ನಾನಿ ಅಭಿಮಾನಿಗಳು (Fans) ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ‘ಅಂಟೇ ಸುಂದರಾನಿಕಿ’ (Ante Sundaraniki) ತೆಲುಗು ಸಿನಿಮಾ ಇಂದು ಬಿಡುಗಡೆಯಾಗಿದೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು (Comedy Movie), ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ನಾನಿ (Nani) ಅವರಿಗೆ ನಾಯಕಿಯಾಗಿ ಮಲಯಾಳಂ ನಟಿ ನಜ್ರಿಯಾ ನಜೀಮ್ (Nazriya Nazim) ನಟಿಸಿದ್ದಾರೆ. ನಜ್ರಿಯಾ ಅವರಿಗೆ ಇದು ಚೊಚ್ಚಲ ತೆಲುಗು ಸಿನಿಮಾ. ನಾನಿ, ಪ್ರತಿಯೊಂದು ಸಿನಿಮಾದಲ್ಲೂ (Cinema) ತಮ್ಮ ಸಹಜ ನಟನೆ ಮತ್ತು ಕಾಮಿಡಿ ಟೈಮಿಂಗ್ನ ಮೂಲಕ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. ‘ಅಂಟೇ ಸುಂದರಾನಿಕಿ’ ಸಿನಿಮಾದಲ್ಲೂ ಕೂಡ ನಾನಿ ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ.
ಸಹಜ ನಟನೆಗೆ ಮಾರು ಹೋದ ಪ್ರೇಕ್ಷಕರು
ನಾನಿಯ ಅದೇ ಸಹಜ ನಟನೆಗೆ ಮತ್ತೇ ಮಾರು ಹೋಗಿದ್ದಾರೆ ಪ್ರೇಕ್ಷಕರು. ನಜ್ರಿಯಾ ನಜೀಮ್ ಕೂಡ ಮಲಯಾಳಂನ ಅತ್ಯುತ್ತಮ ನಟಿಯರಲ್ಲಿ ಒಬ್ಬರಾದ ಕಾರಣ, ನಾನಿ ಮತ್ತು ನಜ್ರಿಯಾ ಜೋಡಿ ತೆರೆಯ ಮೇಲೆ ಮಾಡಲಿರುವ ಮೋಡಿಯ ಬಗ್ಗೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ‘ಅಂಟೇ ಸುಂದರಾನಿಕಿ’ ಬಿಡುಗಡೆ ಆಗುತ್ತಿದ್ದಂತೆ, ಅದನ್ನು ವೀಕ್ಷಿಸಿದ ಬಹಳಷ್ಟು ಮಂದಿ ನೆಟ್ಟಿಗರು ಸಿನಿಮಾದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳತೊಡಗಿದ್ದಾರೆ.
ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಸಿನೆಮಾ
‘ಅಂಟೇ ಸುಂದರಾನಿಕಿ’ ಸಿನಿಮಾದಲ್ಲಿ ನಾನಿ ಮತ್ತು ನಜ್ರಿಯಾ ನಜೀಮ್, ಸುಂದರ್ ಮತ್ತು ಲೀಲಾ ಥಾಮಸ್ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ವಿಲಕ್ಷಣ ಪ್ರೇಮ ಕಥೆಗೆ ಜೀವ ತುಂಬಿರುವ ಅವರಿಬ್ಬರ ನಡುವಿನ ಅದ್ಭುತವಾದ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಕೊಂಡಾಗುತ್ತಿದ್ದಾರೆ. ಸಾಂಪ್ರದಾಯಿಕ ಕುಟುಂಬವೊಂದರ ಬ್ರಾಹ್ಮಣ ಯುವಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಾನಿ, ತಮ್ಮ ಅಭಿನಯ ಮತ್ತು ಹಾಸ್ಯದ ಮೂಲಕ ಚಿತ್ರ ಮಂದಿರದಲ್ಲಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದಾರೆ. ಈ ಸಿನಿಮಾಗೆ ವಿವೇಕ್ ಸಾಗರ್ ಅವರು ಸಂಗೀತ ನೀಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: 777 Charlie: ಸಿನಿಮಾದಿಂದ ಸ್ಫೂರ್ತಿ ಪಡೆದು ನಾಯಿಗೆ ಚಾರ್ಲಿ ಎಂದು ನಾಮಕರಣ, ಮಂಗಳೂರಿನಲ್ಲೊಂದು ವಿಶೇಷ ಘಟನೆ
‘ಅಂಟೇ ಸುಂದರಾನಿಕಿ’ ಸಿನಿಮಾವನ್ನು ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸಿದ್ದು, ವಿವೇಕ್ ಆತ್ರೇಯ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನದಿಯಾ, ಹರ್ಷವರ್ಧನ್, ರಾಹುಲ್ ರಾಮಕೃಷ್ಣ ಮತ್ತು ಸುಹಾಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನೆಮಾ ನೋಡಿ ಪ್ರೇಕ್ಷಕರು ಪ್ರತಿಕ್ರಿಯೆಗಳು
“ಮೊದಲಾರ್ಧ ತುಂಬಾ ಚೆನ್ನಾಗಿದೆ. . .ನಾನಿ ಮತ್ತು ನಜ್ರಿಯಾ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. . . .ನಾನಿ ಕಾಮಿಡಿ ಟೈಮಿಂಗ್ ಸಿಕ್ಕಾಪಟ್ಟೆ ಚೆನ್ನಾಗಿದೆ. . . “ ಎಂದು ನೆಟ್ಟಿಗರೊಬ್ಬರು ಟ್ವಿಟ್ಟರ್ನಲ್ಲಿ ಬರೆದಿದ್ದರೆ, ಮತ್ತೊಬ್ಬರು, “ವಿವೇಕ್ ಆತ್ರೆಯಾ, ವಿವೇಕ್ ಸಾಗರ್, ನಾನಿ ಮತ್ತು ನಜ್ರಿಯಾ ಜೊತೆಯಾಗಿ ಒಂದು ತುಂಬಾ ತುಂಬಾ ಸುಂದರವಾದ ಸಿನಿಮಾವನ್ನು ಸೃಷ್ಟಿಸಿದ್ದಾರೆ. . .. ಈ ಸಿನಿಮಾದ ಪ್ರತಿಯೊಂದು ಕ್ಷಣವೂ ಮ್ಯಾಜಿಕಲ್ ಆಗಿದೆ” ಎಂದು ಪ್ರಶಂಸಿಸಿದ್ದಾರೆ.
Very good 1st half… @NameisNani and #Nazriya at their best … comedy timing ruffadinchadu nani … 🤙🏻
Bgm is ❤️❤️#AnteSundaraniki
— ғor a cнange (@Gowtham_kaNTRi) June 10, 2022
#AnteSundaraniki
One of the finest entertainer of the year for sure 😍❤️ hilarious first half
special thanks @anupamahere role 😍
@NameisNani anna❤ #NazriyaFahadh #VivekAthreya pic.twitter.com/D71onvKH58
— Rajesh (@Rajesh93651270) June 10, 2022
“ತುಂಬಾ ಎಂಗೇಜಿಂಗ್ ಮತ್ತು ಎಂಟರ್ಟೈನಿಂಗ್ ಆಗಿದೆ. ಇಡೀ ಸಿನಿಮಾದಲ್ಲಿ ನಾನಿ ಮಿಂಚಿದ್ದಾರೆ. ಸ್ಕ್ರೀನ್ ಪ್ಲೇ ಇಷ್ಟವಾಯಿತು. ಸರಳವಾದ ಕಥೆಯ ಎಳೆಯನ್ನು ಒಂದು ಫ್ರೆಶ್ ಫಾರ್ಮೆಟ್ನಲ್ಲಿ ಪ್ರಸ್ತುತಪಡಿಸಲಾಗಿದೆ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದರೆ, “ಅಂಟೇ ಸುಂದರಾನಿಕಿ ತುಂಬಾ ಚೆನ್ನಾಗಿದೆ. ಸ್ಕ್ರೀನ್ ಪ್ಲೇಗಾಗಿ ಇದನ್ನು ನೋಡಿ ಮತ್ತು ತಾಜಾ ಬಿಜಿಎಂ ಮೂಲಕ ವಿವೇಕ್ ಸಾಗರ್ ಮತ್ತು ಉತ್ತಮ ನಿರ್ದೇಶನದ ಮೂಲಕ ವಿವೇಕ್ ಆತ್ರೆಯಾ ಸ್ಕೋರ್ ಮಾಡಿದ್ದಾರೆ. . . . ಸಿನಿಮಾ ಸ್ವಲ್ಪ ಉದ್ದವೇನಿಸಿತು ಮತ್ತು ಕ್ಲೈಮ್ಯಾಕ್ಸ್ ಒಪ್ಪುವಂತಿದೆ. . .” ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Hombale Films: ಮಲಯಾಳಂಗೂ ಹೊಂಬಾಳೆ ಫಿಲ್ಮ್ಸ್ ಗ್ಯಾಂಡ್ ಎಂಟ್ರಿ! ಟೈಸನ್ ಆಗಲಿದ್ದಾರೆ ಸೂಪರ್ ಸ್ಟಾರ್ ಪೃಥ್ವಿರಾಜ್
ಅಂಟೇ ಸುಂದರಾನಿಕಿ ಸಿನಿಮಾದ ಸಿನಿಮಾಟೋಗ್ರಫಿ ನಿಕೇತ್ ಬೊಮ್ಮಿರೆಡ್ಡಿ ಅವರದ್ದು. ಚಿತ್ರದ ಎಲ್ಲಾ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಅಂಟೆ ಸುಂದರಾನಿಕಿ ಪ್ರೊಮೋ ಸಾಂಗ್ ಜನರಿಗೆ ಹೆಚ್ಚು ಮೆಚ್ಚುಗೆಯಾಗಿದೆ. ಈ ಸಿನಿಮಾದ ತಮಿಳು ಆವೃತ್ತಿಗೆ ಅದಾಡೆ ಸುಂದರ ಎಂದು ಹೆಸರಿಟ್ಟಿದ್ದರೆ, ಮಲಯಾಳಂ ಆವೃತ್ತಿಗೆ ಆಹಾ ಸುಂದರ ಎಂಬ ಹೆಸರನ್ನು ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ