ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ-ಹಿರಿತೆರೆ ನಟ ರಂಜನ್ ಸೆಹ್ಗಲ್ ನಿಧನ

ಹಿಂದಿ ಮಾತ್ರವಲ್ಲದೆ ಪಂಜಾಬ್​ ಸಿನಿಮಾ ಇಂಡಸ್ಟ್ರಿಯಲ್ಲೂ ರಂಜನ್​ ಹೆಸರು ಮಾಡಿದ್ದರು. ಸಾಕಷ್ಟು ಪಂಜಾಬಿ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. 

news18-kannada
Updated:July 12, 2020, 3:13 PM IST
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಿರುತೆರೆ-ಹಿರಿತೆರೆ ನಟ ರಂಜನ್ ಸೆಹ್ಗಲ್ ನಿಧನ
ರಂಜನ್​
  • Share this:
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಾಲಿವುಡ್​ನಲ್ಲಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬಣ್ಣ ಹಚ್ಚಿದ್ದ ನಟ ರಂಜನ್​ ಸೆಹ್ಗಲ್​ ಚಿಕಿತ್ಸೆ ಫಲಕಾರಿಯಾಗದೆ ಚಂಡೀಗಢದಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 36 ವರ್ಷ ವಯಸ್ಸಾಗಿತ್ತು.

ರಂಜನ್​ ಇತ್ತೀಚೆಗೆ ತೀವ್ರ ಅನಾರೋಗ್ಯ ಕಾಡಿತ್ತು. ಈ ವೇಳೆ ಆಸ್ಪತ್ರೆಗೆ ತೆರಳಿದ್ದಾಗ ಅವರು ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿರುವುದು ಸಾಬೀತಾಗಿತ್ತು. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನ ಆಗಿಲ್ಲ.

ರಂಜನ್​ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ. ರಿಶ್ತೋ ಸೆ ಬಡಿ ಪ್ರಥಾ, ತುಮ್​ ದೇನಾ ಸಾತ್​ ಮೇರಾ, ಭವಾರ್​ ಜಾನೆ ಕ್ಯಾ ಹೋಗಾ ರಾಮ್​ ಸೇರಿ ಅನೇಕ ಧಾರಾವಾಹಿಗಳಲ್ಲಿ ಇವರು ಬಣ್ಣ ಹಚ್ಚಿದ್ದರು. ಕ್ರೈಂ ಪೆಟ್ರೋಲ್​ನ್​ ಕೆಲ ಎಪಿಸೋಡ್​ಗಳಲ್ಲಿ ಇವರು ನಟಿಸಿದ್ದರು.

ಕಿರುತೆರೆಯಲ್ಲಿ ಖ್ಯಾತಿ ಹೆಚ್ಚಿಸಿಕೊಂಡ ನಂತರ ರಂಜನ್​ ಸರ್ಬ್​ಜಿತ್​ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದರು. ರಣದೀಪ್​ ಹೂಡಾ ಹಾಗೂ ಐಶ್ವರ್ಯಾ ರೈ ಬಚ್ಚನ್​ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್​ ನಟನೆಯ ಜೀರೋ ಸಿನಿಮಾದಲ್ಲೂ ಚಿಕ್ಕ ಪಾತ್ರವೊಂದಲ್ಲಿ ರಂಜನ್​ ಕಾಣಿಸಿಕೊಂಡಿದ್ದರು. ಹಿಂದಿ ಮಾತ್ರವಲ್ಲದೆ ಪಂಜಾಬ್​ ಸಿನಿಮಾ ಇಂಡಸ್ಟ್ರಿಯಲ್ಲೂ ರಂಜನ್​ ಹೆಸರು ಮಾಡಿದ್ದರು. ಸಾಕಷ್ಟು ಪಂಜಾಬಿ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

ಬಾಲಿವುಡ್​ಗೆ 2020ರಲ್ಲಿ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಮೊದಲು ಇರ್ಫಾನ್​ ಖಾನ್​ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು. ಅದಾದ ನಂತರ ರಿಷಿ ಕಪೂರ್​ ಸಾವನ್ನಪ್ಪಿದ್ದರು. ಇತ್ತೀಚೆಗೆ ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಲ್ಲದೆ, ವಾಜಿದ್​ ಖಾನ್​ ಕೂಡ ಮೃತಪಟ್ಟಿದ್ದರು.
Published by: Rajesh Duggumane
First published: July 12, 2020, 3:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading