• Home
 • »
 • News
 • »
 • entertainment
 • »
 • Vidhyashree Jayaram: ಕಾವ್ಯಾಂಜಲಿಯಲ್ಲಿ ಮುದ್ದುಮುದ್ದಾಗಿ ಕಾವ್ಯ ಪಾತ್ರ ಮಾಡೋ ವಿದ್ಯಾಶ್ರೀ ಇವರೇ

Vidhyashree Jayaram: ಕಾವ್ಯಾಂಜಲಿಯಲ್ಲಿ ಮುದ್ದುಮುದ್ದಾಗಿ ಕಾವ್ಯ ಪಾತ್ರ ಮಾಡೋ ವಿದ್ಯಾಶ್ರೀ ಇವರೇ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದ್ಯಾ ನಟನಾ ಕ್ಷೇತ್ರಕ್ಕೆ ಬಂದಿದ್ದು ಬಹು ಆಕಸ್ಮಿಕ. ಜಯರಾಮ್ ಮತ್ತು ಪ್ರಭಾಮಣಿ ದಂಪತಿಗಳ ಮಗಳು ವಿದ್ಯಾಶ್ರೀ  ಎವಿಯೇಶನ್ ಡಿಪ್ಲೋಮಾ ಕೋರ್ಸ್ ಮುಗಿಸಿರುವ ವಿದ್ಯಾಶ್ರೀ ಗೋ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದರು.

 • Share this:

  ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರವಾಹಿಗಳು ಜನರನ್ನು ಪ್ರತಿದಿನ ರಂಜಿಸುತ್ತಿದೆ. ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿ ಕನ್ನಡ ಕಿರುತೆರೆಯೂ ಎಲ್ಲೂ ಸೋತಿಲ್ಲ. ಈ ಸಾಲಿನಲ್ಲಿ ಉದಯ (Udaya) ವಾಹಿನಿಯಲ್ಲಿ ಪ್ರಸಾರ ಗೊಳ್ಳುತ್ತಿದ್ದ ಕಾವ್ಯಾಂಜಲಿ (Kavyanjali) ಧಾರಾವಾಹಿ ಕೂಡ ಒಂದು. ಕಾವ್ಯಾಂಜಲಿ ಧಾರವಾಹಿಯಲ್ಲಿ ನಾಯಕ ನಟಿಯಾಗಿ ಕಾವ್ಯ (Kavya) ಎಂಬ ಪಾತ್ರದಲ್ಲಿ ನಟಿಸುತ್ತಿದ್ದ ಚೆಲುವೆಯ ಹೆಸರು ವಿದ್ಯಾಶ್ರೀ ಜಯರಾಮ್ (Vidhyashree Jayaram) . ತಮ್ಮ ಮುಗ್ಧ ನಟನೆಯಿಂದ ಇವರು ಗುರುತಿಸಿಕೊಂಡವರು. ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ವಿದ್ಯಾಶ್ರೀ ಅವರು ನಟಿಸುವುದನ್ನು ಬಿಡಿ, ಅದರ ಬಗ್ಗೆ ಕನಸು ಕೂಡ ಕಂಡಿರಲಿಲ್ಲ. ಆದರೆ ವಿಧಿಯೇ ಅವರನ್ನು ನಟನಾ ಕ್ಷೇತ್ರಕ್ಕೆ ಎಳೆದು ತಂದಿತು.


  ವಿದ್ಯಾ ನಟನಾ ಕ್ಷೇತ್ರಕ್ಕೆ ಬಂದಿದ್ದು ಬಹು ಆಕಸ್ಮಿಕ. ಜಯರಾಮ್ ಮತ್ತು ಪ್ರಭಾಮಣಿ ದಂಪತಿಗಳ ಮಗಳು ವಿದ್ಯಾಶ್ರೀ  ಎವಿಯೇಶನ್ ಡಿಪ್ಲೋಮಾ ಕೋರ್ಸ್ ಮುಗಿಸಿರುವ ವಿದ್ಯಾಶ್ರೀ ಗೋ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿದ್ದರು. ಮೂರು ವರ್ಷಗಳ ಕಾಲ ಗಗನಸಖಿಯಾಗಿ ಕಾರ್ಯ ನಿರ್ವಹಿಸಿದ ವಿದ್ಯಾಗೆ ಆ ವೃತ್ತಿಯಲ್ಲಿ ಸಂತೃಪ್ತಿ ಸಿಗದೆ, ಜೀವನದಲ್ಲಿ ಇನ್ನೇದರೂ ಹೊಸತು ಮಾಡಬೇಕೆಂಬ ಹಂಬಲ ಕಾಡುತ್ತಲೇ ಇತ್ತು. ಇದೇ ಹಂಬಲ ವಿದ್ಯಾರನ್ನು ನಟಿಯಾಗುವಂತೆ ಪ್ರೇರೇಪಿಸಿತು. ಆದರೆ ಮನೊರಂಜನಾ ಕ್ಷೇತ್ರದ ಕಡೆಗೆ ಸೆಳೆತವಂತೂ ವಿದ್ಯಾಶ್ರೀಗೆ ಇತ್ತು.


  ಇದನ್ನೂ ಓದಿ: Sathya Serial: ಸತ್ಯಗೆ ಸುತ್ತಿಕೊಂಡ ಮದುವೆ ನಂಟು ಕಾರ್ತಿಕ್ ತಾಳಿ ಕಟ್ಟೋದೊಂದೆ ಬಾಕಿ!


  ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ವಿದ್ಯಾಶ್ರೀ


  ಖಾಸಗಿ ವಾಹಿನಿಯಲ್ಲಿ ತಕಧಿಮಿತ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ವಿದ್ಯಾಶ್ರೀ ಅಗ್ನಿಸಾಕ್ಷಿಯ ಅಖಿಲ್ ಖ್ಯಾತಿಯ ರಾಜೇಶ್ ಧ್ರುವ ಅವರಿಗೆ ಡ್ಯಾನ್ಸ್ ಪಾರ್ಟನರ್ ಆಗಿ ಕಾಣಿಸಿಕೊಂಡರು. ತಮ್ಮ ನೃತ್ಯ ಪ್ರತಿಭೆ ಮೂಲಕ ಪ್ರತಿ ವಾರವೂ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನ ಸೆಳೆಯುತ್ತಿದ್ದ ಈ ಜೋಡಿ ಹದಿನಾಲ್ಕು ರೌಂಡ್ ಪಾಸ್ ಆಗಿತ್ತು. ತಕಧಿಮಿತ ಶೋವಿನಿಂದ ಹೊರಬಂದ ಬಳಿಕ ವಿದ್ಯಾಶ್ರೀ ಆಯ್ದುಕೊಂಡಿದ್ದು ನಟನಾ ಕ್ಷೇತ್ರವನ್ನು ಧಾರಾವಾಹಿಗಳಲ್ಲಿ ನಟಿಸಬೇಕು ಎಂಬ ತಮ್ಮ ಬಯಕೆಯನ್ನು ಅಪ್ಪನಲ್ಲಿ ಹೇಳಿದಾಗ ಅಪ್ಪ ಒಕೆ ಅಂದರು. ಮುಂದೆ ಧಾರಾವಾಹಿಗಳ ಆಡಿಶನ್ ಗಳಿಗೆ ಹೋಗಲಾರಂಭಿಸಿದರು.


  ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ನಟಿ


  ಆಡಿಶನ್‌ಗಳಿಗೆ ಹೋಗುತ್ತಿದ್ದ ವಿದ್ಯಾಶ್ರೀಗೆ 'ಕಾಯಿರಿ, ಹೇಳುತ್ತೇವೆ' ಎಂಬ ಉತ್ತರಗಳೇ ಸಿಗುತ್ತಿತ್ತೇ ಹೊರತು ನೀವು ಆಯ್ಕೆ ಆಗಿದ್ದೀರಿ ಎಂಬ ಉತ್ತರ ಯಾವ ಕಡೆಯಿಂದಲೂ ಬರಲಿಲ್ಲ. ಆದರೂ ತಮ್ಮ ಪ್ರಯತ್ನ ಬಿಡಲಿಲ್ಲ. ಇನ್ನೇನು ಪ್ರಯತ್ನ ಕೈಬಿಡಬೇಕು ಎಂದುಕೊಳ್ಳುವಷ್ಟರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಧಾರಾವಾಹಿಗೆ ಕೊಟ್ಟ ಆಡಿಶನ್‌ಗೆ ಆಯ್ಕೆ ಆದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವರಲಕ್ಷ್ಮಿ ಸ್ಟೋರ್ಸ್' ಧಾರಾವಾಹಿಯಲ್ಲಿ ರಮ್ಯಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ವಿದ್ಯಾಶ್ರೀ ಮೊದಲ ಧಾರಾವಾಹಿಯಲ್ಲಿಯೇ ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.


  ಇದನ್ನೂ ಓದಿ: Rachana Smith: ಕಮಲಿಯ ಅನಿಕಾ ಬಣ್ಣದ ಲೋಕಕ್ಕೆ ಬಂದು 9 ವರ್ಷ - ರಚನಾ ಸ್ಮಿತ್​ ರಿಯಲ್​ ಸ್ಟೋರಿ ಇದು


  ವಿದ್ಯಾಶ್ರೀ 'ಕಾವ್ಯಾಂಜಲಿ'ಯ ಕಾವ್ಯಳಾಗಿ ಮಿಂಚಿದ್ದಾರೆ


  ವಿದ್ಯಾಶ್ರೀ 'ಕಾವ್ಯಾಂಜಲಿ'ಯ ಕಾವ್ಯಳಾಗಿ ಮಿಂಚಿದ್ದಾರೆ.  ಇದೊಂದು ತ್ರಿಕೋನ ಪ್ರೇಮಕಥೆ ಇರುವ ಧಾರಾವಾಹಿ. ಪ್ರತಿಯೊಂದನ್ನು ಪಾಸಿಟಿವ್ ಆಗಿ ನೋಡುವ ವ್ಯಕ್ತಿತ್ವವುಳ್ಳ ಪಾತ್ರ ವಿದ್ಯಾಶ್ರೀ ಯವರದ್ದಾಗಿತ್ತು. ಕಾವ್ಯಾ ಎಲ್ಲ ವಿಚಾರಗಳನ್ನು ಪಾಸಿಟಿವ್ ಆಗಿಯೇ ನೋಡುತ್ತಾಳೆ. ಅದರ ಜೊತೆಗೆ ಆಕೆ ತುಂಬ ಹಠಮಾರಿ ಆಗಿರುತ್ತಾಳೆ. ಮನಸ್ಸಿಗೆ ಅನ್ನಿಸಿದ್ದನ್ನು ನೇರವಾಗಿ ಹೇಳುತ್ತಾಳೆ .ಇಂತಹ ಪಾತ್ರವನ್ನು ಧಾರಾವಾಹಿಯಲ್ಲಿ ವಿದ್ಯಾ ಶ್ರೀಯವರು ನಟಿಸಿ ಹಲವಾರು ಅಭಿಮಾನಿಗಳನ್ನು ಪಡೆದಿದ್ದಾರೆ. ಇದರ ಹೊರತಾಗಿ ವಿದ್ಯಾಶ್ರೀಗೆ ಸಿನಿಮಾರಂಗದಿಂದಲೂ ಅವಕಾಶಗಳು ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರೆ ಅಚ್ಚರಿಯೇನಿಲ್ಲ.

  Published by:Swathi Nayak
  First published: