ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ‘ (Kannadathi) ಸೀರಿಯಲ್ (Serial) ಸದ್ಯ ಪ್ರತಿಯೊಬ್ಬರ ಮೆಚ್ಚಿನ ಧಾರಾವಾಹಿ ಎಂದರೂ ತಪ್ಪಾಗಲಾರದು. ಹೊಸ ಬಗೆಯ ಕಥೆಯೊಂದಿಗೆ ಜನಗಳನ್ನು ಸೆಳೆಯುತ್ತಿರುವ ಕನ್ನಡತಿ ಧಾರಾವಹಿ, ಪ್ರತಿದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಧಾರಾವಹಿಯ ಕಥೆಯು ಸಂಪೂರ್ಣವಾಗಿ ದೂರದ ಹಸಿರುಪೇಟೆ ಕಡೆ ಸಾಗುತ್ತಿದೆ. ಅಲ್ಲದೇ ಕನ್ನಡತಿಯ ಎಲ್ಲಾ ಕಲಾವಿದರುಗಳು ಹಸಿರುಪೇಟೆಯತ್ತ ಸಾಗುತ್ತಿದ್ದಾರೆ. ಇದರಿಂದ ಇನ್ನಷ್ಟು ರೋಚಕ ಹಂತ ತಲುಪಿದ್ದು, ಹರ್ಷ-ಭುವಿ (Harsha-Bhuvi) ಎಂಗೇಜ್ಮೆಂಟ್ ಸುದ್ದಿ ಹೈಲೈಟ್ ಆಗಿದೆ. ಹರ್ಷ ಹಾಗೂ ರತ್ನಮಾಲಾ ಹೆಣ್ಣು ಕೇಳೋಕೆ ಬಂದಿರೋ ವಿಚಾರ ನಿಜಕ್ಕೂ ಭುವಿಗೆ ಶಾಕಿಂಗ್ ಆಗಿದೆ. ಅಲ್ಲದೇ ಹರ್ಷ, ಭುವಿ, ಹರ್ಷನ ಸಹೋದರಿ ಸುಚಿ, ಭುವಿ ತಂಗಿ ಬಿಂದು, ವರುಧಿನಿ, ಹರ್ಷನ (Harsha) ತಾಯಿ ರತ್ನಮಾಲಾ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ.
ತನ್ನ ಪ್ರೀತಿಯನ್ನು ಒಪ್ಪಿಕೊಂಡ ಭುವಿ:
ಭುವಿ ಹಾಗೂ ಹರ್ಷ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ವರುಧಿನಿಗೆ ತಿಳಿದಿದು, ನೇರವಾಗಿ ತನ್ನ ಸ್ನೇಹಿತೆ ಭುವಿ ಬಳಿ ಕೇಳಿದಾಗ ತಾನು ಪ್ರೀತಿಸುತ್ತಿರುವ ವಿಚಾರ ನಿಜ ಎಂದು ಭುವಿ ಒಪ್ಪಿಕೊಂಡಿದ್ದಾಳೆ. ಹೀಗಿರುವಾಗಲೇ ಹೆಣ್ಣು ಕೇಳೋಕೆ ಹರ್ಷ ಹಾಗೂ ರತ್ನಮಾಲಾ ಭುವಿ ಮನೆಗೆ ಬಂದಿರುವ ವಿಚಾರ ತಿಳಿದು ವರುಧಿನಿಗೆ ಕೋಪ ನೆತ್ತಿಗೇರಿದ್ದು, ಹರ್ಷನ ಜೊತೆಗೆ ಮಾತನಾಡುವವರೆಗೂ ಪ್ರೀತಿಯಲ್ಲಿ ಮುಂದುವರೆಯದಂತೆ ಭುವಿಗೆ ವರೂಧಿನಿ ಕಂಡೀಷನ್ ಹಾಕಿದ್ದಾಳೆ.
ಅಲ್ಲದೇ ಹರ್ಷನ ವಿಷಯದಲ್ಲಂತೂ ವರುಧಿನಿಗೆ ಸಿಕ್ಕಾಪಟ್ಟೆ ನಿರಾಸೆಯಾಗುತ್ತಿರುವ ಹಿನ್ನಲೆ, ಹರ್ಷ ಮತ್ತು ಭುವಿ ಮದುವೆಯಾಗ್ತಾರೆ ಅಂದ್ರೆ ವರೂಧಿನಿ ಸುಮ್ಮನೆ ಇರ್ತಾಳಾ? ಎಂಬ ಪ್ರಶ್ನೆ ಮೂಡಲಾರಂಭಿಸಿದೆ.
ಇದನ್ನೂ ಓದಿ: Kannadathi Serial: ಹರ್ಷನ ಗರ್ಲ್ಫ್ರೆಂಡ್ ಯಾರಂತ ಗೊತ್ತಾಯ್ತು..! ಭುವಿಯನ್ನ ಸುಮ್ನೆ ಬಿಡ್ತಾಳಾ ವರುಧಿನಿ
ನಿಶ್ಚಿತಾರ್ಥದ ತಯಾರಿಯಲ್ಲಿ ಹರ್ಷ:
ಈ ನಡುವೆ ರತ್ನಮಾಲಾ ಆರೋಗ್ಯದಲ್ಲಿ ಏರುಪೇರಾಗುತ್ತಿರುವ ಹಿನ್ನಲೆ ಹರ್ಷ ಆದಷ್ಟು ಬೇಗ ನಿಶ್ಚಿತಾರ್ಥ ಮಾಡಿಕೊಳ್ಳುವ ತವಕದಲ್ಲಿದ್ದಾನೆ. ಅಲ್ಲದೇ ಭುವಿಯ ತಂದೆ ನಿಧನವಾದಾಗ ಒಮ್ಮೆ ಹರ್ಷ ಹಸಿರುಪೇಟೆಗೆ ಬಂದಿದ್ದ, ಆ ವೇಳೆ ಹರ್ಷ ತಾನು ಡ್ರೈವರ್ ಎಂದು ಮಂಗಳಮ್ಮನ ಬಳಿ ಹೇಳಿಕೊಂಡಿದ್ದ. ಆದರೆ ಇದೀಗ ಹೆಣ್ಣು ಕೇಳಲು ಬಂದಿರುವ ಕಾರಣ ಮಂಗಳಮ್ಮ ಸಿಟ್ಟಾಗಿದ್ದಾಳೆ.
ಜೊತೆಗೆ ಹೆಣ್ಣು ಕೊಡುವ ಮಾತೇ ಇಲ್ಲ ಎಂದು ಹೇಳಿದ್ದು, ಭುವಿ ಮತ್ತು ಹರ್ಷ ಅಜ್ಜಿಯನ್ನು ಹೇಗೆ ಮನವಲಿಸುತ್ತಾರೆ ಎಂದು ಕಾದು ನೋಡಬೇಕಿದೆ. ಅಲ್ಲದೇ ಹಸಿರುಪೇಟೆಯ ಅಕ್ಕಿ ಮಿಲ್ ಸಾಹುಕಾರನಿಗೆ ಭುವಿಯನ್ನು ಕೊಟ್ಟು ಮದುವೆ ಮಾಡಬೇಕೆಂಬುದು ಮಂಗಳಮ್ಮನ ಆಲೋಚನೆಯಾಗಿದ್ದು, ರತ್ನಮಾಲಾ ಅವರ ಸಂಬಂಧ ಒಪ್ಪಿಕೊಳ್ತಾರಾ ಎಂಬುದನ್ನು ನೋಡಬೇಕಿದೆ.
ಇದನ್ನೂ ಓದಿ: Kannadathi Serial: ರಂಜನಿ ರಾಘವನ್ ಬಾವಿಗೆ ದೂಕಿದ ಸಹನಟಿ.. ಜೆಸಿಬಿ-ಹಗ್ಗದ ಸಹಾಯದಿಂದ ಮೇಲೆತ್ತಿದ ಸಿಬ್ಬಂದಿ!
ನಡೆಯುತ್ತಾ ಭುವಿ-ಹರ್ಷ ನಿಶ್ಚಿತಾರ್ಥ?:
ಇನ್ನು, ಹರ್ಷ ಹೆಣ್ಣು ಕೇಳಲು ಬಂದಿರುವ ವಿಚಾರ ಇದೀಗ ಭುವಿಗೆ ಶಾಕ್ ಆಗಿದ್ದು, ಆಕೆಗೆ ಸಾಕಷ್ಟು ತಲೆ ಕೆಡಿಸುವಂತೆ ಮಾಡಿದೆ. ಈ ನಡುವೆ ಹರ್ಷ ಮತ್ತು ಭುವಿ ನಿಶ್ಚಿತಾರ್ಥ ಎಂಬ ವಿಷಯ ವರುಗೆ ಶಾಕ್ ನೀಡಿದೆ. ಇದರೊಂದಿಗೆ ಈಗಾಗಲೇ ಉಂಗುರವನ್ನೂ ಖರೀದಿಸಿರುವ ಹರ್ಷ, ನಿಶ್ಚಿತಾರ್ಥ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ ವರುಧಿನಿ ವಿಚಾರದಲ್ಲಿ ಭುವಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.
ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ (ಭುವನೇಶ್ವರಿ/ ಸೌಪರ್ಣಿಕ) ಆಗಿ ನಟಿ ರಂಜನಿ ರಾಘವನ್, ಹರ್ಷ ಆಗಿ ಕಿರಣ್ ರಾಜ್, ಸಾನಿಯಾ ಆಗಿ ಆರೋಹಿ ನೈನಾ, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ ನಟಿಸುತ್ತಿದ್ದಾರೆ. ಕನ್ನಡತಿ ಧಾರಾವಾಹಿಗೆ ಯಶವಂತ್ ಪಾಂಡು ನಿರ್ದೇಶನ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ