HOME » NEWS » Entertainment » TWEET WAR STARTED BETWEEN ACTRESSS NAGMA AND QUEEN KANGANA RANUT HERE IS THE DETAILS AE

Nagma-Kangana: ಕಂಗನಾ-ನಗ್ಮಾ ನಡುವೆ ಆರಂಭವಾಯ್ತು ಟ್ವೀಟ್​ ವಾರ್​: ಆದಿತ್ಯ ಪಂಚೋಲಿ ವಿಷಯ ಕೆದಕಿದ ಬಹುಭಾಷಾ ನಟಿ

ಕಂಗನಾ ಮೇಲೆ ನಟಿ ನಗ್ಮಾ ಸಹ  ಟ್ವೀಟ್ ವಾರ್ ಆರಂಭಿಸಿದ್ದಾರೆ. ಸುಶಾಂತ್​ ಸಿಂಗ್​ ಅಗಲಿಕೆಯ ನಂತರ ಇಷ್ಟೆಲ್ಲ ದನಿ ಎತ್ತುತ್ತಿರುವ ಕಂಗನಾ, ಆ ನಟ ಬದುಕಿದ್ದಾಗ ಏಕೆ ಯಾವ ಸಹಾಯವೂ ಮಾಡಲಿಲ್ಲ. ಸುಶಾಂತ್​ ಜೊತೆ ಮಾತನಾಡಲೂ ಪ್ರಯತ್ನಿಸಲಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ ನಗ್ಮಾ.

news18-kannada
Updated:July 23, 2020, 4:41 PM IST
Nagma-Kangana: ಕಂಗನಾ-ನಗ್ಮಾ ನಡುವೆ ಆರಂಭವಾಯ್ತು ಟ್ವೀಟ್​ ವಾರ್​: ಆದಿತ್ಯ ಪಂಚೋಲಿ ವಿಷಯ ಕೆದಕಿದ ಬಹುಭಾಷಾ ನಟಿ
ಕಂಗನಾ ಹಾಗೂ ಆದಿತ್ಯ ಪಂಚೋಲಿ
  • Share this:
ಬಾಲಿವುಡ್​​ನಲ್ಲಿ ಸ್ವಜನಪಕ್ಷಪಾತದಿಂದಾಗಿ ಈಗಾಗಲೇ ಸಾಕಷ್ಟು ಪ್ರತಿಭೆಗಳು ಅವಕಾಶವಿಲ್ಲದೆ ಬಣ್ಣದ ಲೋಕದಿಂದಲೇ ದೂರ ಹೋಗಿದ್ದಾರೆ ಎನ್ನಲಾಗುತ್ತಿದೆ. ನಟ ಸುಶಾಂತ್​ಸಿಂಗ್​ ಸಹ ಈ ನೆಪೋಟಿಸಂಗೆ ಬಲಿಯಾಗಿದ್ದಾರೆ ಎಂದು ಸಾಕಷ್ಟು ಸೆಲೆಬ್ರಿಟಿಗಳು ಆರೋಪಿಸುತ್ತಿದ್ದಾರೆ. 

ಕಂಗನಾ, ರಣವೀರ್​ ಶೌರಿ, ಶೇಖರ್ ಸುಮನ್, ರವೀನಾ ಟಂಡನ್, ಅಭಯ್​ ದೇವುಲ್​​​ ಸೇರಿದಂತೆ ಸಾಕಷ್ಟು ಮಂದಿ ನೆಪೋಟಿಸಂ ಬಗ್ಗೆ ಈಗ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ನೆಟ್ಟಿಗರೂ ಸಹ ನೆಪೋಟಿಸಂಗೆ ಕಾರಣವಾಗಿರುವ ಫಿಲ್ಮ್​ ಮೇಕರ್ಸ್​, ಸ್ಟಾರ್​ಗಳು ಹಾಗೂ ಸ್ಟಾರ್​ ಕಿಡ್ಸ್​ಗಳ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಅಭಿಯಾನ ಮುಂದುವರೆಸುತ್ತಿದ್ದಾರೆ.

ಸುಶಾಂತ್​ ಅಗಲಿದಾಗಿನಿಂದ ನಟಿ ಕಂಗನಾ, ನಟನ ಸಾವಿಗೆ ನ್ಯಾಯಬೇಕೆಂದು ಸಾಕಷ್ಟು ವಿಡಿಯೋಗಳ ಮೂಲಕ ಆಗ್ರಹಿಸುತ್ತಿದ್ದಾರೆ. ಬಾಲಿವುಡ್​​ನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತದ ವಿರುದ್ಧ ದನಿ ಎತ್ತುತ್ತಿದ್ದಾರೆ. ಇದರಿಂದಾಗಿ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಈಗ ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಿಂದಾಗಿ ಏನೆಲ್ಲ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಗೊತ್ತಾ ರಾಧಿಕಾ ಪಂಡಿತ್​

ಈ ಹಿಂದೆಯೇ ಕಂಗನಾ ಹಾಗೂ ಸೋನಮ್​ ಕಪೂರ್​, ತಾಪ್ಸಿ, ದೀಪಿಕಾ ನಡುವೆ ಕ್ಯಾಟ್​ ಫೈಟ್​ ನಡೆದಿದೆ. ಇತ್ತೀಚೆಗಷ್ಟೆ ಕಂಗನಾ ತಾಪ್ಸಿಗೆ ಬಿ-ಗ್ರೇಡ್​ ಸಿನಿಮಾದ ನಟಿ ಹಾಗೂ ಅವರ ಯಾವ ಚಿತ್ರಗಳೂ ಹಿಟ್​ ಆಗಿಲ್ಲ ಎಂದಿದ್ದರು. ಇದಕ್ಕೆ ತಾಪ್ಸಿ ಸಹ ಟ್ವೀಟ್​ ಮಾಡುವ ಮೂಲಕ ಉತ್ತರ ಕೊಟ್ಟಿದ್ದರು.

ಹೀಗಿರುವಾಗಲೇ ಕಂಗನಾ ಮೇಲೆ ನಟಿ ನಗ್ಮಾ ಸಹ  ಟ್ವೀಟ್ ವಾರ್ ಆರಂಭಿಸಿದ್ದಾರೆ. ಸುಶಾಂತ್​ ಸಿಂಗ್​ ಅಗಲಿಕೆಯ ನಂತರ ಇಷ್ಟೆಲ್ಲ ದನಿ ಎತ್ತುತ್ತಿರುವ ಕಂಗನಾ, ಆ ನಟ ಬದುಕಿದ್ದಾಗ ಏಕೆ ಯಾವ ಸಹಾಯವೂ ಮಾಡಲಿಲ್ಲ. ಸುಶಾಂತ್​ ಜೊತೆ ಮಾತನಾಡಲೂ ಪ್ರಯತ್ನಿಸಲಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ ನಗ್ಮಾ.

#Kangnas nepotism pic.twitter.com/3zsRaUSwQ3ಅಷ್ಟೇಅಲ್ಲ, ಕಂಗನಾರನ್ನು ಬಾಲಿವುಡ್​ಗೆ ಪರಿಚಯಿಸಿದ್ದು, ಒಂದು ಕಾಲದಲ್ಲಿ ಅವರ ಬಾಯ್​ಫ್ರೆಂಡ್​ ಆಗಿದ್ದ ಆದಿತ್ಯ ಪಂಚೋಲಿ. ಆದಿತ್ಯಾರ ಮೂಲಕ ಬಿ-ಟೌನ್​ಗೆ ಕಾಲಿಟ್ಟಿದ್ದು ನೆಪೋಟಿಸಂ ಅಲ್ವಾ ಎಂದು ಮತ್ತೆ ಹಳೇ ವಿಷಯವನ್ನು ಕೆದಕಿದ್ದಾರೆ ನಗ್ಮಾ.
ಆದಿತ್ಯ ಪಂಚೋಲಿ ಜೊತೆ ಕಂಗನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಹಾಗೂ ಅವರ ನಡುವೆ ಬ್ರೇಕ್​ಅಪ್​ ಆಗಿದ್ದೂ ಆಗ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಆಗಲೇ ಕಂಗನಾ, ಆದಿತ್ಯ ಚೋಪ್ರಾ ತನ್ನ ಬಾಯ್​ಫ್ರೆಂಡ್​ ಅಲ್ಲ ಎಂದೂ ಸ್ಪಷ್ಟನೆ ನೀಡಿದ್ದರು. ಈಗಲೂ ಸಹ ನಗ್ಮಾ ಮಾಡಿರುವ ಆರೋಪಗಳಿಗೆ ಒಂದೊಂದಾಗಿ ಉತ್ತರ ಕೊಡುವುದಾಗಿ ಟ್ವೀಟ್​ ಮಾಡಿರುವ ಕಂಗನಾ, ಆದಿತ್ಯ ಪಂಚೋಲಿ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ.

Nagma jiಆದಿತ್ಯ ನನ್ನ ಬಾಯ್​ಫ್ರೆಂಡ್​ ಆಗಿರಲಿಲ್ಲ.  ಬದಲಾಗಿ ನನಗೆ ಮಾರ್ಗದರ್ಶಿಯಾಗಿದ್ದರು. ನಂತರದಲ್ಲಿ ಆತನೇ ಪೀಡಕನಾಗಿ ನನ್ನ ಮೇಲೆ ಹಲ್ಲೆ ಮಾಡಲಾರಂಭಿಸಿದ್ದರು. ನಾನು ಸಿನಿಮಾಗಳಿಗೆ ಆಡಿಷನ್​ ಕೊಡಲು ಹೋದಾಗಲೆಲ್ಲ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನನ್ನು ಯಾವ ಸಿನಿಮಾ ನಿರ್ದೇಶಕರಿಗೂ ಅವರು ಪರಿಚಯಿಸಲಿಲ್ಲ ಎಂದು ಟ್ವೀಟ್​ ಮೂಲಕ ನಗ್ಮಾಗೆ ಪ್ರತಿಕ್ರಿಯೆ ನೀಡಿರುವ ಕಂಗನಾ, ಉತ್ತರಿಸುವುದನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

ಕೇವಲ ಆದಿತ್ಯ ಪಂಚೋಲಿ ಮಾತ್ರವಲ್ಲದೆ ನಗ್ಮಾ, ಕಂಗನಾರ ಮೊದಲ ಸಿನಿಮಾ, ಮೊದಲ ನಿರ್ದೇಶಕ ಮಹೇಶ್​ ಭಟ್​ ಹಾಗೂ ಹೃತಿಕ್​ ಕಂಗನಾರನ್ನು ರೀಲಾಂಚ್​ ಮಾಡಿದ ಕುರಿತಾಗಿಯೂ ಟ್ವೀಟ್​ ಮಾಡಿದ್ದಾರೆ. ಮಹೇಶ್​ ಭಟ್​ ಅವರ ನಿರ್ದೇಶನದಲ್ಲಿ ಗ್ಯಾಂಗ್​ಸ್ಟರ್​ ಚಿತ್ರದಲ್ಲಿ ಇಮ್ರಾನ್​ ಹಾಷ್ಮಿ ಜೊತೆ ನಟಿಸಿದ್ದು ನೆಪೋಟಿಸಂ ಅಲ್ವಾ? ಹೃತಿಕ್​ ಜೊತೆ ಕೈಟ್ಸ್​​ ಸಿನಿಮಾದಲ್ಲಿ ಅಭಿನಯಿಸಿದ್ದು ಸ್ವಜನಪಕ್ಷಪಾತ ಅಲ್ಲವಾ ಎಂದು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಯಾರೂ ಮರೆಯಲಾರದ ಕಾಡಿನ ಹೂವಂತೆ ಬಾಲಿವುಡ್​ನ ಈ ಮಾದಕ ನಟಿ..!
Published by: Anitha E
First published: July 23, 2020, 4:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories