Twitter ಹೊಸ ಸಿಇಒ ಪರಾಗ್ ಅಗ್ರವಾಲ್ ಮತ್ತು ಬಾಲಿವುಡ್​ನ ಈ ಖ್ಯಾತ ಗಾಯಕಿ ಬಾಲ್ಯ ಸ್ನೇಹಿತರು!

Parag Agrawal: ಗಾಯಕಿ ಶ್ರೇಯಾ ಅವರು ಪರಾಗ್ ಟ್ವಿಟ್ಟರ್‌ನ ಹೊಸ ಸಿಇಒ ಆದ ನಂತರ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದರು. ಈ ಸಮಯದಲ್ಲಿ ನೆಟ್ಟಿಗರು ಇಬ್ಬರ ನಡುವಿನ ಹಳೆಯ ಟ್ವೀಟ್ ಗಳನ್ನು ಈಗ ಅಗೆದು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.

ಪರಾಗ್ ಅಗ್ರವಾಲ್

ಪರಾಗ್ ಅಗ್ರವಾಲ್

  • Share this:
    ಟ್ವಿಟ್ಟರ್‌ನ (Twitter) ಹೊಸ ಸಿಇಒ ಪರಾಗ್ ಅಗ್ರವಾಲ್ (Parag Agrawal) ಅವರ ಬಾಲ್ಯದ ಸ್ನೇಹಿತರು ಬಾಲಿವುಡ್‌ನಲ್ಲಿದ್ದಾರೆ ಎಂದರೆ ನೀವು ಯಾರಪ್ಪಾ ಅದು ಅಂತ ಒಂದು ಕ್ಷಣ ನೀವು ಆಲೋಚನೆಯಲ್ಲಿ ಮುಳಗಬಹುದು. ಬಾಲಿವುಡ್‌ನ (Bollywood) ಹೆಸರಾಂತ ಗಾಯಕಿ ಶ್ರೇಯಾ ಘೋಷಲ್ (Shreya Ghosha) ಪರಾಗ್ ಅಗ್ರವಾಲ್ ಇಬ್ಬರು ಬಾಲ್ಯದ ಸ್ನೇಹಿತರು ಎಂಬುದು ಇದೀಗ ಶ್ರೇಯಾ ಅವರೇ ಬಹಿರಂಗಪಡಿಸಿದ್ದಾರೆ.

    ಹೌದು.. ನೀವು ಕೇಳುತ್ತಿರುವುದು ನಿಜವಾದ ಮಾತು. ಗಾಯಕಿ ಶ್ರೇಯಾ ಅವರು ಪರಾಗ್ ಟ್ವಿಟ್ಟರ್‌ನ ಹೊಸ ಸಿಇಒ ಆದ ನಂತರ ಟ್ವಿಟ್ಟರ್ ಮೂಲಕ ಅಭಿನಂದನೆ ಸಲ್ಲಿಸಿದರು. ಈ ಸಮಯದಲ್ಲಿ ನೆಟ್ಟಿಗರು ಇಬ್ಬರ ನಡುವಿನ ಹಳೆಯ ಟ್ವೀಟ್ ಗಳನ್ನು ಈಗ ಅಗೆದು ತೆಗೆಯಲು ಪ್ರಯತ್ನಿಸುತ್ತಿದ್ದಾರೆ.

    ನವೆಂಬರ್ 29 ರಂದು, ಪರಾಗ್ ಅಗ್ರವಾಲ್ ಅವರನ್ನು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನ ಹೊಸ ಸಿಇಒ ಎಂದು ಘೋಷಿಸಲಾಯಿತು. ಪ್ರಕಟಣೆಯ ನಂತರ, ಹೊಸ ಸಿಇಒ ಟ್ವೀಟರ್‌ನಲ್ಲಿ "ಜ್ಯಾಕ್ ನಾಯಕತ್ವದಲ್ಲಿ ನಾವು ಸಾಧಿಸಿದ ಎಲ್ಲವನ್ನೂ ನಿರ್ಮಿಸಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಮುಂದಿನ ಅವಕಾಶಗಳಿಂದ ನಾನು ತುಂಬಾನೇ ಉತ್ಸುಕನಾಗಿದ್ದೇನೆ. ನನಗೆ ನೀಡಿದಂತಹ ಕೆಲಸವನ್ನು ಚೆನ್ನಾಗಿ ಮಾಡುವ ಮೂಲಕ ಸಾರ್ವಜನಿಕ ಸಂಭಾಷಣೆಯನ್ನು ಭವಿಷ್ಯತ್ತಿನಲ್ಲಿ ನಮ್ಮ ಗ್ರಾಹಕರು ಮತ್ತು ಷೇರುದಾರರಿಗೆ ಅದ್ಭುತ ಮೌಲ್ಯವನ್ನು ನಾವು ನೀಡುತ್ತೇವೆ" ಎಂದು ಬರೆದಿದ್ದಾರೆ.

    ಇದಕ್ಕೆ ಶ್ರೇಯಾ ಘೋಷಾಲ್ ಅವರ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ "ಅಭಿನಂದನೆಗಳು ಪರಾಗ್. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ! ನಮಗೆ ಇದು ತುಂಬಾ ಖುಷಿಯ ದಿನ ಇದನ್ನು ಆಚರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನು ಓದಿ: Viral Photo: ಕೇಕ್ ತಿನ್ನೋ ಬದ್ಲು ಇವಳನ್ನು ನೋಡೋದು ಹೆಚ್ಚು ಟೇಸ್ಟಿ ಅಂತೆ!

    ಪರಾಗ್ ಅವರು ಸಹ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಗಾಯಕಿ ಶ್ರೇಯಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶ್ರೇಯಾ ಮೊದಲ ಬಾರಿಗೆ 10 ವರ್ಷಗಳ ಹಿಂದೆ ಮೇ 2010 ರಲ್ಲಿ ಟ್ವಿಟರ್‌ನಲ್ಲಿ ಪರಾಗ್‌ರನ್ನು ಹುಡುಕಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದರು. ತಮ್ಮ ಸ್ನೇಹಿತನನ್ನು ತಿಂಡಿಪೋತ ಹಾಗೂ ಟ್ರಾವೆಲರ್ ಎಂದು ಕರೆದಿರುವ ಶ್ರೇಯಾ, ತಮ್ಮ ಬಾಲ್ಯ ಸ್ನೇಹಿತನನ್ನು ಕಿಚಾಯಿಸಿ ಟ್ವೀಟ್ ಮಾಡಿದ್ದಾರೆ.





    ಇದಕ್ಕೆ ಪರಾಗ್ “ನೀವು ತುಂಬಾನೇ ಪ್ರಭಾವಶಾಲಿಗಳು, ನಿಮ್ಮ ಅಭಿಮಾನಿಗಳಿಂದ ನನ್ನ ಟ್ವಿಟ್ಟರ್‌ ಸಂದೇಶಗಳಿಂದ ತುಂಬಿ ಹೋಗಿದೆ ಎಂದು ಪ್ರತಿಕ್ರಿಯಿಸಿದ್ದರು. ಶ್ರೇಯಾ ಮತ್ತು ಪರಾಗ್ ಕೂಡ ಪರಸ್ಪರ ಅಭಿನಂದಿಸುವ ಮತ್ತು ತಮ್ಮ ಪ್ರಯಾಣದ ಯೋಜನೆಗಳನ್ನು ಹಂಚಿಕೊಳ್ಳುವ ಟ್ವೀಟ್ ಗಳನ್ನು ವಿನಿಮಯ ಮಾಡಿಕೊಳ್ಳುತ್ತಲೇ ಇರುತ್ತಾರೆ.

    ಇದನ್ನು ಓದಿ: Jio Pepaid Plans: ಜಿಯೋ ಹೊಸ ಪ್ರಿಪೇಯ್ಡ್ ಪ್ಲಾನ್​ಗಳು ಇಂದಿನಿಂದ ಜಾರಿಗೆ: ನೂತನ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ

    ಆನಂದ್ ಎಲ್ ರೈ ಅವರ ಮುಂಬರುವ ಚಿತ್ರ ‘ಅತ್ರಂಗಿ ರೇ' ಚಿತ್ರದಲ್ಲಿ ಶ್ರೇಯಾ ಅವರ ಇತ್ತೀಚಿನ ಹಾಡು 'ಚಕಾ ಚಕ್' ಈಗಾಗಲೇ ಹೊರ ಬಂದಿದೆ. ಈ ಹಾಡನ್ನು ನಟಿ ಸಾರಾ ಅಲಿ ಖಾನ್ ಅವರ ಮೇಲೆ ಚಿತ್ರಿಸಲಾಗಿದೆ ಮತ್ತು ಈ ಹಾಡಿಗೆ ಎ.ಆರ್.ರೆಹಮಾನ್ ಅವರು ಸಂಗೀತವನ್ನು ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಮತ್ತು ಧನುಷ್ ಸಹ ನಟಿಸಿದ್ದಾರೆ.
    Published by:Harshith AS
    First published: