ಅಕ್ಷಯ್‌ ಕುಮಾರ್‌ ರೆಡಿಯಾಗಲು 11 ಜನ ಸಹಾಯ ಮಾಡುತ್ತಾರೆ; ಪತಿಯ ಗುಟ್ಟು ರಟ್ಟು ಮಾಡಿದ ಟ್ವಿಂಕಲ್ ಖನ್ನಾ

ಅಕ್ಷಯ ಕುಮಾರ್ ಹೇಗೆ ತಮಗೆ ಸ್ಟೈಲಿಶ್ ಲುಕ್ ಅನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ತಮ್ಮ ಹೆಂಡತಿ ಟ್ವಿಂಕಲ್ ಖನ್ನಾ ಟಿಪ್ಸ್ ನೀಡಿದ್ದಾರೆ ಮತ್ತು ಅಕ್ಷಯ್ ತಮ್ಮ ಫ್ಯಾಶನ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅಕ್ಷಯ್ ಬಳಿ ಬರೋಬ್ಬರಿ 350 ಜೋಡಿ ಶೂಗಳಿದ್ದು, ಒಂದು ಕೊಠಡಿಯನ್ನೇ ಅವರ ಬಟ್ಟೆ ಮತ್ತು ಶೂಗಳಿಗಾಗಿ ಮೀಸಲಿಟ್ಟಿದ್ದಾರೆ

ಅಕ್ಷಯ ಕುಮಾರ್-ಟ್ವಿಂಕಲ್ ಖನ್ನಾ

ಅಕ್ಷಯ ಕುಮಾರ್-ಟ್ವಿಂಕಲ್ ಖನ್ನಾ

  • Share this:
ಬಾಲಿವುಡ್‌ನಲ್ಲಿ ಅನೇಕ ಸ್ಟಾರ್ ದಂಪತಿಗಳಿದ್ದಾರೆ. ಆದರೆ ತುಂಬಾ ಸ್ಟೈಲಿಶ್ ದಂಪತಿ ಎಂದರೆ ಅದು ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಎಂದರೆ ತಪ್ಪಾಗಲಾರದು. ಏಕೆಂದರೆ ಅವರಿಬ್ಬರು ಎಲ್ಲೇ ಹೋದರೂ ತುಂಬಾ ಸ್ಟೈಲಿಶ್ ಆಗಿ ಕಾಣುವುದುಂಟು.ಇದರ ಹಿಂದಿನ ಗುಟ್ಟಾದರೂ ಏನು ಎಂದು ತಿಳಿದುಕೊಳ್ಳಲು ಇವರ ಅಭಿಮಾನಿಗಳು ತುಂಬಾನೇ ಕುತೂಹಲದಿಂದ ಕಾಯುತ್ತಿರುತ್ತಾರೆ. ಅಕ್ಷಯ್‌ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಇಬ್ಬರು ತಮ್ಮ ಸ್ಟೈಲಿಶ್ ಲುಕ್ ಹಿಂದೆ ಇರುವಂತಹ ಗುಟ್ಟನ್ನು ಕೆಲವು ವರ್ಷಗಳ ಹಿಂದೆ ನಡೆದ ಫ್ಯಾಶನ್ ಅವಾರ್ಡ್ ಸಮಾರಂಭದಲ್ಲಿ ಬಿಚ್ಚಿಟ್ಟಿದ್ದರು. ಅಕ್ಷಯ್‌ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಇಬ್ಬರೂ 2018 ರ ಮೋಸ್ಟ್ ಸ್ಟೈಲಿಶ್ ಅವಾರ್ಡ್ಸ್ ಸಮಾರಂಭದಲ್ಲಿ ಅಕ್ಷಯ್​ಗೆ ಮೇಲ್ ಟ್ರೆಂಡ್ ಸೆಟ್ಟರ್ ಅವಾರ್ಡ್ ಬಂದಿತ್ತು. ಆಗ ದಂಪತಿ ಇಬ್ಬರೂ ತಮ್ಮ ಸ್ಟೈಲ್ ಮತ್ತು ಫ್ಯಾಶನ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದರು.


ಅಕ್ಷಯ ಕುಮಾರ್ ಹೇಗೆ ತಮಗೆ ಸ್ಟೈಲಿಶ್ ಲುಕ್ ಅನ್ನು ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ತಮ್ಮ ಹೆಂಡತಿ ಟ್ವಿಂಕಲ್ ಖನ್ನಾ ಟಿಪ್ಸ್ ನೀಡಿದ್ದಾರೆ ಮತ್ತು ಅಕ್ಷಯ್ ತಮ್ಮ ಫ್ಯಾಶನ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅಕ್ಷಯ್ ಬಳಿ ಬರೋಬ್ಬರಿ 350 ಜೋಡಿ ಶೂಗಳಿದ್ದು, ಒಂದು ಕೊಠಡಿಯನ್ನೇ ಅವರ ಬಟ್ಟೆ ಮತ್ತು ಶೂಗಳಿಗಾಗಿ ಮೀಸಲಿಟ್ಟಿದ್ದಾರೆ ಮತ್ತು ಅಕ್ಷಯ್ ಎಲ್ಲಾದರೂ ಹೊರಗೆ ಹೋಗಬೇಕಾದರೆ ಅವರನ್ನು ಸ್ಟೈಲಿಶ್ ಆಗಿ ತಯಾರು ಮಾಡಲೆಂದೇ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 11 ಜನರು ಇದ್ದಾರೆ ಎಂದು ಟ್ವಿಂಕಲ್ ಹೇಳಿದ್ದಾರೆ.
ಅಕ್ಷಯ್ ಬಳಿ ಪ್ಯಾಂಟ್ ಗಳಿಗಿಂತಲೂ ಹೆಚ್ಚಾಗಿ ಶೂಗಳಿವೆ ಮತ್ತು ಹಳದಿ, ಹಸಿರು, ನೀಲಿ, ಗುಲಾಬಿ ಬಣ್ಣದ ಪ್ಯಾಂಟ್​​​​ಗಳಿವೆ ಎಂದು ಸಹ ಟ್ವಿಂಕಲ್ ಹೇಳಿದ್ದಾರೆ. ಇದನ್ನು ಹೇಳಿದಾಗ ಅಕ್ಷಯ್ ತಮ್ಮ ಪತ್ನಿಗೆ "ನೀನೇ ಇದನ್ನೆಲ್ಲಾ ಕೊಂಡುಕೊಳ್ಳಲು ಹೇಳಿಲ್ಲವೇ" ಎಂದು ಹೇಳಿದಾಗ ಟ್ವಿಂಕಲ್ ನಗುತ್ತಾ, ಆದರೆ ನೀವು ಕಾಮನಬಿಲ್ಲಿನಲ್ಲಿರುವ ಎಲ್ಲಾ ಬಣ್ಣದ ಪ್ಯಾಂಟ್​​ಗಳನ್ನು ತೆಗೆದುಕೊಂಡಿದ್ದೀರಿ ಎಂದು ತಿರುಗೇಟು ನೀಡಿದರು. ಅಕ್ಷಯ್ ಸಹ ತಮ್ಮ ಪತ್ನಿ ಟ್ವಿಂಕಲ್ ಹೇಗೆ ತಮ್ಮ ಶಾರ್ಟ್ ಪ್ಯಾಂಟ್​ಗಳನ್ನೂ ಕತ್ತರಿಸಿಕೊಂಡು ಮನೆಯಲ್ಲಿ ಹಾಕಿಕೊಳ್ಳುತ್ತಾರೆ ಮತ್ತು ಆಕೆಗೆ ಅವು ತುಂಬಾ ಆರಾಮದಾಯಕ ಉಡುಗೆ ಎಂದು ಕಾಲೆಳೆದಿದ್ದಾರೆ.


ಅಕ್ಷಯ್ ಎಲ್ಲಾದರೂ ಹೊರಗಡೆ ಹೋಗಬೇಕಾದರೆ ತಮಗಿಂತಲೂ ಬೇಗನೆ ತಯಾರಾಗುತ್ತಾರೆ. ಏಕೆಂದರೆ ಅವರ ಬಳಿ ಅವರನ್ನು ತಯಾರು ಮಾಡಲು 11 ಜನರು ಸಹಾಯಕ್ಕೆ ಇದ್ದಾರೆ, ನನ್ನ ಹತ್ತಿರ ಯಾರು ಇಲ್ಲ, ಹಾಗಾಗಿ ನನಗೆ ತಯಾರಾಗಲು ತಡವಾಗುತ್ತದೆ ಎಂದು ಟ್ವಿಂಕಲ್ ಹೇಳಿದ್ದಾರೆ.


ಅಕ್ಷಯ್ ಮತ್ತು ಟ್ವಿಂಕಲ್ ಇಬ್ಬರು ಮದುವೆಯಾಗಿ ಜನೇವರಿ 17,2021ಕ್ಕೆ 20 ವರ್ಷವಾಗಿದ್ದು, 20ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಇವರಿಗೆ 18 ವರ್ಷದ ಮಗನಿದ್ದು ಆತನ ಹೆಸರು ಆರವ್ ಮತ್ತು 8 ವರ್ಷದ ಮಗಳಿದ್ದು ಆಕೆಯ ಹೆಸರು ನಿತಾರ.

First published: