Megha Shetty: ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ನಿಜ ಜೀವನ ಸಖತ್ ಕಲರ್​ಫುಲ್..!

ಮೇಘಾ ಶೆಟ್ಟಿ ಕೇವಲ ಧಾರಾವಾಹಿ ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನಲ್ಲಿಯೂ ಇತ್ತಿಚ್ಚಿನ ದಿನಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಇವರು ಮೂಲತಃ ಕರಾವಳಿಯ ಬೆಡಗಿ, ಮಂಗಳೂರಿನವರಾಗಿದ್ದಾರೆ.

ಮೇಘಾ ಶೆಟ್ಟಿ

ಮೇಘಾ ಶೆಟ್ಟಿ

  • Share this:
ಜೀ ಕನ್ನಡ (Zee Kannada) ವಾಹಿನಿಯ ಜನಪ್ರಿಯ ಧಾರಾವಾಹಿ ’ಜೊತೆ ಜೊತೆಯಲಿ’ (Jothe Jotheyali) ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ. ಪ್ರತಿಯೊಬ್ಬರ ಮನೆಯಲ್ಲಿ ನೋಡುತ್ತಿರುವ ಫೇಮಸ್​ ಸೀರಿಯಲ್ (Serial) ಅಂದರೂ ತಪ್ಪಾಗಲಾರಾದು. ಅದರಲ್ಲಿಯೂ ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅನು ಸಿರಿಮನೆ ಎಂದರೆ ಎಲ್ಲಾ ಹೆಂಗಳೆಯರ ಅಚ್ಚುಮೆಚ್ಚು. ಅಸಲಿಗೆ ಈ ಪಾತ್ರದಲ್ಲಿ ನಟಿಸುತ್ತಿರುವ ನಟಿಯೇ ಮೇಘಾ ಶೆಟ್ಟಿ (Megha Shetty). ಹೌದು ಮೇಘಾ ಶೆಟ್ಟಿ ಕೇವಲ ಧಾರಾವಾಹಿ ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌(Sandalwood)ನಲ್ಲಿಯೂ ಇತ್ತಿಚ್ಚಿನ ದಿನಗಳಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಇವರು ಮೂಲತಃ ಕರಾವಳಿಯ ಬೆಡಗಿ, ಮಂಗಳೂರಿನವರಾಗಿದ್ದಾರೆ. ವಿಭಿನ್ನ ಪಾತ್ರದ ಮೂಲಕ ಪ್ರತಿ ಮನೆಯನ್ನು ತಲುಪಿರುವ ಮೇಘಾ ಅವರ ನಿಜ ಜೀವನದ ಬಗ್ಗೆ ನಿಮಗೆ ತಿಳಿದಿದೆಯೇ?, ಅವರ ಹಿನ್ನಲೆ ಏನು ಗೊತ್ತಾ? ಅವರ ಜೀವನದಿಂದ ಹಿಡಿದು ನಟನೆಯ ವರೆಗಿನ ಸಂಪೂರ್ಣ ಜರ್ನಿ ಇಲ್ಲಿದೆ ನೋಡಿ.

ಮಂಗಳೂರಿನಲ್ಲಿ ಜನನ:

ನಟಿ ಮೇಘಾ ಶೆಟ್ಟಿ 1998 ರಲ್ಲಿ ತುಳುನಾಡಿನ ಮಂಗಳೂರಿನಲ್ಲಿ ಬಂಟ್ ಕುಟುಂಬದಲ್ಲಿ ಜನಿಸಿದರು. ಬೆಂಗಳೂರಿನಲ್ಲಿ ಎಂಬಿಎ ವಿಧ್ಯಾಭ್ಯಾಸವನ್ನು ಮುಗಿಸಿದ್ದಾರೆ. ಮೇಘಾ ಶೆಟ್ಟಿ ಎಂವ ಹೆಸರು ಕೇಳಿದಾಕ್ಷಣ ಈಕೆ ಬಂಟರ ಹುಡುಗಿ ಇರಬೇಕು ಎಂದನಿಸುತ್ತದೆ. ಅದು ನಿಜವೂ ಹೌದು. ಮೇಘಾ ಅವರ ತಂದೆ ಮಂಗಳೂರಿನವರು. ಆದರೆ ತಾಯಿ ಹುಬ್ಬಳ್ಳಿಯವರಾದ ಕಾರಣ ಮೇಘಾ ತುಳು ಭಾಷೆ ಕಲಿತಿಲ್ಲ. ಇನ್ನು, ನಂತರದಲ್ಲಿ ಚಿತ್ರರಂಗದಲ್ಲಿನ ಆಸಕ್ತಿ ಅವರನ್ನು ಮೊದಲಿಗೆ ಟಿವಿ ಸೀರಿಯಲ್​ಗಳಿಗೆ ಕರೆತಂದಿತು. ಇದೀಗ ಮೇಘಾ ಶೆಟ್ಟಿ ಕೆಲ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಮೇಘಾ ಶೆಟ್ಟಿ ನಟನೆಯ ಹಿನ್ನಲೆ:

ಜೊತೆ ಜೊತೆಯಲಿ' ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಧಾರಾವಾಹಿ ಯಶಸ್ವಿಯಾದ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳ ಅವಕಾಶ ಸಿಕ್ಕಿದೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಚಿತ್ರ ಮಾಡುತ್ತಿರುವ ಮೇಘಾ, ಚಂದನ್ ಶೆಟ್ಟಿ ಮ್ಯೂಸಿಕ್ ವಿಡಿಯೋದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇದರ ಜೊತೆ ಶಶಾಂಕ್ ಅವರ ‘ಲವ್ 360’ ಚಿತ್ರಕ್ಕೂ ನಾಯಕಿ ಆಗಲಿದ್ದಾರೆ.

ಇದನ್ನೂ ಓದಿ: Megha Shetty: ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ

ಇನ್ನು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಮೇಘನಾ, ಗಣೇಶ್ ಜೊತೆಗಿನ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೆಯೇ 'ದಿಲ್ ಪಸಂದ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮೇಘಾ ಶೆಟ್ಟಿ ರೊಮ್ಯಾನ್ಸ್ ಮಾಡಲಿದ್ದಾರೆ. ಇದರೊಂದಿಗೆ ನಟ ಕವೀಶ್​ ಶೆಟ್ಟಿ  ನಾಯಕನಾಗಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮೇಘಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರವು ಹಿಂದಿ, ಮರಾಠಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ತೆರೆಕಾಣಲಿದೆ.

ಧಾರಾವಾಹಿ ನಿರ್ಮಾಪಕಿ ಮೇಘಾ ಶೆಟ್ಟಿ:

ಕಲರ್ಸ್​ ಕನ್ನಡದಲ್ಲಿ ಕೆಂಡ ಸಂಪಿಗೆ ಹೆಸರಿನಲ್ಲಿ ಹೊಸ ಸೀರಿಯಲ್ ಗೆ ಮೇಘಾ ಶೆಟ್ಟಿ ಹಣ ಹೂಡುತ್ತಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ. ಕಿರುತೆರೆಯಲ್ಲಿ ಅನು ಸಿರಿಮನೆ ಎಂದೇ ಖ್ಯಾತರಾಗಿರುವ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್​ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿಯ ಅಭಿನಯಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ.

ಇದನ್ನೂ ಓದಿ: Jothe Jotheyali: ಅನು ಸಿರಿಮನೆ ಪಾತ್ರಧಾರಿ ಚೇಂಜ್? ಸೀರಿಯಲ್ ಬಿಟ್ಟು ಸಿನಿಮಾ ಕಡೆ ಹೊರಟಿದ್ರಂತೆ ಮೇಘಾ ಶೆಟ್ಟಿ!

ಧಾರಾವಾಹಿ ಬಿಟ್ಟು ಹೋಗುವುದಿಲ್ಲ:

ಮೇಘಾ ಶೆಟ್ಟಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಆಫರ್ ಹೆಚ್ಚೆಚ್ಚು ಬಂದರೂ ಅವರು ಧಾರಾವಾಹಿ ಜಗತ್ತನ್ನು ಬಿಟ್ಟು ಹೋಗುವುದಿಲ್ಲವಂತೆ. ಈ ಬಗ್ಗೆ ಸ್ವತಃ ಮೇಘಾ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಧಾರಾವಾಹಿ ಮೇಘಾಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಇದೇ ಕಾರಣಕ್ಕೆ ಅವರಿಗೆ ಸಿನಿಮಾ ಆಫರ್​ಗಳು ಬರುತ್ತಿವೆ.
Published by:shrikrishna bhat
First published: