ಕಿರಿಕ್​ ಹುಡುಗಿ ರಶ್ಮಿಕಾ ಹಾಗೂ ಅರ್ಜುನ್​ ರೆಡ್ಡಿಯ ವಿಜಯ್ ದೇವರಕೊಂಡ ನಡುವೆ ಆರಂಭವಾದ ಟ್ವೀಟ್​ ವಾರ್​

news18
Updated:June 22, 2018, 5:21 PM IST
ಕಿರಿಕ್​ ಹುಡುಗಿ ರಶ್ಮಿಕಾ ಹಾಗೂ ಅರ್ಜುನ್​ ರೆಡ್ಡಿಯ ವಿಜಯ್ ದೇವರಕೊಂಡ ನಡುವೆ ಆರಂಭವಾದ ಟ್ವೀಟ್​ ವಾರ್​
news18
Updated: June 22, 2018, 5:21 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

`ಅರ್ಜುನ್ ರೆಡ್ಡಿ' ಖ್ಯಾತಿ ವಿಜಯ್ ದೇವರಕೊಂಡ ಹಾಗೂ ಸಾನ್ವಿ ರಶ್ಮಿಕಾ ಟ್ವೀಟರ್​ನಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುತ್ತಿದ್ದಾರೆ. ಇವರಿಬ್ಬರ ಟ್ವೀಟಾಯಣ ನೋಡಿ, ಅಭಿಮಾನಿಗಳು ಫುಲ್ ಗೊಮದಲದಲ್ಲಿದ್ದಾರೆ. ಅಷ್ಟಕ್ಕೂ ಇವರಿಬ್ಬರು ಯಾಕ್ ಹಿಂಗೆ ಕಿತ್ತಾಡುತ್ತಿರೋದು?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಒಟ್ಟಿಗೆ ಅಭಿನಯಿಸುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರನೇ. ಹಾಗೆ ಆ ಸಿನಿಮಾಗೆ 'ಗೀತಾ ಗೋವಿಂದ' ಅನ್ನೋ ಶೀರ್ಷಿಕೆ ಇಟ್ಟಿರೋದು ಕೂಡ ಹೊಸ ವಿಷಯವೇನಲ್ಲ.

ಹೀಗಿರುವಾಗಲೇ ರಶ್ಮಿಕಾ-ವಿಜಯ್ ದೇವರಕೊಂಡ ಒಬ್ಬರಿಗೊಬ್ಬರು ಟ್ವೀಟರ್​ನಲ್ಲಿ ಕಾಲೆಳೆಯೋಕೆ ನಿಂತಿದ್ದಾರೆ. ಸರಣಿ ಸರಣಿ ಟ್ವೀಟ್‍ಗಳನ್ನ ಹರಿಬಿಡುತ್ತಿದ್ದಾರೆ. ಅಷ್ಟಕ್ಕೂ ಇವರ ಟ್ವೀಟಾಯಣ ಶುರುವಾಗಿದ್ದು ರಶ್ಮಿಕಾ ಅವರಿಂದ. ಮೊನ್ನೆಯಷ್ಟೆ `ಅರ್ಜುನ್ ರೆಡ್ಡಿ' ಚಿತ್ರದ ಅಭಿನಯಕ್ಕಾಗಿ ವಿಜಯ್ ದೇವರಕೊಂಡಾಗೆ ಫಿಲಂಫೇರ್ ಪ್ರಶಸ್ತಿ ಸಿಕ್ಕಿದ್ದು, ಇದಕ್ಕೆ ಶುಭಕೋರುವ ವೇಳೆ ಕಾಲೆಳೆಯೋ ರೀತಿ ರಶ್ಮಿಕಾ ಪೋಸ್ಟ್ ಮಾಡಿದ್ದರು.

ಇನ್ನು ರಶ್ಮಿಕಾ ಟ್ವೀಟ್‍ಗೆ ಅಷ್ಟೇ ತಮಾಷೆಯಾಗಿ ವಿಜಯ್ ಪ್ರತಿಕ್ರಿಯಿಸಿದ್ದಾರೆ. ಪ್ರಶಸ್ತಿಯಲ್ಲಿ ಏನಿದೆ ಮೇಡಮ್, ನಿಮ್ಮಂತವರ ಪ್ರೇಮ ಸಿಕ್ಕತೆ ಸಾಕು ಗೀತಾ ಮೇಡಂ ಅಂತ ವಿಜಯ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮತ್ತೆ ರಶ್ಮಿಕಾ ಸಹ ಅಷ್ಟೇ ಜಾಲಿಯಾಗಿ ಟ್ವೀಟ್ ಮಾಡಿದ್ದಾರೆ.

ಹಾಗಂತಾ ಅಭಿಮಾನಿಗಳು ಈ ಟ್ವೀಟಾಯಣ ನೋಡಿ ಗೊಂದಮ ಮಾಡಿಕೊಳ್ಳಬೇಕಿಲ್ಲ. ಇಲ್ಲಿ ವಿಜಯ್ ಹಾಗೂ ರಶ್ಮಿಕಾ, ಗೋವಿಂದ್ ಹಾಗೂ ಗೀತಾ ಪಾತ್ರಗಳಲ್ಲಿ ಒಬ್ಬರಿಗೊಬ್ಬರು ಕಾಲೆಳೆಯುತ್ತಿದ್ದಾರೆ. ಈ ಮೂಲಕ ಜೂನ್ 23ಕ್ಕೆ ಫಸ್ಟ್ ಲುಕ್ ರಿಲೀಸ್ ಮಾಡೋಕೆ ರೆಡಿಯಿರೋ ಚಿತ್ರಕ್ಕೆ ಪ್ರಚಾರ ಮಾಡೋಕೆ ಆರಂಭಿಸಿದ್ದಾರೆ.

ಅಂದಹಾಗೆ 'ಚಲೋ' ನಂತರ ರಶ್ಮಿಕಾ ಕಾಣಿಸಿಕೊಳ್ಳುತ್ತಿರೋ ಎರಡನೇ ಚಿತ್ರ ಇದಾಗಿದ್ದು, ಈ ಚಿತ್ರದ ಮೇಲೆ ಸಹ ಸಿಕ್ಕಾಪಟ್ಡೆ ನಿರೀಕ್ಷೆಯನ್ನ ರಶ್ಮಿಕಾ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
Loading...

 
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...