• Home
 • »
 • News
 • »
 • entertainment
 • »
 • Urfi Javed: ಉದಯ​ಪುರ ಟೈಲರ್ ಭೀಕರ ಹತ್ಯೆ ವಿರುದ್ಧ ಉರ್ಫಿ ಜಾವೇದ್ ಕಿಡಿಕಿಡಿ

Urfi Javed: ಉದಯ​ಪುರ ಟೈಲರ್ ಭೀಕರ ಹತ್ಯೆ ವಿರುದ್ಧ ಉರ್ಫಿ ಜಾವೇದ್ ಕಿಡಿಕಿಡಿ

ಉರ್ಫಿ ಜಾವೇದ್​

ಉರ್ಫಿ ಜಾವೇದ್​

Udaipur Murder: ನಾವು ಶಿಕ್ಷಣ, ಮಹಿಳಾ ಸಬಲೀಕರಣ, ಅತ್ಯಾಚಾರದ ಪ್ರಕರಣಗಳ ತ್ವರಿತ ನಿರ್ವಹಣೆ, ಜಿಡಿಪಿ ಇಂತಹ ವಿಷಯಗಳ ಬಗ್ಗೆ ಏಕೆ ಮಾತನಾಡುವುದಿಲ್ಲ?  ಎಂದು ಅವರು ಪ್ರಶ್ನಿಸಿದ್ದಾರೆ.

 • Share this:

  ಉದಯಪುರದಲ್ಲಿ 48 ವರ್ಷದ ಟೈಲರ್‌ ಕನ್ಹಯ್ಯ ಲಾಲ್ ಹತ್ಯೆಗೆ ಉರ್ಫಿ ಜಾವೇದ್ (Urfi Javed) ತೀವ್ರವಾಗಿ ಖಂಡಿಸಿದ್ದಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ರಾಜಸ್ಥಾನದ ಉದಯಪುರದ (Rajasthan Udaipur Murder) ಭೀಕರ ಹತ್ಯೆಯ ಕುರಿತು ಅವರು ಕಟುವಾಗಿ ಟೀಕಿಸಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಉರ್ಫಿ ತಮ್ಮ ಮೊದಲ ಪೋಸ್ಟ್‌ನಲ್ಲಿ, "ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಅಲ್ಲಾಹುವು ತನ್ನ ಹೆಸರಿನಲ್ಲಿ ದ್ವೇಷಿಸಲು ಮತ್ತು ಕೊಲ್ಲಲು ನಿಮ್ಮನ್ನು ಕೇಳಲಿಲ್ಲ" ಎಂದು ಅವರು ಕೇಳಿದ್ದಾರೆ. ಈಮೂಲಕ ದೇವರ ಹೆಸರಲ್ಲಿ ಹತ್ಯೆ ಮಾಡುವುದನ್ನು ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವ ಮೂಲಕ ಉಗ್ರವಾಗಿ ಖಂಡಿಸಿದ್ದಾರೆ.


  ಮತ್ತೊಂದು ಸುದೀರ್ಘ ಟಿಪ್ಪಣಿಯಲ್ಲಿ, "ಜನರು ತಮ್ಮ ಧರ್ಮಗಳು ಮತ್ತು ದೇವರುಗಳ ಹೆಸರಿನಲ್ಲಿ ಪರಸ್ಪರ ದ್ವೇಷಿಸುತ್ತಿದ್ದಾರೆ ಮತ್ತು ಕೊಲ್ಲುತ್ತಿದ್ದಾರೆ. ಇವರು ನಿಜಕ್ಕೂ ಸಮಾಜದಲ್ಲಿ ಗಂಭೀರವಾಗಿ ಏನನ್ನು ಬಯಸುತ್ತಾರೆ ಎಂದು ಉರ್ಫಿ ಜಾವೇದ್ ಪ್ರಶ್ನಿಸಿದ್ದಾರೆ.


  ಈ ವಿಷಯಗಳನ್ನು ಏಕೆ ಮಾತನಾಡುವುದಿಲ್ಲ?
  ನಾವು ಶಿಕ್ಷಣ, ಮಹಿಳಾ ಸಬಲೀಕರಣ, ಅತ್ಯಾಚಾರದ ಪ್ರಕರಣಗಳ ತ್ವರಿತ ನಿರ್ವಹಣೆ, ಜಿಡಿಪಿ ಇಂತಹ ವಿಷಯಗಳ ಬಗ್ಗೆ ಏಕೆ ಮಾತನಾಡುವುದಿಲ್ಲ?  ಜನರು ನೈತಿಕತೆ ಮತ್ತು ನೈತಿಕ ಪ್ರಜ್ಞೆಯನ್ನು ಹೊಂದಲು ಧರ್ಮಗಳನ್ನು ರಚಿಸಲಾಗಿದೆ"ಎಂದು ಬರೆದುಕೊಂಡಿದ್ದಾರೆ.


  ನಿಮ್ಮ ಕಣ್ಣುಗಳನ್ನು ತೆರೆಯಿರಿ!
  "ಇಂದಿನ ಕಾಲದಲ್ಲಿ ನಿಮ್ಮ ಧರ್ಮವು ನಿಮ್ಮ ನೈತಿಕತೆ ಮತ್ತು ನೀತಿಗಳನ್ನು ಕಸಿದುಕೊಳ್ಳುತ್ತಿದೆ! ಧರ್ಮಗಳಂತಹ ಯಾವುದೇ ಮಾನವ ನಿರ್ಮಿತ ನಂಬಿಕೆಯಲ್ಲಿನ ತೀವ್ರವಾದವು ಕೇವಲ ವಿನಾಶವನ್ನು ಉಂಟುಮಾಡುತ್ತದೆ! ಎಂದಿಗೂ ತಡಮಾಡಬೇಡಿ. ನಿಮ್ಮ ಕಣ್ಣುಗಳನ್ನು ತೆರೆಯಿರಿ!  ಇದರ ನಂತರ ನನ್ನ ವಿರುದ್ಧ ಹಲವರು ಕೆಂಡ ಕಾರಬಹುದು. ಆದರೆ ನಿಮ್ಮಂತೆ ನಾನು ದ್ವೇಷದಿಂದ ತುಂಬಿಲ್ಲ ಎಂದು ತಿಳಿದುಕೊಂಡಿರಿ" ಎಂದು ನಟಿ ಉರ್ಫಿ ಜಾವೇದ್ ರಾಜಸ್ಥಾನದ ಉದಯಪುರದ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.   


  ಕೊಲೆಯಾದ ವ್ಯಕ್ತಿಗೆ ₹31 ಲಕ್ಷ ಆರ್ಥಿಕ ಪರಿಹಾರ
  ಇಬ್ಬರು ವ್ಯಕ್ತಿಗಳಿಂದ ಶಿರಚ್ಛೇದ ಮಾಡಿ ಕೊಲ್ಲಲ್ಪಟ್ಟ ಟೈಲರ್ ಕನ್ಹಯ್ಯಾ ಲಾಲ್ ಕುಟುಂಬಕ್ಕೆ ₹31 ಲಕ್ಷ ಆರ್ಥಿಕ ಪರಿಹಾರ ನೀಡಲಾಗುವುದು ಎಂದು ರಾಜಸ್ಥಾನದ ಉದಯಪುರ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್ ತಿಳಿಸಿದ್ದಾರೆ. ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಹಂಚಿಕೊಂಡ ಕೆಲವು ದಿನಗಳ ನಂತರ ಉದಯಪುರದ ಮಾಲ್ದಾಸ್ ರಸ್ತೆಯಲ್ಲಿ ಲಾಲ್ ಅವರ ಶಿರಚ್ಛೇದ ಮಾಡಲಾಗಿದೆ. ಶಿರಚ್ಛೇದದಲ್ಲಿ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ರಾಜ್‌ಸಮಂದ್‌ನಿಂದ ಬಂಧಿಸಲಾಗಿದೆ.


  ಇದನ್ನೂ ಓದಿ: Agnipath Recruitment: ಅಗ್ನಿವೀರರಾಗಲು ಅತ್ಯುತ್ಸಾಹ; 6 ದಿನಗಳಲ್ಲಿ ಒಟ್ಟು 1.83 ಲಕ್ಷಕ್ಕೂ ಹೆಚ್ಚು ಅರ್ಜಿ!


  ಅಮಾನತುಗೊಂಡಿರುವ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ  ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಇಂದು ಉದಯ್‌ಪುರದ ಮಾಲ್ದಾಸ್ ಪ್ರದೇಶದಲ್ಲಿ ಟೇಲರ್ ಓರ್ವನ ಶಿರಚ್ಛೇದ ಮಾಡಿದ್ದಾರೆ.


  ಇದನ್ನೂ ಓದಿ: Udaipur Murder: ವ್ಯಕ್ತಿಯ ಶಿರಚ್ಛೇದನ, ಪ್ರಧಾನಿ ಮೋದಿಗೆ ಬೆದರಿಕೆ; ನೂಪುರ್ ಶರ್ಮಾ ಪರ ಪೋಸ್ಟ್​ಗೆ ಹಾಡಹಗಲೆ ಮರ್ಡರ್


  ಘಟನೆ ಖಂಡಿಸಿದ ರಾಹುಲ್ ಗಾಂಧಿ
  ಭಯೋತ್ಪಾದನೆ ಹರಡುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಉದಯಪುರದಲ್ಲಿ ನಡೆದ ಘೋರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಕ್ರೌರ್ಯದಿಂದ ಭಯೋತ್ಪಾದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕು” ಎಂದು ಗಾಂಧಿ ಟ್ವಿಟರ್‌ನಲ್ಲಿ ಬರೆದಿದ್ದಾರೆ. "ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕಾಗಿದೆ" ಎಂದು ಹೇಳಿದ ಅವರು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಲು ಮನವಿ ಮಾಡಿದರು.

  Published by:guruganesh bhat
  First published: