HOME » NEWS » Entertainment » TWITTERS TROLLED KANGANA RANAUT TO COMPARES HERSELF TO MERYL STREEP SESR

Kangana Ranaut: ಹಾಲಿವುಡ್​ನ ಖ್ಯಾತ ನಟಿಗೆ ಹೋಲಿಕೆ ಮಾಡಿಕೊಂಡು ಟ್ರೋಲ್​ ಆದ ಕಂಗನಾ ರನೌತ್​​

ಜಗತ್ತಿನ ಬೇರೆ ಯಾವುದೇ ನಟಿ ಮಾಡಿರದಂತಹ ವಿಭಿನ್ನ ಕಥೆ, ಪಾತ್ರಗಳನ್ನು ನಾನು ಮಾಡುತ್ತಿದ್ದೇನೆ. ಅಮೆರಿಕದ ಖ್ಯಾತ ತಾರೆಯಲ್ಲಿರುವಂತಹ ಅತ್ಯದ್ಭುತ ಪ್ರತಿಭೆ ನನ್ನಲ್ಲಿ ಇದೆ

news18-kannada
Updated:February 9, 2021, 9:30 PM IST
Kangana Ranaut: ಹಾಲಿವುಡ್​ನ ಖ್ಯಾತ ನಟಿಗೆ ಹೋಲಿಕೆ ಮಾಡಿಕೊಂಡು ಟ್ರೋಲ್​ ಆದ ಕಂಗನಾ ರನೌತ್​​
ಜಗತ್ತಿನ ಬೇರೆ ಯಾವುದೇ ನಟಿ ಮಾಡಿರದಂತಹ ವಿಭಿನ್ನ ಕಥೆ, ಪಾತ್ರಗಳನ್ನು ನಾನು ಮಾಡುತ್ತಿದ್ದೇನೆ. ಅಮೆರಿಕದ ಖ್ಯಾತ ತಾರೆಯಲ್ಲಿರುವಂತಹ ಅತ್ಯದ್ಭುತ ಪ್ರತಿಭೆ ನನ್ನಲ್ಲಿ ಇದೆ
  • Share this:
ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ಇತ್ತೀಚೆಗೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೆ ಇದ್ದಾರೆ. ಇದೀಗ ತಮ್ಮನ್ನು ಅಮೆರಿಕದ ಖ್ಯಾತ ನಟಿ ಮೆರಿಲ್​ ಸ್ಟ್ರೀಪ್​ಗೆ ಹೋಲಿಸಿಕೊಂಡು ಮತ್ತೊಮ್ಮೆ ಟ್ರೋಲ್​ ಆಗಿದ್ದಾರೆ. ಸದ್ಯ ಜಯಲಲಿತಾ ಅವರ ಜೀವನಾಧಾರಿತ ತಲೈವಿ ಹಾಗೂ ಧಕಡ್​ ಚಿತ್ರದಲ್ಲಿ ಬ್ಯುಸಿಯಾಗಿರುವ ನಟಿ ತನೊಬ್ಬ ಅತ್ಯಂತ ಪ್ರತಿಭಾವಂತೆ ನಟಿ ಎಂದು ತಮಗೆ ಬಹುಪರಾಕ್​ ಹಾಡಿಕೊಂಡಿದ್ದಾರೆ. ಜೊತೆಗೆ ಅಮೆರಿಕದ ಖ್ಯಾತ ತಾರೆ ಮೆರಿಲ್​ ಸ್ಟ್ರೀಪ್​ ಹಾಗೂ ಗಾಲ ಗಡೊಟ್​ಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಜಗತ್ತಿನ ಬೇರೆ ಯಾವುದೇ ನಟಿ ಮಾಡಿರದಂತಹ ವಿಭಿನ್ನ ಕಥೆ, ಪಾತ್ರಗಳನ್ನು ನಾನು ಮಾಡುತ್ತಿದ್ದೇನೆ. ಅಮೆರಿಕದ ಖ್ಯಾತ ತಾರೆಯಲ್ಲಿರುವಂತಹ ಅತ್ಯದ್ಭುತ ಪ್ರತಿಭೆ ನನ್ನಲ್ಲಿ ಇದೆ ಎಂದು ಅವರು ಟ್ವೀಟ್​ ಮೂಲಕ ತಮ್ಮ ಎರಡು ಚಿತ್ರದ ಪೋಟೋಗಳನ್ನು ಹಾಕಿ ಪೋಸ್ಟ್​ ಮಾಡಿದ್ದಾರೆ.  ಇಷ್ಟಕ್ಕೆ ಸುಮ್ಮನಾಗಿರದ ನಟಿ ಕಂಗನಾ, ನನ್ನ ಹತ್ತಿರ ಇರುವಂತಹ ಅತ್ಯದ್ಬುತ ಮತ್ತು ಅಪ್ರತಿಮಾ ನಟನೆ ಯಾರಾ ಬಳಿ ಇದೆ ಎಂಬುದನ್ನು ತೋರಿಸಿದರೆ, ತಾನು ಈ ಕೂಡಲೇ ನನ್ನ ಅಹಂಕಾರವನ್ನು ಬಿಟ್ಟು ಬಿಡುತ್ತೇನೆ. ಈ ಬಗ್ಗೆ ಮುಕ್ತ ಚರ್ಚೆಗೆ ನಾನು ಸಿದ್ಧ ಎಂದು ಸವಾಲ್​ ಕೂಡ ಹಾಕಿದ್ದಾರೆ.

ಅವರ ಈ ಟ್ವೀಟ್​ಗಳನ್ನು ಟ್ರೋಲ್​ ಮಾಡಿರುವ ಟ್ರೋಲಿಗರು ನಿಮಗೆ ದೇವರು ಎಲ್ಲವನ್ನು ನೀಡಿದ್ದಾನೆ. ನಿಮಗೆ ಪ್ರತಿಭೆ, ನಟನೆ ಎಲ್ಲವೂ ಇದೆ ಆದರೆ, ಮಾನವೀಯತೆಯೇ ಇಲ್ಲ ಎಂದಿದ್ದಾರೆ.

ಇನ್ನು ಕೆಲವರು ಕಂಗನಾಗೆ ಆತ್ಮರತಿ (ತಮ್ಮನ್ನು ತಾವು ಅಸಮಾನ್ಯ ಎಂದು ತಿಳಿದುಕೊಳ್ಳುವುದು) ಹೆಚ್ಚಿದೆ. ಗಾಢ ನಂಬಿಕೆ ಮತ್ತು ಆತ್ಮರತಿ ನಡುವೆ ಒಂದು ಚಿಕ್ಕ ಗೆರೆ ಇರುತ್ತದೆ. ಅದನ್ನು ಕಂಗನಾ ಮರೆತಿದ್ದಾರೆ ಎಂದಿದ್ದಾರೆ.
Published by: Seema R
First published: February 9, 2021, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories