ವಿವಾಹದ ಬಗ್ಗೆ ಖ್ಯಾತ ನಿರೂಪಕಿ ಅನುಶ್ರೀ ಬಿಚ್ಚಿಟ್ಟ ಸತ್ಯವೇನು ಗೊತ್ತಾ?

ನಟಿ ಅನುಶ್ರೀ ನಿರೂಪಕಿಯಾಗಿ ಮಾತ್ರವಲ್ಲದೆ, ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ರಿಂಗ್​​ ಮಾಸ್ಟರ್‘​​, ‘ಉಪ್ಪು ಹುಳಿ ಖಾರ‘, ‘ಭೂಮಿ ತಾಯಿ‘, ‘ಬೆಂಕಿ ಪಟ್ಣ‘ ಹಾಗೂ ‘ಮಾಧ ಮತ್ತು ಮಾನಸಿ‘  ಚಿತ್ರಗಳಲ್ಲಿ ನಟಿಸಿದ್ದಾರೆ. 

news18-kannada
Updated:November 11, 2019, 3:10 PM IST
ವಿವಾಹದ ಬಗ್ಗೆ ಖ್ಯಾತ ನಿರೂಪಕಿ ಅನುಶ್ರೀ ಬಿಚ್ಚಿಟ್ಟ ಸತ್ಯವೇನು ಗೊತ್ತಾ?
ಅನುಶ್ರೀ
news18-kannada
Updated: November 11, 2019, 3:10 PM IST
ಕನ್ನಡ ಕಿರುತೆರೆ ಖ್ಯಾತ ನಿರೂಪಕಿ ಅನುಶ್ರೀ ಅವರ ಮದುವೆ ಆಗುತ್ತಿದ್ದಾರೆ. ಅವರ ಮನೆಯಲ್ಲಿ ಈಗಾಗಲೇ ಹುಡುಗನನ್ನು ಹುಡುಕಲು ಶುರು ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು . ಇದೀಗ ಈ ಗಾಳಿ ಸುದ್ದಿಗೆ ಅನುಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರೂಪಕಿ ಅನುಶ್ರೀ ‘ಈಗಾಗಲೇ ಅನೇಕರು ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಾಕ್ಷಣ ಮದುವೆ ಮಾಡುವ ಕಾತುರ ಈ ಜನಕ್ಕೆ ಏಕೆ ಬರುತ್ತೆ ಎಂದು ನನಗೆ ಗೊತ್ತಿಲ್ಲ. ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನಾನು ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ‘ ಎಂದು ಅನುಶ್ರೀ ಹೇಳಿದ್ದಾರೆ.

ನಟಿ ಅನುಶ್ರೀ ನಿರೂಪಕಿಯಾಗಿ ಮಾತ್ರವಲ್ಲದೆ, ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ರಿಂಗ್​​ ಮಾಸ್ಟರ್‘​​, ‘ಉಪ್ಪು ಹುಳಿ ಖಾರ‘, ‘ಭೂಮಿ ತಾಯಿ‘, ‘ಬೆಂಕಿ ಪಟ್ಣ‘ ಹಾಗೂ ‘ಮಾಧ ಮತ್ತು ಮಾನಸಿ‘  ಚಿತ್ರಗಳಲ್ಲಿ ನಟಿಸಿದ್ದಾರೆ.  ಸದ್ಯ ಯ್ಯೂಟೂಬ್​ನಲ್ಲಿ ತಮ್ಮದೇ ಆದ ಚಾನಲ್​ ಕ್ರಿಯೇಟ್​ ಮಾಡಿದ್ದು, ಕಲಾವಿದರನ್ನು ಸಂದರ್ಶನ ಮಾಡಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಿಂದ ಹಿಂದೆ ಸರಿದ ಬಿಜೆಪಿ; ಶಿವಸೇನೆ ಅಂಗಳದಲ್ಲಿ ಚೆಂಡು

ಇದನ್ನೂ ಓದಿ: ಅಯೋಧ್ಯೆಯಲ್ಲಿ ಮಸೀದಿ ಬದಲು ಶಾಲೆ ನಿರ್ಮಿಸಿ; ಅಚ್ಚರಿಯ ಬೇಡಿಕೆಯಿಟ್ಟ ನಟ ಸಲ್ಮಾನ್​ ಖಾನ್​ ತಂದೆ ಸಲೀಂ ಖಾನ್

First published:November 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...