• Home
 • »
 • News
 • »
 • entertainment
 • »
 • Netflix Password: ನೆಟ್​ಫ್ಲಿಕ್ಸ್ ಪಾಸ್​​ವರ್ಡ್ ಶೇರ್ ಮಾಡೋದು ಇನ್ಮುಂದೆ ಕ್ರಿಮಿನಲ್ ಫ್ರಾಡ್

Netflix Password: ನೆಟ್​ಫ್ಲಿಕ್ಸ್ ಪಾಸ್​​ವರ್ಡ್ ಶೇರ್ ಮಾಡೋದು ಇನ್ಮುಂದೆ ಕ್ರಿಮಿನಲ್ ಫ್ರಾಡ್

ನೆಟ್‍ಫ್ಲಿಕ್ಸ್

ನೆಟ್‍ಫ್ಲಿಕ್ಸ್

ಸಾಧಾರಣವಾಗಿ ನೆಟ್​ಫ್ಲಿಕ್ಸ್ ಅಥವಾ ಅಮೆಜಾನ್ ಪ್ರೈಂ ಅಥವಾ ಯಾವುದೇ ಒಟಿಟಿ ಪ್ಯಾಕ್ ಹಾಕುವಾಗಲೂ ಒಂದು ತಂಡ ಹಣವನ್ನು ಶೇರ್ ಮಾಡಿ ಸಬ್ಸ್ಕ್ರಿಪ್ಶನ್ ಪಡೆಯುತ್ತಾರೆ. ಆದರೆ ಇಲ್ಲಿ ಇನ್ಮುಂದೆ ನೆಟ್​ಫ್ಲಿಕ್ಸ್ ಪಾಸ್​ವರ್ಡ್ ಶೇರ್ ಮಾಡಿದ್ರೆ ಅದು ಕ್ರಿಮಿನಲ್ ಫ್ರಾಡ್ ಅಂತೆ.

 • News18 Kannada
 • 3-MIN READ
 • Last Updated :
 • New Delhi, India
 • Share this:

ಒಟಿಟಿ (OTT) ಸಬ್​ಸ್ಕ್ರಿಪ್ಶನ್ ಪ್ಯಾಕ್ ರೀಚಾರ್ಜ್ ಮಾಡಿ ಒಂದಷ್ಟು ಜನರು ಅದನ್ನು ಶೇರ್ ಮಾಡಿಕೊಳ್ಳುವುದು ತುಂಬಾ ಕಾಮನ್. ವಿಶೇಷವಾಗಿ ವಿದ್ಯಾರ್ಥಿಗಳು, ಸಹುದ್ಯೋಗಿಗಳು, ಫ್ಯಾಮಿಲಿ ಸದಸ್ಯರು ಈ ಸುಲಭ ಐಡಿಯಾ ಬಳಸಿಕೊಂಡು ತಮಗಿಷ್ಟದ ಸಿನಿಮಾ, ವೆಬ್ ಸಿರೀಸ್​ಗಳನ್ನು ಎಂಜಾಯ್ ಮಾಡುತ್ತಾರೆ. ಇದು ಪಾಕೆಟ್ ಫ್ರೆಂಡ್ಲಿ ಆಗುತ್ತದೆ. ಅದೇ ರೀತಿ ಎಲ್ಲರೂ ಒಟಿಟಿ ಶೋಗಳನ್ನು (Shows) ಎಂಜಾಯ್ ಮಾಡಲು ಕೂಡಾ ಸಾಧ್ಯವಾಗುತ್ತದೆ. 


UK ಸರ್ಕಾರ ಈಗ ಹೊಸದೊಂದು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇದು ಅತ್ಯಂತ ಚಿಕ್ಕ ವಿಷಯ ಎಂದು ಕಂಡರೂ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಹ್ಯಾಕರ್ಸ್ ಹಾಗೂ ಅಕ್ರಮವಾಗಿ ಅಧಿಕೃತ ಜಾಲಗಳಿಗೆ ನುಸುಳುವರನನ್ನು ಪತ್ತೆ ಮಾಡುವಾಗ ಆಘಾತಕಾರಿ ವಿಚಾರವೊಂದು ಬಯಲಾಗಿದೆ.
ಪಾಸ್ವರ್ಡ್ ಶೇರಿಂಗ್ ಎನ್ನುವುದು ಹ್ಯಾಕರ್ಸ್​ಗೆ ವರ


ಎಲ್ಲೆಲ್ಲಿ ಲೂಪ್​ಹೋಲ್​ಗಳಿವೆ ಎಂದು ಹುಡುಕಿದಾಗ ಅಕ್ರಮವಾಗಿ ನುಸುಳುವ ಹ್ಯಾಕರ್ಸ್ ಸುಲಭವಾಗಿ ಬಳಸಿಕೊಂಡಿದ್ದು ಪಾಸ್ವರ್ಡ್ ಶೇರಿಂಗ್ ಟೆಕ್ನಿಕ್. ತಮ್ಮ ನೆಟ್‌ಫ್ಲಿಕ್ಸ್ (Netflix), ಅಮೆಜಾನ್ ಪ್ರೈಮ್ ಅಥವಾ ಡಿಸ್ನಿ+ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುವ ಜನರು ಹಕ್ಕುಸ್ವಾಮ್ಯ ಕಾನೂನನ್ನು ಸಹಜವಾಗಿಯೇ ಉಲ್ಲಂಘಿಸುತ್ತಾರೆ.


ಅದು ತುಂಬಾ ಸಾಮಾನ್ಯವಾಗಿ ಕಾಣಿಸಿದರೂ ನಂತರದಲ್ಲಿ ಊಹಿಸಲೂ ಸಾಧ್ಯವಾಗದಂತ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಪಾಸ್‌ವರ್ಡ್ ಶೇರ್ ಮಾಡುವುದು ಕ್ರಿಮಿನಲ್ ಫ್ರಾಡ್ ಎಂದು ಕೂಡಾ ಪರಿಗಣಿಸಲ್ಪಡುತ್ತದೆ ಎಂದು ಸರ್ಕಾರ ತಿಳಿಸಿದೆ.


ಇದನ್ನೂ ಓದಿ: Google Search: ಗೂಗಲ್​ನಲ್ಲಿ ಈ ಮೂರು ವಿಚಾರ ಸರ್ಚ್​ ಮಾಡಿದ್ರೆ ಜೈಲು ಸೇರೋದು ಗ್ಯಾರಂಟಿ!


netflix logo 2007 ರಲ್ಲಿ ಕೇವಲ 1,000 ಶೀರ್ಷಿಕೆಗಳೊಂದಿಗೆ ಸೀಮಿತ ರಿಲೀಸ್​ಗಳನ್ನಷ್ಟೇ ಹೊಂದಿತ್ತು. ಆದರೆ ಆ ನಂತರದಲ್ಲಿ Neflix ಈಗ 6,600 ಕ್ಕೂ ಹೆಚ್ಚು ಚಲನಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳನ್ನು ತನ್ನ ಸಬ್​ಸ್ಕ್ರೈಬರ್ಸ್​ಗಾಗಿ ಇಂಟ್ರಡ್ಯೂಸ್ ಮಾಡಿತು. 223 ಮಿಲಿಯನ್ ಚಂದಾದಾರರು ಇದನ್ನು ಬಳಸುತ್ತಿದ್ದಾರೆ.
ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಶೇರ್ ಮಾಡಿಕೊಳ್ಳುವ ಆಪ್ಶನ್ ಕಂಪನಿಗೆ ದೊಡ್ಡಮಟ್ಟದಲ್ಲಿ ಸಹಾಯ ಮಾಡಿದೆ. ಕಂಪೆನಿಯ ಪಾಪ್ಯುಲಾರಿಟಿ, ಲಾಭವನ್ನು ಗಮನಿಸಿದರೆ ಈ ಅಂಶ ದೊಡ್ಡ ಕೊಡುಗೆಯನ್ನು ನೀಡಿದೆ. ಹಾಗಾಗಿ ಈ ಒಂದು ಸಿಸ್ಟಮ್ ಕಾಮನ್ ಆಗಿದೆ. ಅತ್ತ ಗ್ರಾಹಕರಿಗೂ ಇತ್ತ ಕಂಪೆನಿಗಳಿಗೂ ಲಾಭ ಕೊಡುವಂತಹ ಪಾಸ್​ವರ್ಡ್ ಶೇರಿಂಗ್ ಟೆಕ್ನಿಕ್ ಅತ್ಯಂತ ಲಾಭದಾಯಕ ಎಂದೇ ಪರಿಗಣಿಸಲಾಗಿದೆ. ಇದನ್ನು ಜಾಗತಿಕವಾಗಿ ಸಂಪೂರ್ಣವಾಗಿ ಸಾಮಾನ್ಯಗೊಳಿಸಲಾಗಿದೆ.


ನೆಟ್‌ಫ್ಲಿಕ್ಸ್ ನಿಮ್ಮನ್ನು ಪ್ರೀತಿಸುತ್ತದೆ, ನೀವು ನೆಟ್‌ಫ್ಲಿಕ್ಸ್ ಅನ್ನು ಪ್ರೀತಿಸುತ್ತೀರಿ. ಈಗ ನಿಮ್ಮ ಎಲ್ಲಾ ಸ್ನೇಹಿತರು ನೆಟ್‌ಫ್ಲಿಕ್ಸ್ ಅನ್ನು ಸಹ ಪ್ರೀತಿಸುತ್ತಾರೆ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ನೆಟ್​ಫ್ಲಿಕ್ಸ್ ಈ ಬಗ್ಗೆ ಅಪ್ಡೇಟ್ ಕೊಟ್ಟಿತ್ತು.


ಪಾಸ್ವರ್ಡ್ ಹಂಚೋದು ಅಂದ್ರೆ ಪ್ರೀತಿ ಅಲ್ಲ, ಇದು ಪೈರಸಿಗೆ ದಾರಿ


ಇದೇ ಮೊದಲ ಬಾರಿಗೆ ಈ ವರ್ಷದ ಆರಂಭದಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಸಂಖ್ಯೆಗಳು ಕಡಿಮೆಯಾಗಿದೆ. ಇದರ ಪ್ರತಿಸ್ಪರ್ಧಿಗಳಾದ Amazon Prime, Disney+, HBO ಮತ್ತು ಡಜನ್‌ಗಟ್ಟಲೆ ಇತರರಿಂದ ಸ್ಪರ್ಧೆ ಹೆಚ್ಚಾಗಿದೆ. ಆದರೆ 'ಪಾಸ್ವರ್ಡ್ ಹಂಚಿಕೆ' ರಿವರ್ಸ್ ಆಗಿ ಹೊಡೆಯುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.


ಪಾಸ್‌ವರ್ಡ್ ಹಂಚಿಕೆಯ ಪ್ರಮಾಣವು ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದು ಕೊನೆಯಲ್ಲಿ ದೊಡ್ಡಮಟ್ಟದ ಪೈರಸಿಗೆ ದಾರಿ ಮಾಡುತ್ತದೆ ಎನ್ನಲಾಗಿದೆ.


ಯುಕೆಯಲ್ಲಿ ಪಾಸ್‌ವರ್ಡ್ ಹಂಚಿಕೆ ಕಾನೂನುಬಾಹಿರ


ಪಾಸ್‌ವರ್ಡ್ ಹಂಚಿಕೆಯು ಯಾವಾಗಲೂ ಸ್ಟ್ರೀಮಿಂಗ್ ಸೇವೆಗಳ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಪಾಸ್ವರ್ಡ್ ಹಂಚಿಕೆಯು ಕಾನೂನುಬಾಹಿರವಲ್ಲ. ಆದರೆ Netflix & Co. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. UK ಸರ್ಕಾರ Meta ಸಹಭಾಗಿತ್ವದಲ್ಲಿ ಹೊಸ ಅಭಿಯಾನವನ್ನು ಘೋಷಿಸಿದೆ. ಪೈರಸಿ ತಪ್ಪಿಸುವ ಸಲುವಾಗಿ ಪಾಸ್​ವರ್ಡ್ ಶೇರಿಂಗ್ ನಿಷೇಧಿಸಲಾಗಿದೆ.

Published by:Divya D
First published: