ಇಂದಿನ ಕಾಲದಲ್ಲಿ ಸಾಕಷ್ಟು ಜನರು ಮದುವೆಯೆಂದರೆ ಮಾರು ದೂರ ಸರಿಯುತ್ತಾರೆ. ಮನೆ, ಕುಟುಂಬ ನಿಭಾಯಿಸುವ ಜವಾಬ್ದಾರಿ, ಕಟ್ಟಳೆಗಳಿಂದ ಹೊರಗುಳಿಯಲು ಬಯಸುತ್ತಾರೆ. ಇವೆಲ್ಲದರ ಹೊರತಾಗಿ ತಮ್ಮನ್ನು ಅರ್ಥಮಾಡಿಕೊಳ್ಳುವಂಥ ಪಾರ್ಟ್‌ನರ್ ಒಬ್ಬ ಇದ್ದರೆ ಸಾಕು ಎಂದು ಬಯಸುತ್ತಾರೆ. ಹಾಗಾಗಿ ಲಿವ್ ಇನ್ ರಿಲೇಶನ್‌ಶಿಪ್ ಅನ್ನೋದು ಇಂದು ಹೆಚ್ಚು ಜನಪ್ರಿಯವಾಗುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳೆಂದರೆ (Celebrity) ಕೇಳಬೇಕ? ಅವರಲ್ಲಿ ಮದುವೆ ಡೈವೋರ್ಸ್ (Divorce) ಅನ್ನೋದು ಕಾಮನ್ ಆದಂತೆ ಡೇಟಿಂಗ್ (Dating), ಲಿವ್ ಇನ್ ರಿಲೇಶನ್‌ಶಿಪ್ (Relationship) ಕೂಡ ಸಾಮಾನ್ಯವಾಗಿದೆ. ಆದರೆ ಅದರಲ್ಲೂ ಕೆಲವಷ್ಟು ಜೋಡಿಗಳು ತಮ್ಮ ಸಂಬಂಧವನ್ನು ಹಲವು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದಾರೆ. ಜೊತೆಯಾಗಿ ಜೀವನ ನಡೆಸುತ್ತಿದ್ದಾರೆ.
ತಮ್ಮ ತಮ್ಮ ಕೆಲಸ ಕಾರ್ಯಗಳ ಜೊತೆಗೆ ಒಂದು ಪ್ರಬುದ್ಧ ನಿರ್ಧಾರ ತೆಗೆದುಕೊಂಡು ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಮದುವೆಯಾದವರಿಗಿಂತ ಹೆಚ್ಚು ಸಂತೋಷವಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಹೌದು, ಕಿರುತೆರೆ ಹಾಗೂ ಹಿರಿತೆರೆಯಲ್ಲಿನ ಕೆಲವಷ್ಟು ಜೋಡಿಗಳು ದೀರ್ಘಕಾಲದಿಂದ ಪ್ರೀತಿಸಿ ಬದುಕನ್ನು ನಡೆಸುತ್ತಿದ್ದಾರೆ. ಆದರೆ ಇನ್ನೂ ಕೂಡ ಮದುವೆಯಾಗಿಲ್ಲ.
ಕೆಲವರು ಅವರ ಕೆಲಸ ಕಾರ್ಯಗಳಿಗೆ ಮದುವೆ ಅಡ್ಡಿ ಎಂದು ಭಾವಿಸಿದರೆ ಇನ್ನೂ ಕೆಲವರಿಗೆ ಮದುವೆ ಅನ್ನೋದು ಅಗತ್ಯವಿಲ್ಲ ಎಂದು ಅನಿಸಿದೆ. ಆದ್ದರಿಂದ ಅವರು ಮದುವೆ ಬಂಧನಕ್ಕೆ ಒಳಗಾಗಿಲ್ಲ. ಹಾಗಿದ್ದರೆ ಹಲವಾರು ವರ್ಷಗಳಿಂದ ಪ್ರೀತಿಯಲ್ಲಿದ್ದು, ಮದುವೆಯಾಗದ ಸೆಲೆಬ್ರಿಟಿಗಳು ಯಾರ್ಯಾರು ಅನ್ನೋದನ್ನು ನೋಡೋಣ.
ಹಿನಾ ಖಾನ್ ಮತ್ತು ರಾಕಿ ಜೈಸ್ವಾಲ್
ಯೇ ರಿಶ್ತಾ ಕ್ಯಾ ಕೆಹ್ಲಾತಾ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಹಿನಾ ಮತ್ತು ರಾಕಿ ಜೈಸ್ವಾಲ್ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಜೋಡಿ ಸುಮಾರು ಒಂದು ದಶಕದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ.
ಹಾಗೆಯೇ ಒಟ್ಟಿಗೆ ಬದುಕಿನ ಪ್ರಯಾಣವನ್ನು ನಡೆಸುತ್ತಿದ್ದಾರೆ. ಅವರು ಸಾಮಾನ್ಯವಾಗಿ ಬೇರೆ ಬೇರೆ ಕಡೆಗಳಲ್ಲಿ ಪ್ರವಾಸ ಹೋಗುತ್ತಾರೆ. ವಿಶೇಷ ಸಂದರ್ಭಗಳನ್ನು ಒಟ್ಟಿಗೆ ಆಚರಿಸುವ ಸಂದರ್ಭಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಾರೆ.
ಅಬಿಗೈಲ್ ಪಾಂಡೆ ಮತ್ತು ಸನಮ್ ಜೋಹರ್
ಒಮ್ಮೆ ಕಾಮನ್ ಫ್ರೆಂಡ್ ಮನೆಯಲ್ಲಿ ಭೇಟಿಯಾದ ನಂತರದಲ್ಲಿ ಅಬಿಗೈಲ್ ಮತ್ತು ಸನಮ್ ಪ್ರೀತಿಯಲ್ಲಿ ಬಿದ್ದರು. ಆದಾಗ್ಯೂ ಅವರಿಬ್ಬರು 2020ರಲ್ಲಿ ಮದುವೆಯಾಗಲು ಯೋಜಿಸಿದ್ದರು. ಆದರೆ ಕೋವಿಡ್ ಸಾಂಕ್ರಾಮಿಕವು ಅವರ ಯೋಜನೆಗಳನ್ನು ತಲೆಕೆಳಗೆ ಮಾಡಿತ್ತು. ಪ್ರಸ್ತುತ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ.
2021ರಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ಅಬಿಗೈಲ್, "ನಾವು ಯಾವಾಗ ಮದುವೆಯಾಗುತ್ತೇವೆ ಎಂದು ತಿಳಿದುಕೊಳ್ಳಲು ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರೂ ಕುತೂಹಲ ಹೊಂದಿದ್ದಾರೆ.
ಇದನ್ನೂ ಓದಿ: Rajamouliಗೆ ಈ ವಿಷಯದ ಬಗ್ಗೆ ಸಿನಿಮಾ ಮಾಡಿ ಎಂದ ಉದ್ಯಮಿ! ಯಾರದು?
ಸನಮ್ ಮತ್ತು ನಾನು ಕಳೆದ ವರ್ಷ ಮದುವೆಯಾಗಲು ಯೋಜಿಸಿದ್ದೆವು. ಆದರೆ ಸಾಂಕ್ರಾಮಿಕ ಕೋವಿಡ್ ರೋಗವು ಅದನ್ನು ಹಾಳುಮಾಡಿದೆ. ನಾವು ಮದುವೆಯಾಗಲು ಬಯಸುತ್ತೇವೆ. ಎಲ್ಲರೂ ನಮ್ಮ ಮದುವೆಗೆ ಬಂದು ಆಶೀರ್ವದಿಸಲು ಸಮಯ ಕೂಡಿ ಬರಬೇಕು. ನಮ್ಮ ಪ್ರೀತಿಪಾತ್ರರು ಮತ್ತು ನಮ್ಮ ಕುಟುಂಬವು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಆಗಿಯೂ ಏನು ಪ್ರಯೋಜನ?
ಅಲ್ಲದೇ ನಾನು ಮತ್ತು ಸನಮ್ ಈಗಾಗಲೇ ಒಟ್ಟಿಗೆ ವಾಸಿಸುತ್ತಿದ್ದೇವೆ. ನಾವು ನಮ್ಮ ಜೀವನವನ್ನು ಆನಂದಿಸುತ್ತಿದ್ದೇವೆ. ಅದೇ ಮುಖ್ಯವಾದದ್ದು" ಎಂದು ಹೇಳಿದ್ದರು.
ಶ್ರೀಜಿತಾ ಡೇ ಮತ್ತು ಮೈಕಲ್ ಬಿಪಿ
ರಿಯಾಲಿಟಿ ಶೋ ಬಿಗ್ ಬಾಸ್ 16 ಖ್ಯಾತಿಯ ನಟಿ ಶ್ರೀಜಿತಾ ಡೇ ಮತ್ತು ಮೈಕೆಲ್ ಬಿಪಿ ಹಲವಾರು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಆದರೆ ಅವರಿಬ್ಬರು ಇನ್ನೂ ಮದುವೆಯಾಗಿಲ್ಲ. ಈ ಜೋಡಿ ತಮ್ಮ ಮದುವೆಯನ್ನು ಬಹಳ ಸಮಯದಿಂದ ಯೋಜಿಸುತ್ತಿದ್ದು, ಸದ್ಯ ಮದುವೆ ಜುಲೈನಲ್ಲಿ ನಡೆಯಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ್ದ ಶ್ರೀಜಿತಾ "ಮದುವೆಯ ಸಿದ್ಧತೆಗಳು ಇನ್ನೂ ನಡೆಯುತ್ತಿವೆ. ನಾನು ಏನನ್ನೂ ಅಂತಿಮಗೊಳಿಸಿಲ್ಲ. ಮದುವೆ ನಡೆಯುವ ಸ್ಥಳವನ್ನು ಮಾತ್ರ ಕಾಯ್ದಿರಿಸಲಾಗಿದೆ. ದಿನಾಂಕವನ್ನು ಅಂತಿಮಗೊಳಿಸಲಾಗಿದೆ.
ಉಳಿದ ಬಟ್ಟೆಗಳು, ಅಲಂಕಾರಗಳು, ಇನ್ವಿಟೇಶನ್, ಅತಿಥಿಗಳ ಪಟ್ಟಿ ಮತ್ತು ಎಷ್ಟು ಜನರು ಮದುವೆಯ ಭಾಗವಾಗುತ್ತಾರೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಮದುವೆಯು ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆಯಲಿದ್ದು, ಬಂಗಾಳಿ ವಿವಾಹ ವಿಧಿ ವಿಧಾನವು ಗೋವಾದಲ್ಲಿ ನಡೆಯಲಿದೆ ಎಂಬುದಾಗಿ ಹೇಳಿದ್ದರು.
ಆಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಿಸ್ವಾನಾ
ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಜೋಡಿಗಳಾದ ಆಶ್ಲೇಷಾ ಹಾಗೂ ಸಂದೀಪ್ ಒಂದಾಗಿ ಸುಮಾರು ಎರಡು ದಶಕಗಳು ಕಳೆದಿವೆ. ಆದರೆ, ಇನ್ನೂ ಕೂಡ ಮದುವೆಯ ಮಾತುಕತೆ ನಡೆದಿಲ್ಲ. ಆದರೆ ಈ ಜೋಡಿ ಸಂತೋಷದಿಂದ ಬದುಕುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಶ್ಲೇಷಾ ಅವರು ಬರೆದಿದ್ದ ನೋಟ್ ಅವರಿಬ್ಬರು ಯಾಕೆ ಮದುವೆಯಾಗಿಲ್ಲ ಎಂಬುದನ್ನು ಹೇಳಿದೆ.
ಅದರಲ್ಲಿ ಆಶ್ಲೇಷಾ ಬರೆದಿದ್ದು ಹೀಗಿತ್ತು. "ಹಿಂದಿನ ದಿನ ಯಾರೋ ನನ್ನನ್ನು ಕೇಳಿದರು,'ನೀವು ಮದುವೆಯಾಗಿಲ್ಲ, ಇದರ ಅರ್ಥವೇನು?'ಎಂದು. ಆದರೆ @baswanasandeep ನಿನಗಾಗಿ ನಾನು ಅನುಭವಿಸುವ ಈ ಪ್ರೀತಿಯನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿರಲಿಲ್ಲ.
ನನ್ನ ಇಡೀ ಜೀವನದಲ್ಲಿ ನಿನ್ನಂತಹ ಯಾರನ್ನೂ ನಾನು ಭೇಟಿ ಮಾಡಿಲ್ಲ. ವ್ಯಕ್ತಿಯೊಬ್ಬ ಮಾಡುವ ಕೆಲಸದಿಂದ ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆದರೆ ನೀವು ಮಾತ್ರ ಯಾರನ್ನು ಪ್ರೀತಿಸುತ್ತೀರಿ ಎಂದು ನನಗೆ ತಿಳಿದಿದೆ.
ನೀವೆಷ್ಟು ಭವ್ಯವಾದ, ಮಾಂತ್ರಿಕ ಜೀವಿ. ನಾನು ಮನೆಗೆ ಬಂದು ನೀವು ಧ್ಯಾನಿಸುತ್ತಿರುವುದನ್ನು ನೋಡಿದಾಗ, ನೀವು ನಗುವುದನ್ನು ನೋಡಿದಾದ ಅವು ಅತ್ಯಂತ ದೈವಿಕ ವಿಷಯವೆಂಬಂತೆ ನನಗೆ ಭಾಸವಾಗುತ್ತದೆ.
ನನ್ನ ಪ್ರೀತಿ ತುಂಬಿದ ಜೀವನದ ಪಟ್ಟಿಗೆ ನನ್ನ ಗ್ಲಾಡಿಯೇಟರ್ ನೀವೇ ಷಿಂಡ್ಲರ್.... ಪ್ರೀತಿಯಿಂದ ತುಂಬಿ ತುಳುಕುವುದು ಮತ್ತು ಪ್ರೀತಿ ಮಾತ್ರ ❤️ ಎಂಬುದಾಗಿ ಬರೆದುಕೊಂಡಿದ್ದರು.
ಡೆಲ್ನಾಜ್ ಇರಾನಿ ಮತ್ತು ಪರ್ಸಿ ಕರ್ಕರಿಯಾ
ಡೆಲ್ನಾಜ್ ಇರಾನಿ ಮತ್ತು ಅವರ ಸಂಗಾತಿ ಪರ್ಸಿ ಕರ್ಕರಿಯಾ ಜೊತೆಯಾಗಿ ಒಂದು ದಶಕ ಕಳೆದಿದೆ. ಅವರಿಬ್ಬರೂ ಮೊದಲ ಸಂಬಂಧಗಳನ್ನು ತೊರೆದು ಬಂದಿದ್ದರು.
ಆದ್ದರಿಂದ, ಅವರು ಸಂಬಂಧದ ಆರಂಭದಲ್ಲಿ ಜಾಗರೂಕರಾಗಿದ್ದರು. ಆದಾಗ್ಯೂ, ಕಳೆದ ವರ್ಷ ಡೆಲ್ನಾಜ್ ಅವರ 50 ನೇ ಹುಟ್ಟುಹಬ್ಬದಂದು ಮದುವೆ ಘೋಷಣೆ ಮಾಡುವ ನಿರೀಕ್ಷೆಯಲ್ಲಿದ್ದರು ಎನ್ನಲಾಗಿತ್ತು. ಆದರೆ ಸದ್ಯ ಮದುವೆ ಅನ್ನೋದು ಕೇವಲ ಕಾಗದದ ಮೇಲಿನ ಮುದ್ರೆ ಎಂದು ಭಾವಿಸುತ್ತಾರೆ.
ತಮ್ಮ ಸಂಬಂಧ, ಮದುವೆಯ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ್ದ ಡೆಲ್ನಾಜ್, "ಮದುವೆ ಅಗತ್ಯವಲ್ಲ ಎಂದು ನಾನು ಭಾವಿಸುತ್ತೇನೆ. ಜನರು ಅದರ ಬಗ್ಗೆ ನನ್ನನ್ನು ಕೇಳಿದಾಗಲೆಲ್ಲಾ ನಾನು ನಾಚಿಕೆ ಮತ್ತು ಉದ್ವೇಗವನ್ನು ಅನುಭವಿಸುತ್ತೇನೆ.
ನಾನು ಅನೇಕ ಏರಿಳಿತಗಳನ್ನು ಅನುಭವಿಸಿದ್ದೇನೆ. ನಾನು ಮದುವೆಯಾಗಬಹುದು ಎಂದು ನನ್ನ ಸ್ನೇಹಿತರೊಂದಿಗೆ ಆಗಾಗ್ಗೆ ತಮಾಷೆ ಮಾಡುತ್ತೇನೆ. ನಾನು ಇನ್ನು ಮುಂದೆ ಮದುವೆಯ ಮಾತುಗಳನ್ನು ಹೇಳಬಾರದು ಎಂದುಕೊಂಡಿದ್ದೇನೆ.
ಇದನ್ನೂ ಓದಿ: ಸಮಂತಾ ಮಾಜಿ ಪತಿಯ ಕಿಸ್ಸಿಂಗ್ ಗುಟ್ಟು ರಟ್ಟು! ಎಷ್ಟು ಮಂದಿಗೆ ನಾಗ ಚೈತನ್ಯ ಕೊಟ್ಟಿದ್ದಾರೆ ಮುತ್ತು?
ಪರ್ಸಿ ಮತ್ತು ನಾನು ಇಬ್ಬರೂ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಸಂಬಂಧವನ್ನು ಅಧಿಕೃತವಾಗಿಸಲು ನಾವು ಕಾಗದದ ಡಾಕ್ಯುಮೆಂಟ್‌ಗೆ ಸಹಿ ಹಾಕುವ ಅಗತ್ಯವಿಲ್ಲ. ಪರಸ್ಪರರ ಪ್ರೀತಿಯನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೇವೆ.
ನಾವು ಮತ್ತೆ ಪ್ರೀತಿಯನ್ನು ಕಂಡುಕೊಂಡಿರಬಹುದು. ಆದರೆ ಅದರಿಂದ ನಾವು ಎರಡು ಬಾರಿ ಮದುವೆಯಾಗುತ್ತೇವೆ ಎಂದರ್ಥವಲ್ಲ. ನನ್ನ ಈ ನಿರ್ಧಾರದಿಂದ ಪರ್ಸಿ ಮತ್ತು ನನ್ನ ಕುಟುಂಬದವರು ಸಂತೋಷ ಪಟ್ಟಿದ್ದಾರೆ" ಎಂಬುದಾಗಿ ಹೇಳಿದ್ದರು.
ರಾಹುಲ್ ದೇವ್ ಮತ್ತು ಮುಗ್ದಾ ಗೋಡ್ಸೆ
ರಾಹುಲ್ ದೇವ್ ಮತ್ತು ಮುಗ್ಧಾ ಗೋಡ್ಸೆ ಸುಮಾರು ಒಂದು ದಶಕದಿಂದ ಒಟ್ಟಿಗೆ ಇದ್ದಾರೆ. ರಿಯಾಲಿಟಿ ಶೋ, ಪವರ್ ಕಪಲ್ ಶೋಗಳಲ್ಲಿ ಇಬ್ಬರೂ ಒಟ್ಟಿಗೆ ಭಾಗವಹಿಸಿದ್ದಾರೆ.
ರಾಹುಲ್ ತನ್ನ ಮೊದಲ ಪತ್ನಿ ರೀನಾಳ ಮರಣದ ನಂತರ ಮುಗ್ಧಾಳಲ್ಲಿ ಪ್ರೀತಿಯನ್ನು ಕಂಡುಕೊಂಡರು. ಆದರೆ ಇಬ್ಬರು ಮದುವೆಯಾಗದಿದ್ದರೂ ಸಹ, ಅವರ ಜೀವನದಲ್ಲಿನ ನಿರ್ಧಾರಗಳ ಬಗ್ಗೆ ಅವರು ಹೆಚ್ಚು ಸಂತೋಷಪಡುತ್ತಾರೆ.
ಅವರಿಬ್ಬರಿಗೂ ಅವರದ್ದೇ ಆದ ಪ್ರಾಮುಖ್ಯತೆಗಳಿವೆ. ಅದನ್ನು ಗೌರವಿಸುವುದರ ಜೊತೆಗೆ ಜೀವನ ಪ್ರೀತಿಯನ್ನು ಅನುಭವಿಸುತ್ತಾ ಖುಷಿಯಾಗಿದ್ದೇವೆ ಎಂದು ಅವರು ಹೇಳಿಕೊಳ್ಳುತ್ತಾರೆ.
ಈ ಬಗ್ಗೆ ಮಾಧ್ಯಮದ ಜೊತೆಗೆ ವಿಷಯಗಳನ್ನು ಹಂಚಿಕೊಂಡ ರಾಹುಲ್, "ನಾವಿಬ್ಬರೂ ನಾವಿರುವ ಹಾಗೆಯೇ ಸಂತೋಷವಾಗಿದ್ದೇವೆ. ನಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದೇವೆ. ಒಟ್ಟಿಗೆ ಪ್ರಯಾಣ ಮಾಡುತ್ತೇವೆ. ಜೊತೆಗೆ ಐಷಾರಾಮಗಳನ್ನು ಹೊಂದಿದ್ದೇವೆ.
ನನ್ನ ಹಾಗೂ ದಿವಂಗತ ಪತ್ನಿ ರೀನಾಗೆ ಒಬ್ಬ ಮಗನಿದ್ದಾನೆ. ಅವನು ಬೆಳೆದಿದ್ದಾನೆ. ಹೆಸರು ಸಿದ್ದಾಂತ್. ಹಾಗೆಯೇ ಮುಗ್ಧಾಗೆ ಒಬ್ಬ ಚಿಕ್ಕ ಸೋದರಳಿಯ ಮತ್ತು ಸೊಸೆ ಇದ್ದಾರೆ. ಅವರನ್ನು ಬೆಳೆಸುವುದರಲ್ಲಿ ಮುಗ್ದಾ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆದ್ದರಿಂದ ನಾವಿಬ್ಬರೂ ನಮ್ಮ ಜೀವನದ ನಿರ್ಧಾರಗಳ ಬಗ್ಗೆ ಹೆಚ್ಚು ಸಂತೋಷವಾಗಿದ್ದೇವೆ" ಎಂದು ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ