ಕಿರುತೆರೆ ನಟಿಯ ಮೇಲೆ ಯುವಕರಿಂದ ಹಲ್ಲೆ

news18
Updated:August 5, 2018, 7:56 PM IST
ಕಿರುತೆರೆ ನಟಿಯ ಮೇಲೆ ಯುವಕರಿಂದ ಹಲ್ಲೆ
news18
Updated: August 5, 2018, 7:56 PM IST
-ನ್ಯೂಸ್ 18 ಕನ್ನಡ

ಹಿಂದಿ ಕಿರುತೆರೆ ನಟಿ ರೂಪಾಲಿ ಗಂಗೂಲಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ನಗರದ ವರ್ಸಾವಾ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸುವ ವೇಳೆ ನಡೆದ ದಾಳಿಯಿಂದ ನಟಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಆರಕ್ಷಕರು ಯಶಸ್ವಿಯಾಗಿದ್ದಾರೆ.

ಶನಿವಾರ ಕಾರಿನಲ್ಲಿ ಮಗನನ್ನು ಶಾಲೆ ಬಿಡಲು ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್​ನಲ್ಲಿ ಬಂದಂತಹ ಇಬ್ಬರು ಯುವಕರು ಕಾರನ್ನು ನಿಲ್ಲಿಸುವಂತೆ ನಟಿಯನ್ನು ಕೇಳಿಕೊಂಡಿದ್ದಾರೆ. ಈ ವೇಳೆ ಜಗಳಕ್ಕಿಳಿದ ಯುವಕರು ಕಾರಿನ ಗಾಜುಗಳನ್ನು ಹೊಡೆದಾಕಿದ್ದಾರೆ. ಈ ಅನಿರೀಕ್ಷಿತ ದಾಳಿಯಿಂದ ನಟಿಯ ಕೈಗೆ ಗಾಯವಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆಯ ಮಾಹಿತಿ ಪಡೆದು ಪ್ರಕರಣ ದಾಖಲಿಸಿದ್ದರು. ಅಲ್ಲದೆ ಮಿಂಚಿನ ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಹನು ಮತ್ತು ಪರೇಶ್ ಎಂಬ ಯುವಕರು ದಾಳಿ ಮಾಡಿದ್ದು ಎಂದು ತಿಳಿಸಿರುವ ಠಾಣಾಧಿಕಾರಿ ಹೆಚ್ಚಿನ ಮಾಹಿತಿಗಾಗಿ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

'ಕಹಾನಿ ಘರ್ ಘರ್ ಕಿ', 'ಸಾರಾಭಾಯಿ ವರ್ಸಸ್ ಸಾರಾಭಾಯಿ 2' ಸೇರಿದಂತೆ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿ ರೂಪಾಲಿ ಗಂಗೂಲಿ ಬಣ್ಣ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್​ ಬಾಸ್'​ ಕಾರ್ಯಕ್ರಮದ ಮೊದಲ ಸೀಸನ್​ನಲ್ಲಿ ರೂಪಾಲಿ ಕಾಣಿಸಿಕೊಂಡಿದ್ದರು.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ