Roberrt ಸಿನಿಮಾ ನಿರ್ಮಾಪಕ ಉಮಾಪತಿ ಕೊಲೆಗೆ ಸ್ಕೆಚ್​​​ ಹಾಕಿದ್ದ ಮತ್ತಿಬ್ಬರು ಅಂದರ್: ಇವ್ರ ಹಿಸ್ಟರಿ ಕೇಳಿ ಪೊಲೀಸರೇ ದಂಗು!

ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivasa Gowda) ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರ್ಶನ್‌(Darshan) ಅಲಿಯಾಸ್‌ ರಾಬರಿ ಮತ್ತು ಸಂಜು(Sanju) ಬಂಧಿತರು.

ಉಮಾಪತಿ

ಉಮಾಪತಿ

  • Share this:
‘ರಾಬರ್ಟ್‌’ (Roberrt) ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivasa Gowda) ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರ್ಶನ್‌ (Darshan) ಅಲಿಯಾಸ್‌ ರಾಬರಿ ಮತ್ತು ಸಂಜು (Sanju) ಬಂಧಿತರು. ಆರೋಪಿಗಳು ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದು, ಸುಂಕದಕಟ್ಟೆಯ ಬಾರ್‌ವೊಂದರ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ರಾಬರಿ, ಕಳವು, ಕೊಲೆ ಯತ್ನ, ಸುಲಿಗೆ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ತನಿಖೆಗಾಗಿ ಜಯನಗರ ಪೊಲೀಸರಿಗೆ ಆರೋಪಿಗಳನ್ನು ಒಪ್ಪಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ಕಳೆದ ಕೆಲ ತಿಂಗಳುಗಳಿಂದ ಉಮಾಪತಿ ಟಾಕ್​ ಆಫ್​ ದಿ ಟೌನ್ (Talk of the Town)​ ಆಗಿದ್ದಾರೆ. ಸದಾ ಒಂದಲ್ಲ ಒಂದು ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಮತ್ತೊಂದು ಕಡೆ ಇವರನ್ನು ಹತ್ಯೆ ಮಾಡಲು ದೊಡ್ಡ ಟೀಂ ಕೂಡ ಸ್ಕೆಚ್​ ಹಾಕಿತ್ತು ಎಂಬ ಆಘಾತಕಾರಿ ವಿಷಯ ಕೂಡ ಹೊರಬಂದಿತ್ತು. ಈ ಬಗ್ಗೆ ಅಲರ್ಟ್(Alert) ಆದ ಪೊಲೀಸರು ಕೆಲ ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಇಷ್ಟು ದಿನ ತಲೆ ಮರೆಸಿಕೊಂಡಿದ್ದ ದರ್ಶನ್​ - ಸಂಜು ಎಂಬುವವರನ್ನು ಖಾಕಿ ಖೆಡ್ಡಾಗಿ ಕೆಡವಿದೆ.  ನಿರ್ಮಾಪಕ ಉಮಾಪತಿ ಹತ್ಯೆಗೆ ಸಂಚು ಪ್ರಕರಣದಲ್ಲಿ 16 ಮತ್ತು 17ನೇ ಆರೋಪಿಗಳಾಗಿದ್ದಾರೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಮತ್ತಷ್ಟುಮಾಹಿತಿ ಕಲೆ ಹಾಕುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಅಸಲಿಗೆ  ಪ್ರಕರಣದ ಹಿನ್ನೆಲೆ ಏನು?

ಭೂಗತ ಪಾತಕಿ ಬಾಂಬೆ ರವಿ ಸೂಚನೆ ಮೇರೆಗೆ ಆರೋಪಿಗಳು ನಿರ್ಮಾಪಕ ಉಮಾಪತಿ ಗೌಡ, ಅವರ ಸಂಬಂಧಿ ದೀಪಕ್‌, ಕುಖ್ಯಾತ ರೌಡಿಶೀಟರ್‌ಗಳಾದ ಸೈಕಲ್‌ ರವಿ ಹಾಗೂ ಬೇಕರಿ ರಘು ಅವರನ್ನು ಹತ್ಯೆಗೈಯಲು ಸಂಚು ರೂಪಿಸಲಾಗಿತ್ತು. ಈ ಸಂಬಂಧ ಆರೋಪಿಗಳು 2020ರ ಡಿಸೆಂಬರ್‌ 20 ರಂದು ಜಯನಗರ ಠಾಣೆ ವ್ಯಾಪ್ತಿಯ ನ್ಯಾಷನಲ್‌ ಕಾಲೇಜು ಮೈದಾನದ ಬಳಿ ಟೆಂಪೋ ಟ್ರಾವೆಲರ್‌ ವಾಹನದಲ್ಲಿ ಸುಮಾರು 10ಕ್ಕೂ ಅಧಿಕ ಮಂದಿ ಮಾರಕಾಸ್ತ್ರಗಳ ಸಮೇತ ಕುಳಿತಿದ್ದರು. ಈ ವೇಳೆ ಪೊಲೀಸರ ಕೈಯಲ್ಲಿ ಲಾಕ್​ ಆಗಿದ್ದರು. ಇಬ್ಬರನ್ನು ಸ್ಥಳದಲ್ಲೇ ಬಂಧಿಸಲಾಗಿತ್ತು. ಇವರಿಂದ ಮಾಹಿತಿ ಪಡೆದು ಎಂಟು ಮಂದಿಯನ್ನು ಅರೆಸ್ಟ್​ ಮಾಡಲಾಗಿತ್ತು.

ಇದನ್ನು ಓದಿ: Appu ಕೊನೆಯದಾಗಿ ನೋಡಿ ಮನಸಾರೆ ನಕ್ಕಿದ್ದ ಸಿನಿಮಾ ರಿಲೀಸ್​ಗೆ ರೆಡಿ : ಫೆ.3ಕ್ಕೆ `ಒನ್​ ಕಟ್​​ ಟು ಕಟ್’ ಚಿತ್ರ​ ಬಿಡುಗಡೆ

ಪೊಲೀಸರ ಮೇಲೆ ವಾಹನ ಹತ್ತಿಸಲು ಯತ್ನಿಸಿದ್ದ ಆರೋಪಿಗಳು!

ಹತ್ಯೆಗೆ ಹೊಂಚು ಹಾಕಿ ಆರೋಪಿಗಳು ಕಾಯುತ್ತಿದ್ದರು. ಇದೇ ವೇಳೆ ಜಯನಗರ ಠಾಣೆ ಇನ್ಸ್‌ಪೆಕ್ಟರ್‌ ಸುದರ್ಶನ್‌ ಅನುಮಾನಗೊಂಡು ವಶಕ್ಕೆ ಪಡೆಯಲು ಮುಂದಾದಾಗ, ಪೊಲೀಸರ ಮೇಲೆಯೇ ಟೆಂಪೋ ಟ್ರಾವೆಲರ್‌ ಹತ್ತಿಸಲು ಯತ್ನಿಸಿ ಮತ್ತು ಲಾಂಗ್‌ನಿಂದ ಹಲ್ಲೆಗೆ ಮುಂದಾಗಿ ಪರಾರಿಯಾಗಿದ್ದರು. ಈ ವೇಳೆ ಪೊಲೀಸರು ಕೆಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿರ್ಮಾಪಕ ಉಮಾಪತಿ ಸೇರಿದಂತೆ ಕೆಲವರ ಹತ್ಯೆಗೆ ಹೊಂಚು ಹಾಕಿ ಕುಳಿತ್ತಿದ್ದಾಗಿ ಬಾಯ್ಬಿಟ್ಟಿದ್ದರು. ಈ ವಿಚಾರ ಕೇಳಿ  ಸ್ವತಃ ನಿಮಾರ್ಪಕ ಉಮಾಪತಿ ದಂಗಾಗಿ ಹೋಗಿದ್ದರು.

ಇದನ್ನು ಓದಿ : ಸ್ಯಾಂಡಲ್​ವುಡ್​ `ಕೃಷ್ಣ’ನಿಗೆ ಹುಟ್ಟುಹಬ್ಬದ ಸಂಭ್ರಮ.. 42ನೇ ವಸಂತಕ್ಕೆ ಕಾಲಿಟ್ಟ ಅಜಯ್​ ರಾವ್​!ಸ್ಯಾಂಡಲ್​ವುಡನ ಅದ್ಧೂರಿ ನಿರ್ದೇಶಕ ಉಮಾಪತಿ!


ಹೌದು, ಸ್ಯಾಂಡಲ್​ವುಡ್​ನಲ್ಲಿ ಬಿಗ್​ ಬಜೆಟ್​ ಸಿನಿಮಾಗಳ ನಿರ್ಮಾಪಕರ ಸಂಖ್ಯೆ ಕಡಿಮೆ. ಆದರೆ, ಉಮಾಪತಿ ಮಾಡಿರುವ ಸಿನಿಮಾಗಳಲ್ಲಿ ಯಾವುದಕ್ಕೂ ಕೊರತೆ ಇರುತ್ತಿರಲಿಲ್ಲ. ಅದ್ಧೂರಿ ಸೆಟ್​ಗಳನ್ನು ಹಾಕಿ ಸಿನಿಮಾ ಶೂಟಿಂಗ್​ ಮಾಡಲಾಗುತ್ತಿತ್ತು. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ ಅವರ ಜೊತೆಯೂ ಉಮಾಪತಿ ಸಿನಿಮಾ ಮಾಡಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು.
Published by:Vasudeva M
First published: