ಬಾಲಿವುಡ್ ನಲ್ಲಿ (Bollywood) ನಟ ಮತ್ತು ನಟಿಯರು ಪರಸ್ಪರ ಕಿತ್ತಾಡಿಕೊಳ್ಳುವುದು, ಜಗಳ ಅತೀರಕಕ್ಕೆ ಹೋಗಿ ಪೊಲೀಸ್ (Police) ಠಾಣೆಯ ಮೆಟ್ಟಿಲನ್ನು ಹತ್ತುವುದು ಹೊಸತೇನಲ್ಲ ಬಿಡಿ. ಇಲ್ಲಿಯೂ ಸಹ ಇದೇ ರೀತಿಯ ಘಟನೆ ನಡೆದಿದೆ ನೋಡಿ. ನಟಿ ನೋರಾ ಫತೇಹಿ (Nora Fatehi) ಸೋಮವಾರ ಸಹ ನಟಿ ಜಾಕ್ಲಿನ್ ಫರ್ನಾಂಡಿಸ್ (Jacqueline Fernandez) ಮತ್ತು 15 ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಕರಣ (Case) ದಾಖಲಿಸಿದ್ದಾರೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧವೂ ಕೇಸ್ ನಡೆಯುತ್ತಲೇ ಇದ್ದು, ಈ ಮಧ್ಯೆ ನೋರಾ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ ದೂರು ನೀಡಿದ್ದಾರೆ.
ಮಾಧ್ಯಮ ಸಂಸ್ಥೆಗಳು ಫರ್ನಾಂಡಿಸ್ ಅವರ ಹೇಳಿಕೆಗಳನ್ನು ಹಾಗೆಯೇ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿವೆ. ಪ್ರಸಾರ ಮಾಡುತ್ತಿವೆ ಎಂದು ಅವರು ಆರೋಪಿಸಿದರು. ತಮ್ಮ ಪ್ರತಿಸ್ಪರ್ಧಿ ನಟಿ ಮತ್ತು ಮಾಧ್ಯಮ ಸಂಸ್ಥೆಗಳು ಪರಸ್ಪರ ಈ ಹುನ್ನಾರದಲ್ಲಿ ಶಾಮೀಲಾಗಿದ್ದಾರೆ ಎಂದು ಫತೇಹಿ ಹೇಳಿದ್ದಾರೆ.
ನೋರಾ ಫತೇಹಿ ವಕೀಲರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?
ದೂರುದಾರಳ ಆರ್ಥಿಕ, ಸಾಮಾಜಿಕ ಮತ್ತು ವೈಯಕ್ತಿಕ ಬದುಕನ್ನು ಹಾನಿ ಪಡಿಸಬೇಕೆಂದು ಆರೋಪಿ ಜಾಕ್ಲಿನ್ ಫರ್ನಾಂಡಿಸ್ ಪಿತೂರಿ ನಡೆಸಿದ್ದಾರೆ ಎಂದು ಅವರು ತಮ್ಮ ವಕೀಲರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.
ತಮ್ಮ ವೃತ್ತಿಜೀವನವು ತನ್ನ ಪ್ರತಿಸ್ಪರ್ಧಿಗಳಿಗೆ ಭಾರಿ ಬೆದರಿಕೆ ಹಾಕಿದೆ, ಅವರು ನ್ಯಾಯೋಚಿತ ನೆಲೆಯಲ್ಲಿ ಅವರೊಂದಿಗೆ ಸ್ಪರ್ಧಿಸಲು ಅಸಮರ್ಥರಾಗಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
"ಪ್ರತಿಸ್ಪರ್ಧಿ ಉದ್ಯಮದಲ್ಲಿ ದೂರುದಾರರೊಂದಿಗೆ ನ್ಯಾಯಯುತವಾಗಿ ಸ್ಪರ್ಧಿಸಲು ಅಸಮರ್ಥರಾಗಿರುವುದರಿಂದ ಆಕೆಯ ಘನತೆಗೆ ಮಸಿ ಬಳಿಯಲು ಪ್ರಾರಂಭಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಅವರ ಕೆಲಸವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ . ಆದ್ದರಿಂದ ಉದ್ಯಮದಲ್ಲಿ ತನ್ನ ಪ್ರತಿಸ್ಪರ್ಧಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ" ಎಂದು ಅದರಲ್ಲಿ ಹೇಳಲಾಗಿದೆ.
ಸುಕೇಶ್ ಚಂದ್ರಶೇಖರ್ ಮುಖ್ಯ ಆರೋಪಿಯಾಗಿರುವ ಕೇಂದ್ರೀಯ ಏಜೆನ್ಸಿಗಳು ತನಿಖೆ ನಡೆಸುತ್ತಿರುವ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಈ ಹೇಳಿಕೆಗೆ ಸಂಬಂಧವಿದೆ.
ಇಬ್ಬರೂ ನಟಿಯರಿಗೆ ಸಮನ್ಸ್ ನೀಡಿವೆ ತನಿಖಾ ಸಂಸ್ಥೆಗಳು
ಇಬ್ಬರೂ ನಟಿಯರಿಗೆ ತನಿಖಾ ಸಂಸ್ಥೆಗಳು ಸಮನ್ಸ್ ನೀಡಿವೆ. ಫರ್ನಾಂಡಿಸ್ ಅವರು ಸುಕೇಶ್ನಿಂದ ದುಬಾರಿ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ ಎಂದು ಬಹಿರಂಗಪಡಿಸಿದ ನಂತರ ಅವರನ್ನು ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ಫತೇಹಿ ಅವರು ಸಹ ಸುಕೇಶ್ ಅವರಿಂದ ಉಡುಗೊರೆಗಳನ್ನು ಸಹ ಪಡೆದಿದ್ದಾರೆ.
ಡಿಸೆಂಬರ್ 2 ರಂದು, ತನ್ನ ಹೇಳಿಕೆಯನ್ನು ದಾಖಲಿಸಿದ ನಂತರ ಜಾರಿ ನಿರ್ದೇಶನಾಲಯ ಕಚೇರಿಯಿಂದ ಹೊರಬಂದ ಫತೇಹಿ ಅವರು ಸುಕೇಶ್ ಅವರಿಂದ ಯಾವುದೇ ಉಡುಗೊರೆಗಳನ್ನು ಸ್ವೀಕರಿಸುವುದನ್ನು ನಿರಾಕರಿಸಿದ್ದರು.
ಇದನ್ನೂ ಓದಿ: Salman-Pooja Hegde: ಸಲ್ಮಾನ್ ಖಾನ್-ಪೂಜಾ ಹೆಗ್ಡೆ ಡೇಟಿಂಗ್ ಸುದ್ದಿ ನಿಜನಾ? ಬಾಲಿವುಡ್ ಬ್ಯಾಡ್ ಬಾಯ್ ಹೇಳೋದೇನು?
ಜಾಕ್ಲಿನ್ ಫರ್ನಾಂಡೀಸ್ ಈ ಹಿಂದೆ ಮನಿ ಲಾಂಡರಿಂಗ್ ತಡೆ ಕಾಯ್ದೆ ಅಥವಾ ಪಿಎಂಎಲ್ಎಗೆ ಮೇಲ್ಮನವಿ ಪ್ರಾಧಿಕಾರ ಅಥವಾ ಪಿಎಂಎಲ್ಎಗೆ ಸಲ್ಲಿಸಿದ ಮನವಿಯಲ್ಲಿ, ತನ್ನಂತೆಯೇ ಇತರ ಕೆಲವು ಸೆಲೆಬ್ರಿಟಿಗಳು, ವಿಶೇಷವಾಗಿ ನೋರಾ ಫತೇಹಿ ಕೂಡ ಈ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರಿಂದ ಮೋಸ ಹೋಗಿರುವುದು ಆಶ್ಚರ್ಯಕರವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ನೋರಾ ಫತೇಹಿ ಮತ್ತು ಇತರ ಸೆಲೆಬ್ರಿಟಿಗಳನ್ನು ಸಾಕ್ಷಿಗಳಾಗಿ ಮಾಡಲಾಗಿದೆ.
ಚಾರ್ಜ್ಶೀಟ್ ನಲ್ಲಿ ಇಡಿ ಜಾಕ್ಲಿನ್ ಅವರನ್ನು ಆರೋಪಿ ಎಂದು ಉಲ್ಲೇಖಿಸಿದೆ
ಸುಕೇಶ್ ವಿರುದ್ಧದ ಸುಲಿಗೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಪೂರಕ ಚಾರ್ಜ್ಶೀಟ್ ನಲ್ಲಿ ಇ.ಡಿ ಜಾಕ್ಲಿನ್ ಫರ್ನಾಂಡಿಸ್ ಅವರ ಹೆಸರನ್ನು ಆರೋಪಿ ಎಂದು ಉಲ್ಲೇಖಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ