ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ (Twinkle Khanna) ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಅಂತ ಹೇಳಬಹುದು. ಇತ್ತೀಚೆಗೆ ಮಗಳು ನಿತಾರಾ ಅವರೊಂದಿಗೆ ಆಟೋ ರಿಕ್ಷಾ ಸವಾರಿ ಮಾಡಿದ್ದರಿಂದ ಸುದ್ದಿಯಾಗಿದ್ದರು. ಶನಿವಾರ ಅವರು ತಮ್ಮ ಆಟೋ (Auto) ಸವಾರಿಯ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡರು. ಟ್ವಿಂಕಲ್ ಮತ್ತು ಮಗಳು ನಿತಾರಾ ಜೊತೆ ಮುಂಬೈನ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದರು. ಈ ಸಂದರ್ಭದಲ್ಲಿ ಅವರು ಪ್ರಿಂಟೆಡ್ ಡ್ರೆಸ್ ಜೊತೆಗೆ ಕಂದು ಬಣ್ಣದ ಸನ್ ಗ್ಲಾಸ್ ಅನ್ನು ಧರಿಸಿದ್ದರು.
ತಮ್ಮ ಮಗಳೊಂದಿಗೆ ಆಟೋ ಸವಾರಿಯನ್ನ ಎಂಜಾಯ್ ಮಾಡಿದ ಟ್ವಿಂಕಲ್
ಮುಂಬೈನಲ್ಲಿ ಆಟೋ ಸವಾರಿಯ ಬಗ್ಗೆ ಹಂಚಿಕೊಂಡ ಕ್ಲಿಪ್ ಜೊತೆಗೆ, ಟ್ವಿಂಕಲ್ ಅವರು ಕಿಶೋರ್ ಕುಮಾರ್ ಅವರ ‘ಬಾಬು ಸಂಜೋ ಇಶಾರೆ’ ಎಂದು ಸೇರಿಸಿದ್ದಾರೆ. ಆಟೋ ರಿಕ್ಷಾಗಳ ಬಗ್ಗೆ ತನ್ನ ಆಸಕ್ತಿಯನ್ನು ವಿವರಿಸಿದ ಟ್ವಿಂಕಲ್ ದೀರ್ಘ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ."ನನ್ನ ಮೊದಲ ಪುಸ್ತಕದ ಕವರ್ ಮೇಲೆ ರಿಕ್ಷಾದ ಚಿತ್ರ ಏಕಿತ್ತು ಎಂದು ಈಗ ನಿಮಗೆ ತಿಳಿದಿದೆಯೇ" ಎಂದು ಬರೆದಿದ್ದಾರೆ.
ನಂತರ ಅವರು ಹಿಂದೊಮ್ಮೆ ಆಟೋ ಹತ್ತಿ ಆ ಚಾಲಕನೊಂದಿಗೆ ಮಾತನಾಡಿದ್ದರ ಬಗ್ಗೆ ನೆನಪಿಸಿಕೊಳ್ಳುತ್ತಾ ಬರೆದರು, "ಹದಿಹರೆಯದಲ್ಲಿ ನನ್ನ ಸ್ನೇಹಿತರು ನನ್ನನ್ನು 'ರಿಕ್ಷಾ ರಾಣಿ' ಎಂದು ಕರೆಯುತ್ತಿದ್ದರು ಮತ್ತು ನಮ್ಮ ಕೆಲವು ಹಳೆಯ ಅಭ್ಯಾಸಗಳು ತುಂಬಾನೇ ನಮ್ಮನ್ನು ಅವರಿಸಿಕೊಂಡಿರುತ್ತವೆ ಎಂದು ನಾನು ಊಹಿಸುತ್ತೇನೆ.
ಹಿಂದೊಮ್ಮೆ ಆಟೋ ಸವಾರಿ ಮಾಡಿದ ನೆನಪನ್ನು ಮೆಲುಕು ಹಾಕಿದ ನಟಿ..
ಭಾಯಿಸಾಬ್ ಅಂತ ಹೇಳಿ ಒಂದು ಆಟೋ ಸವಾರಿಯನ್ನು ನಾನು ಶುರು ಮಾಡಿದೆ. ಹಾಗೆ ಆ ಚಾಲಕನೊಂದಿಗೆ ಮಾತಾಡಲು ಶುರು ಮಾಡಿ, ನೀವು ಈ ಆಟೋವನ್ನು ಎಷ್ಟು ವರ್ಷಗಳಿಂದ ಓಡಿಸುತ್ತಿದ್ದೀರಿ" ಅಂತ ಕೇಳಿದೆ.
ಅದಕ್ಕೆ ಅವರು "ನಾನು ಕಸೂತಿ ಕೆಲಸ ಮಾಡುವ ಮೊದಲು, ಎಂದರೆ ಈಗ ಒಂದು ವರ್ಷ ಆಯ್ತು ಮೇಡಂ. ನಾನು ಇಷ್ಟಪಟ್ಟು ಈ ಕೆಲಸಕ್ಕೆ ಬಂದಿಲ್ಲ, ಆದರೆ ಒಳ್ಳೆಯ ಹಣ ಇದೆ ಮೇಡಂ.
ಏಳು ಚಿನ್ನದ ಬಿಸ್ಕತ್ತುಗಳನ್ನು ಗಳಿಸಿದ್ದೇನೆ, ಈಗ ಮಗಳ ಮದುವೆಯಲ್ಲಿ ಎಲ್ಲವೂ ಖರ್ಚಾಗಿದೆ. ಆದರೆ, ನನ್ನ ಮನೆಯಲ್ಲಿ ಇನ್ನೂ ಒಂದು ಚಿನ್ನದ ಬಿಸ್ಕತ್ತು ಉಳಿದಿದೆ” ಎಂದು ಆಟೋ ಡ್ರೈವರ್ ಹೇಳಿದರು.
ಕೊನೆಗೆ ರಿಕ್ಷಾದಿಂದ ಇಳಿಯುವಾಗ ನಾನು ಅವರಿಗೆ "ಚಿನ್ನದ ಬಿಸ್ಕತ್ ನಿಮ್ಮ ಬಳಿ ಇದೆ ಅಂತ ಯಾರಿಗೂ ಹೆಳ್ಬೇಡಿ ಭಾಯಿಸಾಬ್ ಅಂತ ಅಂದೆ. ಇಲ್ಲಿ ಯಾರು ಹೇಗೆ ಇರ್ತಾರೆ ಅಂತ ಹೇಳೋದಕ್ಕೆ ಆಗೋದಿಲ್ಲ. ಇದನ್ನು ದೋಚೋದಕ್ಕೆ ನಿಮ್ಮನ್ನು ಕೊಲೆ ಸಹ ಮಾಡಬಹುದು" ಅಂತ ನಟಿ ಹೇಳಿದ್ರಂತೆ.
ಅದಕ್ಕೆ ಅವರು ಉನ್ಮಾದದಿಂದ ಕಣ್ಣು ಮಿಟುಕಿಸಿ "ನಾನು ತಾಯಿಯ ಹಾಲನ್ನು ಕುಡಿದು ಬೆಳೆದ್ದಿದ್ದೇನೆ, ಯಾರಾದರೂ ನನ್ನನು ಕೊಲೆ ಮಾಡುವುದಕ್ಕೆ ಪ್ರಯತ್ನಿಸಲಿ ನೋಡೋಣ. ಅವರ ಗಂಟಲನ್ನೇ ಸೀಳುತ್ತೇನೆ" ಎಂದು ಉತ್ತರಿಸಿದ್ದನಂತೆ.
ಇದಷ್ಟೇ ಅಲ್ಲದೆ ಆ ಡ್ರೈವರ್ ಈ ಮಾತನ್ನು ಹೇಳುವಾಗ ತನ್ನ ಸೀಟಿನ ಕೆಳಗಿನಿಂದ ಒಂದು ಹರಿತವಾದ ಚಾಕುವನ್ನು ಹೊರತೆಗೆದು "ಇದನ್ನು ನೋಡಿ" ಎಂದು ಹೇಳಿದ್ದಾಗಿ ನೆನಪಿಸಿಕೊಂಡಿದ್ದಾರೆ ಟ್ವಿಂಕಲ್.
ಮಗಳು ನಿತಾರಾಳೊಂದಿಗಿನ ತಮ್ಮ ಇತ್ತೀಚಿನ ಆಟೋ ರಿಕ್ಷಾ ಸವಾರಿಯ ಬಗ್ಗೆ ಟ್ವಿಂಕಲ್ ಮತ್ತಷ್ಟು ಮಾತನಾಡುತ್ತಾ, "ಇಂದು, ಯಾವುದೇ ಚಾಕುಗಳು ಇರಲಿಲ್ಲ ಮತ್ತು ಇದು ನನ್ನ ಅನಿರೀಕ್ಷಿತ ಆದರೆ ಉತ್ತಮವಾದ ಸಮಯವಾಗಿತ್ತು.
ಇದನ್ನೂ ಓದಿ: Shraddha Kapoor: ಫುಡ್ ವಿಚಾರದಲ್ಲಿ ನೋ ಡಯೆಟ್, ಇದು ಶ್ರದ್ಧಾ ಕಪೂರ್ ಬ್ಯೂಟಿ ಸೀಕ್ರೆಟ್!
ಏಕೆಂದರೆ ನನ್ನ ಮಗಳು ಮತ್ತು ನಾನು ಮನೆಗೆ ಹಿಂತಿರುಗುವ ದಾರಿಯುದ್ದಕ್ಕೂ ನಗುತ್ತಿದ್ದೆವು. ನೀವು ಬಾಂಬೆ ಮತ್ತು ಅಲ್ಲಿ ಬದುಕಲು ಇಷ್ಟಪಡುವವರಾಗಿದ್ದರೆ, ಹೃದಯದ ಎಮೋಜಿಯನ್ನು ಹಾಕಿ” ಅಂತ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ