Twinkle and Akshay: ಅಕ್ಷಯ್ ಅವರನ್ನು ಮದುವೆಯಾಗುವ ಮೊದಲು ಒಂದು ಲಿಸ್ಟ್ ರೆಡಿ ಮಾಡಿದ್ರಂತೆ ಟ್ವಿಂಕಲ್! ಏನದು?

ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿರುವ ನಟಿ ಟ್ವಿಂಕಲ್ ಖನ್ನಾ ಅವರು ಅಕ್ಷಯ್ ಅವರನ್ನು ಮದುವೆಯಾಗುವ ಮೊದಲು 'ಜೆನೆಟಿಕ್ ಲಿಸ್ಟ್' ಅನ್ನು ಹೇಗೆ ತಯಾರಿಸಿದರು ಎಂಬುದನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ

  • Share this:
ಎಷ್ಟೋ ಜನರು ಹುಡುಗಿ (Boy) ಅಥವಾ ಹುಡುಗ (Girl) ಇಷ್ಟವಾದರೆ 'ಯಾವಾಗಪ್ಪಾ ಮದುವೆ ಆಗುತ್ತೆ' ಅಂತ ತುದಿಗಾಲ ಮೇಲೆ ನಿಂತಿರುತ್ತಾರೆ. ಆದರೆ ಕೆಲವರು ಅದರಲ್ಲೂ ಹುಡುಗಿಯರು ಒಬ್ಬ ಹುಡುಗನನ್ನು ಇಷ್ಟಪಟ್ಟ (Like) ನಂತರ ಅವನಲ್ಲಿ ಏನೆಲ್ಲಾ ಗುಣಗಳಿವೆ (quality) ಅಂತ ತಿಳಿದುಕೊಳ್ಳಲು ಕಾತುರರಾಗಿರುತ್ತಾರೆ ಮತ್ತು ಅವರು ಸರಿಯಾದ ಸಂಗಾತಿಯನ್ನೇ ಹುಡುಕಿಕೊಂಡಿದ್ದಾರೆಯೇ ಅಂತ ಖಾತ್ರಿ ಮಾಡಿಕೊಂಡು ಮದುವೆಯಾಗುತ್ತಾರೆ (Marriage). ಆದರೆ ಇಲ್ಲೊಬ್ಬ ನಟಿ (Actress) ಮದುವೆಯಾಗಬೇಕಾದ ನಟನ (Actor) ಕುಟುಂಬದಲ್ಲಿ (Family) ಯಾವೆಲ್ಲಾ ರೋಗಗಳು ಇವೆಯಂತ ತಿಳಿದುಕೊಂಡು ಲಿಸ್ಟ್ ಅನ್ನೆ ತಯಾರಿಸಿದ್ರಂತೆ ನೋಡಿ. ಆ ನಟಿ ಬೇರೆ ಯಾರು ಅಲ್ಲ ಟ್ವಿಂಕಲ್ ಖನ್ನಾ (Twinkle Khanna)

ಟ್ವಿಂಕಲ್ ಅವರ ಲಿಸ್ಟ್ ನಲ್ಲಿ ಏನೇನಿತ್ತು?
ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರನ್ನು ಮದುವೆಯಾಗಿರುವ ನಟಿ ಮತ್ತು ಬರಹಗಾರ್ತಿ ಟ್ವಿಂಕಲ್ ಖನ್ನಾ ಅವರು ಅಕ್ಷಯ್ ಅವರನ್ನು ಮದುವೆಯಾಗುವ ಮೊದಲು 'ಜೆನೆಟಿಕ್ ಲಿಸ್ಟ್' ಅನ್ನು ಹೇಗೆ ತಯಾರಿಸಿದರು ಎಂಬುದನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಟ್ವಿಂಕಲ್ ಅವರ 'ಮಿಸೆಸ್ ಫನ್ನಿಬೋನ್ಸ್' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ, ಅಕ್ಷಯ್ ಅವರ ಕುಟುಂಬ ಮತ್ತು ಅವರ ರೋಗದ ಇತಿಹಾಸದ ಬಗ್ಗೆ ಅವರು ಪರಿಶೀಲಿಸಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.

ಲಿಸ್ಟ್ ಬಗ್ಗೆ ನಟಿ ಏನು ಹೇಳಿದ್ದಾರೆ ನೋಡಿ
ಈ ಪಟ್ಟಿಯನ್ನು 'ಪ್ರಾಯೋಗಿಕ' ಎಂದು ಕರೆದ ಟ್ವಿಂಕಲ್ "ಮೇಲ್ನೋಟಕ್ಕೆ ಇದು ಕೆಲವೇ ಜನರಿಗೆ ತಿಳಿದಿರುವ ವಿಷಯವಾಗಿದೆ, ಆದರೆ ಇದು ಸಾಮಾನ್ಯ ಜ್ಞಾನ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನಾನು ಅವರ ಕುಟುಂಬದಲ್ಲಿ ಯಾವ ರೋಗಗಳು ಇವೆ ಎಂಬಂತಹ ಆನುವಂಶಿಕ ಪಟ್ಟಿಯನ್ನು ತಯಾರಿಸಿದೆ. ನಾನು ಅದನ್ನು ಬಚ್ಚಿಟ್ಟಿದ್ದೆ ಮತ್ತು ಒಂದು ದಿನ ಅವರು ಅದನ್ನು ಕಂಡುಕೊಂಡರು" ಎಂದು ಹೇಳಿದರು.

ಇದನ್ನೂ ಓದಿ: Gurmeet and Debina: 2ನೇ ಮಗುವಿನ ನಿರೀಕ್ಷೆಯಲ್ಲಿ ಗುರ್ಮೀತ್ ಚೌಧರಿ, ಡೆಬಿನಾ ಬೊನ್ನರ್ಜಿ ದಂಪತಿ

ಇದಕ್ಕೂ ಮುನ್ನ ಸಹ ‘ಕಾಫಿ ವಿತ್ ಕರಣ್’ ಶೋ ನ ಸಂಚಿಕೆಯೊಂದರಲ್ಲಿ ಟ್ವಿಂಕಲ್ 'ಜೆನೆಟಿಕ್ ಲಿಸ್ಟ್' ಬಗ್ಗೆ ಮಾತನಾಡಿದ್ದರು. ಅವರು "ಅಕ್ಷಯ್ ಅವರ ಕುಟುಂಬದಲ್ಲಿರುವ ರೋಗಗಳ" ಬಗ್ಗೆ ಒಂದು ಚಾರ್ಟ್ ಅನ್ನು ಮಾಡಿದ್ದರು ಎಂದು ಅವರು ಬಹಿರಂಗಪಡಿಸಿದ್ದರು.

ಮದುವೆಯ ಬಗ್ಗೆಯೂ ಒಂದು ಚಾರ್ಟ್
ಇಷ್ಟೇ ಅಲ್ಲದೆ ಅವರು ಮತ್ತೊಂದು ಚಾರ್ಟ್ ಅನ್ನು ಸಹ ತಯಾರಿಸಿದ್ದರು ಅಂತಾನೂ ಹೇಳಿಕೊಂಡಿದ್ದಾರೆ. ನಟಿ ಟ್ವಿಂಕಲ್ ಅವರು "ಅಕ್ಷಯ್ ಅವರನ್ನು ಮದುವೆಯಾಗುವುದರ ಸಾಧಕ ಬಾಧಕಗಳ ಬಗ್ಗೆಯೂ ಒಂದು ಚಾರ್ಟ್ ಮಾಡಿದ್ದರಂತೆ. ಅದರಲ್ಲಿ ಅವರನ್ನು ಮದುವೆಯಾಗುವುದರಿಂದ ನನಗೆ ಆಗುವ ಅನುಕೂಲಗಳು ಮತ್ತು ಎಲ್ಲಾ ಅನಾನುಕೂಲಗಳು ಇದ್ದವು" ಎಂದು ಹೇಳಿದರು.

ಇದನ್ನೂ ಓದಿ:  Love 360 ಚಿತ್ರದ ರೀಮೇಕ್ ರೈಟ್ಸ್​​ಗೆ ಭರ್ಜರಿ ಡಿಮ್ಯಾಂಡ್​! ಮತ್ತೆ ಪ್ರೇಮ ಕಥೆ ಕೊಟ್ಟು ಗೆದ್ದ ಶಶಾಂಕ್​

ಇದನ್ನು ಕೇಳಿಸಿಕೊಂಡ ಕರಣ್ ಜೋಹರ್ ಅವರು ಅನಾನುಕೂಲಗಳು ಯಾವುವು ಇದ್ದವು? ಅಂತ ಟ್ವಿಂಕಲ್ ಗೆ ಕೇಳಿಯೇ ಬಿಟ್ಟರು. ಆಗ ಟ್ವಿಂಕಲ್ ಅವರು ಉತ್ತರಿಸಿ "ಅನಾನುಕೂಲತೆಗಳು ಎರಡು ಇದ್ದವು, ಅವು ಇವತ್ತಿಗೂ ಹಾಗೆಯೇ ಇವೆ ಮತ್ತು ಎಂಟು ಅನುಕೂಲಗಳು ಇನ್ನೂ ಹಾಗೆಯೇ ಉಳಿದಿವೆ. ಆದ್ದರಿಂದ ನಾನು ಏನನ್ನು ಪಡೆಯುತ್ತಿದ್ದೇನೆಂದು ನನಗೆ ಇನ್ನೂ ತಿಳಿದಿಲ್ಲ" ಎಂದು ಹೇಳಿದರು. ಟ್ವಿಂಕಲ್ ಮತ್ತು ಅಕ್ಷಯ್ ಇಬ್ಬರು ಮದುವೆಯಾಗಿ 20 ವರ್ಷಗಳ ಮೇಲೆ ಆಯ್ತು ಮತ್ತು ಇಬ್ಬರು ಸಂತೋಷವಾಗಿದ್ದಾರೆ.
Published by:Ashwini Prabhu
First published: