- ಅನಿತಾ ಈ,
ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಧರ್ಷ' ಸಿನಿಮಾದ ಟ್ರೈಲರ್ ನಾಳೆ (ಮಾ.5) ಬಿಡುಗಡೆಯಾಗಲಿದೆ. ಈ ಟ್ರೈಲರ್ ಜೊತೆಗೆ ಪ್ರೇಕ್ಷಕರಿಗೆ ಒಂದು ಆಶ್ಚರ್ಯ ಸಹ ಕಾದಿದೆ.
ಇದನ್ನೂ ಓದಿ: Yajamana Movie Box Office Collections: ಬಾಕ್ಸಾಫಿಸ್ನಲ್ಲಿ ಧೂಳೆಬ್ಬಿಸುತ್ತಿರುವ ಡಿ-ಬಾಸ್: ಮೂರು ದಿನಗಳಲ್ಲಿ 'ಯಜಮಾನ'ನ ಗಳಿಕೆ ಎಷ್ಟು ಗೊತ್ತಾ..?
ಹೌದು, ಕಿಚ್ಚ ಸುದೀಪ್ಗೂ ಈ ಸಿನಿಮಾಗೂ ಒಂದು ಸಂಬಂಧವಿದೆ. ಅದೇನು ಅನ್ನೋದು ಟ್ರೈಲರ್ ನೋಡಿದರೆ ತಿಳಿಯುತ್ತೆ ಎನ್ನುತ್ತಿದ್ದಾರೆ ಸಿನಿ ತಂಡ. ಆದರೆ ಅದೇನು ಸಂಬಂಧ ಅನ್ನೋದು ಒಂದು ಟ್ವೀಟ್ನಿಂದಾಗಿ ಬಹಿರಂಗವಾಗಿದೆ.
#Uchakattam trailer ll be releasing in 4 languages on March 5th.@Kabirduhansingh @SaiDhanshika @theindianthakur @shraddhadas43 @DirectorDesai @LahariMusic @onlynikil @CtcMediaboy pic.twitter.com/JsGAHyF296
ನಾಳೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದ ಟ್ರೈಲರ್ ಅನ್ನು ನೀವು ಕಿಚ್ಚ ಸುದೀಪ್ ಕಂಠದಲ್ಲಿ ಕೇಳಬಹುದಾಗಿದೆ. ಹೌದು, ಹೀಗೆಂದು ಹೇಳುತ್ತಿರುವುದು ನಾವಲ್ಲ. ಈ ಸಿನಿಮಾದ ನಾಯಕ ಠಾಕೂರ್ ಅನೂಪ್ ಸಿಂಗ್.
ಟ್ರೈಲರ್ಗೆ ಸುದೀಪ್ ದನಿ ನೀಡಿರುವುದಕ್ಕೆ ಟ್ವೀಟ್ ಮಾಡಿರುವ ಅನೂಪ್ಗೆ ಕಿಚ್ಚ ರೀಟ್ವೀಟ್ ಮಾಡಿದ್ದಾರೆ. ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರಿಗೆ ಏನೂಬೇಕಾದರೂ ಮಾಡುವುದಾಗಿ ಟ್ವೀಟ್ನಲ್ಲಿ ಬರೆದಿದ್ದಾರೆ ಕಿಚ್ಚ.
ಸುನೀಲ್ ಕುಮಾರ್ ನಿರ್ದೇಶನದ ಈ ಸಿನಿಮಾ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದ್ದು, ನಾಳೆ ಟ್ರೈಲರ್ ಸಹ ನಾಲ್ಕು ಭಾಷೆಗಳಲ್ಲಿ ಬಿಡುಡೆಯಾಗಲಿದೆ. ಈ ಸಿನಿಮಾದಲ್ಲಿ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿ ಅಭಿನಯಿಸಿದ್ದಾರೆ.
ದರ್ಶನ್ ಸೆರೆಹಿಡಿದ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನದ ಚಿತ್ರಗಳು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ