋಲ್ಡನ್ ಫಿಲಂ' ಅಷ್ಟೇ ಅಲ್ಲದೆ ಉತ್ತರ ಪ್ರದೇಶದ ಸಂಚಾರಿ ಜಾಗೃತಿಯ ಭಾಗವಾಗಿರುವುದು ವಿಶೇಷ.

First published:August 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...