• Home
 • »
 • News
 • »
 • entertainment
 • »
 • Tunisha Sharma: ಮೇಕಪ್​ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಿರುತೆರೆ ನಟಿ!

Tunisha Sharma: ಮೇಕಪ್​ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಿರುತೆರೆ ನಟಿ!

ತುನಿಶಾ ಶರ್ಮಾ

ತುನಿಶಾ ಶರ್ಮಾ

ಟಿವಿ ಧಾರಾವಾಹಿ ಅಲಿ ಬಾಬಾ ದಾಸ್ತಾನ್ ಇ ಕಾಬೂಲ್ ಮತ್ತು ಫಿತೂರ್ ಚಲನಚಿತ್ರ ನಟಿ ತುನಿಶಾ ಶರ್ಮಾ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಆತ್ಮಹತ್ಯೆಯ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

 • News18 Kannada
 • 3-MIN READ
 • Last Updated :
 • Mumbai, India
 • Share this:

ಮುಂಬೈ(ಡಿ.24): ಸೋನಿ ಎಸ್‌ಎಬಿ ಟಿವಿ ಧಾರಾವಾಹಿ 'ಅಲಿಬಾಬಾ: ದಸ್ತಾನ್ ಇ ಕಾಬೂಲ್' ನಾಯಕ ನಟಿ ತುನೀಶಾ ಶರ್ಮಾ (Tunisha Sharma) ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಟಿವಿ ಧಾರಾವಾಹಿಯ ಸೆಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಇದೇ ವೇಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಟಿ 20ನೇ ವಯಸ್ಸಿಗೇ ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.


ತುನೀಶಾಗೆ ಕೇವಲ 20 ವರ್ಷ ಎಂಬುವುದು ಉಲ್ಲೇಖನೀಯ. ಅವರು ಬಾಲ ಕಲಾವಿದರಾಗಿ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 'ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್' ಧಾರಾವಾಹಿಯಲ್ಲಿ ಪಾದಾರ್ಪಣೆ ಮಾಡಿದರು. ತುನೀಶಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಿವಾಡಿ ಆಸ್ಪತ್ರೆಗೆ ರವಾನಿಸಲಾಗಿದೆ.


ಇದನ್ನೂ ಓದಿ: Bengaluru:  ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ


ತುನೀಶಾ ವೃತ್ತಿಜೀವನ ಹೀಗಿತ್ತು


ಮಾಹಿತಿಯ ಪ್ರಕಾರ, ತುನಿಶಾ ಪ್ರಸ್ತುತ ಸೋನಿ ಎಸ್‌ಎಬಿ ಟಿವಿಯ ಧಾರಾವಾಹಿ 'ಅಲಿ ಬಾಬಾ: ದಾಸ್ತಾನ್ ಇ ಕಾಬೂಲ್' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಅವರು ಶೆಹಜಾದಿ ಮರ್ಯಮ್ ಪಾತ್ರ ನಿಭಾಯಿಸುತ್ತಿದ್ದರು. ಇದಲ್ಲದೆ, ಅವರು ಫಿತೂರ್, ಬಾರ್ ಬಾರ್ ದೇಖೋ, ಕಹಾನಿ 2: ದುರ್ಗಾ ರಾಣಿ ಸಿಂಗ್, ದಬಾಂಗ್ 3 ಮುಂತಾದ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಫಿತೂರ್ ಮತ್ತು ಬಾರ್ ಬಾರ್ ದೇಖೋದಲ್ಲಿ ತುನಿಶಾ ಕತ್ರಿನಾ ಕೈಫ್ ಅವರ ಹದಿಹರೆಯದ ಪಾತ್ರವನ್ನು ನಿರ್ವಹಿಸಿದ್ದಾರೆ. ಇದಲ್ಲದೇ ‘ಇಂಟರ್ನೆಟ್ ವಾಲಾ ಲವ್’ ಧಾರಾವಾಹಿಯಲ್ಲಿ ತನಿಶಾ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

Published by:Precilla Olivia Dias
First published: