ಭಾರತದ ರಾಷ್ಟ್ರ ಭಾಷೆ (Nnational Language) ಎಂಬ ಮಾನ್ಯತೆ ದೇಶದ ಯಾವುದೇ ಭಾಷೆಗೆ ಇಲ್ಲ ಎಂಬುವುದು ಸರ್ಕಾರದ ಅಧಿಕೃತ ಮಾಹಿತಿ. ಆದರೆ ಹಿಂದಿ (Hindi Language) ರಾಷ್ಟ್ರ ಭಾಷೆ ಹೌದು, ಅಲ್ಲ ಎಂಬ ಸುತ್ತ ಆಗಾಗ ವಿವಾದಗಳು ಹೇಳುತ್ತಲೇ ಇರುತ್ತವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಕನ್ನಡದ ನಟ ಕಿಚ್ಚ ಸುದೀಪ್ (Kiccha Sudeep) ಹಾಗೂ ಹಿಂದಿ ನಟ ಅಜಯ್ ದೇವಗನ್ (Ajay Devgan) ಮಧ್ಯೆ ಟ್ವಿಟ್ಟರ್ನಲ್ಲಿ ಸಂಭಾಷಣೆ ನಡೆದಿದೆ. ಕನ್ನಡ ಸಿನಿಮಾ ಕೆಜಿಎಫ್ ದೇಶಾದ್ಯಂತ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಸಂಸ್ಕೃತಿ ಮತ್ತಷ್ಟು ಪ್ರಕರತೆ ಪಡೆದುಕೊಂಡಿತು. ಇತ್ತೀಚೆಗೆ ರಿಲೀಸ್ ಆದ ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳಾದ RRR, ಕೆಜಿಎಫ್-1, ಪುಷ್ಪಾ ಸೇರಿದಂತೆ ಹಲವು ಚಿತ್ರಗಳನ್ನು ಪ್ಯಾನ್ ಇಂಡಿಯಾ ಎಂದು ಹೆಸರಿಸಲಾಯಿತು. ಇದೇ ವಿಚಾರವಾಗಿ ಇತ್ತೀಚಿಗಿನ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದರು. ಪ್ಯಾನ್ ಇಂಡಿಯಾ ಸಿನಿಮಾ ಎಂದು ಕರೆಯುವುದರ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದರು.
ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದ ಸುದೀಪ್
ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ತಮ್ಮದೇ ವ್ಯಾಖ್ಯಾನ ನೀಡಿದ ಸುದೀಪ್, ದಕ್ಷಿಣದ ಭಾಷೆಯ ಸಿನಿಮಾಗಳು ಹಿಂದಿಗೆ ಡಬ್ ಮಾಡಿ ಪ್ಯಾನ್ ಇಂಡಿಯಾ ಎಂದು ಹೇಳುವುದು ತಪ್ಪು. ಅದೇ ರೀತಿ ಹಿಂದಿ ಸಿನಿಮಾದವರು ಕೂಡ ದಕ್ಷಿಣದ ಭಾಷೆಗಳಿಗೆ ತಮ್ಮ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡುತ್ತಾರೆ. ಆದರೆ ಅವರೆಂದೂ ತಮ್ಮ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಿಕೊಳ್ಳುವುದಿಲ್ಲ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ನಮಗೆಲ್ಲಾ ತಿಳಿದಿದೆ. ಹಿಂದಿ ಭಾಷೆಗೆ ಡಬ್ ಮಾಡಿದೊಡನೆ ಪ್ಯಾನ್ ಇಂಡಿಯಾ ಸಿನಿಮಾ ಎನ್ನಬಾರದು. ಸಿನಿಮಾ ಸಿನಿಮಾ ಅಷ್ಟೇ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ: Bollywood ಮಂದಿಗೆ ಈ ಮಗು ಕಂಡ್ರೆ ಅಚ್ಚುಮೆಚ್ಚು, ಅದ್ರಲ್ಲೂ ಸಲ್ಮಾನ್ ಖಾನ್ಗೆ ಪಂಚಪ್ರಾಣ!
ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಿರುಗಿ ಬಿದ್ದ ದೇವಗನ್
ಸುದೀಪ್ ಅವರ ಈ ಹೇಳಿಕೆಗೆ ಇಂದು ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ಹಿಂದಿ ಭಾಷೆ ರಾಷ್ಟ್ರಭಾಷೆ ಅಲ್ಲದೇ ಇದ್ದರೆ, ನಿಮ್ಮ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದರು. ಹಿಂದಿ ಭಾಷೆಯಲ್ಲೇ ಅಜಯ್ ದೇವಗನ್ ಮಾಡಿದ ಟ್ವೀಟ್ಗೆ ಕಿಚ್ಚ ಕೂಡಲೇ ಉತ್ತರಿಸಿದರು.
.@KicchaSudeep मेरे भाई,
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
— Ajay Devgn (@ajaydevgn) April 27, 2022
I love and respect every language of our country sir. I would want this topic to rest,,, as I said the line in a totally different context.
Mch luv and wshs to you always.
Hoping to seeing you soon.
🥳🥂🤜🏻🤛🏻
— Kichcha Sudeepa (@KicchaSudeep) April 27, 2022
And sir @ajaydevgn ,,
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
— Kichcha Sudeepa (@KicchaSudeep) April 27, 2022
Hi @KicchaSudeep, You are a friend. thanks for clearing up the misunderstanding. I’ve always thought of the film industry as one. We respect all languages and we expect everyone to respect our language as well. Perhaps, something was lost in translation 🙏
— Ajay Devgn (@ajaydevgn) April 27, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ