• Home
  • »
  • News
  • »
  • entertainment
  • »
  • TV Celebrity: ಮದುವೆಯಾಗಿ 18 ವರ್ಷದ ನಂತರ ಮೊದಲ ಮಗುವಿನ ಖುಷಿ! ಈ ಆನಂದಕ್ಕೆ ಸಾಟಿ ಇದೆಯೇ?

TV Celebrity: ಮದುವೆಯಾಗಿ 18 ವರ್ಷದ ನಂತರ ಮೊದಲ ಮಗುವಿನ ಖುಷಿ! ಈ ಆನಂದಕ್ಕೆ ಸಾಟಿ ಇದೆಯೇ?

ಡೆಬೀನಾ ಬ್ಯಾನರ್ಜಿ-ಗುರ್ಮೀತ್ ಚೌಧರಿ

ಡೆಬೀನಾ ಬ್ಯಾನರ್ಜಿ-ಗುರ್ಮೀತ್ ಚೌಧರಿ

ಮದುವೆಯಾದ ಹಲವಾರು ವರ್ಷಗಳ ನಂತರ ತಮ್ಮ ಮೊದಲ ಮಕ್ಕಳನ್ನು ಪಡೆದ ಸ್ಟಾರ್ ದಂಪತಿಗಳ ದೊಡ್ಡ ಲಿಸ್ಟ್ ಇಲ್ಲಿದೆ ನೋಡಿ.

  • Trending Desk
  • Last Updated :
  • Bangalore, India
  • Share this:

ಟಿವಿ ಸೀರಿಯಲ್ (Serial) ಮತ್ತು ಚಿತ್ರೋದ್ಯಮದಲ್ಲಿ (Movie) ನಟಿಸುವ ನಟ ಮತ್ತು ನಟಿಯರು ಹೆಚ್ಚಾಗಿ ತಮ್ಮ ಜೊತೆ ಕೆಲಸ ಮಾಡುತ್ತಿರುವ ಸಹ ನಟರನ್ನೇ ಪ್ರೀತಿ ಮಾಡಿ ಅವರನ್ನೇ ಮದುವೆಯಾಗುವುದನ್ನು (Marriage) ನಾವು ಅನೇಕ ಬಾರಿ ನೋಡಿರುತ್ತೇವೆ. ಹೀಗೆ ಮದುವೆಯಾದ ಟಿವಿ ನಟರು ಮತ್ತು ನಟಿಯರು (Actress) ತಮ್ಮ ಪುಟ್ಟ ಮಗುವಿನೊಂದಿಗೆ ಒಂದು ಸುಂದರವಾದ ಬದುಕನ್ನು ಕಟ್ಟಿಕೊಂಡಿರುತ್ತಾರೆ ಅಂತ ಹೇಳಬಹುದು. ಸಾಮಾನ್ಯವಾಗಿ ಈ ಸಿನಿಮಾ  (Cinema)ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡವರು ಸ್ವಲ್ಪ ತಡವಾಗಿಯೇ ಮಕ್ಕಳನ್ನು ಹೊಂದುವುದನ್ನು ನೋಡಿರುತ್ತೇವೆ.


ಎಷ್ಟೋ ನಟ-ನಟಿಯರು ತಮ್ಮ ಕೆಲಸದಲ್ಲಿ ತುಂಬಾನೇ ಬ್ಯುಸಿಯಾಗಿ, ತುಂಬಾನೇ ತಡವಾಗಿ ಮೊದಲ ಮಗುವಿಗೆ ಪೋಷಕರಾಗುವುದನ್ನು ಸಹ ನಾವು ನೋಡಿರುತ್ತೇವೆ.
ಮದುವೆಯಾದ ಹಲವಾರು ವರ್ಷಗಳ ನಂತರ ತಮ್ಮ ಮೊದಲ ಮಕ್ಕಳನ್ನು ಪಡೆದ ಸ್ಟಾರ್ ದಂಪತಿಗಳ ದೊಡ್ಡ ಲಿಸ್ಟ್ ಇಲ್ಲಿದೆ ನೋಡಿ.


1. ಅಪೂರ್ವ ಅಗ್ನಿಹೋತ್ರಿ ಮತ್ತು ಶಿಲ್ಪಾ ಸಕ್ಲಾನಿ


‘ಜಸ್ಸಿ ಜೈಸಿ ಕೋಯಿ ನಹೀ’ ಎಂಬ ಸೀರಿಯಲ್ ನಲಿ ನಟಿಸುವುದರ ಮೂಲಕ ತುಂಬಾನೇ ಖ್ಯಾತಿಯನ್ನು ಗಳಿಸಿದ್ದಂತಹ ನಟ ಅಪೂರ್ವ ಅಗ್ನಿಹೋತ್ರಿ ಮತ್ತು ಅವರ ಪತ್ನಿ ಶಿಲ್ಪಾ ಸಕ್ಲಾನಿ ಅವರು ಇತ್ತೀಚೆಗೆ 18 ವರ್ಷಗಳ ದಾಂಪತ್ಯದ ನಂತರ ತಮ್ಮ ಪುಟ್ಟ ಹೆಣ್ಣು ಮಗುವಿನ ಆಗಮನವನ್ನು ಘೋಷಿಸಿದರು.


ಶಿಲ್ಪಾ ಅವರು "ನಾನು ಯಾವಾಗಲೂ ಮದುವೆಯಾಗಿ ಪುಟ್ಟ ಹೆಣ್ಣು ಮಗುವಿಗೆ ತಾಯಿಯಾಗುವ ಕನಸನ್ನು ಹೊಂದಿದ್ದೆ. ಆದರೂ, ಪೋಷಕರಾಗಲು ನಾವು 18 ವರ್ಷಗಳವರೆಗೆ ಕಾಯಬೇಕಾಯಿತು.


ನಾವು ಬಹಳ ಹಿಂದೆಯೇ ಪೋಷಕರಾಗಲು ಬಯಸಿದ್ದೆವು, ಆದರೆ ಅದಕ್ಕೆ ಸ್ವಲ್ಪ ಸಮಯ ಹಿಡಿಯಿತು ಮತ್ತು ಇಂದು ನಾವು ತುಂಬಾ ಸಂತೋಷವಾಗಿದ್ದೇವೆ" ಎಂದು ಹೇಳುತ್ತಾರೆ.


"ಇಶಾನಿ ಅಕ್ಟೋಬರ್ 14 ರಂದು ಜನಿಸಿದಳು ಮತ್ತು ಅವಳು ನಮಗೆ ದೇವರು ನೀಡಿದ ಕೊಡುಗೆ ಅಂತಾನೆ ನಮ್ಮ ಭಾವನೆ. ಕಳೆದ 18 ವರ್ಷಗಳಿಂದ, ನಾವು ಕೇವಲ ನಮ್ಮಿಬ್ಬರಾಗಿರಲು ಸಂತೋಷಪಡುತ್ತಿದ್ದಾಗ, ನಮ್ಮ ಮನಸ್ಸಿನ ಒಂದು ಮೂಲೆಯಲ್ಲಿ ಪೋಷಕರಾಗುವ ಒಂದು ಬಯಕೆ ಇತ್ತು. ಸುದೀರ್ಘ ಪ್ರಯಾಣದ ನಂತರ, ನಮ್ಮ ಕನಸು ಕೊನೆಗೂ ನನಸಾಗಿದೆ ಎಂದು ಹೇಳುತ್ತಾರೆ ನಟಿ.


2. ಗುರ್ಮೀತ್ ಚೌಧರಿ ಮತ್ತು ದೇಬಿನಾ ಬ್ಯಾನರ್ಜಿ


ದೇಬಿನಾ ಬ್ಯಾನರ್ಜಿ ಮತ್ತು ಗುರ್ಮೀತ್ ಚೌಧರಿ 2011 ರಲ್ಲಿ ವಿವಾಹವಾದರು, ಆದರೆ ಒಂದು ದಶಕದ ನಂತರ ಈ ದಂಪತಿಗಳು ಪೋಷಕರಾದರು ಎಂದು ಹೇಳಬಹುದು. ಇನ್ಸ್ಟಾಗ್ರಾಮ್ ನ ಜಂಟಿ ಪೋಸ್ಟ್ ನೊಂದಿಗೆ ಈ ವರ್ಷದ ಫೆಬ್ರವರಿಯಲ್ಲಿ ದಂಪತಿಗಳು ತಮ್ಮ ಮೊದಲ ಗರ್ಭಧಾರಣೆಯನ್ನು ಘೋಷಿಸಿದರು. "ಟು ಬಿಕಮಿಂಗ್ 3" ಎಂದು ಶೀರ್ಷಿಕೆ ಸಹ ನೀಡಿದ್ದರು.


"ಚೌಧರಿ ಜೂನಿಯರ್ ಬರುತ್ತಿದ್ದಾರೆ ನಿಮ್ಮ ಆಶೀರ್ವಾದ ಇರಲಿ" ಅಂತ ಸಹ ಬರೆದಿದ್ದರು. ಆದರೂ, ಅವರ ಮೊದಲ ಐವಿಎಫ್ ಮಗುವಿನ ನಂತರ ಸ್ವಾಭಾವಿಕವಾಗಿ ಗರ್ಭಧರಿಸಿದ ಮತ್ತೊಂದು ಹೆಣ್ಣು ಮಗುವನ್ನು ಸಹ ದಂಪತಿಗಳು ಪಡೆದರು. ತಮ್ಮ ಕುಟುಂಬವು ಈಗ ಪೂರ್ಣಗೊಂಡಿದೆ ಎಂದು ಇಬ್ಬರೂ ಸಂತೋಷಗೊಂಡಿದ್ದಾರೆ.


3. ನಕುಲ್ ಮೆಹ್ತಾ ಮತ್ತು ಜಂಕಿ


‘ಬಡೇ ಅಚ್ಚೆ ಲಗ್ತೆ ಹೈ’ ಸೀರಿಯಲ್ ನಲ್ಲಿ ನಟಿಸಿ ಖ್ಯಾತಿ ಗಳಿಸಿದ್ದ ನಕುಲ್ ಮೆಹ್ತಾ ಮತ್ತು ಜಂಕಿ 2012 ರಲ್ಲಿ ವಿವಾಹವಾದರು. ಈ ದಂಪತಿಗಳು 9 ವರ್ಷಗಳ ನಂತರ 2021 ರ ಫೆಬ್ರವರಿಯಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು.


ನಕುಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ತಮ್ಮ ಪುಟ್ಟ ಮಗುವಿನ ಆಗಮನವನ್ನು "ಫೆಬ್ರವರಿ 3, 2021" ಎಂಬ ಶೀರ್ಷಿಕೆಯೊಂದಿಗೆ ಘೋಷಿಸಿದರು. ಅವರ ಪುಟ್ಟ ಹುಡುಗ ಸೂಫಿ ಈಗ ಅವರ ಜೀವನದ ಕೇಂದ್ರ ಬಿಂದುವಾಗಿದ್ದಾನೆ.


4. ಅನಿತಾ ಹಸನಂದಾನಿ ಮತ್ತು ರೋಹಿತ್ ರೆಡ್ಡಿ


ಅನಿತಾ ಹಸನಂದಾನಿ ಮತ್ತು ರೋಹಿತ್ ರೆಡ್ಡಿ 2021 ರಲ್ಲಿ ಗಂಡು ಮಗು ಆರವ್ ಗೆ ಪೋಷಕರಾದರು. 2013 ರಲ್ಲಿ ಮದುವೆಯಾಗಿದ್ದ ಇಬ್ಬರೂ 6 ವರ್ಷಗಳಿಗಿಂತ ಹೆಚ್ಚು ಕಾಲ ಮಗುವನ್ನು ಹೊಂದಿರಲಿಲ್ಲ. ಆದರೆ 2019 ರಲ್ಲಿ ಅವರು ಮಗುವನ್ನು ಪಡೆಯಲು ನಿರ್ಧರಿಸಿದರು.


ಆಗ 30 ರ ದಶಕದ ಕೊನೆಯಲ್ಲಿದ್ದ ಅನಿತಾ, 2020 ರಲ್ಲಿ ಬಿಟಿಯೊಂದಿಗೆ ಮಾತನಾಡುತ್ತಾ "ವಯಸ್ಸಿನ ಅಂಶವು ನನ್ನ ಮನಸ್ಸಿನಲ್ಲಿ ತುಂಬಾನೇ ಒಂದು ಗೊಂದಲವನ್ನು ಉಂಟು ಮಾಡಿತ್ತು.


ಇದು ತುಂಬಾನೇ ಕಠಿಣವಾಗಲಿದೆ, ಅದು ನಿಮ್ಮನ್ನು ತುಂಬಾನೇ ತೊಂದರೇಗಿಡು ಮಾಡುತ್ತದೆ ಎಂದು ಅನೇಕ ಜನರು ನನಗೆ ಹೇಳಿದ್ದರು. ಆದರೆ ನಾನು ಸ್ವಾಭಾವಿಕವಾಗಿ ಗರ್ಭಧರಿಸಿದ ನಂತರ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನಾನು ಅರಿತುಕೊಂಡೆ. ಎಲ್ಲವೂ ಸರಿಹೋಗಲು ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿರಬೇಕು" ಎಂದು ಅನಿತಾ ಹೇಳಿದರು.


5. ಜಯ್ ಭಾನುಶಾಲಿ ಮತ್ತು ಮಹಿ ವಿಜ್


ಜಯ್ ಭಾನುಶಾಲಿ ಮತ್ತು ಮಹಿ ವಿಜ್ ಅವರು 2011 ರಲ್ಲಿ ಮದುವೆಯಾದರು, ಆದರೆ ಅವರು 2019 ರಲ್ಲಿ ತಮ್ಮ ಮೊದಲ ಮಗು ತಾರಾ ಅವರನ್ನು ಸ್ವಾಗತಿಸಿದರು. ಅವರ ವಿವಾಹದ ಸುಮಾರು 8 ವರ್ಷಗಳ ನಂತರ ಇಬ್ಬರೂ ಪೋಷಕರಾದರು ಮತ್ತು ಇದನ್ನು ಆನಂದಿಸುತ್ತಿದ್ದಾರೆ.


ತಾರಾ ಆಗಾಗ್ಗೆ ತಮ್ಮ ಪೋಷಕರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವೀಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಾರಾಗಿಂತ ಮೊದಲು, ಮಹಿ ಮತ್ತು ಜೇ ತಮ್ಮ ಮನೆಯ ಸಹಾಯಕರ ಮಕ್ಕಳಾದ ಖುಷಿ ಮತ್ತು ರಾಜ್ವೀರ್ ಗೆ ಸಾಕು ಪೋಷಕರಾಗಿದ್ದರು.


6. ಕರಣ್ವೀರ್ ಬೊಹ್ರಾ ಮತ್ತು ತೀಜಯ್


ಕರಣ್ವೀರ್ ಬೊಹ್ರಾ ಮತ್ತು ತೀಜಯ್ ತಮ್ಮ ಮೊದಲ ಮಗುವನ್ನು ಪಡೆಯಲು ಸಮಯ ತೆಗೆದುಕೊಂಡರು ಮತ್ತು ಅವರ ವಿವಾಹದ ಒಂದು ದಶಕದ ನಂತರ, ಅವರು 2016 ರಲ್ಲಿ ಬೆಲ್ಲಾ ಮತ್ತು ವಿಯೆನ್ನಾ ಎಂಬ ಅವಳಿ ಮಕ್ಕಳನ್ನು ಪಡೆದರು.


ತಮ್ಮ ಮಕ್ಕಳಿಗಿಂತ ಮೊದಲು ತಮ್ಮ ಜೀವನವನ್ನು ನಿರಾತಂಕವಾಗಿ ಕಳೆಯಲು ನಿರ್ಧರಿಸಿದ ದಂಪತಿಗಳು, ಡಿಸೆಂಬರ್ 2020 ರಲ್ಲಿ ತಮ್ಮ ಮೂರನೇ ಮಗುವಾದ ಜಿಯಾ ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು.


7. ಕೃತಿಕಾ ಸೆಂಗರ್ ಮತ್ತು ನಿಕಿತಿನ್ ಧೀರ್


ಸೆಪ್ಟೆಂಬರ್ 2014 ರಲ್ಲಿ ಮದುವೆಯಾದ ‘ಕಸಮ್ ತೇರೆ ಪ್ಯಾರ್ ಕಿ’ ಖ್ಯಾತಿಯ ಕೃತಿಕಾ ಸೆಂಗರ್ ಮತ್ತು ನಿಕಿತಿನ್ ಧೀರ್ ಈ ವರ್ಷ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಅವರು ನವೆಂಬರ್ 2021 ರಲ್ಲಿ ಕೃತಿಕಾ ಅವರು ತಮ್ಮ ಗರ್ಭಧಾರಣೆಯನ್ನು ಘೋಷಿಸಿದ್ದರು.


ಇದರ ಕುರಿತು ಮಾತನಾಡುತ್ತಾ ಈ ಹಿಂದೆ ಕೃತಿಕಾ ಅವರು "ನಿಕಿತಿನ್ ತಂದೆಯಾಗಲು ತುಂಬಾ ಉತ್ಸುಕರಾಗಿದ್ದರು ಮತ್ತು ನಾನು ಸಹ ಶೀಘ್ರದಲ್ಲಿಯೇ ತಾಯಿಯಾಗುತ್ತೇನೆ ಎಂದು ತಿಳಿದು ನಾನು ತುಂಬಾ ಕೃತಜ್ಞಳಾಗಿದ್ದೇನೆ.


ಇದನ್ನೂ ಓದಿ: Ramachari: ನಾನು, ನೀನು ಜೊತೆಯಾಗಲು ಸಾಧ್ಯವೇ ಇಲ್ಲ ಎಂದ ರಾಮಾಚಾರಿ, ಚಾರು ಬೇಸರ!


ಇದು ನಮ್ಮಿಬ್ಬರಿಗೂ ಹೊಸ ಜೀವನವಾಗಿದೆ ಮತ್ತು ನಮ್ಮ ಇಡೀ ಕುಟುಂಬವು ಹೊಸ ಸದಸ್ಯನಿಗಾಗಿ ಕಾಯುತ್ತಿದೆ. ಇದು ನಮ್ಮ ಜೀವನದ ಹೊಸ ಹಂತವಾಗಿರುತ್ತದೆ, ಏಕೆಂದರೆ ಇದು ನಮ್ಮ ಮೊದಲ ಮಗುವಾಗಿದೆ.


ನಾವು ಮದುವೆಯಾಗಿ ಏಳು ವರ್ಷಗಳಾಗಿವೆ ಮತ್ತು ಇದು ನಮಗೆ ದೊಡ್ಡ ಉಡುಗೊರೆಯಾಗಿದೆ. ನಾವು ಈ ವಿಷಯ ತಿಳಿದಾಗ ತುಂಬಾ ಸಂತೋಷದಿಂದ ಕುಣಿದು ಕುಪ್ಪಳಿಸಿದೆವು ಮತ್ತು ನಮ್ಮ ಕುಟುಂಬಗಳು ಈ ಬಗ್ಗೆ ತುಂಬಾ ಸಂತೋಷಪಟ್ಟಿವೆ" ಎಂದು ಅವರು ಹೇಳಿದರು.


8. ಶರತ್ ಕೇಲ್ಕರ್ ಮತ್ತು ಕೀರ್ತಿ ಗಾಯಕ್ವಾಡ್ ಕೇಲ್ಕರ್


ಶರತ್ ಕೇಲ್ಕರ್ ಮತ್ತು ಕೀರ್ತಿ ಅವರು ಡೇಟಿಂಗ್ ಮಾಡಲು ಪ್ರಾರಂಭಿಸಿದ ಕೂಡಲೇ ವಿವಾಹವಾದರು. ಆದರೆ ಅವರು ತಮ್ಮ ಮೊದಲ ಮಗುವನ್ನು ಪಡೆಯಲು ಸ್ವಲ್ಪ ಹೆಚ್ಚು ಸಮಯ ಕಾಯಬೇಕಾಯಿತು.


ಜೂನ್ 2005 ರಲ್ಲಿ ಮದುವೆಯಾದ ಇಬ್ಬರೂ, ಮದುವೆಯಾದ ಒಂಬತ್ತು ವರ್ಷಗಳ ನಂತರ ಎಂದರೆ ಫೆಬ್ರವರಿ 2014 ರಲ್ಲಿ ಕೇಶ ಎಂಬ ಹೆಣ್ಣು ಮಗುವನ್ನು ಸ್ವಾಗತಿಸಿದರು.


9. ಮಾನವ್ ಗೋಹಿಲ್ ಮತ್ತು ಶ್ವೇತಾ ಕವಾತ್ರಾ


‘ಮೈ ಹೂಂ ಅಪರಾಜಿತಾ’ ಸೀರಿಯಲ್ ನಲ್ಲಿ ನಟಿಸಿದ್ದಂತಹ ನಟ ಮಾನವ್ ಗೋಹಿಲ್ ಮತ್ತು ಶ್ವೇತಾ ಕವಾತ್ರಾ ಅವರು 2012 ರ ಮೇ 11 ರಂದು ತಮ್ಮ ಮಗಳು ಜಹರಾ ಅವರನ್ನು ಸ್ವಾಗತಿಸಿದರು. 2004 ರಲ್ಲಿ ಮದುವೆಯಾದ ಈ ಇಬ್ಬರೂ, ಮದುವೆಯಾದ ಸುಮಾರು ಏಳು ವರ್ಷಗಳ ನಂತರ ತಮ್ಮ ಮೊದಲ ಮಗುವನ್ನು ಪಡೆದರು.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು