ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿಯರ (Actress) ಸಾಲಿನಲ್ಲಿ ನಟ ಅಕ್ಷಯ್ ಕುಮಾರ್ (Akshay Kumar) ಅವರ ಹೆಂಡತಿ ಮತ್ತು ನಟಿ ಟ್ವಿಂಕಲ್ ಖನ್ನಾ (Twinkle Khanna) ಅವರ ಹೆಸರು ಸಹ ಬರುತ್ತದೆ. ಮಕ್ಕಳ ಪೋಷಣೆಯಿಂದ ಹಿಡಿದು ತಮ್ಮ ವೈವಾಹಿಕ ಜೀವನ, ಗಂಡ ಅಕ್ಷಯ್ ಅವರೊಂದಿಗಿನ ಪ್ರೀತಿ, ತಮ್ಮ ಪುಸ್ತಕಗಳನ್ನು ಬರೆಯುವ ಹವ್ಯಾಸದವರೆಗೆ ಎಲ್ಲಾ ವಿಚಾರಗಳನ್ನು ಸದಾ ತಮ್ಮ ಅಭಿಮಾನಿಗಳೊಂದಿಗೆ ಮತ್ತು ಫಾಲೋವರ್ (Followers) ಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ ಈ ನಟಿ.
ನಟಿ ಈಗ ಮತ್ತೆ ಹೊಸದಾಗಿ ಸುದ್ದಿಯಲ್ಲಿದ್ದು ಈ ಬಾರಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಕ್ಕಳ ಪೋಷಣೆಯ ಬಗ್ಗೆ ಮಾತನಾಡುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಅವರು ತಮ್ಮ ಮಗಳು ನಿತಾರಾಗೆ ಚುಂಬಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಮಕ್ಕಳಿಗೆ 'ಪರಿಪೂರ್ಣ ಬಾಲ್ಯ' ವನ್ನು ಒದಗಿಸಲು ಪೋಷಕರು ಹೇಗೆ ಜವಾಬ್ದಾರರಲ್ಲ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಬದಲಿಗೆ, ಪೋಷಕರು ಮಕ್ಕಳು ತಮ್ಮ ಸ್ವಂತವಾದ ಆಲೋಚನೆಗಳೊಂದಿಗೆ ಬರಲು ಸಹಾಯ ಮಾಡಬೇಕು. ಅವರ ದೌರ್ಬಲ್ಯವನ್ನು ಒತ್ತಿ ಹೇಳಬಾರದು ಎಂದು ಅವರು ಹೇಳಿದ್ದಾರೆ.
ಮಕ್ಕಳ ಬಾಲ್ಯದ ಬಗ್ಗೆ ನಟಿ ಟ್ವಿಂಕಲ್ ಹೇಳಿದ್ದೇನು?
ಟ್ವಿಂಕಲ್ ತಮ್ಮ ಪೋಸ್ಟ್ ನಲ್ಲಿ "ನಮ್ಮ ಕೆಲಸವು ನಮ್ಮ ಮಕ್ಕಳಿಗೆ ಪರಿಪೂರ್ಣ ಬಾಲ್ಯವನ್ನು ನೀಡುವುದಲ್ಲ. ಅದು ಅವರ ತಲೆಗಳನ್ನು ಒಳ್ಳೆಯ ವಿಚಾರಗಳಿಂದ ತುಂಬುವುದು, ಅವರ ಸಾಮರ್ಥ್ಯಗಳನ್ನು ಗೌರವಿಸುವುದು ಮತ್ತು ಅವರಿಗೆ ಅರಿವು ಮೂಡಿಸುವುದಾಗಿದೆ. ಅವರ ದೌರ್ಬಲ್ಯಗಳನ್ನು ಎಂದಿಗೂ ಒತ್ತಿ ಹೇಳಬಾರದು ಎಂದಿದ್ದಾರೆ.
ನಾವು ನಮ್ಮ ಮಕ್ಕಳಿಗೆ ತಾಯಂದಿರಾಗಿರುವುದರ ಜೊತೆಗೆ ಅವರ ಸ್ನೇಹಿತರಾಗಿರಲೂ ಪ್ರಯತ್ನಿಸಬೇಕು. ಪ್ರತಿದಿನವು ನಾವು ಅವರಿಗೆ ಅವರ ಸಾಮರ್ಥ್ಯಗಳ ಬಗ್ಗೆ ಅರಿವು ಮೂಡಿಸುತ್ತಿರಬೇಕು ಎಂದು ಹೇಳುತ್ತ ಅವರು ತಮ್ಮ ಪೋಸ್ಟ್ ಅನ್ನು ಕೊನೆಗೊಳಿಸಿದ್ದಾರೆ.
ಟ್ವಿಂಕಲ್ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಬಾಲಿವುಡ್ ನ ಇತರೆ ನಟಿಯರು
ಅಷ್ಟೇ ಅಲ್ಲದೆ ತಮ್ಮ ಅಭಿಪ್ರಾಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಇತರರನ್ನು ಸಹ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿಯರಾದ ಮಲೈಕಾ ಅರೋರಾ, ಅಮೃತಾ ಅರೋರಾ ಮತ್ತು ಡಿಸೈನರ್ ಫರಾಹ್ ಖಾನ್ ಅಲಿ ಕಾಮೆಂಟ್ ವಿಭಾಗದಲ್ಲಿ ಅವರಿಗಾಗಿ ಹೃದಯದ ಎಮೋಜಿಗಳನ್ನು ಹಾಕಿದರು. ನಮ್ರತಾ ಶಿರೋಡ್ಕರ್ ಲಲಪ್ರತಿಕ್ರಿಯಿಸಿ "ಟೀನಾ ಚೆನ್ನಾಗಿ ಹೇಳಿದ್ದಾಳೆ" ಎಂದು ಹೇಳಿದರು.
ಮೇಲಾ, ಬಾದ್ ಷಾ, ಜಾನ್ ಮತ್ತು ಇಂಟರ್ನ್ಯಾಷನಲ್ ಖಿಲಾಡಿಯಂತಹ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಟ್ವಿಂಕಲ್ 2001 ರಲ್ಲಿ ನಟನೆಗೆ ಗುಡ್ ಬೈ ಹೇಳಿ ಅಕ್ಷಯ್ ಕುಮಾರ್ ಅವರನ್ನು ಮದುವೆಯಾದರು.
ಇವರಿಗೆ 2002 ರಲ್ಲಿ ತಮ್ಮ ಮೊದಲ ಮಗ ಹುಟ್ಟಿದ್ದು, 2012 ರಲ್ಲಿ ಒಬ್ಬ ಮಗಳು ಸಹ ಹುಟ್ಟಿದಳು.
2015 ರಲ್ಲಿ ಬರವಣಿಗೆಯನ್ನು ಆಯ್ಕೆ ಮಾಡಿಕೊಂಡ ಟ್ವಿಂಕಲ್
2015 ರಲ್ಲಿ ತಮ್ಮ ಮೊದಲ ಪುಸ್ತಕ ಮಿಸೆಸ್ ಫನ್ನಿಬೋನ್ಸ್ ನೊಂದಿಗೆ ಬರವಣಿಗೆಗೆ ಮುಂದಾದರು, ತಮ್ಮ ಪುಸ್ತಕಕ್ಕಾಗಿ ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಟ್ವಿಂಕಲ್ ಪಡೆದರು.
ನಂತರ ಅವರು 2017 ರಲ್ಲಿ ‘ದಿ ಲೆಜೆಂಡ್ ಆಫ್ ಲಕ್ಷ್ಮಿ ಪ್ರಸಾದ್’ ಎಂಬ ಮತ್ತೊಂದು ಪುಸ್ತಕವನ್ನು ಬರೆದರು ಮತ್ತು ನಂತರದ ವರ್ಷದಲ್ಲಿ ‘ಪೈಜಾಮಾಸ್ ಆರ್ ಫಾರ್ಗಿವಿಂಗ್’ ಎಂಬ ಶೀರ್ಷಿಕೆಯ ಮತ್ತೊಂದು ಪುಸ್ತಕವನ್ನು ಸಹ ಬರೆದರು.
ಅವರು ತಮ್ಮದೇ ಆದ ವೆಬ್ಸೈಟ್ ‘ಟ್ವೀಕ್ ಇಂಡಿಯಾ’ ವನ್ನು ಸಹ ಪ್ರಾರಂಭಿಸಿದರು. ಅಲ್ಲಿ ಅವರು ಹಲವಾರು ವಿಷಯಗಳನ್ನು ಚರ್ಚಿಸುತ್ತಾರೆ. ಬಾಲಿವುಡ್ ವ್ಯಕ್ತಿಗಳನ್ನು ಚರ್ಚೆಗೆ ಆಹ್ವಾನಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ