ಅನೇಕ ಕೈಗಾರಿಕೋದ್ಯಮಿಗಳು, ಐಎಎಸ್ (IAS) ಅಧಿಕಾರಿಗಳು ಮತ್ತು ಇನ್ನೂ ಅನೇಕ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರಭಾವಿ ವ್ಯಕ್ತಿಗಳು ಟ್ವಿಟ್ಟರ್ ನಲ್ಲಿ (Twitter) ಆಗಾಗ್ಗೆ ತಮಗೆ ಇಷ್ಟವಾದ ಪೋಸ್ಟ್ ಅಥವಾ ವೀಡಿಯೋವನ್ನು (Video) ಇತರೆ ಜನರೊಂದಿಗೆ ಹಂಚಿಕೊಳ್ಳುತ್ತಲೇ ಇರುವುದನ್ನು ನಾವು ದಿನನಿತ್ಯ ನೋಡುತ್ತಲೇ ಇರುತ್ತೇವೆ. ಅದರಲ್ಲೂ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಸದಾ ಒಂದಲ್ಲ ಒಂದು ಮನಸ್ಸಿಗೆ ಮುದ ನೀಡುವಂತಹ, ಜೀವನಕ್ಕೆ ಸ್ಪೂರ್ತಿ ನೀಡುವಂತಹ ಮತ್ತು ಸ್ವಾರಸ್ಯಕರವಾದ ವಿಚಾರವನ್ನು ಜನರೊಂದಿಗೆ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇಷ್ಟೇ ಅಲ್ಲದೆ ಎಷ್ಟೋ ಜನರು ತಮ್ಮ ಕಥೆಗಳನ್ನು ಹಂಚಿಕೊಂಡಾಗ ಆನಂದ್ ಮಹೀಂದ್ರಾ ಅವರನ್ನು ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದರೆ, ಅದಕ್ಕೆ ತಕ್ಷಣವೇ ಆನಂದ್ ಮಹೀಂದ್ರಾ ಅವರು ತುಂಬಾನೇ ವಿನಮ್ರತೆಯಿಂದ ಪ್ರತಿಕ್ರಿಯಿಸಿರುವುದನ್ನು ಸಹ ನಾವು ಅನೇಕ ಬಾರಿ ನೋಡಿದ್ದೇವೆ.
ಈಗ ಮತ್ತೊಮ್ಮೆ ಹೀಗೆ ಒಂದು ಪೋಸ್ಟ್ ಅನ್ನು ತಮ್ಮ ಟ್ವಿಟ್ಟರ್ ನಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಅವರು ಹಂಚಿಕೊಂಡಿದ್ದಕ್ಕಾಗಿ ಸುದ್ದಿಯಲ್ಲಿದ್ದಾರೆ.
ಮಹೀಂದ್ರಾ ಅವರು ಟ್ವಿಟ್ಟರ್ ನ ಸಕ್ರಿಯ ಬಳಕೆದಾರರಾಗಿದ್ದು, ಮೈಕ್ರೋ-ಬ್ಲಾಗಿಂಗ್ ಸೈಟ್ ನಲ್ಲಿ ಜನರು ಕೇಳುವ ವಿವಿಧ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಅವರ ಹಾಸ್ಯಭರಿತ ಪ್ರತಿಕ್ರಿಯೆಗಳು ಜನರನ್ನು ರಂಜಿಸುತ್ತವೆ. ಅವರ ಹೃದಯಗಳನ್ನು ಗೆಲ್ಲುತ್ತವೆ. ತನ್ನ ಅಳಿಯನ ಬಗ್ಗೆ ಕೇಳಿದ ಟ್ವಿಟ್ಟರ್ ಬಳಕೆದಾರರಿಗೆ ಅವರು ಇತ್ತೀಚೆಗೆ ನೀಡಿದ ಉತ್ತರ ಬಲು ಸೊಗಸಾಗಿತ್ತು ಎಂದು ಹೇಳಬಹುದು.
ಆನಂದ್ ಮಹೀಂದ್ರಾ ಅವರ ಪೋಸ್ಟ್ ನಲ್ಲಿ ಏನಿತ್ತು?
ಇದೆಲ್ಲಾ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ತಮಾಷೆಯ ಪೋಸ್ಟ್ ನೊಂದಿಗೆ ಪ್ರಾರಂಭವಾಯಿತು. "ಎಲ್ಲಾ ರೀತಿಯ ನೋವುಗಳು ಮತ್ತು ಬೇನೆಗಳಿಗೆ ಕ್ರೋಸೆಂಟ್ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಕನಿಷ್ಠ ಪಕ್ಷ ನನ್ನ ಫ್ರೆಂಚ್ ಅಳಿಯ ಒಪ್ಪುತ್ತಾನೆ. ನಾವು ಭಾರತೀಯರು ಸಂಕ್ಷಿಪ್ತ ಸಾಫ್ಟ್ವೇರ್ ಪ್ರೋಗ್ರಾಮಿಂಗ್ ಭಾಷೆಯನ್ನು ಕರಗತ ಮಾಡಿಕೊಂಡಿದ್ದೇವೆ. ಯಾಕಾಬಾರದು?" ಎಂದು ಅವರು ಬರೆದಿದ್ದಾರೆ.
ಜೊತೆಗೆ, ಅವರು ಕ್ರೋಸೆಂಟ್ ನ ವಿಭಿನ್ನ ಉಚ್ಚಾರಣೆಗಳನ್ನು ತೋರಿಸುವ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿ ಒಂದು ಭಕ್ಷ್ಯಕ್ಕೆ ಕ್ರೋಸೆಂಟ್ ಅಂತ ಬರೆಯುವ ಬದಲು ಕ್ರೋಸಿನ್ ಅಂತ ಬರೆಯಲಾಗಿತ್ತು.
ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಬಳಕೆದಾರರೊಬ್ಬರು, "ಇದು ನನಗೆ ಸಂಬಂಧಿಸಿದ್ದಲ್ಲ, ಆದರೂ ನಿಮಗೆ ಭಾರತೀಯ ಅಳಿಯ ಆಗುವುದಿಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
Because that’s none of my business either. My daughters, on their own, chose their life partners. And I’m proud of them for that. https://t.co/QfVHsRuXwM
— anand mahindra (@anandmahindra) November 26, 2022
10,000 ಲೈಕ್ ಗಳನ್ನು ಗಳಿಸಿದೆ ಈ ಪೋಸ್ಟ್
ಈ ಉತ್ತರವು ಟ್ವೀಟ್ ಮಾಡಿದಾಗನಿಂದ, 10,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇದನ್ನು ಸುಮಾರು 500 ಬಾರಿ ಮರು ಟ್ವೀಟ್ ಮಾಡಲಾಗಿದೆ. ಆನಂದ್ ಮಹೀಂದ್ರಾ ಅವರ ಉತ್ತರಕ್ಕೆ ಪ್ರತಿಕ್ರಿಯಿಸುವಾಗ ಜನರು ವಿವಿಧ ಕಾಮೆಂಟ್ ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Helicopter Car: ಮಾರುತಿ ವ್ಯಾಗನಾರ್ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?
"ಸಾಮಾಜಿಕ ಮಾಧ್ಯಮದಲ್ಲಿ ಜನರು ಅಪರಿಚಿತರಿಗೆ ಇಂತಹ ವೈಯಕ್ತಿಕ ಪ್ರಶ್ನೆಗಳನ್ನು ಯಾಕೆ ಕೇಳುತ್ತಾರೆ ಎಂದು ಕೆಲವೊಮ್ಮೆ ನಾನು ಆಶ್ಚರ್ಯ ಪಡುತ್ತೇನೆ" ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದಿದ್ದಾರೆ. "ಎಂದಿಗೂ ಒಬ್ಬರ ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸಬೇಡಿ" ಎಂದು ಇನ್ನೊಬ್ಬರು ಹೇಳಿದರು. "ಆನಂದ್ ಮಹೀಂದ್ರಾ ಅವರು ಸರಿಯಾಗಿ ಹೇಳಿದ್ದಾರೆ. ಹೆಣ್ಣಿನ ಸಂಗಾತಿ ಆಯ್ಕೆ ಅವರದ್ದಲ್ಲದೆ ಬೇರೆ ಯಾರದ್ದೂ ಆಗಿರಬಾರದು" ಎಂದು ಮೂರನೆಯ ಬಳಕೆದಾರರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ