KGF 2: ಕಥೆ-ಪುರಾಣ ಬಿಟ್ಟು ಸಿನಿಮಾ ಸ್ಪೆಷಾಲಿಟಿ ಬಗ್ಗೆ ಹೇಳ್ರಿ ಎಂದ ವ್ಯಕ್ತಿ! ರಾಕಿ ಭಾಯ್​ ಕೊಟ್ಟ ಖಡಕ್​ ಉತ್ತರ ಇದು..

‘ಕೆಜಿಎಫ್ 2’ ಚಿತ್ರದ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ವಾರ ಕಳೆದರೆ ರಾಕಿ ಭಾಯ್ ಸಾಮ್ಯಾಜ್ಯ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ. ಚಿತ್ರವನ್ನು ಕಣ್ತುಂಬಿ ಕೊಳ್ಳಲು ಇಡೀ ವಿಶ್ವಾದ್ಯಂತ ಪ್ರೇಕ್ಷಕರು ಕಾಯುತ್ತಿದ್ದಾರೆ.

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

  • Share this:
    ಕೆಜಿಎಫ್​ 2 (KGF 2).. ಸದ್ಯಕ್ಕೆ ಇಡೀ ವಿಶ್ವವೇ ಚರ್ಚೆ ಮಾಡುತ್ತಿರುವ ಸಿನಿಮಾ. ಪ್ರಶಾಂತ್ ನೀಲ್(Prashanth Neel) ನಿರ್ದೇಶನದ ಕೆಜಿಎಫ್ (KGF-1) ಭಾಗ 1 ಪ್ಯಾನ್‌ ಇಂಡಿಯಾ ಸಿನಿಮಾವಾಯಿತು. ಜೊತೆಗೆ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ್ದರು. ರಾಕಿ ಭಾಯ್ ಯಶ್ (Yash) ಕೂಡ ಈ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್(Pan India Star) ಆಗಿದ್ದಾರೆ. ತಮಿಳುನಾಡು(Tamil Nadu), ಕೇರಳ(Kerala), ಉತ್ತರ ಭಾರತದಲ್ಲಿ ಈಗಾಗಲೇ ಕೆಜಿಎಫ್​ 2 ಆನ್​ಲೈನ್​ ಮುಂಗಡ ಟಿಕೆಟ್​(Online Ticket) ಬುಕ್ಕಿಂಗ್​ ಓಪನ್​ ಆಗಿದ್ದು, ಈಗಾಗಲೇ ಹಲವು ಶೋಗಳ ಟಿಕೆಟ್​ ಸೋಲ್ಡ್​ ಔಟ್​(Tickets Sold Out) ಆಗಿದೆ. ಇನ್ನೇನಿದ್ದರೂ ಕರ್ನಾಟಕ(Karnataka)ದಲ್ಲಿ ಆನ್​ಲೈನ್​ ಟಿಕೆಟ್ ಬುಕ್ಕಿಂಗ್ ಓಪನ್ ಆಗಬೇಕಿದೆ.  ‘ಕೆಜಿಎಫ್ 2’ ಚಿತ್ರದ ರಿಲೀಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ವಾರ ಕಳೆದರೆ ರಾಕಿ ಭಾಯ್ ಸಾಮ್ಯಾಜ್ಯ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ. ಚಿತ್ರವನ್ನು ಕಣ್ತುಂಬಿ ಕೊಳ್ಳಲು ಇಡೀ ವಿಶ್ವಾದ್ಯಂತ ಪ್ರೇಕ್ಷಕರು ಕಾಯುತ್ತಿದ್ದಾರೆ.

    ಕಿರಿಕ್​ ಮಾಡಿದ ವ್ಯಕ್ತಿಯೊಬ್ಬನಿಗೆ ಯಶ್ ಹೇಳಿದ್ದೇನು?

    ‘ಕೆಜಿಎಫ್-ಚಾಪ್ಟರ್-2’ ಚಿತ್ರತಂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪ್ರಚಾರಕ್ಕಾಗಿ ನಿನ್ನೆ ಸಂಜೆ KGF 2 ಚಿತ್ರತಂಡ ಚೆನ್ನೈನಲ್ಲಿ ಸುದ್ದಿಗಾರರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ರಾಕಿಂಗ್​ ಸ್ಟಾರ್​ ಯಶ್​ ಹಾಗೂನಿರ್ದೇಶಕ ಪ್ರಶಾಂತ್ ನೀಲ್, ಸ್ಟಂಟ್ ಮಾಸ್ಟರ್ ಅನ್ಬು ಮತ್ತಿತರರು ಉಪಸ್ಥಿತರಿದ್ದರು. ಒಬ್ಬೊಬ್ಬಾರಿಗೆ ಚಿತ್ರತಂಡಕ್ಕೆ ಪ್ರಶ್ನೆ ಕೇಳುತ್ತಿದ್ದರು. ಆದರೆ, ಇದೇ ಪ್ರೆಸ್​ ಮೀಟ್​ನಲ್ಲಿ ವ್ಯಕ್ತಿಯೊಬ್ಬ ಪದೇ ಪದೇ ಇರಿಟಿಟ್​ ಮಾಡಿದ್ದಾರೆ. ಬೇರೆ ಅವರು ಪ್ರಶ್ನೆ ಕೇಳುವಾಗ ಮಧ್ಯೆ ಎದ್ದು ನಿಂತು ತೊಂದರೆ ಮಾಡಿದ್ದಾನೆ.

    ಏಕವಚನದಲ್ಲೇ ಮಾತನಾಡಿಸಿದ ತಮಿಳು ಪತ್ರಕರ್ತ?

    ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಎಲ್ಲರಿಗೂ ಧನ್ಯವಾದ ತಿಳಿಸುವುದು ಕಾಮನ್​. ಸಿನಿಮಾಗಾಗಿ ಕೆಲಸ ಮಾಡಿದವರ ಬೆನ್ನು ತಟ್ಟುವುದು ಸಹಜ ಆದರೆ, ಇಲ್ಲೊಬ್ಬ ವ್ಯಕ್ತಿ ಕೆಜಿಎಫ್​ 2 ಚಿತ್ರತಂಡಕ್ಕೆ ಕಿರಿಕ್​ ಮಾಡಿದ್ದಾರೆ. ರಾಕಿಂಗ್​ ಸ್ಟಾರ್ ಯಶ್​ ಹಾಗೂ ಪ್ರಶಾಂತ್​ ನೀಲ್​ರನ್ನು ಏಕವಚನದಲ್ಲೇ ಮಾತನಾಡಿಸಿದ್ದಾರೆ. ‘ಹಲೋ ಯಶ್​, ಡೈರೆಕ್ಟರ್​ ಪ್ರಶಾಂತ್​ ನೀಲ್​ ಇಲ್​​ ನೋಡ್ರಿ’ ಎಂದು ಕೇಳಿದ್ದಾನೆ. ಎಲ್ಲರಿಗೂ ಧನ್ಯವಾದ ಹೇಳುತ್ತಿದ್ದೀರಾ.. ಮೊದಲು ಸಿನಿಮಾ ಬಗ್ಗೆ ಹೇಳಿ, ಏನು ಸ್ಪೆಶಲ್​ ಇದೆ ನಿಮ್ಮ ಸಿನಿಮಾದಲ್ಲಿ ಮೊದಲು ಹೇಳು ಎಂದು ಎಲ್ಲರ ಮುಂದೆ ಕೇಳಿದ್ದಾನೆ.



    ಇದನ್ನೂ ಓದಿ: KGF Chapter 2 ಜೊತೆಗೆ ಚಿತ್ರತಂಡದಿಂದ ಬಿಗ್​ ಸರ್​ಪ್ರೈಸ್​! Prabhas ಫ್ಯಾನ್ಸ್​ ಖುಷಿ ಪಡೋ ವಿಚಾರ ಬಾಸ್​..

    ಈತನ ಪ್ರಶ್ನೆ ರಾಕಿ ಭಾಯ್​ ಹೇಳಿದ್ದೇನು?

    ಕೆಜಿಎಫ್​ 2 ಸಿನಿಮಾ ಬಗ್ಗೆ ಇಡೀ ವಿಶ್ವಕ್ಕೆ ಗೊತ್ತು. ಇದರ ಬಗ್ಗೆ ಹೆಚ್ಚೆನು ಹೇಳಬೇಕಿಲ್ಲ. ಆದರೆ, ಈ ವ್ಯಕ್ತಿ ನಿಮ್ಮ ಸಿನಿಮಾದ ಬಗ್ಗೆ ಹೇಳ್ರಿ ಎಂದು ಕೇಳಿದ್ದಾನೆ. ಇದಕ್ಕೆ ರಾಕಿ ಭಾಯ್ ತಮ್ಮದೇ ಸ್ಟೈಲ್​ನಲ್ಲಿ ಖಡಕ್​ ಆಗಿ ಉತ್ತರ ನೀಡಿದ್ದಾರೆ. ತಾಯಿಗೆ ಕೊಟ್ಟ ಮಾತನ್ನು ಮಗ ಉಳಿಸಿಕೊಳ್ಳುತ್ತಾನಾ? ಇಲ್ವಾ? ಎಂಬುಂದು ನಮ್ಮ ಸಿನಿಮಾ ಎಂದು ಹೇಳಿದ್ದಾರೆ. ಆದರೆ, ಕೆಲ ತಮಿಳಿಗರು ರಾಕಿಂಗ್​ ಸ್ಟಾರ್ ಯಶ್​​ಗೆ ಅವಮಾನ.. ಉತ್ತರ ಕೊಡದೇ ಜಾರಿಕೊಂಡ ಯಶ್​ ಎಂದು ಸುದ್ದಿ ಬಿತ್ತರಿಸಿದ್ದಾರೆ.

    ಇದನ್ನೂ ಓದಿ: 10ನೇ ತರಗತಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪುಷ್ಪಾ ಚಿತ್ರದ ಡೈಲಾಗ್..!

    ಕೆಜಿಎಫ್​ 2 ಜೊತೆ ‘ಸಲಾರ್​’ ಟೀಸರ್ ರಿಲೀಸ್​!

    ಹೌದು, ಇದು ರಾಕಿಂಗ್​ ಸ್ಟಾರ್​ ಯಶ್​ ಹಾಗೂ ಪ್ರಭಾಸ್​ ಅಭಿಮಾನಿಗಳು ಖುಷಿ ಪಡುವ ವಿಚಾರ. ಕೆಜಿಎಫ್​ 2 ಸಿನಿಮಾದ ಜೊತೆ ಪ್ರಭಾಸ್​ ಅಭಿನಯದ ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾ ಟೀಸರ್​ ದರ್ಶನವಾಗಲಿದೆ ಎಂದು ಹೇಳುತ್ತಿದ್ದಾರೆ. ಈ ಹಿಂದೆಯೂ ಪವರ್​ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅಭಿನಯದ ಕೊನೆ ಸಿನಿಮಾ ಜೇಮ್ಸ್​ ಜೊತೆ ಶಿವರಾಜ್​ಕುಮಾರ್​ ಅಭಿನಯದ ‘ಬೈರಾಗಿ’ ಸಿನಿಮಾ ಟೀಸರ್​ ರಿಲೀಸ್ ಆಗಿತ್ತು. ಇತ್ತೀಚೆಗೆ ಸಲಾರ್​ ಸಿನಿಮಾದಿಂದ ಯಾವುದೇ ಅಪ್​ಡೇಟ್​ ಸಿಕ್ಕಿಲ್ಲ. ಹೀಗಾಗಿ ಕೆಜಿಎಫ್​ 2 ಸಿನಿಮಾದಲ್ಲಿ ಟೀಸರ್​ ಬರುತ್ತೆ ಅಂತ ಹೇಳಲಾಗುತ್ತಿದೆ.
    Published by:Vasudeva M
    First published: