ಮಗ Aarav ಜತೆ ಫೋಟೋ ತೆಗೆಸಿಕೊಂಡ ನಟಿ Twinkle Khanna: ಆ ಚಿತ್ರದಲ್ಲಿ ನೆಟ್ಟಿಗರು ಇಷ್ಟಪಟ್ಟಿದ್ದೇನು ಗೊತ್ತೇ..?

ನಟ ಮತ್ತು ತನ್ನ ಪತಿ ಅಕ್ಷಯ್ ಕುಮಾರ್ ಅವರೊಂದಿಗೆ ಸದ್ಯ ಲಂಡನ್‌ನಲ್ಲಿರುವ ಟ್ವಿಂಕಲ್, ಭಾನುವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಗ ಆರವ್​ ಜೊತೆ ತೆಗೆಸಿಕೊಂಡಂತಹ ಮುದ್ದಾದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಮಗ ಟ್ವಿಂಕಲ್​ ಖನ್ನಾ ಜೊತೆ ಮಗ ಆರವ್​

ಮಗ ಟ್ವಿಂಕಲ್​ ಖನ್ನಾ ಜೊತೆ ಮಗ ಆರವ್​

  • Share this:
ಬಾಲಿವುಡ್ (Bollywood) ನಟ ಅಕ್ಷಯ ಕುಮಾರ್  (Akshay Kumar) ಯಾವುದಾದರೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವ ನಟ ಎಂದರೆ ತಪ್ಪಾಗಲಾರದು. ಕೇವಲ ನಟ ಅಕ್ಷಯ್ ಸುದ್ದಿಯಲ್ಲಿ ಇರದೆ ಅವರ ಹೆಂಡತಿ ನಟಿ ಟ್ವಿಂಕಲ್ ಖನ್ನಾ (Twinkle Khanna) ಸಹ ತಾವು ಬರೆದಂತಹ ಪುಸ್ತಕಗಳಿಂದ ಮತ್ತು ತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳುವುದರಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಈ ಸ್ಟಾರ್ ನಟರ ಇಬ್ಬರು ಮಕ್ಕಳ ಮುದ್ದಾದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುವುದೇ ಅಭಿಮಾನಿಗಳಿಗೆ ಕಣ್ಣಿಗೆ ಹಬ್ಬವಿದ್ದಂತೆ. ಇಲ್ಲಿ ಸಹ ಅಕ್ಷಯ್ ಕುಮಾರ್​ ಅವರ ಮಡದಿ ನಟಿ ಟ್ವಿಂಕಲ್ ತಮ್ಮ ಮಗನ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿ ಟ್ವಿಂಕಲ್ ಕೇವಲ ತಮ್ಮ ಹೆಚ್ಚು ಮಾರಾಟವಾದ ಪುಸ್ತಕಗಳ ಜನಪ್ರಿಯ ಲೇಖಕಿ ಮಾತ್ರವಲ್ಲದೇ, ಎರಡು ಮುದ್ದಾದ ಮಕ್ಕಳ ತಾಯಿಯೂ ಹೌದು. ತನ್ನ ಮಕ್ಕಳಾದ ಆರವ್ ಮತ್ತು ನಿತಾರಾ ಅವರೊಂದಿಗಿನ ತನ್ನ ಬಾಂಧವ್ಯವನ್ನು ತೋರಿಸುವಂತಹ ಫೋಟೋಗಳನ್ನು ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.


ನಟ ಮತ್ತು ತನ್ನ ಪತಿ ಅಕ್ಷಯ್ ಕುಮಾರ್ ಅವರೊಂದಿಗೆ ಸದ್ಯ ಲಂಡನ್‌ನಲ್ಲಿರುವ ಟ್ವಿಂಕಲ್, ಭಾನುವಾರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಮಗ ಆರವ್​ ಜೊತೆ ತೆಗೆಸಿಕೊಂಡಂತಹ ಮುದ್ದಾದ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Akshay Kumar: 18ನೇ ವಸಂತಕ್ಕೆ ಕಾಲಿಟ್ಟ ಆರವ್​: ​ಮಗನ​ ಹುಟ್ಟುಹಬ್ಬದಂದು ಭಾವುಕರಾಗಿ ಪೋಸ್ಟ್​ ಮಾಡಿದ ಟ್ವಿಂಕಲ್​-ಅಕ್ಷಯ್​ ಕುಮಾರ್​...!

"ಭಾನುವಾರ ಬೆಳಗ್ಗೆ ನಿಜವಾಗಿಯೂ ವಿಶೇಷವಾಗಿದೆ, ಏಕೆಂದರೆ ನಾನು ನನ್ನ ಮಗನನ್ನು ಅವನ ಪ್ರೀತಿಯ ಕ್ಯಾಂಪಸ್‌ನಿಂದ ದೂರ ಕೆಲ ಸಮಯ ನನ್ನೊಟ್ಟಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ನಾವು ಒಟ್ಟಿಗೆ ಉಪಾಹಾರ ಸೇವಿಸಬಹುದು," ಎಂದು ಅವರು ಹಂಚಿಕೊಂಡ ಮುದ್ದಾದ ಫೋಟೋಗೆ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ಮುದ್ದಾದ ಫೋಟೋದಲ್ಲಿ ಟ್ವಿಂಕಲ್‌ನ ಹಣೆಗೆ ಮಗ ಆರವ್ ಪ್ರೀತಿಯಿಂದ ಚುಂಬಿಸುತ್ತಿರುವುದನ್ನು ಕಾಣಬಹುದು. ಈ ಫೋಟೋವನ್ನು ಈಗಾಗಲೇ 2 ಲಕ್ಷಕ್ಕೂ ಅಧಿಕ ಜನರು ಇಷ್ಟಪಟ್ಟಿದ್ದಾರೆ.
ಈ ಫೋಟೋದಲ್ಲಿ ತಾಯಿ ಮಗನ ಬಾಂಧವ್ಯ ಎದ್ದು ಕಾಣುತ್ತಿದ್ದರೂ, ಬಹುತೇಕರ ಗಮನ ಸೆಳೆದದ್ದು ಮಾತ್ರ ಆರವ್ ಧರಿಸಿದ್ದ ಮುತ್ತಿನ ಹಾರ ಎಂದರೆ ಅತಿಶಯೋಕ್ತಿಯಲ್ಲ. ಆರವ್ ಬಿಳಿ ಶರ್ಟ್ ಮತ್ತು ಹಸಿರು ಸ್ವೆಟರ್ ಮೇಲೆ ಮುತ್ತಿನ ಹಾರ ಧರಿಸಿದ್ದರಿಂದ ತುಂಬಾನೇ ಚೆನ್ನಾಗಿ ಕಾಣುತ್ತಿದ್ದರು. ಇದರ ಜೊತೆಗೆ ಕಪ್ಪು ಕೋಟನ್ನು ಸಹ ಧರಿಸಿದ್ದನ್ನು ನಾವು ಈ ಫೋಟೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Star Kids: ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ದೂರ ಇಟ್ಟಿರುವ ಅಕ್ಷಯ್​-ಟ್ವಿಂಕಲ್​: ಇಲ್ಲಿವೆ ಚಿತ್ರಗಳು..!

ಆ ಮುತ್ತಿನ ಹಾರವು ತುಂಬಾನೇ ಮೆಚ್ಚುಗೆಯನ್ನು ಪಡೆದು ಅನೇಕ ಜನ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳ ಮಹಾಪೂರವೇ ಹರಿಸಿದರು. ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಅನೈತಾ ಶ್ರಾಫ್ ಅದಾಜಾನಿಯಾ “ಮುತ್ತುಗಳು” ಎಂದು ಚಿಕ್ಕದಾಗಿ ಹಾಗೂ ಕ್ಯೂಟ್​ ಆಗಿ ಪ್ರತಿಕ್ರಿಯಿಸಿದ್ದಾರೆ. "ಅವನ ಮುತ್ತಿನ ಹಾರವು ನನಗೆ ತುಂಬಾನೇ ಇಷ್ಟವಾಗಿದೆ" ಎಂದು ಇನ್ನೊಬ್ಬ ಡಿಸೈನರ್ ಐನಾ ಅಹ್ಲುವಾಲಿಯಾ ಬರೆದಿದ್ದಾರೆ. "ತುಂಬಾ ಮುದ್ದಾಗಿದೆ. ಆದರೆ ಅದು ಅವನು ಧರಿಸಿರುವುದು ನಿಜವಾದ ಮುತ್ತಿನ ಹಾರವೇ..?" ಎಂದು ಇನ್ನೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ನಟ ಅಕ್ಷಯ್​ ಕುಮಾರ್​ ಹಾಗೂ ಟ್ವಿಂಕಲ್​ ಖನ್ನಾ ಬೇರೆ ಸ್ಟಾರ್ ನಟರಂತೆ ಅಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟು. ಹೀಗಾಗಿಯೇ ಅವರ ಮಕ್ಕಳ ಸುದ್ದಿ ಹಾಗೂ ಚಿತ್ರಗಳು ಬೇರೆ ಸ್ಟಾರ್​ಗಳ ಮಕ್ಕಳಂತೆ ಕಾಣ ಸಿಗುವುದಿಲ್ಲ. ಟ್ವಿಂಕಲ್​ ಮಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಆದರೂ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಮಗಳ ಮುಖ ಕಾಣದಂತೆ ಎಚ್ಚರ ವಹಿಸಿರುತ್ತಾರೆ.
Published by:Anitha E
First published: