Ricky Kej: 2ನೇ ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದ ರಿಕಿ ಕೇಜ್! ಪ್ರಧಾನಿ ಮೋದಿಗೆ ಧನ್ಯಾವಾದ ತಿಳಿಸಿದ್ದೇಕೆ ಅಂತ ನೀವೇ ನೋಡಿ

ಸಂಗೀತ ಸಂಯೋಜಕ ರಿಕಿ ಕೇಜ್ ಅವರು ತಮ್ಮ ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನಂತರ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶೀರ್ವಾದ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು.

ರಿಕಿ ಕೇಜ್​

ರಿಕಿ ಕೇಜ್​

  • Share this:
ಭಾರತೀ(India)ಯ ಪ್ರಸಿದ್ಧ ಸಂಗೀತ ಸಂಯೋಜಕ ರಿಕಿ ಕೇಜ್‌(Ricky Kej) ಅವರು ಇಡೀ ದೇಶವೇ ಮತ್ತೊಮ್ಮೆ ಅವರತ್ತ ಹೆಮ್ಮೆಯಿಂದ ನೋಡುವಂತೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಜಾಗತಿಕ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ಹೇಳಲ್ಪಡುವ ಗ್ರ್ಯಾಮಿ ಪ್ರಶಸ್ತಿ(Grammy Awards)ಯನ್ನು ಎರಡನೆಯ ಬಾರಿ ತಮ್ಮದಾಗಿಸಿಕೊಳ್ಳುವ ಮೂಲಕ ಮಹಾ ಸಾಧನೆ ಮಾಡಿದ್ದಾರೆ. ಸಂಗೀತ(Music) ಸಂಯೋಜಕ ರಿಕಿ ಕೇಜ್ ಅವರು ತಮ್ಮ ಎರಡನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನಂತರ, ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi)ಯವರ ಆಶೀರ್ವಾದ ಮತ್ತು ಮಾರ್ಗದರ್ಶನಕ್ಕಾಗಿ ಅವರಿಗೆ ಧನ್ಯವಾದ ಹೇಳಿದರು. ‘ಡಿವೈನ್ ಟೈಡ್ಸ್’ ಆಲ್ಬಂಗಾಗಿ ರಿಕಿ ಕೇಜ್ ಅವರಿಗೆ ಈ ಗ್ರ್ಯಾಮಿ ಪ್ರಶಸ್ತಿ ಬಂದಿದೆ.

ರಿಕಿ ಕೇಜ್​ಗೆ ಅಭಿನಂದನೆ ತಿಳಿಸಿದ ಮೋದಿ!

ಪ್ರಧಾನಿ ಮೋದಿ ಅವರು ದೇಶವೇ ಹೆಮ್ಮೆ ಪಡುವ ಈ ಕಲಾವಿದನನ್ನು "ಗಮನಾರ್ಹ ಸಾಧನೆಗಾಗಿ" ಅಭಿನಂದಿಸಿದರು ಮತ್ತು ಅವರ ಮುಂದಿನ ಭವಿಷ್ಯದ ಎಲ್ಲಾ ಪ್ರಯತ್ನಗಳಿಗಾಗಿ ಅವರಿಗೆ ಶುಭ ಹಾರೈಸಿದರು.

ಮೋದಿ ಧನ್ಯವಾದ ತಿಳಿಸಿದ ರಿಕಿ!

ಇದಕ್ಕೆ ಪ್ರತಿಕ್ರಿಯೆಯಾಗಿ, ರಿಕಿ ಕೇಜ್ ಟ್ವೀಟ್ ಮಾಡಿ, "ನಾನು ಮೂಕವಿಸ್ಮಿತನಾದೆ! ಗೌರವಾನ್ವಿತ ಪ್ರಧಾನ ಮಂತ್ರಿಯವರಿಂದ ಸ್ವತಃ ಪ್ರಶಂಸೆ ಸಿಕ್ಕಿದ್ದಕ್ಕಾಗಿ. ಧನ್ಯವಾದಗಳು ನರೇಂದ್ರ ಮೋದಿಜೀ, ನಾನು ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

7 ವರ್ಷದ ಹಿಂದೆ ಫಸ್ಟ್​ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದ ರಿಕಿ!

ಕೇಜ್ ಅವರು ತಮ್ಮ ಹಿಂದಿನ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನಂತರ ಅವರಿಗೆ ಸರಿಯಾದ ದಾರಿಯಲ್ಲಿ ಮಾರ್ಗದರ್ಶನ ಮಾಡಿದ್ದಕ್ಕಾಗಿ ಪ್ರಧಾನಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. "7 ವರ್ಷಗಳ ಹಿಂದೆ ನಾನು ನನ್ನ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಾಗ, ನೀವು ನನ್ನನ್ನು ಪರಿಸರದ ಬಗ್ಗೆ ಪ್ರಜ್ಞೆಯನ್ನು ಮೂಡಿಸಿಕೊಳ್ಳುವ ಒಂದು ಹಾದಿಯಲ್ಲಿ ಇರಿಸಿದ್ದೀರಿ ಮತ್ತು ಇಂದು ನಾನು ಇಲ್ಲಿದ್ದೇನೆ. ನಿಮ್ಮ ಆಶೀರ್ವಾದಕ್ಕಾಗಿ ಧನ್ಯವಾದಗಳು" ಎಂದು ಕೇಜ್ ಹೇಳಿದರು.

ಇದನ್ನೂ ಓದಿ: ಖಿನ್ನತೆಯಿಂದ ಆ ನಿರ್ಧಾರಕ್ಕೆ ಬಂದಿದ್ರಂತೆ ಈ ರ‍್ಯಾಪರ್! ಶಿಲ್ಪಾ ಶೆಟ್ಟಿ ಬಳಿ ಹೇಳಿಕೊಂಡಿದ್ದೇನು ಬಾದ್‌ಶಾ? ಇಲ್ಲಿದೆ ನೋಡಿ

ರಿಕಿ ಕೇಜ್, ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಭಾನುವಾರದಂದು ನಡೆದ 64 ನೇ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ‘ಡಿವೈನ್ ಟೈಡ್ಸ್’ ಆಲ್ಬಂ ಗಾಗಿ ಅತ್ಯುತ್ತಮ ‘ನ್ಯೂ ಏಜ್ ಆಲ್ಬಂ’ ಪ್ರಶಸ್ತಿಯನ್ನು ಗೆದ್ದರು. ಒಬ್ಬ ಸಕ್ರಿಯ ಪರಿಸರವಾದಿ ರಿಕಿ ಕೇಜ್ ಅವರು ವಿಶ್ವಸಂಸ್ಥೆಯ ಜಾಗತಿಕ ಮಾನವತಾವಾದಿ ಕಲಾವಿದ ಪ್ರಶಸ್ತಿಗೆ ಭಾಜನರಾಗಿದ್ದಾರೆ, ಜೊತೆಗೆ ಅವರ ವೃತ್ತಿ ಜೀವನದ ಅವಧಿಯಲ್ಲಿ 100 ಕ್ಕೂ ಹೆಚ್ಚು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ವಿಂಡ್ಸ್​ ಆಫ್​ ಬ್ರೂಡ್ ಆಲ್ಬಂಗೆ ಮೊದಲ ಗ್ರ್ಯಾಮಿ!

ಈ ಕಲಾವಿದನಿಗೆ 2015 ರಲ್ಲಿ ‘ವಿಂಡ್ಸ್ ಆಫ್ ಬ್ರೂಡ್​’ ಆಲ್ಬಂಗಾಗಿ ಅವರು ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದರು. ಅಮೆರಿಕದಲ್ಲಿ ಜನಿಸಿದ ರಿಕಿ ಕೇಜ್ 8 ವರ್ಷದವನಿದ್ದಾಗಿನಿಂದಲೂ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಸಂಗೀತದ ಕಡೆಗೆ ಒಲವು ತೋರಿಸುವ ಮೊದಲು ಅವರು ದಂತವೈದ್ಯಕೀಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದರು.

ಇದನ್ನೂ ಓದಿ: ಅಯ್ಯೋ.. ಇದೇನಾಯ್ತು ಜೆನಿಲಿಯಾ ಗಂಡನಿಗೆ? ಹಿಂಗಾ ಊಟ ಮಾಡೋದು ರಿತೇಶ್​ ದೇಶ್​​ಮುಖ್​​​!

ಸ್ಟೀವರ್ಟ್ ಅವರ ಪಾದ ಮುಟ್ಟಿ ನಮಸ್ಕರಿಸಿದ ರಿಕಿ

ಸೋಮವಾರ ರಾತ್ರಿ, ಬಾಲಿವುಡ್ ನಟಿ ರವೀನಾ ಟಂಡನ್ ಪ್ರಶಸ್ತಿ ಪ್ರದಾನ ಸಮಾರಂಭದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ರಿಕಿ ವೇದಿಕೆಯಲ್ಲಿ ಸ್ಟೀವರ್ಟ್ ಅವರ ಪಾದ ಮುಟ್ಟಿ ಗೌರವ ಸೂಚಿಸಿದ್ದನ್ನು ನಾವು ನೋಡಬಹುದು.
Published by:Vasudeva M
First published: