Breaking: ​ಶೂಟಿಂಗ್​ ವೇಳೆ ಭೀಕರ ಅಪಘಾತ! ಇಬ್ಬರು ಹೀರೋಗಳ ದುರಂತ ಅಂತ್ಯ , 6 ಸಹ ನಟರ ಸ್ಥಿತಿ ಗಂಭೀರ

ಭೀಕರ ಅಪಘಾತ (Deadly Accident) ಸಂಭವಿಸಿದೆ. ಇಬ್ಬರು ನಟರು ಶೂಟಿಂಗ್​ ವೇಳೆ ನಡೆದ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಶೂಟಿಂಗ್ ಸೆಟ್ (Shooting Set) ನಲ್ಲಿ ಕುಳಿತಿದ್ದ ಹೀರೋಗಳ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾರ ಸಾವು (Death) ಯಾವಾಗ ಬರುತ್ತೆ ಅಂತ ಹೇಳುವುದಕ್ಕೆ ಸಾಧ್ಯನೆ ಇಲ್ಲ. ಕೂತಲ್ಲೇ  ಪ್ರಾಣ ಹೋಗಿರುವುದನ್ನು ನೋಡಿದ್ದೇವೆ. ಭೀಕರವಾಗಿ ಮನುಷ್ಯ (Human) ನ ಉಸಿರು ನಿಂತಿರುವುದನ್ನು ನೋಡಿದ್ದೇವೆ. ಇತ್ತೀಚೆಗೆ ಸ್ಯಾಂಡಲ್​ವುಡ್​ (Sandalwood) ನಲ್ಲಿ ಲವ್​ ಯೂ ರಚ್ಚು (Love You Rachchu) ಸಿನಿಮಾ ಶೂಟಿಂಗ್​ ವೇಳೆ ಸಹ ನಟರೊಬ್ಬರು ವಿದ್ಯುತ್​ ಶಾಕ್ (Current Shock) ​ನಿಂದ ಮೃತಪಟ್ಟಿದ್ದರು. ಸಾಮಾನ್ಯವಾಗಿ ಚಿತ್ರೀಕರಣದ ವೇಳೆ ಸೆಟ್‌ನಲ್ಲಿ ಅಪಘಾತಗಳು (Accident) ಸಂಭವಿಸುತ್ತವೆ. ಸಾಹಸ ದೃಶ್ಯ (Fight Scene) ಗಳ ಪ್ರದರ್ಶನದ ವೇಳೆ ಅಪಘಾತಗಳು ಸಾಮಾನ್ಯ. ಈ ರೀತಿಯಾದಾಗ .. ನಟರು ಮತ್ತು ಇತರರು ಗಾಯಗೊಂಡಿದ್ದಾರೆ. ಆದರೆ ಇಲ್ಲಿ ಭೀಕರ ಅಪಘಾತ (Deadly Accident) ಸಂಭವಿಸಿದೆ. ಇಬ್ಬರು ನಟರು ಶೂಟಿಂಗ್​ ವೇಳೆ ನಡೆದ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಶೂಟಿಂಗ್ ಸೆಟ್ (Shooting Set) ನಲ್ಲಿ ಕುಳಿತಿದ್ದ ಹೀರೋಗಳ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಈ ಹಿಂದೆ ಕಮಲ್​ ಹಾಸನ್ (Kamal Haasan)​ ಅಭಿನಯದ ಇಂಡಿಯನ್ 2 (Indian 2) ಸಿನಿಮಾದ ಸೆಟ್ ನಲ್ಲಿ ಅಪಘಾತ ಸಂಭವಿಸಿ ಪ್ರಾಣಹಾನಿ ಸಂಭವಿಸಿತ್ತು.

ಶೂಟಿಂಗ್​ ವೇಳೆ ಅವಘಡ, ಇಬ್ಬರ ಸಾವು!

ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾ ಸುರ್ ಪೆನಿನ್ಸುಲಾದಲ್ಲಿ ಇತ್ತೀಚೆಗೆ ಒಂದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಕಲಾವಿದರು ಸಾವನ್ನಪ್ಪಿದ್ದಾರೆ.  ಪ್ರಮುಖ OTT ಕಂಪನಿ Netflix ಮೂಲ ಸರಣಿ 'The Choose One' ಅನ್ನು ಬಿಡುಗಡೆ ಮಾಡುತ್ತಿದೆ. ಬ್ರೆಜಿಲಿಯನ್ ಥ್ರಿಲ್ಲರ್ ಸರಣಿ 2019 ರಲ್ಲಿ ಬಿಡುಗಡೆಯಾಯಿತು, ಸರಣಿಯು ದೊಡ್ಡ ಯಶಸ್ಸನ್ನು ಕಂಡಿತು. ಇದರೊಂದಿಗೆ, ನೆಟ್‌ಫ್ಲಿಕ್ಸ್ ಸತತ ಸೀಸನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಎರಡನೇ ಸೀಸನ್ ಕೂಡ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿದೆ. ಸ್ವಲ್ಪ ಸಮಯದ ನಂತರ, ಮೂರನೇ ಸೀಸನ್ ಶೂಟಿಂಗ್ ಪ್ರಾರಂಭವಾಗಿತ್ತು. ಈ ವೇಳೆ ಭೀಕರ ದುರಂತ ಸಂಭವಿಸಿದೆ.

ಮೃತಪಟ್ಟ ನಾಯಕನಟರು


ಆ್ಯಕ್ಷನ್​ ಸೀಕ್ವೆನ್ಸ್​ ವೇಳೆ ಅವಘಡ!

ಕ್ಯಾಲಿಫೋರ್ನಿಯಾ ಬಳಿಯ ಸಾಂಟಾ ರೊಸಾಲಿಯಾ ಮರುಭೂಮಿ ಪ್ರದೇಶದಲ್ಲಿ ಬಾಜಾ ಚಿತ್ರೀಕರಣವನ್ನು ಪ್ರಾರಂಭಿಸಿತ್ತು. ಆದರೆ ಶೂಟಿಂಗ್ ನಡೆಯುತ್ತಿದ್ದ ಪಕ್ಕದಲ್ಲೇ ರಸ್ತೆ ಇತ್ತು. ಚಿತ್ರೀಕರಣದ ವೇಳೆ ಮರಳುಗಾಡಿನ ರಸ್ತೆಯಲ್ಲಿ ಸಾಗುತ್ತಿದ್ದ ವ್ಯಾನ್ ಪಲ್ಟಿಯಾಗಿ ಶೂಟಿಂಗ್ ಸ್ಪಾಟ್‌ಗೆ ಅಪ್ಪಳಿಸಿದೆ. ಶೂಟಿಂಗ್ ಸೆಟ್‌ನಲ್ಲಿದ್ದ ನಟರಾದ ರೇಮಂಡೊ ಗೋರ್ಡಾನೊ, ಜುವಾನ್ ಫ್ರಾನ್ಸಿಸ್ಕೊ ​​ಅಗ್ಯುಲರ್ ಮತ್ತು ಇತರ ಆರು ಮಂದಿ ಮೇಲೆ ವ್ಯಾನ್ ಬಿದ್ದಿದೆ. ಇಬ್ಬರು ನಟರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಇದನ್ನೂ ಓದಿ: ಪರಭಾಷೆಯಲ್ಲಿ ಫೇಮಸ್​ ಆಗಿರುವ ನಟಿಯರ ಕನ್ನಡದ ಮೊದಲ ಸಿನಿಮಾ ಇದಂತೆ

ನೆಟ್​ಫ್ಲಿಕ್ಸ್​ ಮೇಲೆ ಕಿಡಿಕಾರಿದ ಅಭಿಮಾನಿಗಳು!

ಕ್ಯಾಲಿಫೋರ್ನಿಯಾ ಪೊಲೀಸರು ಮೃತ ನಟರನ್ನು ರೆಮುಂಡೋ ಗೋರ್ಡಾನೊ ಮತ್ತು ಜುವಾನ್ ಫ್ರಾನ್ಸಿಸ್ಕೊ ​​ಅಗ್ಯುಲರ್ ಎಂದು ಗುರುತಿಸಿದ್ದಾರೆ. ದಿ ಹಾಲಿವುಡ್ ವರದಿ ಪ್ರಕಾರ, ಜೂನ್ 16 ರಂದು ಅಪಘಾತ ಸಂಭವಿಸಿದೆ. ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿತ್ತು. ಆದರೆ, ಇದುವರೆಗೂ ನೆಟ್‌ಫ್ಲಿಕ್ಸ್ ಈ ಬಗ್ಗೆ ಪ್ರಸ್ತಾಪಿಸಿಲ್ಲ.ಇದರೊಂದಿಗೆ ಬ್ರೆಜಿಲ್ ಮಾಧ್ಯಮಗಳು ಮತ್ತು ಅಭಿಮಾನಿಗಳು ನೆಟ್‌ಫ್ಲಿಕ್ಸ್ ಮೇಲೆ ಕಿಡಿಕಾರಿದ್ದಾರೆ.
Published by:Vasudeva M
First published: