Hitler Kalyana: ‘ಹಿಟ್ಲರ್ ಕಲ್ಯಾಣ’ದಲ್ಲಿ ‘ಅಂತರಾ’ ಎಂಟ್ರಿ, ರೊಮ್ಯಾಂಟಿಕ್ ಮೂಡ್​ನಲ್ಲಿ ‘ಎಜೆ’, ಲೀಲಾಗೆ ಪ್ರೀತಿ ಪಾಠ

ಸದಾ ಅಂತರಾಳ ನೆನಪಿನಲ್ಲಿರೋ ಎಜೆ ಇಷ್ಟು ದಿನ ಬರೀ ಫೋಟೋ ನೋಡಿಕೊಂಡು ಪತ್ನಿ ಜೊತೆ ಮಾತಾಡ್ತಿದ್ರು. ಇದೀಗ ಅಂತರಾ ಎಜೆ ಕಲ್ಪನೆಯಲ್ಲೂ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ.

ಹಿಟ್ಲರ್ ಕಲ್ಯಾಣ ಸೀರಿಯಲ್

ಹಿಟ್ಲರ್ ಕಲ್ಯಾಣ ಸೀರಿಯಲ್

  • Share this:
ಜೀ ಕನ್ನಡ (Zee kannada) ವಾಹಿನಿಯಲ್ಲಿ ಪ್ರಸಾರವಾಗೋ ಹಿಟ್ಲರ್​ ಕಲ್ಯಾಣ (Hitler Kalyana) ಧಾರಾವಾಹಿ ಆರಂಭದಿಂದಲೂ ತುಂಬಾ ಇನ್​ಟ್ರೆಸ್ಟಿಂಗ್​ ಆಗಿಯೇ ಆಗಿದೆ. ಹೋಟೆಲ್​ ಉದ್ಯಮ (Hotel industry) ನಡೆಸ್ತಿರೋ ಎಜೆ ಅಲಿಯಾಸ್​ ಅಭಿರಾಮ್​ ಜಯಶಂಕರ್​ ತುಂಬಾ ಶಿಸ್ತಿನ ವ್ಯಕ್ತಿ, ಇನ್ನು ಎಜೆಗೆ ಜೋಡಿಯಾಗಿರೋ ಲೀಲಾ ಎಡವಟ್ಟು ರಾಣಿ ಅಂತಾನೇ ಧಾರಾವಾಹಿಯಲ್ಲಿ (Serial) ಫೇಮಸ್​ ಆಗಿದ್ದಾರೆ. ಎಜೆಯ ಶಿಸ್ತಿಗೆ ವಿರುದ್ಧವಾಗಿ ಕೆಲಸ ಮಾಡೋ ಲೀಲಾ. ಪ್ರತಿ ಬಾರಿಯೂ ಎಜೆ ಮುಂದೆ ತಪ್ಪಿತಸ್ಥಳೇ ಆಗಿರುತ್ತಾಳೆ. ಹೌದು ಹಲವು ಎಡವಟ್ಟುಗಳ ನಡುವೆ ಎಜೆ, ಲೀಲಾ ಮದುವೆಯಾಗಿದ್ದಾರೆ. ಮೂವರು ಸೊಸೆಯ ಅತ್ತೆಯಾಗಿ ಬಂದಿರೋ ಲೀಲಾ ಹಲವು ಸವಾಲು ಎದುರಿಸುತ್ತಿದ್ದಾಳೆ. ಅಡುಗೆಯೇ ಬರದ ಲೀಲಾಗೆ ಎಜೆ ಅಡುಗೆ ಪಾಠ ಹೇಳಿಕೊಡ್ತಿದ್ದಾನೆ. ಟ್ವಿಸ್ಟ್​ ಮೇಲೆ ಟ್ವಿಸ್​ ಎನ್ನುವಂತೆ ಇದೀಗ ಎಜೆ ಮೊದಲ ಪತ್ನಿ ಅಂತರಾ (Antara) ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ​.

ಲೀಲಾಗೆ ಎಜೆ ಅಡುಗೆ ಪಾಠ

ಅಭಿರಾಮ್​ ಜಯಶಂಕರ್​ ಅಲಿಯಾಸ್​ ಎಜೆ ಮೊದಲ ಪತ್ನಿ ಅಂತರಾ ಸಾವನ್ನಪ್ಪಿದ ಬಳಿಕ ಒಬ್ಬಂಟಿಯಾಗಿದ್ದ ಎಜೆಗೆ ಸೊಸೆಯಂದಿರೇ ಮದುವೆ ಮಾಡಿಕೊಳ್ಳಲು ಒಪ್ಪಿಸಿದ್ರು. ಅತ್ತೆ ಆಯ್ಕೆ ಮಾಡಲು ಹಲವು ಹುಡುಗಿಯರನ್ನು ಹುಡುಕಾಡಿದ್ರು. ಕೊನೆಗೇ ಸೊಸೆಯಂದಿರಿಗೆ ಇಷ್ಟವಿಲ್ಲದ ಎಡವಟ್ಟು ಲೀಲಾ ಎಜೆ ಕೈ ಹಿಡಿದಿದ್ದಾಳೆ. ಅತ್ತೆ ಕಂಡ್ರೆ ಕೆಂಡಕಾರೋ ಸೊಸೆಯಂದಿರು ಲೀಲಾಳನ್ನು ಮನೆಯಿಂದ ಹೊರಗೆ ಹಾಕೋಕೆ ಕುತಂತ್ರ ಮಾಡ್ತಿದ್ದಾರೆ. ಇದೀಗ ಮನೆ ಜವಾಬ್ದಾರಿ ಹೊತ್ತಿರೋ ಲೀಲಾಗಿ ಅಡುಗೆಯೇ ಬರಲ್ಲ ಅನ್ನೋ ವಿಷಯ ಎಜೆಗೆ ತಿಳಿದು ಹೋಗಿದೆ. ಅಡುಗೆ ಬರದ ಲೀಲಾಗೆ ಎಜೆಯೇ ಅಡುಗೆ ಪಾಠ ಹೇಳಿಕೊಡಲು ಹೊರಟಿದ್ದಾನೆ.

ಇದನ್ನೂ ಓದಿ: Kannada serial: ಕನ್ನಡ ಕಿರುತೆರೆಯಲ್ಲಿ ‘ಪುಟ್ಟಕ್ಕ’ನ ಖದರ್​, ‘ಮಂಗಳಗೌರಿ’ಗೆ ‘ಸತ್ಯ’ನ ಸವಾಲ್​

ಸೀರಿಯಲ್​ನಲ್ಲಿ ಅಂತರಾ ಎಂಟ್ರಿ

ಎಜೆ ಮೊದಲ ಪತ್ನಿ ಅಂತರಾ ಸಾವನ್ನಪ್ಪಿದ್ರು ಎಜೆ ಮನಸ್ಸಿಂದ ದೂರವಾಗಿಲ್ಲ, ಸದಾ ಅಂತರಾಳ ನೆನಪಿನಲ್ಲಿರೋ ಎಜೆ ಇಷ್ಟು ದಿನ ಬರೀ ಫೋಟೋ ನೋಡಿಕೊಂಡು ಪತ್ನಿ ಅಂತರಾಳ ಜೊತೆ ಮಾತಾಡ್ತಿದ್ರು. ಇದೀಗ ಅಂತರಾ ಎಜೆ ಕಲ್ಪನೆಯಲ್ಲೂ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ. ಕಿಚನ್​ನಲ್ಲಿ ಲೀಲಾಗೆ ಅಡುಗೆ ಹೇಳಿಕೊಡ್ತಿದ್ದ ವೇಳೆ ಲೀಲಾ ಹೇಳಿದ ಶ್ಲೋಕ ಅಂತರಾ ನೆನಪನ್ನು ಹೆಚ್ಚಿಸಿದೆ. ಲೀಲಾಳನ್ನೇ ಅಂತರಾ ಎಂದು ತಿಳಿದು ಅಡುಗೆ ಹೇಳಿಕೊಡ್ತಿದ್ದಾನೆ ಎಜೆ.

ರೊಮ್ಯಾಂಟಿಕ್​ ಮೂಡ್​ನಲ್ಲಿ ಎಜೆ

ಅಡುಗೆ ಮನೆಯಲ್ಲಿ ಪತ್ನಿ ಜೊತೆ ರೊಮ್ಯಾನಸ್​ ಮಾಡ್ತಿದ್ದಾರೆ ಎಜೆ. ಲೀಲಾಗೆ ಅಡುಗೆ ಹೇಳಿಕೊಡ್ತಿರೋ ಎಜೆಗೆ ಇದೀಗ ಅಂತರಾ ನೆನಪಾಗಿದ್ದು, ಮೊದಲನೇ ಹೆಂಡತಿಗೆ ಜೊತೆಗೆ ಕಳೆದ ಪ್ರೀತಿಯ ದಿನಗಳು ಕಾಡಲು ಶುರುಮಾಡಿದೆ. ಲೀಲಾಳನ್ನೇ ಅಂತರಾ ಎಂದು ಕಲ್ಪಿಸಿಕೊಂಡಿರೋ ಎಜೆ ಅಂತರಾ ಪ್ರೀತಿಯಲ್ಲಿ ಮುಳುಗಿ ಹೋಗಿದ್ದಾರೆ. ಇನ್ನು ಎಜೆ ವರ್ತನೆ ಲೀಲಾ ವಿಚಿತ್ರದಂತೆ ಕಾಣ್ತಿದೆ. ಎಜೆ ತುಂಟಾಟ ಕಂಡು ಗಾಬರಿಯಾಗಿರೋ ಲೀಲಾ, ಈ ಎಜೆಗೆ ಏನಾಯ್ತಪ್ಪಾ ಅಂತಿದ್ದಾರೆ.

ಇದನ್ನೂ ಓದಿ: Zee Kannada New Serial: ದಶಕದ ನಂತರ ತೆರೆಮೇಲೆ ರಾಮ್ ಕುಮಾರ್- ಶೃತಿ ಜೋಡಿ, ಕಿರುತೆರೆಯ ಹೊಸ ಸೀರಿಯಲ್​ನಲ್ಲಿ ಮಸ್ತ್ ಎಂಟ್ರಿ!

ಅಂತರಾ ಬಗ್ಗೆ ಪ್ರೇಕ್ಷಕರಲ್ಲಿ ನೂರಾರು ಪ್ರಶ್ನೆ

ಅಂತರಾಳನ್ನು ತುಂಬಾ ಇಷ್ಟಪಡುವ ಎಜೆ, ಲೀಲಾಳಿಂದ ಅಷ್ಟೇ ಅಂತರ ಕಾಪಾಡಿಕೊಂಡಿದ್ದಾರೆ. ಅಂತರಾ ಸ್ಥಾನಕ್ಕೆ ಯಾರನ್ನೂ ಕಲ್ಪನೆ ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ ಎಜೆ, ಹೀಗಾಗಿಯೇ ಲೀಲಾಳಿಂದ ಎಜೆ ದೂರವಿರೋದೋ. ಮದುವೆಯಾದ್ರೂ ಲೀಲಾ, ಎಜೆ ಮನಸ್ಸು ದೂರ.. ದೂರ.. ಅಂತರಾ ನೆನಪಿನಲ್ಲಿಯೇ ಬದುಕಲು ಎಜೆ ಇಷ್ಟ ಪಡ್ತಿದ್ದಾರೆ. ಈ ವಿಚಾರ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

ಯಾಕೆ ಎಜೆ ಅಂತರಾಳನ್ನು ಅಷ್ಟೋಂದು ಇಷ್ಟ ಪಡ್ತಾರೆ. ಅಂತರಾ, ಎಜೆ ಪ್ರೀತಿ ಸಂಬಂಧ ಹೇಗಿತ್ತು. ಅಂತರಾ ಹೇಗೆ, ಯಾಕೆ ಸಾವನ್ನಪ್ಪಿದ್ದಾಳೆ ಅನ್ನೋ ಪ್ರಶ್ನೆ ಪ್ರೇಕ್ಷಕರದ್ದು, ಇದೀಗ ಸೀರಿಯಲ್​ನಲ್ಲಿ ಅಂತರಾ ಕಾಲ್ಪನಿಕ ಎಂಟ್ರಿ ನೋಡುಗರಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಂತರ ವಿಚಾರಗಳು ಒಂದೊಂದೆ ಹೊರಗೆ ಬರಲಿದ್ದು, ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೂ ಶೀಘ್ರವೇ ಉತ್ತರ ಸಿಗಲಿದೆ.
Published by:Pavana HS
First published: